ಪ್ರಶ್ನೆ…..

4

ಹೋದವರೆಲ್ಲರೂಒಳ್ಳೆಯವರಾದರೆ 

ಇರೋರೆಲ್ಲಾ ಯಾರು?

ಬದುಕಿಗೊ೦ದು ಅರ್ಹತೆ!,   

ಸಾವಿಗೊ೦ದು ಅರ್ಹತೆ

ಎ೦ದು ಬೇರೆ ಬೇರೆ ಉ೦ಟೆ?

ಬದುಕಿಗೊ೦ದು ಅರ್ಹತೆ ಬೇಕು!

ಸಾವಿಗೂ   ಬೇಕೆ?

ಮಾನವತೆಯ  

ಅರ್ಥವಾದರೂ ಏನು?

ಕಾಲನೂ ಭೇದ-ಭಾವವನೆಣಿಸುವನೇ?

ಇರುವವರೆಲ್ಲಾ

ಕೆಟ್ಟವರೆ೦ದಾದರೆ

ನಾವೂ

ಹೋಗಬಹುದಲ್ಲವೇ?

ಒಳ್ಳೆಯವರೆನಿಸಿಕೊಳ್ಳಬಹುದಲ್ಲವೆ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೌದಲ್ಲವೇ.... ಹೆನ್ನಾಗಿದೆ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಈ ದ್ವಂದ್ವ ಸದಾಕಾಲದಿಂದ ಇದೆ. ಸನ್ನಡತೆಯವರು ಅಗಲಿದರೆ "ಒಳ್ಳೆಯವರನ್ನು ಬೇಗ ಕರೆದುಳ್ತಾರೆ ದೇವರು" ಅಂತಾರೆ. ದುರ್ಗುಣಿಗಳು ಅಗಲಿದರೆ "ತಾನು ಮಾಡಿದ್ದು ಎಲ್ಲಿಗೆ ಹೋಗುತ್ತೇ, ನಾಯಿ ಸತ್ತಹಾಗೆ ಸತ್ತ ನೋಡಿ, ಸುಮ್ನೇ ಬಿಡ್ತಾರಾ ದೇವರು?" ಅಂತಾರೆ. ಎಲ್ಲದರ ಮೇಲೂ, ಎಲ್ಲಾವರ ಮೇಲೂ ತೀರ್ಪು ಕೊಡುವವರು, ಈ ಮಾನವರೇ? ದೇವರ ನಡವಳಿಕೆಯೂ ಈ ಮಾನವರ ಎಣಿಕೆಯ ಮೇಲೇ!? - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾವಿನ ಶೋಕಕ್ಕೆ ಇರುವ ಜನರ ಟಿಪ್ಪಣಿ ಅಷ್ಟೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡ ಚಿಕ್ಕು, ಹೆಗಡೆಯವರು ಹಾಗೂ ಸ೦ತೋಷ ಆಚಾರ್ಯರಿಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಆಶಿಸುವೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಉತ್ತರವೇ? ಅಸುಮನದ ಕವಿತೆಗೆ ಆದರೂ ಮನಸ್ಸಿಗೂ ಇದು ಉತ್ತರವೇ ಉತ್ತಮ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಬ್ಬ ವ್ಯಕ್ತಿ ನಮ್ಮೊಂದಿಗಿರುವವರೆಗೂ ಅವನ/ಳ ಮಹತ್ವ ನಮ್ಮ ಗಮನಕ್ಕೆ ಬರುವುದೇ ಇಲ್ಲ.. ಅಥವಾ ನಾವು ನಮ್ಮ ಗಮನಕ್ಕೆ ತರುವುದೇ ಇಲ್ಲ. ಅಗಲಿದ ನಂತರವೇ ನೆನೆದು ಕೊರಗುತ್ತೇವೆ... ಉತ್ತಮ ಕವನ ರಾಘವೇಂದ್ರರವರೇ... ಇದನ್ನೊಂದು ಉತ್ತಮ ಚಿಂತನವೆಂದೂ ಹೇಳಬಹುದು... ಶಫಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಡ ನಾವಡರೆ, ಇಷ್ಟು ಬೇಗ ಅ೦ಥಾ ದೊಡ್ಡ ಪ್ರಶ್ನೆಗಳು ನಮ್ಮ ಮು೦ದೆ ಬರುವುದು ಬೇಡ, ಇರುವ ಜೀವನವನ್ನು ಸ೦ತೋಷವಾಗಿ ಅನುಭವಿಸೋಣ, ಮು೦ದೆ ಒಳ್ಳೆಯದೋ ಕೆಟ್ಟದೋ, ದೇವರಿಟ್ಟ೦ತಾಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ನಮಸ್ಕಾರಗಳು, ವಿಚಾರಪೂರ್ಣ ಕವನ , ನಿಮಗಿದೋ ನಮನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತು೦ಬಾ ಅರ್ಥಪೂರ್ಣವಾಗಿದೆ......ಚೆನ್ನಾಗಿದೆ ಸರ್..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.