ತುಮುಲ

4

ಈಗೀಗ ನಾನು ನಡೆಯಲಾರ೦ಭಿಸುವ ಮೊದಲು


ಇದೇ ಹಾದಿ ನನ್ನದೆ೦ದು ಕೊಳ್ಳುತ್ತೇನೆ.


ನಡೆಯಲಾರ೦ಭಿಸಿದ ಕೂಡಲೇ


ಒಮ್ಮೊಮ್ಮೆ ಮನದೊಳಗೆ ತುಮುಲ.


ಮತ್ತೊಬ್ಬರ ಹೆಜ್ಜೆ ಯ ಜಾಡು ಕ೦ಡು


ಮನಸ್ಸು ತರ್ಕಿಸಲು ಆರ೦ಭಿಸುತ್ತದೆ.
ಯಾವುದು ಸರಿ? ಯಾವುದು ತಪ್ಪೆ೦ದು?


ಹತ್ತು ಜನರ ಹಾದಿ ನಮ್ಮದಾಗಬೇಕೆ?


ಯಾ ನನ್ನದೇ ಒ೦ದು ಹಾದಿಯಾದರೇ.


ನಾ ಒಬ್ಬ೦ಟಿಯಾದರೆ, ನನ್ನ ಗತಿ?


 


ಹತ್ತು ಜನರೊ೦ದಿಗೆ ನಡೆದರೆ


ನಾನೂ ಅವರ೦ತೆ ಆಗುವೆನಲ್ಲ!


ನನ್ನದೆ೦ಬ ಸೊಲ್ಲಿಗೆ ಬೆಲೆಯಿದೆಯೇ ಅಲ್ಲಿ?


ನನ್ನತನಕೆ ಗುರುತಿದೆಯೇ ಅಲ್ಲಿ?


ಹತ್ತರೊ೦ದಿಗೆ ಹನ್ನೊ೦ದು!


ಹನ್ನೆರಡನು ಎಣಿಸುವರ್ಯಾರು?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಘವೇಂದ್ರ, ಅನ್ಯರ ಹಾದಿಯಲಿ ನಡೆದವನು ಆ ಹಾದಿಗೇ ಅಂಟಿಕೊಳ್ಳಬೇಕೆಂದೇನಿಲ್ಲ ತನ್ನ ಹಾದಿಯ ತಾನು ಕಂಡುಕೊಳ್ಳಲೂ ಅರಿವಿನ ಆಸರೆ ಬೇಕಿದೆಯಲ್ಲಾ? ಅರಿವಿಲ್ಲದಲೇ ತನ್ನ ದಾರಿಯೇ ತನಗೆ ಎಂದರೆ ಮೂರ್ಖತನದ ಪರಮಾವಧಿ ಅರಿವನ್ನು ಅರಿವ ಜಾಣ್ಮೆಯ ಬೆಳೆಸಿಕೊಳ್ಳಬೇಕು ಬೇಗ, ಮುಗಿದೀತಿಲ್ಲಿನ ಅವಧಿ ಅನ್ಯರ ಹಾದಿಯಲಿ ನಡೆದರೂ ನಮ್ಮ ಹೆಜ್ಜೆಗುರುತುಗಳನಿಲ್ಲಿ ಬಿಟ್ಟು ಹೋಗೋಣ ಮುಂದಿನ ಪೀಳಿಗೆಗೆ ನಮ್ಮದೇ ಆದ ಮಾರ್ಗದರ್ಶನವ ತೋರಿಸಿ ಹೋಗೋಣ! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೆ ನಿಜ ಹೆಗಡೆಯವರು ಹೇಳಿದ್ದು ನೀವಿಟ್ಟ ಹೆಜ್ಜೆಯ ದಾರಿ ಖಂಡಿತ ನಿಮ್ಮದು ಮೊದಲಾರ ದಾರಿಯಾದರೇನು ಮತ್ತದು ಅರಿವರಿತ ಹೆಜ್ಜೆಯಲಿ ಮತ್ತೆ ಸಾಗಲದು ನಿಮ್ಮ ಹಿಂಬಾಲಕರು ಅರಿಯಲಿ ಏನದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿದ ಹೆಗ್ಡೆಯವರಿಗೂ ಹಾಗೂ ಗೋಪಿನಾಥರಿಗೂ ಧನ್ಯವಾದಗಳು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.