ನಾಲ್ಕು ಗೋಡೆಗಳು

4

ಮೂವತ್ತಾರು ವಸ೦ತಗಳ ಹಿ೦ದೆ

ನಾ ಭೂಮಿಗೆ ಬ೦ದಾಗ….ಎಲ್ಲೆಲ್ಲೂ ಕತ್ತಲೆ!

ಬೆಳಗಿನ ಜಾವ, ಬೆಳದಿ೦ಗಳ ಸ೦ಪು! ಸಿಕ್ಕಾಪಟ್ಟೆ ಮಳೆ!

ಹುಟ್ಟಿದ ಕೂಡಲೇ ಒದ್ದೆ ….

ಅಮ್ಮನ ಮಡಿಲಿಗದು ಮಹಾ ಪ್ರಹಾರ!

ಎತ್ತಿ ಹಿಡಿದ ದಾದಿಯ ಕೈ ಕಚ್ಚಿದೆ…

ಅಮ್ಮಾ ಎನ್ನಲಿಲ್ಲ.. ಅಳಲಿಲ್ಲ..

ಕೇವಲ ನಗುವೊ೦ದೇ ಇತ್ತು.

ಬೆಳೆದ೦ತೆ.. ಇಟ್ಟಲೆಲ್ಲಾ ಆನೆಯ ಹೆಜ್ಜೆ.

ಎಲ್ಲವೂ ನನ್ನದೇ ಸಾಮ್ರಾಜ್ಯ!

ಕಾಲಡಿಯಲಿ ತುಳಿದೆ ಎಲ್ಲರನೂ…

ಕೈಗೆ ಸಿಕ್ಕವರ ತರಿದೆ..

ಎಲ್ಲೆಲ್ಲೂ ವಿಜಯ ಯಾತ್ರೆಯೇ..

ಇ೦ದಿಗೆ ಮೂವತ್ತಾರರ ಭರ್ತಿ..

ಒಮ್ಮೆ ನೋಡುವೆ ಎಲ್ಲೆಲ್ಲೂ..

ಯಾರಿದ್ದಾರೆ ಇಲ್ಲಿ?

ನಾಲ್ಕು ಗೋಡೆಗಳ ನಡುವೆಯೇ

ಮನಸ್ಸಿಗೂ ಬೇಲಿ….

ಬೆಳಕಿನ ಅರಿವಾಗುತ್ತಿಲ್ಲ… ಕತ್ತಲೆ ಕಾಣುತ್ತಿಲ್ಲ…

ಬಿಸಿಲು,ಮಳೆ,ಚಳಿ ಎಲ್ಲವೂ ಒ೦ದೇ…

ಗೋಡೆ ಕೆಡವುವರು ಯಾರಾದರೂ

ಒಮ್ಮೆ ನನ್ನತ್ತ ಬನ್ನಿ..

ನಾಲ್ಕು ಗೋಡೆಗಳ ಜೊತೆಗೆ

ಮನದ ಬೇಲಿಯನೂ ಕತ್ತರಿಸಿಹಾಕಿ..

ಇ೦ದಿನ ಅಡಿಪಾಯದ ಮೇಲೆ

ನಾಳಿನ ಮಹಲನ್ನು ಕಟ್ಟಿಯೇನು!

ಹೊಸ ನಿರೀಕ್ಷೆಗಳು ಹುಟ್ಟಿಕೊ೦ಡಾವು…

ನನ್ನತನದ ಮಜಲು ತಲುಪಿಯೇನು…!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದಪ್ಪ ಹುಟ್ಟುಹಬ್ಬದ ಪಾರ್ಟಿ ಅಂದರೆ!!! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಚಾರ್ಯರೇ, ಹುಟ್ಟುಹಬ್ಬದ ದಿನ ಸುಮ್ಮನೆ ಕವಿಯಾಗಿ ಆತ್ಮಾವಲೋಕನ ಮಾಡಿಕೊಳ್ಳೋಣ ಎನಿಸಿತು. ಅಷ್ಟೇ... ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟು ಹಬ್ಬದ ದಿನದಂದು ಅರ್ಥಗರ್ಭಿತ ಕವನ. ಚೆನ್ನಾಗಿದೆ. ಕಾಲದ ಕನ್ನಡಿ ಯಾಕೆ ನಿಂತಿದೆಯೆಲ್ಲಾ. ಈ ಬಾರಿ ಪಶ್ಚಿಮ ಘಟ್ಟದ ಮತ್ತಷ್ಟು ಮಾಹಿತಿ ದೊರೆಯಬಹುದು ಎಂದುಕೊಂಡಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಡಿಗರೇ, ಕಾಲದ ಕನ್ನಡಿ ನಿ೦ತಿಲ್ಲ. ಅದು ಈಗ ಬದುಕಿನ ವಿವಿಧ ಮಜಲುಗಳತ್ತ ಕವನಗಳ ಮೂಲಕ ತನ್ನ ಕ್ಷ-ಕಿರಣ ಬೀರಲಾರ೦ಭಿಸಿದೆ. ಲೇಖನಗಳ ಮೂಲಕ ಪುನ: ತನ್ನ ಹಳೆಯ ಜಾಡಿಗೆ ಮರಳಲಿದೆ... ಪಶ್ಚಿಮ ಘಟ್ಟಗಳ ವಿವಿಧ ಸಮಸ್ಯೆಗಳನ್ನು ಕಲೆಹಾಕಲಾರ೦ಭಿಸಿದ್ದೇನೆ. ನನ್ನ ಕಾಲದ ಕನ್ನಡಿಯ ಬಗ್ಗೆಗಿನ ನಿಮ್ಮ ಕಳಕಳಿಗೆ ನನ್ನ ಧನ್ಯವಾದಗಳು. ಕವನ ಮೆಚ್ಚಿಕೊ೦ಡಿದ್ದಕ್ಕೆ ಮತ್ತೊ೦ದು ಪ್ರತ್ಯೇಕ ಧನ್ಯವಾದವನ್ನು ಅರ್ಪಿಸುತ್ತಿದ್ದೇನೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ನಮಸ್ಕಾರ, <<ಹೊಸ ನಿರೀಕ್ಷೆಗಳು ಹುಟ್ಟಿಕೊ೦ಡಾವು… ನನ್ನತನದ ಮಜಲು ತಲುಪಿಯೇನು…!>> ಖಂಡಿತ ಉತ್ತಮ ಕವನಕ್ಕಾಗಿ ನಮನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಭಾಗ್ವತರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೆ ನೀವೇ ಕಟ್ಟಿಕೊಂಡ ಗೋಡೆಯದು, ನೀವೇ ಬೀಳಿಸಬೇಕು ನೀವು ಬರುವಾಗ ಕತ್ತಲಿತ್ತಲ್ಲ ಕತ್ತಲು ಕಳೆದರೆ ಮತ್ತೆ ಬೆಳಕೇ ಬೆಳಕು ಮನದ ಮುಚ್ಚಿದ ಬಾಗಿಲು ತೆರೆದು ಸ್ವಾಗತಿಸಿರಿ ದಂಡೇ ಬಂದೀತುನೋಡಿ ಸ್ವಾಮೀ ನಾವಿರೋದು ಹೀಗೇ ಉತ್ತಮ ಕವನ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಡೆ ಕೆಡವೋದಿಕ್ಕೆ ನೀವಾದ್ರೂ ಬರ್ತೀರಿ ನೋಡ್ದೆ, ನೀವೂ ಕೈಕೊಟ್ರಾ? ಕವನ ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಮೀ ರಾಯರೇ ಗೋಡೆ ಒಳಗಿಂದ ಕೆಡವಲು ಸುಲಭ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟು ಹಬ್ಬದ ದಿನಕ್ಕೆ ಉತ್ತಮವಾದ ಕವನ. ksraghavendranavada ಸರ್. ಗೋಡೆಗಳನ್ನು ಕೆಡವಿಬಟ್ಟರೆ ಮತ್ತೆ ಕಟ್ಟಲು ಕಷ್ಟ ಆಗುವುದಲ್ಲಾ ಯೋಚಿಸಬೇಕಿದೆ ?. ವಸಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜನ್ಮದಿನದ೦ದು ಉತ್ತಮ ಕವನವೊ೦ದನ್ನು ಕಟ್ಟಿದ್ದೀರಿ, ೩೬ ತು೦ಬಿದ ಮೇಲೆ ಇನ್ನೇನು? ೯೬ ಬರುವವರೆಗೂ ನಿಮ್ಮ ಮೊಗದ ಮೇಲೆ ಮಾಸದ ಮುಗುಳ್ನಗೆ ಹೀಗೆಯೇ ತುಳುಕುತ್ತಿರಲಿ. ತಡವಾಗಿ ಶುಭಾಶಯಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹಾರೈಕೆಗಳಿಗೆ ನನ್ನ ಧನ್ಯವಾದಗಳು. ಕವನ ಮೆಚ್ಚಿಕೊ೦ಡಿದ್ದಕ್ಕೆ ಮತ್ತೊ೦ದು ಪ್ರತ್ಯೇಕ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ವಸ೦ತ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಮನಸ್ಸು ನಾಲ್ಕು ಗೋಡೆಗಳ ನಡುವಿದ್ದರೇನು ಮನಸು ನಾಲ್ಕು ಗೋಡೆಗಳ ಹೊರಗಿದ್ದರೇನು ಹಂಗು ಇಲ್ಲದೇ ಇರಲಿ ಮನಕೊಳಗೂ ಹೊರಗೂ ಏರಿ ಹಾರುತ್ತಿರಲಿ ಮನ ಮುಂಜಾನೆಯಿಂದ ಬೈಗು ಸದಾ ನಡೆಯುತ್ತಲಿರಲಿ ಹೊಸ ಹೊಸ ವಿಚಾರಮಂಥನ ನವನೀತ ಹೊರಬಂದು ಮಾಡಲಿ ನಿಮ್ಮ ಜೀವನ ಪಾವನ ಶುಭಮಸ್ತು -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹೃದಯ ತು೦ಬಿದ ಶುಭ ಹಾರೈಕೆಗಳಿಗೆ, ನನ್ನ ಮನಸ್ಸು ತು೦ಬಿ ಬ೦ದಿತು. ನಿಮ್ಮ೦ಥಹ ಹಿರಿಯರ ಹಾಗೂ ಗೆಳೆಯರ ಪ್ರೋತ್ಸಾಹ ಹಾಗೂ ಹಾರೈಕೆಗಳು ಸದಾ ನನ್ನ ಮೇಲಿರಲೆ೦ದು ನಿಮ್ಮಲ್ಲಿ ಬಿನ್ನವಿಕೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.