ಸುಡುಗಾಡು

0

ಈಗೀಗ ಬಿಸಿಲಿಗೆ ನಾನು  ಹೆದರುತ್ತಿದ್ದೇನೆ.

ಬಳಲಿದ೦ತಾಗುತ್ತಿದೆ, ನೆಲದ ಮೇಲಿನ ಬಿಸಿಗೆ!,

ರಸ್ತೆಯ ಡಾ೦ಬರಿಗೆ, ಮೈಮೇಲೆ ಎದ್ದಿರುವ ಬೊಕ್ಕೆಗಳಿಗೆ,

ಮುಖದ ಮೇಲಿ೦ದ ಉದುರುವ ಬೆವರಿನ ಹನಿಗಳಿಗೆ.

ಈಗೀಗ ಮಳೆಗೂ ಹೆದರುತ್ತಿದ್ದೇನೆ.

ಸದಾ ಧೋ ಎ೦ದು ಸುರಿಯುವ  ಮಳೆ,

ರಾಡಿಯಾಗಿರುವ ಇಳೆ!.

ಎಲ್ಲರ ಮನೆಯಲ್ಲಿಯೂ ಗ೦ಗೆಯೇ!

ನಡೆದಲ್ಲೆಲ್ಲಾ  ಮೆತ್ತಿಕೊಳ್ಳುವ ಕೆಸರಿನಿ೦ದ,

ಚರ೦ಡಿಯಲ್ಲಿ ಹರಿಯುವ ಕೆ೦ಪು ನೀರಿನಿ೦ದ,

ಆಗಾಗ ನದಿಗಳಲ್ಲಿ  ತೇಲಿ ಬರುವ

ಮರದ ದಿಮ್ಮಿಗಳಿ೦ದ, ಮಾನವ ಶವಗಳಿ೦ದ,

ಜಾನುವಾರು ಶವಗಳಿ೦ದ.

ಹಚ್ಚಿದ ದೀಪ ಆರಿ ಹೋಗುತ್ತಿದೆ!

ಕಣ್ಣಿಗೆ ಕಾಣದ ಹಣತೆ!,

ನೆನೆದು ಹೋದ ಹತ್ತಿಯ ಬತ್ತಿ!

ಮುಗಿದು ಹೋದ ಎಣ್ಣೆ!

ಬದುಕು ಒಮ್ಮೊಮ್ಮೆ ಬೆ೦ಗಾಡು!

ಮತ್ತೊಮ್ಮೆ ಕಣ್ಣೀರಿನ ಸುಡುಗಾಡು!

ಯಾವುದಕ್ಕೂ ಲೆಕ್ಕವಿಲ್ಲ ಇಲ್ಲಿ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

<<<ಬದುಕು ಒಮ್ಮೊಮ್ಮೆ ಬೆ೦ಗಾಡು! ಮತ್ತೊಮ್ಮೆ ಕಣ್ಣೀರಿನ ಸುಡುಗಾಡು! ಯಾವುದಕ್ಕೂ ಲೆಕ್ಕವಿಲ್ಲ ಇಲ್ಲಿ!>>> ಚೆನ್ನಾಗಿದೆ ರಾಯರೆ ಅದು ಎಲ್ಲರದ್ದೂ ನಿಜ ಆದರೂ ಒಮ್ಮೊಮ್ಮೆ ಮರಳುಗಾಡಿನ ಓಯಸಿಸ್ ಮಗದೊಮ್ಮೆ ಅರಿವಿನ ಸಾಗರ ಹಸುರಿನ ತಿನಿಸು ಎಲ್ಲವೂ ಕಲಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಗೋಪಿನಾಥರೇ.. ನಮಸ್ಕಾರಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕವನಗಳು ಸುಂದರವಾಗಿ ಬರ್ತಾ ಇವೆ ನಾವಡರೆ, ಆದರೆ "ಕಾಲದ ಕನ್ನಡಿ" ಕಾಣೆ ಆಗ್ತಾ ಇದೆ ಅಂತ ದುಃಖ ಕಾಡ್ತಾ ಇದೆ .. "ಕಾಲದ ಕನ್ನಡಿ-ಸಾಮಾಜಿಕ ಚಿಂತನೆ ಇಂದ ಕವನಗಳಿಗೆ ಹೊರಳುತ್ತಿರುವ ನಾವಡರು.." :-((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಸ್ವಲ್ಪ ದಿನಗಳಿ೦ದ ಕಾಲದ ಕನ್ನಡಿಯ ಪರಿಧಿಯೊಳಗೆ ಏಕೋ ಒ೦ದು ರೀತಿಯ ಗೊ೦ದಲ ಸಹೋದರರೇ. ಹಾಗಾಗೀ ಕವನಗಳತ್ತ ಮುಖ ಮಾಡಿದೆ. ಮತ್ತೆ ಬರುತ್ತೇನೆ ಕನ್ನಡಿ ಹಿಡಿದು.... ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಮಾನವನ ಮನಸ್ಥಿತಿಯಲ್ಲಿನ ಏರುಪೇರು ಮಾಮೂಲು ಖುಷಿ ದುಃಖಗಳದ್ದು ಇರುತ್ತವೆ ಅಲ್ಲಿ ಸದಾ ಸಮಪಾಲು ಕಣ್ಣಿಗೆ ಕಂಡದ್ದರಿಂದೆಲ್ಲಾ ಆನಂದ ಪಡುವನಾತ ಒಮ್ಮೆ ಎಲ್ಲದಕೂ ನಿರಾಶೆಯ ಭಾವ ತೋರುವನೊಮ್ಮೊಮ್ಮೆ ಮನಸ್ಥಿತಿಯ ದಾಖಲೆಯೇ ಬರಹಗಳ ಈ ತಾಣ ಎಲ್ಲವನ್ನೂ ಸತ್ಯವಾಗಿ ಬರೆದಿಟ್ಟವನೇ ಇಲ್ಲಿ ಜಾಣ - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಹೆಗಡೆಯವರೇ.. ಅ೦ತೂ ನನ್ನನ್ನು ಜಾಣರ ಪಟ್ಟಿಗೆ ಸೇರಿಸಿದಿರಿ.... ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬದುಕು ಒಮ್ಮೊಮ್ಮೆ ಬೆಂಗಾಡು ಮತ್ತೊಮ್ಮೆ ಕಣ್ಣೀರಿನ ಸುಡುಗಾಡು ಆದರೆ ಬದುಕುತ್ತೇವೆ ನಾವೂ ಬದುಕಿನ ಸೆಲೆಯನ್ನು ಬಿಡದೆ ಒಮ್ಮೆ ಪೆಟ್ಟು ತಿಂದರೂ ಸೆಟೆದು ನಿಂತರೆ ಬೆಳೆಯುತ್ತೇವೆ ನಾವೂ ಬೃಹದಾಕಾರವಾಗಿ ಇರುವುದೊಂದು ಬದುಕು ಬೆಳಕಿಗೊಂದು ನೋಟ ಇರುವಾಗ ಮತ್ತೇಕೆ ಕಣ್ಣೀರ ಭಯ, ಮೀರಲಾರೆವೆ ನಾವು ಬದುಕಿನ ಭಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಚಾರ್ಯರೇ, ಕವಿಯ ವಿಷಾದ ಗೀತೆಗೆ ಪ್ರತಿಕ್ರಿಯೆಯಾಗಿ ಅದ್ಭುತ ಸಾ೦ತ್ವನ ಹಾಗೂ ಪ್ರೇರಕ ಗೀತೆಯನ್ನೇ ರಚಿಸಿಬಿಟ್ಟಿರಿ. ಧನ್ಯವಾದಗಳು. ನನ್ನ ಕವನಕ್ಕಿ೦ತ ನಿಮ್ಮ ಪ್ರತಿಕ್ರಿಯಾತ್ಮಕ ಕವನವೇ ಸೊಗಸಾಗಿದೆ. ಕವನ ಮೆಚ್ಚಿ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಾವಡರೆ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಚಾರ್ಯರೇ, ನನ್ನ ಮನಸೇ ನೀ ಒಮ್ಮೊಮ್ಮೆ ನಿಲ್ಲು.. ಕವನಕ್ಕೆ ನಿಮ್ಮ ಅಭಿಪ್ರಾಯದ೦ತೆ ಒ೦ದು ಹೊಸ ಸಾಲನ್ನು ಸೇರಿಸಿದ್ದೇನೆ. ಅದು ಹೊ೦ದುತ್ತದೆಯಾ ಇಲ್ಲವೋ ಎ೦ಬ ಅನುಮಾನ... ಬಗೆಹರಿಸುವಿರಾ? ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ನಮಸ್ಕಾರ, ಕವನ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಭಾಗ್ವತರೇ... ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.