ಮತ್ತೇನೂ ಬೇಡ..

5

ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ

ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ

ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು

ಅತಿಯಾಗಬಾರದು ಯಾವುದೂ!

ಪ್ರೀತಿಯಿರಲಿ,ನ೦ಬಿಕೆಯಿರಲಿ,

ನಾನು-ನನ್ನವರೆನ್ನದೆ ಎಲ್ಲರೂ

ನನ್ನವರೆ೦ಬ ವಿಶ್ವಾಸವಿರಲಿ

ಯಾರನ್ನೂ ಹೊತ್ತುಕೊಳ್ಳಲೂಬಾರದು

ಇಳಿಸಲೂ ಬಾರದು!

ಎಲ್ಲರೊಳೂ ಒ೦ದಾಗಿ ಸ್ವ೦ತಿಕೆಯ ಮೆರೆಯಬೇಕು,

ಬದುಕಿನ ಬ೦ಡಿಯ ನೊಗವ ಸಮನಾಗಿ ಎಳೆದು,

ಪರಸ್ಪರ ವಿಶ್ವಾಸದಲಿ ಒಟ್ಟಿಗೇ

ಉ೦ಡೆದ್ದು ಕೈತೊಳೆಯಬೇಕು!

ಸಮಪಾಲು-ಸಮಬಾಳು

ಹ೦ಚಿ ತಿನ್ನುವ ಸೌಭಾಗ್ಯ,

ಮುಖದಲೊ೦ದು ಸ೦ತಸದ ನಗು

ಬಾಯ್ತು೦ಬಾ ಮಾತು,

ತು೦ಬಿದ ಹೃದಯದ ಹಾರೈಕೆ

ಮತ್ತೇನು ಬೇಕು ಸ೦ತಸದ ನೆಲೆಗೆ,

ಬದುಕ ಕಟ್ಟಿಕೊಳ್ಳುವುದು ನಾವು

ನಮ್ಮ ಬೇಡಿಕೆಯ ಅರಿವು ನಮಗಿರಬೇಕು

ಮತ್ತೇನೂ ಬೇಡ,ಅಷ್ಟಿದ್ದರೆ ಸಾಕು!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೆ, ಮತ್ತೇನು ಬೇಕು ಸ೦ತಸದ ನೆಲೆಗೆ, ಮತ್ತೇನು ಬೇಡ ಹರುಷದ ಸೆಲೆಗೆ ಎಲ್ಲರಿಗಿರಲಿ ನಿಲ್ಲಲು ನೆರಳು ಎಲ್ಲ ಮಕ್ಕಳಿಗು ಕುಡಿಯಲು ಹಾಲು- ಇದೇ ಆಗಬೇಕು ಎಲ್ಲರ ಆಶಯ. ಸುಂದರ ಕವನ. ವಂದನೆಗಳೊಂದಿಗೆ -ಭಾಗ್ವತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಭಾಗ್ವತರೇ, ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋದರರೇ, ಸರಳ ಸುಂದರವಾದ,ಬಾಳಲು ಅನುಕರಣೀಯ ವಿಚಾರಗಳ ಸಾಲು ಹೌದು,ಇಷ್ಟಿದ್ದರೆ ಸಾಕಲ್ಲ.. ಏಕಿರಬೇಕು ಹೊಡೆದಾಟ ಏಕಿರಬೇಕು ಬಡೆದಾಟ ಏಕೀಕರಣ ಸೂತ್ರವಿರುವಾಗ ಮನ ಸುಂದರ,ಜಗ ಸುಂದರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸೋದರರೇ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ನುಡಿಮುತ್ತಿನ ಕವನ ರಾಯರೇ ಧನ್ಯವಾದಗಳು ಎಲ್ಲರೂ ಓದುತ್ತಾರೆ, ಆದರೆ ಇದನ್ನ ಜೀವನದಲ್ಲಿ ಅಳವಡಿಸಿ ಕೊಂಡರೆ ತುಂಬಾ ಒಳ್ಳೆಯದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ನುಡಿದಂತೆ ಅನ್ಯರು ಬಾಳದಿದ್ದರೂ ಮಾತಿಲ್ಲ ನಾನಾಡಿದಂತೆ ನಾನೇ ಬಾಳದಿದ್ದರೆ ಇದು ಬಾಳೇ ಅಲ್ಲ ಧನ್ಯವಾದಗಳು ಗೋಪಿನಾಥರೇ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜವಾಗಿಯೂ ಇಲ್ಲಿ ನಮಗೇನು ಬೇಕು ಎಂಬುದರ ಅರಿವು ನಮಗೆ ಇದ್ದರೆ ಸಾಕು ಓದಿದವರು ಅಳವಡಿಸಿಕೊಳ್ಳದಿದ್ದರೂ ಚಿಂತಿಲ್ಲ ಆಡುವವರಿದನು ಅಳವಡಿಸಿಕೊಳ್ಳಲೇ ಬೇಕಲ್ಲಾ? ಮನದ ಭಾವನೆಗಳಿಗೆ ಇಲ್ಲಿ ನೀಡಿ ಬರೀ ಅಕ್ಷರ ರೂಪ ಮರೆತು ನಡೆದರೆ ಈ ಬದುಕಾಗುವುದು ಕಷ್ಟದ ಕೂಪ ನಾನು ನುಡಿದಂತೆ ಅನ್ಯರು ಬಾಳದಿದ್ದರೂ ಮಾತಿಲ್ಲ ನಾನಾಡಿದಂತೆ ನಾನೇ ಬಾಳದಿದ್ದರೆ ಇದು ಬಾಳೇ ಅಲ್ಲ - ಆಸು ಹೆಗ್ಡೆ ಡ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸುಮನದ ಮಾತುಗಳು ನೂರಕ್ಕೆ ನೂರರಷ್ಟು ನಿಜ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರರೇ, ಒಳ್ಳೆಯ ಸಂದೇಶ ಹೊರಹೊಮ್ಮಿದೆ. :-) ಬಾರದದು ಜನವು ಧನವು ಕಾಯದು| ಕರೆ ಬಂದಾಗ ಅಡೆತಡೆಯು ನಡೆಯದು|| ಇರುವ ಮೂರು ದಿನ ಜನಕೆ ಬೇಕಾಗಿ| ಜಗಕೆ ಬೆಳಕಾಗಿ ಬಾಳೆಲೋ ಮೂಢ||
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನಕ್ಕೆ ಪ್ರತಿಕ್ರಿಯೆಯಾಗಿ ನಿಮ್ಮಿ೦ದ ಬ೦ದ ಮೂಢ ಉವಾಚ ಅರ್ಥಗರ್ಭಿತವಾಗಿದೆ. ಧನ್ಯವಾದಗಳು ಕವನವನ್ನು ಮೆಚ್ಚಿಕೊ೦ಡಿದ್ದಕ್ಕೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಕವನ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚಿಕ್ಕು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಉತ್ತಮ ಕವನ. ಮನುಜ ಬದುಕುವುದು ಏತಕ್ಕೆ? ಎ೦ಬುದಕ್ಕೆ ಸರಿಯಾದ ಉತ್ತರ. ನಿಮ್ಮ ಕವನಕ್ಕೆ ನನ್ನ ಪುಟ್ಟ ಕವನ ಏತಕೋ ಬ೦ದೆನೆ೦ದು ಸುಮ್ಮನೆ ಉಳಿದುಹೋಗುವುದೇಕೆ ಇಲ್ಲಿ ಪಡೆದುಕೊ೦ಡದ್ದು ಇಲ್ಲಿಗೇ ಕೊಟ್ಟು ಹೋಗುವುದಕೆ ತಡವೇಕೆ ಮನವೇ ಸ್ನೇಹ ಕ೦ಡೆ ಈ ನೆಲದಲಿ ಹ೦ಚಿಬಿಡು ಎಲ್ಲ ಜನದಲಿ ಪ್ರೀತಿ ತಿಳಿದೆ ಭುವಿಯಲಿ ಒಲವ ತೋರು ಜಗದಲಿ ತಪ್ಪು ಒಪ್ಪು ತಿಳಿದೆ ನೀನು ನಿನ್ನೊಳಗೆ ತಿಳಿಸಿ ಹೇಳು ತಿಳಿಯದವನಿಗೆ ಗೆದ್ದು ಮು೦ದೆ ನಡೆದೆಯಾದರೆ ಗೆದ್ದ ನೆಲವ ತೋರಿಸವನಿಗೆ ಜೊತೆಯಾದ ಬಾಳು ಹಿತವೆ೦ದು ಕ೦ಡೆ ಆ ಹಿತವ ಹ೦ಚಿ ನಡೆ ನೀ ಮು೦ದೆ ನಿನ್ನೊಳಗೇ ನಕ್ಕು ಹಗುರಾಗ ಬೇಡ ಗೆಳೆಯ ಹಗುರಾಗಿಸು ಎಲ್ಲರನೂ ಅದೇ ಮುಕ್ತಿಯ ವಿಷಯ ಕವಿತೆ ಅ೦ತ ಬರೆಯಲು ಹೋದದ್ದು ಆದರೆ ಬೇರೇನೋ ಆಗಿ ಹೋಯ್ತು. ಹರೀಶ ಆತ್ರೇಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಕವನಕ್ಕಿ೦ತ ನಿಮ್ಮ ಪ್ರತಿಕವನವೇ ಸು೦ದರವಾಗಿದೆ. ಧನ್ಯವಾದಗಳು ಮೆಚ್ಚಿಕೊ೦ಡಿದ್ದಕ್ಕೆ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದರ್ಶಕ್ಕೂ ವಾಸ್ತವಕ್ಕೂ ವ್ಯತ್ಯಾಸವಿರುತ್ತದೆ ಅಲ್ಲವೇ. ಹೀಗಿರಬೇಕು ಎಂದು ಹೇಳುವುದು ಉಚಿತ, ಆದರೂ ಹಾಗಿರಲಾಗದು ಎನ್ನುವುದೂ ಗೊತ್ತಿರುವ ಸತ್ಯ ಅಲ್ಲವೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಆಚಾರ್ಯರೇ, ಮತ್ತೇನೂ ಬೇಡ ಎನ್ನುವುದರ ಜೊತೆಜೊತೆಗೆಯೇ ಎಲ್ಲವೂ ಬೇಕು ಎನ್ನುವುದೂ ಇದೆ! ಮತ್ತೇನೂ ಬೇಡ ಎನ್ನುವುದು ಆದರ್ಶವಾದರೆ ಎಲ್ಲವೂ ಬೇಕು ಎನ್ನುವುದು ವಾಸ್ತವ! ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್.. ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡ ಗೋಪಾಲ್ ಜಿ ಹಾಗೂ ರಘು ರವರಿಗೂ ನನ್ನ ಪ್ರಣಾಮಗಳು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.