ಕವನ ಬರೆಯುವ ಕನಸು!!!

3

ಶಾಯಿ ಪೆನ್ನನು ಕೈಯಲ್ಹಿಡಿದು

ಕವಿತೆ ಬರೆಯುವೆನೆ೦ದು

ನಾ ಕುಳಿತಾಗ !! ಗೀಚುತ್ತಾ ಹೋದಾಗ?

ನೆನಪಾಯಿತೊಮ್ಮೆ ಆಸುಮನ!!

ಕಣ್ಣ ಮು೦ದೆ ಕಾಫೀ ಲೋಟ!

ಸಣ್ಣ ನಗುವಿನ ಸ೦ತೋಷ!

ಸದಾ ಹಸನ್ಮುಖದ ಗೋಪೀನಾಥಾ....

ತಲೆ ಅಲ್ಲಾಡಿಸಿದೆ ಇದೇನು ಕನಸೋ ಯಾ ನಿಜವೋ?

ಹೌದು! ಅಲ್ಲಲ್ಲ! ಎ೦ದಿತು ಮನಸೊಮ್ಮೆ!

ಮತ್ತೆ ಕಣ್ಣ ಮು೦ದೆ ಕ೦ದನ ಹಿಡಿದ ನಾಗರಾಜ?

ಕನ್ನಡಕದೊಳಗೇ ನಗುವ ಮ೦ಜುನಾಥಾ...!!

ಪಿಕಳಾರದೊ೦ದಿಗೆ ಹರ್ಷನೂ...

ಗುರ್ರೆನುತಲೇ ಶ್ರೀಹರ್ಷನೂ...!!!

ಯಾಕೋ ಇ೦ದು ಸರಿಯಿಲ್ಲ ಎ೦ತೆನಿಸಿ

ಕಣ್ಣು ಕೊಡವಿ ನೋಡಿದರೆ..

ಪೆನ್ನು ವಾಲಿ, ಶಾಯಿ ಖಾಲಿ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಣ್ಣ ನಗು ನಿಜಕ್ಕೂ ಮೂಡಿತು :-) ಎಲ್ಲರ ಹೆಸರನ್ನು ಸೇರಿಸಿ ಬರೆದ ಶೈಲಿ ಚೆನ್ನಾಗಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ತೋಷ್, ಕವನ ಓದಿ ನಿಮ್ಮ ಸು೦ದರ ವದನದಲ್ಲಿ ಒ೦ದು ಸಣ್ಣ ನಗು ಮೂಡಿದ್ದಕ್ಕೆ ಸ೦ತೋಷವಾಯಿತು ನನಗೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ಬ್..ನಾವಡರೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸೋದರರೇ. ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರವಾದ ಕವನ ನಿಮ್ಮ ಭಾವನೆಯಲ್ಲಿ ಪೆನ್ನು ವಾಲದೆ ಶಾಯಿ ಖಾಲಿಯಾಗದೆ ಇದ್ದಿದ್ದರೆ ದೊಡ್ಡ ಕವನವನ್ನೆ ಬರೆಯ ಬಹುದಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು, ವಸ೦ತ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಯಿ ತುಂಬಿದ ಪೆನ್ನಿನಲಿ ಚಂದದಿ ಬರೆಯುವ ಕವನವ ಸಂಪದದ ಸಂಮಿಲನದೆ ಹರುಷದ ಜತೆ ಹಾರೈಸುವ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸದಾ ಹಸನ್ಮುಖದ ಗೋಪೀನಾಥರೇ, ವ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ ತು೦ಬಾ ಚೆನ್ನಾಗಿದೆ........ಖುಶಿಯಾಯಿತು..........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪವಿತ್ರಾ, ಏನೋ ಒ೦ದು ಸಣ್ನ ಪ್ರಯತ್ನ ಅಷ್ಟೇ! ನಿಮ್ಮ ಅಭಿಮಾನ ನನ್ನ ಮೇಲೆ ಸದಾ ಹೀಗೇ ಇರಲಿ ಎ೦ದು ಆಶಿಸುವೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಡೆಯುವ ನಾಣ್ಯಗಳು!!

ರಾಘವೇಂದ್ರ ಅವ್ರೆ ಕವನಾ ತುಂಬಾ ಚೆನ್ನಾಗಿದೆ, ಓದಿ ಖುಷಿಯಾಯ್ತು...!! -- ಸಿದ್ದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಸಿದ್ದಪ್ಪರವರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಡೆಯುವ ನಾಣ್ಯಗಳು>> ಅದಕ್ಕೇ ನೋಡಿ ಶ್ರೀಧರ್, ನಡೆಯುವವರ ಕಾಲೆಳೆಯುವ ಪ್ರಯತ್ನ ಸತತವಾಗಿ ನಡೆಯುತ್ತಿರುತ್ತದೆ ಎಳೆಸಿಕೊಂಡರೆ ಮತ್ತೆ ಇನ್ನಷ್ಟು ಉತ್ಸಾಹದಿಂದ ಈ ನಾಣ್ಯಗಳ ಚಲಾವಣೆ ಆಗುತ್ತಲೇ ಇರುತ್ತದೆ!!! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆ :) ಪೆನ್ನನ್ನ ದಯವಿಟ್ಟೂ ಖಾಲಿ ಮಾಡಿಕೊಳ್ಳಬೇಡಿ... ಅದರಿಂದಾಗಬೇಕಾದ ಕೆಲಸ ಬಹಳಷ್ಟಿದೆ :) ವಂದನೆಗಳೊಂದಿಗೆ, ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಉರಾಳರೇ, ನಿಮ್ಮ ಅರಿಕೆ ನನ್ನ ನೆನಪಿನಲ್ಲಿ ಸದಾ ಇರುತ್ತದೆ. ಕವನ ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮೀ ಕವನ ಬರೆಯುವ ಕನಸು ನನಸಾಗಲಿ ನೀವು ಬರೆವ ಕವನಗಳು ಬೇಗ ನೂರಾರಾಗಲಿ ಆಸುಮನದ ಮಾತುಗಳ ಕನವರಿಕೆ ನಿಮಗೆಂದಿರಿ ಕೃತಾರ್ಥ ಭಾವವನು ನನ್ನ ಮನದಲ್ಲಿ ತುಂಬಿದಿರಿ ನಮಗೆ ಪೈಪೋಟಿ ನೀಡುವಿರೆಂಬ ಚಿಂತೆ ನಮಗಿಲ್ಲ ಜಗದಂತೆ ಸಂಪದದಂಗಳವೂ ವಿಶಾಲವಾಗಿದೆಯಲ್ಲ ಆಗದು ಎಂದು ಕೂತುಬಿಟ್ಟರೆ ಏನೂ ಆಗದು ಈ ಜಗದಿ ಎದ್ದು ಹೊರಟರೆ ನೋಡಿ ಕೊನೆಗೆ ನಗು ನಿಮ್ಮ ಮೊಗದಿ ಅಭಿವಂದನೆಗಳು ಅಭಿನಂದನೆಗಳು - ಆತ್ರಾಡಿ ಸುರೇಶ ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೇರೇ, ನಾನು ಕವನ ಬರೆಯಲು ನನ್ನ ಮೇಲೆ ನಿಮ್ಮ ಪ್ರಭಾವ ತು೦ಬಾ ಇದೆ ಎ೦ಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಅಪ್ಪಣೆಯಿಲ್ಲದೆ ಆಸುಮನವನ್ನು ನನ್ನ ಕವನದಲ್ಲಿ ಪ್ರಸ್ತಾಪಿಸಿದ ಸಲುವಾಗಿ ನಿಮ್ಮಲ್ಲಿ ಕ್ಷಮೆಯನ್ನು ಕೋರುತ್ತಿದ್ದೇನೆ. ಕವನ ಮೆಚ್ಚಿ, ನನ್ನನ್ನು ಹರಸಿದ ನಿಮಗೆ ನಾನು ಆಭಾರಿ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ರೋ ಸೂಪರ್ರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕೂ! ನನ್ನ ಕಣ್ನ ಮು೦ದೆ ಕಾಫೀ ಲೋಟ ಬ೦ದಿದ್ದಕ್ಕಾದ್ರೂ ನೀವು ಬೇಗ ಕಾಫಿ ಕುಡಿದು ಲೋಟ ಕೆಳಗಿಡ್ತೀರಾ ಅ೦ತ? ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಗಲ್ಲ ಆಗಲ್ಲ ಅದು ಕೆಳಗಿಡಕೆ ಆಗಲ್ಲ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ೦ಗಾದ್ರೆ ಬನ್ನಿ ಲೋಟ ತಗೊ೦ಡು ನಮ್ ಕಡೆ, ಇನ್ನೊ೦ದ್ ಸ್ವಲ್ಪ ಕಾಫಿ ಹಾಕ್ ಬಿಡ್ತೀನಿ, ಕುಡೀತಾ ಇರಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕೇನಂತೆ ಹೊರನಾಡು ಬಂದಾಗ ಖಂಡಿತ ಬಂದೇ ಬರ್ತೀನಿ. ನಮ್ಮ ಮಲೆನಾಡಿಗೆ ಬಂದಾಗ ಕಾಫಿ ಕುಡಿಯದೆ ಇದ್ರೆ ಹೆಂಗೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನದ ತಲೆಬರಹ ನೋಡಿ ಗಂಭೀರ ಸ್ವರೂಪದ ಕವಿತೆಯಿರಬೇಕು ಅಂದುಕೊಂಡಿದ್ದೆ. ಆದರೆ ಓದಲಾರಂಭಿಸಿದಂತೆ ಡಿಫ್ರೆಂಟಾಗಿದೆ ಅಂತ ಗೊತ್ತಾಯ್ತು :-) ಒಟ್ಟಿನಲ್ಲಿ ಚೆನ್ನಾಗಿದೆ ನಿಮ್ಮ ಕನಸಿನಲ್ಲಿ ಮೂಡಿದ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊಸೂರರೇ, ಸುಮ್ಮನೆ ಸ೦ಪದಿಗರನ್ನು ಸ್ವಲ್ಪ ನಗಿಸೋಣವೆ೦ದು ಬರೆದ ಕವನವಿದು. ನಿಮಗೆ ಮೆಚ್ಚಿಗೆಯಾಯಿತಲ್ಲ, ನನಗಷ್ಟು ಸಾಕು. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ ತುಂಬಾ ಚೆನ್ನಾಗಿದೆ :) ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು, ಮೂರ್ತಿಗಳೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರರೇ, ನಮ್ಮಪ್ಪ ನನ್ನಹಾಗೆ ಇದ್ದಾಗ ೩ ಪೈಸೆ,ನಾನು ಸಣ್ಣವನಿದ್ದಾಗ ೫,೧೦,೨೦,೨೫ ಪೈಸೆ ಇತ್ತೀಚಿನ ದಿನಗಳಲ್ಲಿ ೫೦ ಪೈಸೆಗಳ ನಾಣ್ಯಗಳೆಲ್ಲಾ ಟ೦ಕಸಾಲೆಯ ಕೊಠಡಿಯೊ೦ದರಲ್ಲಿ ಭದ್ರವಾಗಿ ಕುಳಿತಿರಬಹುದು ಚಲಾವಣೆಯಿಲ್ಲದೆ ಯಾ ಅದನ್ನು ಕರಗಿಸಿರಲೂ ಬಹುದು. ಈಗ ಏನಿದ್ರೂ ೧,೨,೫,ರೂಪಾಯಿಯ ನಾಣ್ಯಗಳು ಈಗ ೧೦ ರೂಪಾಯಿದೂ ಬ೦ದಿದೆ. ಈಗ ಅವುಗಳಿಗೇ ಬೆಲೆ. ಯಾವಾಗ ಯಾವ ನಾಣ್ಯ ಅತಿ ಹೆಚ್ಚು ಚಲಾವಣೆಯಾಗುತ್ತದೋ ಹಾಗೂ ಬೆಲೆ ಉಳಿಸಿಕೊಳ್ಳುತ್ತದೋ ಅವುಗಳನ್ನೇ ಮುದ್ರಿಸುತ್ತಾರಲ್ಲವೇ? ಈ ಕವನ ಹಾಸ್ಯಕ್ಕಾಗಿಯೇ ಬರೆದಿದ್ದು! ಆದರೆ ನಿಮಗೆ ಈ ಕವನ ಇಷ್ಟು ಗ೦ಭೀರತೆಯನ್ನು ತರಬಹುದೆ೦ದು ನಾನು ಎಣಿಸಿರಲಿಲ್ಲ. ಆಗಲಿ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಹಾಸ್ಯಕವನ ಚೆನ್ನಾಗಿದೆ ನನ್ನ ಹೆಸರು ಬಳಸಿಕೊಳ್ಳಲಿಲ್ಲ ಅ೦ತ ಬೇಜಾರು :):):) (ಸುಮ್ನೆ) ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮು೦ದಿನ ಸರದಿ ಹರಿಯದೇ! ನಿಮ್ಮ ಸ೦ತೋಷದ ಪ್ರತಿಕ್ರಿಯೆಗಾಗಿ ವ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಸೂಪರ್ರ್..ಆದ್ರು ಇನ್ನೊಂದು ಪೆನ್ ತಗೊಂಡಿದ್ರೆ..ಎಲ್ಲರು ನೆನಪು ಬರ್ತಾಇದ್ರೆನೊ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊ೦ದು ಪೆನ್ನು ತಗೊಳೋದ್ರೊಳಗೆ ಕನಸು ಮುಗಿದು ಕಣ್ಣು ಕೊಡವಿ ಎದ್ದು ಬಿಟ್ಟಿದ್ದೆನಲ್ಲ, ಮಾಲತಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾವಡರೇ, ನಿಮ್ಮ ಆತ್ಮೀಯ ಭಾವ ನಮ್ಮನ್ನು ಪರವಶರನ್ನಾಗಿಸಿದೆ. ನಮೋ, ನಮೋ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.