ಜೊತೆಗಿರುವವರು..

3.5

ಎಲ್ಲಿಯೋ ಹುಟ್ಟಿದೆ, ಎಲ್ಲಿಯೋ ಬೆಳೆದೆ

ಎಲ್ಲಿಯೋ ನಡೆದೆ, ಎಲ್ಲಿಗೋ ಸೇರಿದೆ

ಒ೦ದೂ ಎಣಿಕೆಯ೦ತಾಗಲಿಲ್ಲ

ಎಲ್ಲರೂ ಇದ್ದರೂ ಯಾರೂ ಇರದಿದ್ದ೦ತೆ,

ತಬ್ಬಿದರು, ದೂರ ಸರಿಸಿದರು.

ಪೂಜಿಸಿದರು, ಬೀಳಿಸಿದರು.

ಯಾರಿಗೂ ಕೇಳದಿದ್ದರೂ

ಎಲ್ಲವನೂ ಹೇಳಿದರು.

ಎಲ್ಲವನ್ನೂ ಮಾಡಿದರು!

ಹತ್ತಿರವಿರಲೇಬೇಕಾದಾಗ

ದೂರ ಸರಿದ೦ತೆ!

ದೂರ ಸರಿಸಿಕೊ೦ಡಷ್ಟೂ

ಸನಿಹ ಬ೦ದ೦ತೆ!

ಬಾಳಿನ ಹಾದಿಯಲ್ಲಿ ಒಮ್ಮೊಮ್ಮೆ

ದಾರಿ ತಪ್ಪಿದರೂ,

ಕುಹಕಗಳಿಗೆ ಧೃತಿ ಗೆಟ್ಟರೂ,

ನಡೆಯುವುದನ್ನು ಕೈಬಿಡಲಿಲ್ಲ.

ಗಮ್ಯ ಮುಟ್ಟಿದ ಸ೦ತಸವಿದೆ,

ನನ್ನದೇ ಆದ ಲೋಕದಲ್ಲಿ

ಈಗೆಲ್ಲಾ ನನ್ನವರೇ!

ನನಗೆ ಬೇಕಾದವರೇ,

ನನ್ನ ಮನಸ್ಸಿನ ಮಾತನ್ನು

ಮೌನವನ್ನು ಅರ್ಥೈಸಿಕೊಳ್ಳಬಹುದಾದ
ನಾನು ಆರಿಸಿ ಕರೆದ

ಆಪ್ತರು ಮಾತ್ರವೇ

ಜೊತೆಗಿರುವವರು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆಪ್ತರು ದೂರವಿದ್ದರೂ ಜೊತೆಗೇ ಇರುವಂತೆ ಭಾಸವಾಗುವವರು ಆಪ್ತರಲ್ಲದವರು ಜೊತೆಗಿದ್ದರೂ ಇಲ್ಲದಂತೆ ಭಾಸವಾಗುವವರು! - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಕುಹಕಗಳಿಗೆ ಧೃತಿ ಗೆಟ್ಟರೂ,ನಡೆಯುವುದನ್ನು ಕೈಬಿಡಲಿಲ್ಲ.ಗಮ್ಯ ಮುಟ್ಟಿದ ಸ೦ತಸವಿದೆ> ಸಕತ್ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಇ೦ದು ನನ್ನ ಮನದಲ್ಲಿ ಹೊಯ್ದಾಡುತ್ತಿದ್ದ ಮಾತುಗಳನ್ನೆಲ್ಲ ನೀವು ಕವನದಲ್ಲಿ ಇಳಿಸಿದ್ದೀರಿ, ಇದು ಹೇಗೆ ಸಾಧ್ಯ? ಅಲ್ಲಿ ಕುಳಿತು ನೀವು ನನ್ನ ಮನವನ್ನು ಓದುತ್ತಿದ್ದೀರೋ ಹೇಗೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ನಾವಡರೆ, ನಿಮ್ಮ ಕವನ ಬಹಳ ಚ೦ದ ಉ೦ಟು. ಗಮ್ಯ ಎ೦ದರೇನು? ನನಗೆ ಅದರ ಅರ್ಥ ತಿಳಿದುಕೊಳ್ಳುವ ಹ೦ಬಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಡುಕು ಪದ: ಗಮ್ಯ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು ಗಮ್ಯ ನಾಮಪದ (ಸಂ) ಹೋಗಬೇಕಾದ ಸ್ಥಳ, ಗುರಿ ಗಮ್ಯ ಗುಣವಾಚಕ (ಸಂ) ೧ ಹೋಗಬಹುದಾದ ೨ ತಿಳಿಯಲು ಶಕ್ಯವಾದ http://baraha.com/ka...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ನನ್ನಿ ಗುರುಗಳೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕೋ ತುಂಬಾ ಹಿಂದೆ ಓದಿದಂತಹ ಪ್ರಭುಶಂಕರರ 'ಅಕೇಲಾ' ಕವನದ ನೆನಪಾಯಿತು. ಮುಂದೆ ಒಂದು ದಿನ ಅನುವಾದಿಸಿ ಬರೆಯುತ್ತೇನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ನಮಸ್ಕಾರ. ಮನದ ಮಾತಿನ ಸುಂದರ ಕಾವ್ಯ ಚಿತ್ರಣ.ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ, ನಾವಡರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡ ಹೆಗ್ಡೆಯವರು,ಚಿಕ್ಕು, ಮ೦ಜಣ್ಣ , ಚಡಗರು, ಆಚಾರ್ಯರು, ಕವಿನಾಗರಾಜರು ಹಾಗೂ ಭಾಗವತರಿಗೆ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ ರಾಘವೇಂದ್ರ ಅವರೇ .....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು ಪ್ರವೀಣರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟಿದ್ದು ಅರೆ ಮಲೆನಾಡಿನಲ್ಲಿ. ಇರುವುದು ಮಲೆನಾಡಿನಲ್ಲಿ. ನಿಜ. >>ನಾನು ಆರಿಸಿ ಕರೆದ ಆಪ್ತರು ಮಾತ್ರವೇ ಜೊತೆಗಿರುವವರು.<< ನಿಮಗೆ ಒಳಿತನ್ನು ಬಯಸುವವರು ದೂರದಲ್ಲಿಯೂ ಇರಬಹುದಲ್ಲವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಧ್ಯವಿದೆ ನಾಡಿಗರೇ, ನೀವಿಲ್ವೇ? ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕೆ, ನಾವಿಲ್ವೇ?? :(:(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ಮ೦ಜಣ್ಣ! ನೀವಿಲ್ಲದೆ ನಾವೇ? ನಾವಿಲ್ಲದೆ ನೀವೆ? ಕಲ್ಪನೆಗೂ ಎಟುಕದ್ದಲ್ಲವೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.