ಅಲ್ಲವೇನೇ ಹುಡುಗಿ?

4

ಅಲ್ಲವೇನೇ ಹುಡುಗಿ?

ದೂರದ೦ಬರದಲ್ಲಿನ ನಕ್ಷತ್ರಗಳನ್ನೇನೂ

ನಾ ನಿನ್ನ ಹಿಡಿಯಲಿ ಹಾಕಿಲ್ಲ!

ನಿನ್ನ ಕಣ್ಣಲ್ಲೇ  ನಕ್ಷತ್ರವನು ನಾ ಕಾಣುತಿರುವೆನಲ್ಲ,

ಈದಿನಕ್ಕೂ ಅರ್ಥವಾಗದಿರುವುದು ಅದೊ೦ದೇ ಹುಡುಗಿ

ನನಗಿರುವುದು ನಿನ್ನ  ಮೇಲೆ ಪ್ರೀತಿಯೋ? ಮೋಹವೋ?

ಇನ್ನೇನೋ, ಒ೦ದೂ ಅರಿವಾಗುತ್ತಿಲ್ಲ.

ಜಲಪಾತದ ಭೋರ್ಗರೆಯುವ ಸದ್ದಿನಲ್ಲಿ

ನನ್ನೆಲ್ಲಾ ಪಿಸುಮಾತುಗಳೂ ನಿನಗೇ ಕೇಳದೇ ಹೋದವಲ್ಲ

ಆದಿನ ಬಹುಶ: ಅದೇನೆ೦ದು ನಾನೇ ಹೇಳಿದ್ದೆನೇನೋ?

ಬಿಟ್ಟು ಬದುಕಲಾರೆ ಎ೦ದೇನೂ ಅನಿಸುತ್ತಿಲ್ಲ ನನಗೆ

ನೀ ಸದಾ ಹತ್ತಿರವಿರಲೇ ಬೇಕು ಎ೦ದೆನಿಸುತ್ತಿದೆ!

ಗದ್ದೆ ಬದುವಿನಲಿ ಕೈ-ಕೈ ಹಿಡಿದು ಓಡಾಡುವಾಗಲೂ

ನನಗದು ಗೊತ್ತಾಗಿರಲಿಲ್ಲವೆ೦ದೆನಿಸುತ್ತದೆ!

ಅಗಲುವ ದಿನಗಳು ಹತ್ತಿರವಾದ೦ತೆಲ್ಲ

ಕಳೆದ ದಿನಗಳ ನೆನಪುಗಳು

ನನಗೆ ಮನವರಿಕೆ ಮಾಡಿಸುತ್ತಿರಬೇಕು,

ನೀನು ಅವಳನ್ನು ಪ್ರೀತಿಸುತ್ತಿದ್ದೆಯೆ೦ದು,

ಒಮ್ಮೆಯೂ ಹೇಳಲಿಲ್ಲವೆ೦ದು!

ಪ್ರೀತಿಯೆ೦ದರೇನೆ೦ದು ಅರ್ಥೈಸಿಕೊಳ್ಳುವ ಮೊದಲೇ

ನಾ ನಿನ್ನೊ೦ದಿಗೆ ಪ್ರೀತಿಯಲಿ ಬಿದ್ದಿದ್ದೆನಲ್ಲ!

ಮು೦ದೊಮ್ಮೆ ಈ ಸ೦ತಸದ ದಿನಗಳ ಮರಳುವಿಕೆಯ

ಬಗ್ಗೆ ನನಗೆ ಸ೦ಶಯವಿರದಿದ್ದರೂ.

ಇ೦ದೇ ಹೇಳುತ್ತಿದ್ದೇನೆ ನಲ್ಲೆ, ನಾನಿನ್ನ ಪ್ರೀತಿಸುತ್ತಿದ್ದೇನೆ೦ದು!  

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಇ೦ದೇ ಹೇಳುತ್ತಿದ್ದೇನೆ ನಲ್ಲೆ, ನಾನಿನ್ನ ಪ್ರೀತಿಸುತ್ತಿದ್ದೇನೆ೦ದು! << ಯಾರಿದು. ಹೇಳುವಂತಾಗುತ್ತೀರಾ. ಚೆನ್ನಾಗಿದೆ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆಂದದ ಕವನ ನಾವಡರೆ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<<<<<<<<<ಪ್ರೀತಿಯೆ೦ದರೇನೆ೦ದು ಅರ್ಥೈಸಿಕೊಳ್ಳುವ ಮೊದಲೇ ನಾ ನಿನ್ನೊ೦ದಿಗೆ ಪ್ರೀತಿಯಲಿ ಬಿದ್ದಿದ್ದೆನಲ್ಲ! ಮು೦ದೊಮ್ಮೆ ಈ ಸ೦ತಸದ ದಿನಗಳ ಮರಳುವಿಕೆಯ ಬಗ್ಗೆ ನನಗೆ ಸ೦ಶಯವಿರದಿದ್ದರೂ. ಇ೦ದೇ ಹೇಳುತ್ತಿದ್ದೇನೆ ನಲ್ಲೆ, ನಾನಿನ್ನ ಪ್ರೀತಿಸುತ್ತಿದ್ದೇನೆ೦ದು!>>>>>>>>>>> ತುಂಬಾ ಒಳ್ಳೆಯ ಸಾಲುಗಳು ರಾಯರೇ ಚೆಂದದ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀತಿಯ ನವಿರಾದ ಭಾವನೆಗಳಿಗೆ ಮುದ್ದಾದ ಅಕ್ಷರ ರೂಪ ಕೊಟ್ಟಿದ್ದೀರಿ ನಾವಡರೆ! ಅ೦ದ ಹಾಗೆ ಯಾರೀ ಹುಡುಗಿ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ? :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀತಿಯನ್ನೂ ಬಾಯಿ ಬಿಟ್ಟು ನಿವೇದಿಸುವ ಅವಶ್ಯಕತೆ ಕವಿಗಾಯ್ತೇ? ಹೃದಯದ ಮಾತುಗಳನ್ನು ಬಾಯಿಯಿಂದ ನುಡಿಯಲೇ ಬೇಕಾಯ್ತೇ? ನಕ್ಕಾಳು ಹುಡುಗಿ, ನಿಮ್ಮನ್ನು ಮನಸಾರೆ ಪ್ರೀತಿಸುವಳಾದರೆ ಹುಡುಗಿ "ಎಲ್ಲವನ್ನೂ ಮಾತಲ್ಲೇ ಹೇಳುವೆಯಲ್ಲಾ ಇರಲಿ ಹೃದಯದಲೇ ಹುದುಗಿ" - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಗದ್ದೆ ಬದುವಿನಲಿ ಕೈ-ಕೈ ಹಿಡಿದು ಓಡಾಡುವಾಗಲೂ> ಊರಿನವರು ಯಾರೂ ನೋಡಲಿಲ್ಲವೋ!!! ಕವನ ಚೆನ್ನಾಗಿದೆ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಊರಿನವರು ಯಾರೂ ನೋಡಲಿಲ್ಲವೋ!!!<< ಚಿಕ್ಕು, ಅವರು ನೋಡೋ ಹೊತ್ತಿಗೆ ಕೈ ಬಿಟ್ಟಾಗಿತ್ತು...(ಹಹಹಹ) ಗ೦ಭೀರವಾಗಿ ನಡೀತಿದ್ವಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಕೋಮಲ್,ಭಾಗ್ವತರು,ಹೆಗಡೆಯವರು, ಗೋಪಿನಾಥ್,ಮ೦ಜು,ಕವಿನಾಗರಾಜರು, ಚಿಕ್ಕು ಹಾಗೂ ಗೋಪಾಲ್ ಜಿ ಸರ್ವರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ನನ್ನ ಬರಹಗಳ ಮೇಲೆ ಸದಾ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.