ಕನಸುಗಳೇ ಹಾಗೆ!

4

ಕನಸುಗಳೇ ಹಾಗೆ.

ಒ೦ದಕ್ಕೂ ತಲೆಯಿಲ್ಲ, ಬುಡವಿಲ್ಲ!

ಗೀಚಿ ಬರೆದ ಗೀರುಗಳ೦ತೆ,

ಕವಿತೆಯ ಸಾಲುಗಳ೦ತೆ,

 ಬೇಸರದಿ ಬರೆದ ಅಪೂರ್ಣ ಚಿತ್ರದ೦ತೆ!

ಘಾಟಿ ರಸ್ತೆಯ ತಿರುವುಗಳ೦ತೆ!

ಮುರಿದು ಬೀಳಲಿರುವ ಹುಲ್ಲಿನ ಮನೆಯ೦ತೆ!

ಒಮ್ಮೊಮ್ಮೆ ಇವು ಹಾಡಾಗುತ್ತವೆ!

ಬಯಕೆಯನ್ನುಕ್ಕಿಸುತ್ತವೆ.

ಕ೦ಬನಿಯ ತೊಡೆಯುತ್ತವೆ!

ಬಾಳಿನ ಆಶಾಕಿರಣಗಳಾಗುತ್ತವೆ!

ಬದುಕೆ೦ಬ ಬಯಲಲಿ

ನರ್ತಿಸುವ ನವಿಲಾಗುತ್ತವೆ!

ಕನಸುಗಳೇ ಹಾಗೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕನಸುಗಳ ಸಾಲುಗಳನ್ನು ಕವಿನದ ಸಾಲುಗಳನ್ನಾಗಿಸಿ ಬರೆದಿದ್ದೀರಾ ksraghavendranavada ಸರ್ ತುಂಬಾ ಚೆನ್ನಾಗಿದೆ ಧನ್ಯವಾದಗಳು. ವಸಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿ ನವಿಕರಿಸಿದ ಕನಸಿನ ಕವಿತೆ ಚೆನ್ನಾಗಿದೆ ರಾಯರೇ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕನಸುಗಳೇ ನನ್ನ ರಾತ್ರಿ ನಿದ್ದೆ ಕೆಡಿಸುವಂಥವು ಅದಕ್ಕೆ ಅವು ಕನಸುಗಳಲ್ಲ, ನನ್ನ ಹಾರರ್ ಸ್ಕೋಪುಗಳು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ವಂದನೆಗಳು. ಕನಸುಗಳ ದ್ವಂದ್ವವನ್ನು ನವಿರಾಗಿ ಚಿತ್ರಿಸಿದ್ದೀರಿ. ಕವನ ಖುಷಿ ನೀಡಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಮಳೆಗಾಲ ದೀರ್ಘವಾಗುತ್ತಾ ಹೋದ೦ತೆ ನಿಮ್ಮೊಳಗಿನ ಕವಿಯೂ ಜಾಗೃತನಾಗಿದ್ದಾನೆ ಅನ್ನಿಸುತ್ತಿದೆ. ಉತ್ತಮ ಕವನ ಕಟ್ಟಿದ್ದಕ್ಕೆ ಅಭಿನ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನಾ ಆದರೂ ಈ ಕನಸುಗಳೇ ಸೊಗಸು ಎಲ್ಲಿಹುದು ಹೇಳಿ ಕನಸುಕಾಣದ ಮನಸು! ಸುಂದರವಾಗಿದೆ ಕವನ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪೊಪ್ಪು: <<ಏನಾ ಆದರೂ ಈ ಕನಸುಗಳೇ ಸೊಗಸು>> ಏನೇ ಆದರೂ ಈ ಕನಸುಗಳೇ ಸೊಗಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನಸು ಅಂದರೆ ನನಗೆ ಸ್ವಲ್ಪ ಭಯ. ಹಲವಾರು ಕನಸುಗಳು ಕಂಡಿದ್ದು ನಿಜವಾಗಿದೆ. ಹಾಗಾಗಿ ಯಾವುದಾದರೂ ಕೆಟ್ಟ ಕನಸು ಬಿದ್ದರೆ ಆತ್ಮೀಯರಿಗೆ ತಕ್ಷಣ ತಿಳಿಸಿ ಬಿಡುತ್ತೇನೆ. ಸಾಮಾನ್ಯವಾಗಿ ಈ ರೀತಿ ಹೇಳಿದಾಗ ಅದು ಸುಳ್ಳಾಗಿದೆ. ಆದರೆ ಒಳ್ಳೆಯ ಕನಸುಗಳು ಮಾತ್ರ ನನ್ನಲ್ಲಿಯೇ ಇರುತ್ತದೆ. ಅದು ಹಾಳಾಗಬಾರದು ಅಂತಾ. ನಾವಡರೆ ನಿಮ್ಮ ಒಳ್ಳೆಯ ಕನಸು ಕೇವಲ ಕನಸಾಗಿರದೆ ನಿಜವಾಗಲಿ ಎಂದು ಹಾರೈಸುತ್ತೇನೆ. ನಮ್ಮ ಕನಸನ್ನು ಹೆಕ್ಕಿ ತೆಗೆದಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಬೇಸರದಿ ಬರೆದ ಅಪೂರ್ಣ ಚಿತ್ರದ೦ತೆ! ಘಾಟಿ ರಸ್ತೆಯ ತಿರುವುಗಳ೦ತೆ! >>> ಕವನ ಇಷ್ಟವಾಯಿತು ನಾವಡರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಕವನ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಸರ್ವರಿಗೂ ನನ್ನ ವ೦ದನೆಗಳು. ಧನ್ಯವಾದಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.