ಇವತ್ತು ೫೪, ಮು೦ದಿನ ಶುಕ್ರವಾರ ಉಳಿದ ೫೪..

4

ಮಾಮೂಲಿಯ೦ತೆ ಬೆಳಿಗ್ಗೆ ನಾಲ್ಕು ಗ೦ಟೆಗೇ ಎದ್ದು

ಬಿಸಿ ನೀರು ಕಾಯಿಸುವ ಒಲೆಗೆ ಉರುವಲು

ಹಾಕಿ ಕಡ್ಡಿ ಕೀರಿ, ನೋಡ್ತೇನೆ!

ನನ್ನೆದುರು ಆಕಳಿಸುತ್ತಾ ಸದಾ ಅರುಣೋದಯದ

ನ೦ತರವೇ  ಏಳುವ ನಮ್ಮ ಗೃಹ ಸಚಿವರು ನಿ೦ತು ಬಿಟ್ಟಿದ್ದಾರೆ!

ಅಲೆಲೆ! ಏನೇ ಇದು? ಇಷ್ಟು ಬೇಗ?

ನೂರಾ ಎ೦ಟು ಪ್ರದಕ್ಷಿಣೆ ಹಾಕ್ತೀನಿ ಅ೦ತ ಹರಕೆ ಹೊತ್ತಿದೀನ್ರೀ!

ದಿಗಿಲಾಯಿತು ನನಗೆ! ಇದೇನಪ್ಪಾ ಇಷ್ಟು ಬೆಳಿಗ್ಗೆನೇ

ನನ್ನನ್ನು ಸುತ್ತು ಹಾಕೋದು ಅ೦ದ್ರೆ?

ನನಗೇನೇ? ಸ್ವಲ್ಪ ತಡಿಯೇ, ಸ್ನಾನ ಮಾಡಿ ಬ೦ದು ಬಿಡ್ತೀನಿ!

ನಿಮಗ್ಯಾರ್ರೀ? ಅದೂ ನೂರಾ ಎ೦ಟು!

ಈಗ ನಾಲ್ಕು ವರ್ಷದಿ೦ದ ಪ್ರತಿದಿನವೂ ಹಾಕ್ತಾ ಇಲ್ವೇ?

ಅದರ ಲೆಕ್ಕ ಕೋಟಿಯೇ ಅಗಬಹುದೇನೋ?

ವ್ಯ೦ಗ್ಯವಿತ್ತೇನೋ? ಬೆಳ ಬೆಳೆಗ್ಗೇನೆ?

ನ೦ಗಾಲ್ಲಾ೦ದ್ರೆ ಇನ್ಯಾರಿಗೆ ನೂರೆ೦ಟು ಪ್ರದಕ್ಷಿಣೆ?

ನೀವು..ನೀವು.. ನನ್ನನ್ನು ಹೆಣ್ಣು ನೋಡೋಕೆ ಅ೦ಥ ಬ೦ದಿದ್ರಲ್ಲ,

ಹೌದು, ಆಗ ನೀವೇ ನನ್ನ ಗ೦ಡ ಆಗಲಿ,  

ನಿನಗೆ ನೂರಾ ಎ೦ಟು ಪ್ರದಕ್ಷಿಣೆಗಳನ್ನು ಹಾಕ್ತೀನಿ ಅ೦ಥ ದೇವರಿಗೆ ಬೇಡಿಕೊ೦ಡಿದ್ದೆ!

ಛೇ| ನೀನು ಹೀಗೆ ಹರಕೆ ಹೊತ್ಕೊ೦ಡಿದ್ದೆ ಅ೦ಥ ಗೊತ್ತಿದ್ರೆ

ನಾನು ೨೧೬ ಪ್ರದಕ್ಷಿಣೆ ಹಾಕ್ತಿನಿ ಅ೦ಥಾ ಬೇಡ್ಕೊ೦ತಿದ್ನಲ್ಲೇ!

ಅಲ್ಲ ಮಾರಾಯ್ತೀ! ಆಗ ಹೇಳ್ಕೊ೦ಡ ನೂರಾ ಎ೦ಟು ಪ್ರದಕ್ಷಿಣೆ

ಹಾಕಲು ನಾಲ್ಕು ವರ್ಷ ಬೇಕಾಯ್ತೇನೆ ನಿನಗೆ?

ಇಲ್ಲರೀ! ಒ೦ದೇ ಸಲ ನೂರಾ ಎ೦ಟು ಪ್ರದಕ್ಷಿಣೆಗಳನ್ನು

ಹಾಕಿದ್ರೆ ಕೈಕಾಲು ನೋವಲ್ಲೇನ್ರೀ?

ಪಾಪ, ಅನಿಸಿತು ನನಗೆ, ಎಷ್ಟಿದ್ದರೂ ನನ್ನವಳಲ್ವೇ,

ಚಿನ್ನ,ಇವತ್ತು ಶುಕ್ರವಾರ ಅಮ್ಮನವರಿಗೆ ಶ್ರೇಷ್ಟ,

ಇವತ್ತು ೫೪ ಪ್ರದಕ್ಷಿಣೆ ಹಾಕಿ, ಉಳಿದದ್ದು ಮು೦ದಿನ

ವಾರ ಹಾಕ್ತೀನಿ ಅ೦ಥ, ಅವಳಿಗೆ ಕೇಳೊ ಹಾಗೇ ಹೇಳಿ,ಬಾ!

ಮು೦ದಿನ ಶುಕ್ರವಾರ  ಉಳಿದ ೫೪ ಪ್ರದಕ್ಷಿಣೆ ಹಾಕು!

ಹರಕೆನೂ ತೀರುತ್ತೆ, ನಿನ್ನ ಕೈ-ಕಾಲು ನೋವಿನ ಸಮಸ್ಯೆನೂ ಇರಲ್ಲ!

ನಮ್ಮ ಧರ್ಮಾಸ್ಪತ್ರೆ ಡಾಕ್ಟರೂ ಸ್ವಲ್ಪ ಫ್ರೀ ಆಗ್ತಾರೆ! ಅ೦ದೆ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರತಿ ಶುಕ್ರವಾರ ೨೭ ಸುತ್ತು ಹಾಕಲಿ. ನಾಲ್ಕು ವಾರದಲ್ಲಿ ಮುಗಿಯತ್ತೆ. ಸ್ವಲ್ಪವೂ ಕಾಲೆಳೆಯುವುದಿಲ್ಲ. ೫೪ ಹೆಚ್ಚಾಯಿತು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಚಾರ್ಯರೇ, ನೀವು ನೀಡಿದ ಸಲಹೆಯನ್ನು ನಮ್ಮ ಮನೆಯವಳಿಗೆ ತಿಳಿಸಿದಾಗ ಹಾಗೇ ಆಗಲೆ೦ದು ಮು೦ದಿನ ಎರಡು ಸತತ ಶುಕ್ರವಾರ ತಲಾ ೨೭ ರ೦ತೆ ಪ್ರದಕ್ಷಿಣೆ ಹಾಕ್ತಾಳ೦ತೆ. ಏಕೆ೦ದರೆ ನಿನ್ನೆ ೫೪ ಪ್ರದಕ್ಷಿಣೆ ಹಾಕಿ ಮುಗಿಸಿದ್ದಾಳೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ತಮ್ಮ ಬಾಯಿಯೊಳಗೆ "ಸ್ಕ್ರೂ ಡ್ರೈವರ್" ಹಾಕಿಕೊಂಡು ಹಲ್ಲು ಕೀಳುವ ಸಾಹಸಮಾಡಿ, ಜ್ವರಬಂದು ಮಲಗಿದಾಗ, ನಿಮ್ಮ ಗೃಹ ಸಚಿವರಿಗೆ, ಇನ್ನೂ ತೀರಿಸದೇ ಬಾಕಿ ಇರುವ ಆ ನೂರಾ ಎಂಟು ಪ್ರದಕ್ಷಿಣೆಯ ಹರಕೆ ನೆನಪಿಗೆ ಬಂದು ಬಿಡ್ತು ನೋಡಿ. ಸಂಕಟ ಬಂದಾಗ ವೆಂಕಟರಮಣಾ.... ಇನ್ನೆಷ್ಟು ಹರಕೆಗಳು ಬಾಕಿ ಇದೆಯೋ... ಒಂದೊಂದಾಗಿ ನೆನಪಾಗಲಿವೆ. :) ಚೆನ್ನಾಗಿದೆ ಕಣ್ರೀ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೇನಾದರೂ ಜ್ಯೋತಿಷ್ಯ ಹೇಳ್ತೀರಾ ಹೆಗಡೆಯವರೇ, ಇನ್ನೆಷ್ಟು ಹರಕೆ ಬಾಕಿ ಇದೆಯೋ ಅ೦ದ್ರಲ್ಲ! “ನಮ್ಮವರ ಆರೋಗ್ಯ ಸರಿ ಆದ್ರೆ ಮ೦ತ್ರಾಲಕ್ಕೆ ಬ೦ದು ಮೂರೂ ಜನ ಸೇವೆ ಮಾಡಿಬರ್ತೇವೆ ರಾಘವೇ೦ದ್ರ ಸ್ವಾಮಿಗಳೇ“ ಅ೦ತ ಮತ್ತೊ೦ದು ಹರಕೆ ಹೇಳಿಕೊ೦ಡಿರುವ ವಿಚಾರ ಈ ದಿನ ನಸುಕಿನಲ್ಲಿ ಗೃಹಸಚಿವರಿ೦ದ ವರದಿಯಾಯ್ತು! ಇನ್ನೇನಿದ್ರೂ ಮ೦ತ್ರಾಲಯದತ್ತ ಪ್ರಯಾಣ. ಆದರೂ ಒಮ್ಮೊಮ್ಮೆ ನಮ್ಮ ನಮ್ಮ ಗೃಹ ಸಚಿವರುಗಳಿ೦ದ ನಮ್ಮ ದೇಹಕ್ಕೆ ಮನಸ್ಸಿಗೆ ಇ೦ಥ ಹರಕೆಗಳ ಬಗ್ಗೆ ಕೇಳಿ, ಕಿರಿಕಿರಿಯಾದರೂ, ಇವುಗಳ ಹಿ೦ದಿನ ಅವರುಗಳಿಗೆ ನಮ್ಮ ಮೇಲಿರುವ ಆಸ್ಥೆ ಮನಸ್ಸಿಗೆ ಮುದ ನೀಡುತ್ತದೆ ಅಲ್ಲವೇ? ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದಲ್ವಾ ರಾಯರೇ ಹೆಗಡೆಯವರೆಂದ ಹಾಗೆ ಹರಕೆಗಳು ಇನ್ನೆಷ್ಟು ಉಳಿದಿವೆಯೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂ೦.ಒ೦ದೊ೦ದಾಗಿ ಬೆಳಕಿಗೆ ಬರಬೇಕಷ್ತೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹಲ್ಲುನೋವಿನ ತೊಂದರೆಯನ್ನು ನೋಡಿ ನನ್ನ ಹರಕೆ ದೇವರಿಗೆ ಸಂದಿಲ್ಲ ಎಂಬ ಕಾರಣಕ್ಕೆ ಹೀಗಾಗಿರಬಹುದೇನೋ ಎಂಬ ಹಪಹಪಿಕೆ ಪತ್ನಿಯದಾದರೆ. ೧೦೮ ಪ್ರದಕ್ಷಣೆ ಹಾಕಿ ಪತ್ನಿ ಎಲ್ಲಿ ನೋಯುವಳೋ ಎನ್ನುವ ಪತಿ, ಆಹಾ ಭಲೇ ಜೋಡಿ ರೀ ನಿಮ್ಮದು. ದೇವರು ಅಡ್ಜಸ್ಟ್ ಮಾಡಿಕೊಳ್ತಾನೆ ಪರವಾಗಿಲ್ಲ :) ಅಲ್ಲ ದೇವತೆ .(ಅಮ್ಮನವರಿಗೆ ತಾನೇ ಪ್ರದಕ್ಷಿಣೆ ) ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದ್ಕೇ ಅಲ್ವೇ ಅ೦ಬಿಕಾ, ಹೇಳೋದು “ಮ್ಯಾರೇಜಸ್ ಆರ್ ಮೇಡ್ ಇನ್ ಹೆವನ್“- “ನಾವಿಬ್ಬರೂ ಮೇಡ್ ಫಾರ್ ಈಚ್ ಅದರ್“ ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಲೆಕ್ಕ ಆದ್ರೆ ಬಡ್ಡಿ, ಚಕ್ರ ಬಡ್ಡಿ ಎಲ್ಲಾ ಇರುತ್ತೆ.. ಪಾಪ ದೇವ್ರು ಬಡ್ಡಿ ಇಲ್ದೆ ಕಂತಲ್ಲಿ ಸಾಲ ತೀರಿಸೋ ಸೌಲಭ್ಯ ಕೊಟ್ಟಿದಾರೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ.ಹ.ಹ. ಕ೦ತಲ್ಲಿ ಸಾಲ ತೀರಿಸೋ ಸೌಲಭ್ಯವಿರುವ ವಿಶ್ವದ ಏಕೈಕ ಬ್ಯಾ೦ಕ್ ಎ೦ದರೆ ದೇವರು!ಏನ೦ತೀರಿ ಪಾಲರೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ನಾಲ್ಕು ವರ್ಷದ ಬಡ್ಡಿ ಸೇರಿಸಿ ಪ್ರದಕ್ಷಿಣೆ ಹಾಕಬೇಡವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಸಲು ತೀರಿಸಿದರೇ ಸಾಕೀಗ, ಗೃಹ ಸಚಿವರ ಆರೋಗ್ಯ ಭಾಗ್ಯಕ್ಕಾಗಿ, ಇನ್ನು ನೀವು ಬಡ್ದಿ ಅ೦ಥ ಬೇರೆ ಹೇಳಿ ದಿಗಿಲು ಹುಟ್ಟಿಸಬೇಡ್ರೀ! ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಉವಾಚಚನ್ನು ಮೆಚ್ಚಿಕ್೦ಡು ಪ್ರತಿಕ್ರಿಯಿಸಿದ ಸರ್ವರಿಗೂ ನನ್ನ ಹೃದಯ ತು೦ಬಿದ ನಮನಗಳು. ನಿಮ್ಮ ನಿರ೦ತರ ಪ್ರೋತ್ಸಾಹ ನನ್ನ ಬರಹಗಳ ಮೇಲೆ ಹೀಗೇ ಇರಲೆ೦ದು ಆಶಿಸುವ, ನಿಮ್ಮ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.