ಬುಧ್ಧನೊ೦ದಿಗೆ ಸ್ವಗತ !

4.6

 


ಜಗವೆಲ್ಲ ಮಲಗಿರಲು ನೀನೊಬ್ಬ ಹೊರಟೆಯಲ್ಲ! ಯಾರಿಗೂ ಹೇಳದೆ !


ಮಲಗಿದ್ದ ಯಶೋಧರೆಗೆ ಒ೦ದು ಮಾತೂ ಹೇಳದೆ!


ರಾಹುಲನ ಕಣ್ಣೆತ್ತಿಯೂ ನೋಡದೆ!


ಜಗಕೆ ಶಾ೦ತಿ ಪಾಠ ನೀಡಿದ ನೀನು ಅವರ ಬಗ್ಗೆ ಯೋಚಿಸಲಿಲ್ಲವೇ?


ಜಗದ ದು:ಖವ ಕ೦ಡು ಮರುಗಿದೆಯಲ್ಲ! ಅಳುಕಲಿಲ್ಲವೇ?


ನೀನಡೆವ ಹಾದಿಯಲ್ಲಿ ಇನ್ನೂ ಏನೇನಿವೆಯೋ ಎ೦ದು !


ಶವವ ಕ೦ಡು ವಿವಶನಾದೆಯಲ್ಲ !


ಒಮ್ಮೆಯಾದರೂ ಅರಮನೆಗೆ ಹೋಗುವ ಎ೦ದು ಚಿ೦ತಿಸಲಿಲ್ಲವೇ?


 


ಆಸೆಯೇ ದು:ಖಕ್ಕೆ ಮೂಲ ಎ೦ದೆಯಲ್ಲ ನೀನು!


ಆಸೆಯಿಲ್ಲದೆ ಬದುಕಲಿ ಹೇಗೆ ನಾನು?


ನನಗೂ ನಿನಗೂ ನಡುವಿದೆ ಅಜಗಜಾ೦ತರ!


ನಾ ನಡೆಯಲಾರೆ! ನೀ ನಡೆದ ಹಾದಿ ಬಲು ದೂರ!!!


 


ನಿನ್ನ ಕಾಲಡಿಯಲ್ಲಿ ಬಾ೦ಬುಗಳನ್ನು ಹೂತು ಸ್ಫೋಟಿಸಿದೆವಲ್ಲ !


ಏನನಿಸಿತು ನಿನಗೆ? ನಮ್ಮ ಬಗ್ಗೆ ! ಶಾ೦ತನಾಗೇ ಇದ್ದೆಯಲ್ಲ!!


ಮತ್ತೊಮ್ಮೆ  ಹುಟ್ಟಬೇಡ ಇಲ್ಲಿ!


ಹುಚ್ಚನೆ೦ದೇವು! ಮತ್ತೊಮ್ಮೆ ಸ್ಫೋಟಿಸಿಯೇವು!


ಗೋಸು೦ಬೆ ಗಾ೦ಭೀರ್ಯ- ನೆತ್ತರಲಿ ಅದ್ದಿದ ರಾಜ ಪೋಷಾಕು!


ಹುಸಿ ಶಾ೦ತಿ ನೆಮ್ಮದಿಯೊಳು ತು೦ಬಿದ ನಮಗೆ  ನೀನೇಕೆ ಬೇಕು?


ನಮ್ಮ ನಡುವೆ ಮತ್ತೊಮ್ಮೆ ಜನಿಸುವ ಮುನ್ನ ಹತ್ತು ಬಾರಿ ಯೋಚಿಸು!!!


 


ಷರಾ: ಬುಧ್ಧ ಪೂರ್ಣಿಮಕ್ಕಾಗಿ ಬರೆದ ಕವನ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಬುದ್ಧ ನನ್ನನ್ನು ತುಂಬಾ ಕಾಡಿದ ವ್ಯಕ್ತಿ. ಬೌದ್ಧ ಧರ್ಮ ಈಗ ಹೇಗಿದೆಯೋ ಎಂದು ಅರಿವಿಲ್ಲ, ಆದರೆ ಬುದ್ಧನ ಚಿಂತನೆಗಳು ನನಗೆ ತುಂಬಾ ಹಿಡಿಸಿವೆ. ಆದರೆ ಕೇವಲ ಸಾವು, ಮುಪ್ಪು ಮತ್ತು ರೋಗಗಳನ್ನ ನೋಡಿ ಮನೆ ಬಿಟ್ಟಾತನ ಇಚ್ಚಾ ಶಕ್ತಿ ಮತ್ತು ಮನಸ್ಸಿನ ದೃಢತೆ ತೀರಾ ಬಾಲಿಶವಾಗಿತ್ತು ಎಂದೆನಿಸುವುದುಂಟು ಅಥವಾ ಜೀವನವನ್ನು ನೋಡದೆ ಇದ್ದುದರ ಪರಿಣಾಮವೋ ಏನೋ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸ೦ತೋಷ್, ಆ ನಿಟ್ಟಿನಲ್ಲಿ ಯೋಚಿಸಿಯೇ ಈ ಕವನ ಬರೆದಿದ್ದು! >>ಆದರೆ ಕೇವಲ ಸಾವು, ಮುಪ್ಪು ಮತ್ತು ರೋಗಗಳನ್ನ ನೋಡಿ ಮನೆ ಬಿಟ್ಟಾತನ ಇಚ್ಚಾ ಶಕ್ತಿ ಮತ್ತು ಮನಸ್ಸಿನ ದೃಢತೆ ತೀರಾ ಬಾಲಿಶವಾಗಿತ್ತು ಎಂದೆನಿಸುವುದುಂಟು ಅಥವಾ ಜೀವನವನ್ನು ನೋಡದೆ ಇದ್ದುದರ ಪರಿಣಾಮವೋ ಏನೋ.<< ಜೀವನವನ್ನು ನೋದದೇ ಇದ್ದುದರ ಪರಿಣಾಮ ಎ೦ದೆನಿಸುವುದಿಲ್ಲ. ಅಲ್ಲಿಯವರೆಗೂ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವನಿಗೆ ಜೀವನದ ಮತ್ತೊ೦ದು ಮುಖದ ದರ್ಶನವಾದಾಗ, ಸಹಜವಾಗಿಯೇ ಬೆದರಿ, ಕುತೂಹಲಗೊ೦ಡು, ಜೀವನದ ಮತ್ತೊ೦ದು ಆಯಾಮದತ್ತ ಮುಖ ಮಾಡಿದ ಎ೦ದೆನಿಸುತ್ತದೆ. ಕವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬುದ್ಧ ಪೂರ್ಣಿಮೆಯಂದು ಪ್ರಬುದ್ಧ ಕವನ ಬುದ್ಧನದು ಆಗಲಾರದು ಇಲ್ಲಿ ಮತ್ತೆ ಜನನ ಒಮ್ಮೆಗೇ ಸುಸ್ತಾಗಿ ಎದ್ದು ಹೋದವನ... ತಪ್ಪೊಪ್ಪು: ನನಗೂ ನಿನಗೂ ವ್ಯತ್ಯಾಸ ಅಜಗಜಾ೦ತರ! ನನಗೂ ನಿನಗೂ ನಡುವಿದೆ ಅಜಗಜಾಂತರ! (ವ್ಯತ್ಯಾಸ ಮತ್ತು ಅಂತರಗಳ ನಡುವೆ ಇಲ್ಲ ವ್ಯತ್ಯಾಸ ಅಥವಾ ಅಂತರ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೇರೇ, ಮೊದಲ ಬಾರಿಗೆ ನನ್ನ ಕವನಕ್ಕೆ ನಿಮ್ಮ ಪ್ರತಿಕ್ರಿಯೆ ನೋಡಿ ಸ೦ತೋಷವಾಯಿತು. ನನ್ನ ಕವಿ ಜೀವನ ಸಾರ್ಥಕವಾಯಿತೆ೦ದೆನಿಸಿತು. ತಪ್ಪನ್ನು ಎತ್ತಿ ತೋರಿಸುದದಕ್ಕೆ ಧನ್ಯವಾದಗಳು.ನೀವು ತೋರಿಸಿದ ತಪ್ಪನ್ನು ಕವನದಲ್ಲಿ ತಿದ್ದಿದ್ದೇನೆ. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಆಶಿಸುತ್ತೇನೆ. ಹಾಗೆಯೇ ಈ ಕೆಳಗಿನ ಕೊ೦ಡಿಯಲ್ಲಿನ ನನ್ನ ಮತ್ತೊ೦ದು ಬುಧ್ಧನ ಕವನವನ್ನು ಓದಿ, ಅದರ ತಪ್ಪು-ಒಪ್ಪುಗಳನ್ನು ತಿಳಿಸುವ ಕೃಪೆ ಮಾದಬೇಕೆ೦ದು ವಿನ೦ತಿಸುತ್ತಿದ್ದೇನೆ. ಧನ್ಯವಾದಗಳು. http://sampada.net/a...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮವಾದ ಕವನ ದನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ವಸ೦ತ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಸ್ತ್ ಬರ್ದೀರಿ ನಾವಡ ಅವರೇ.. ಹೃದಯದೊಳಗಿನ ಕವಿ ಜಾಗೃತ ಆಗ್ಯಾನ.. ಕಾಲಡಿಯಲಿ ಶಬ್ದ ತಿಳೀಲಿಲ್ಲ.. ಹೆಸರಿನಲಿ ಆಗಬೇಕಾ..?ವಸಿ ನೋಡಿ.. (budhdha smiled ..ಅನ್ನುವುದು ನಮ್ಮ ಪರಮಾಣು ಪರೀಕ್ಷೆಯ ಗುಪ್ತ ಹೆಸರು)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾ೦ತ್, ಕವನ ಮೆಚ್ಚಿ ಪ್ರತಿಕ್ರಿಯಿಸಿದ ಸಲುವಾಗಿ ನಿಮಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಆ ಪದದ ಅರ್ಥ ಕಾಲಡಿಯಲಿ- ಕಾಲಿನ ಅಡಿಯಲ್ಲಿ ಎ೦ದು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋ ಹೋ ಬರಬೇಕು ಬರಬೇಕು ರಾಯರೂ ಕವಿಗಳಾದರೇ? ಉತ್ತಮ್ ಅತಿ ಉತ್ತಮ್ ನಿಮ್ಮ ಕಾವ್ಯ. ಧನ್ಯವಾದಗಳು. ರಾಯರೇ ರಾಮಕಷ್ಣರು ಹೇಳಿದಂತೆ ನಮ್ಮಂತ ಪಾಮರರು ಅಷ್ಟೆಲ್ಲಾ ಮಾಡುವ ಅಗತ್ಯವಿಲ್ಲ ಏನಿದ್ದರೂ ನಮ್ಮದು ಕೋಟೆಯೊಳಗೇ ಮಾಡುವ ಯುದ್ಧ. ಅಮ್ರತತ್ವ ಪಡೆಯಬೇಕಾದರೆ ಯಾವದಾದರೊಂದು ರೀತಿಯಿಂದ ಅವರಲ್ಲಿಯ ಆಸೆ ಹೋಗಲೇ ಬೇಕಲ್ಲ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಗೋಪಿನಾಥರೇ! ನನ್ನನ್ನು ತೀವ್ರವಾಗಿ ಕಾಡಿದ ವ್ಯಕ್ತಿತ್ವ ಬುಧ್ಧನದು, ನನ್ನ ಮೊದಲ ಕವನ ಬುಧ್ಧನ ಕ೦ಡೀರಾ ಅವನನ್ನು ನೇರವಾಗಿ ಒಪ್ಪಿಕೊ೦ಡು ಬರೆದ೦ಥಧ್ಧು. ಮೇಲೆ ಹೆಗಡೆಯವರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅದರ ಕೊ೦ಡಿಯನ್ನು ಕೊಟ್ಟಿದ್ದೇನೆ.( ಅದರ ತಪ್ಪೊಪ್ಪುಗಳನ್ನು ತಿಳಿಸಬೇಕೆ೦ದು ವಿನ೦ತಿ) ಈ ಕವನವನ್ನು ಅವನನ್ನು ಮತ್ತೊ೦ದು ಆಯಾಮದಲ್ಲಿ ನೋಡಿ ಬರೆದೆ. ವಿಶೇಷವೆ೦ದರೆ ನನ್ನ ಈ ಎರಡೂ ಕವನಗಳೂ ಬುಧ್ಧ ಪೂರ್ಣಿಮೆಯ೦ದೇ ಬರೆದದ್ದು! ಅದನ್ನು ಬರೆದು ೩-೪ ವರ್ಷಗಳಾಗಿರಬಹುದು. ಆನ೦ತರ ಈ ಮಧ್ಯದ ಬಿಡುವಿನಲ್ಲಿ ಯೋಚಿಸಿ ಇದನ್ನು ಬರೆದೆ. ಹೇಗೋ ಏನೋ ಎ೦ದು ಅಳುಕಿಯೇ ಸ೦ಪದಕ್ಕೆ ಹಾಕಿದ್ದು! ಆದರೆ ನಿಮ್ಮೆಲ್ಲರ ಮೆಚ್ಚಿಕೆಯಿ೦ದ ಧನ್ಯನಾದೆ ಎನಿಸಿದೆ ನನಗೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

{{ಮತ್ತೊಮ್ಮೆ ಹುಟ್ಟಬೇಡ ಇಲ್ಲಿ! ಹುಚ್ಚನೆ೦ದೇವು! ಮತ್ತೊಮ್ಮೆ ಸ್ಫೋಟಿಸಿಯೇವು!}} ನಿಜ, ನಾವಡರೇ, ಇಂದು ಬುದ್ಧ, ಗಾಂಧೀಜಿಯಂತಹವರು ಅಪ್ರಸ್ತುತರಾಗುತ್ತಾರೆ. ಅಬ್ದುಲ್ ಕಲಾಮರು ಇನ್ನೊಮ್ಮೆ ರಾಷ್ಟ್ರಪತಿಯಾಗಬೇಕೆಂಬ ಮಾತುಗಳು ಬಂದಾಗ ಅವರ ವ್ಯಕ್ತಿತ್ವದ ಮೇಲೆ ಕೆಸರೆರಚುವ ಪ್ರಯತ್ನ ನಡೆಯಿತು. ಗಾಂಧೀಜಿ ಇದ್ದಿದ್ದರೆ ಅವರನ್ನು ಚುನಾವಣೆಗೇ ನಿಲ್ಲಲು ಬಿಡುತ್ತಿರಲಿಲ್ಲ, ನಿಂತರೂ ಠೇವಣಿ ಸಿಗುತ್ತಿರಲಿಲ್ಲ!. . . ನಿಮ್ಮ ಕವನ ವಿಚಾರ ತರಂಗಗಳನ್ನೆಬ್ಬಿಸಿದೆ. ಚೆನ್ನಾಗಿದೆ. -:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ವೈಚಾರಿಕ ಹಾಗೂ ಮೆಚ್ಚಿಗೆಯ ಪ್ರತಿಕ್ರಿಯೆ ನನ್ನಲ್ಲಿ ಸ೦ತಸವನ್ನು೦ಟು ಮಾಡಿದೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.