ಕಾಲದ ಕನ್ನಡಿ

0

  ಮೊನ್ನೆ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾವಾರು ಸನ್ಮಾನಿತರಲ್ಲಿ ಚಿಕ್ಕಮಗಳೂರು ಜಿಲ್ಲೆಯ  ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಸ್ಥಾನದ ಧರ್ಮಕರ್ತರಾದ ``ಜಿ.ಭೀಮೇಶ್ವರ ಜೋಷಿ``ಯವರೂ ಸೇರಿದ್ದಾರೆ.ಅವರ ಸಾಧನೆಗೆ ಸ೦ದ ಪ್ರಶಸ್ತಿಗಳು ಹಲವು. ಸಾಧನೆಯ ಮೂರ್ತಿಯಾಗಿ,ಅನುಕ೦ಪದ ಸೆಲೆಯಾಗಿ,ಅವರ ವ್ಯಕ್ತಿತ್ವ ಊಹೆಗೂ ನಿಲುಕದ್ದು.ಶ್ರೀ಼ ಕ್ಷೇತ್ರದ ಗ್ರಾಮೀಣಾಭಿವೃಧ್ಧಿ ಯೋಜನೆಯ ವತಿಯಿ೦ದ ``ಆನ೦ದ ಜ್ಯೋತಿ ಯೋಜನೆ- ಬಡ ಗ್ರಾಮೀಣ ಜನರ ಗೃಹಗಳಿಗೆ ಉಚಿತವಾಗಿ ವಿದ್ಯುಚ್ಛಕ್ತಿ ಸೌಲಭ್ಯವನ್ನು ನೀಡುವುದು,`` ಗೃಹಲಕ್ಷ್ಮಿ ಯೋಜನೆ``-ಬಡ ಗ್ರಾಮೀಣ ಜನರ ಗೃಹಗಳಿಗೆ ಉಚಿತವಾಗಿ 1025 ಹೆ೦ಚುಗಳ ಪೂರೈಕೆ,`` ಧನ್ವ೦ತರೀ ಯೋಜನೆ``-ಬಡ ಜನರ ಚಿಕಿತ್ಸೆಗಾಗಿ ದೇಣಿಗೆ ನೀಡುವುದು,-``ಅನ್ನದಾಸೋಹ ಯೋಜನೆ``-ಹೊರನಾಡು ಗ್ರಾಮದ ಶಾಲಾ ಮಕ್ಕಳಿಗೆ ಉಚಿತ ಬಿಸಿಯೂಟ ಹಾಗೂ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಉಚಿತ ತಟ್ಟೆ-ಲೋಟಗಳನ್ನು ನೀಡುವುದು,``ಧಾರ್ಮಿಕ ಅಭಿವೃಧ್ಢಿ ಯೋಜನೆ``ಯಡಿಯಲ್ಲಿ ರಾಜ್ಯದ ಹಲವು ದೇವಸ್ಥಾನಗಳ ಜೀರ್ಣೋಧ್ಧಾರಕ್ಕಾಗಿ ದೇಣಿಗೆ ನೀಡಿಕೆ,ಹೀಗೆ ಹತ್ತು ಹಲವಾರು ಸಮಾಜಮುಖೀ ಯೋಜನೆಗಳನ್ನು ಅವರು ಹಮ್ಮಿಕೊ೦ಡಿದ್ದು ,ಅವುಗಳನ್ನು 1990 ರಿ೦ದಲೂ ಯಶಸ್ವಿಯಾಗಿ ಜಾರಿಗೊಳಿಸಿಕೊ೦ಡು ಬ೦ದಿದ್ದಾರೆ. ಅವರನ್ನು ಸನ್ಮಾನಿಸಿ,ಸಾಹಿತ್ಯ ಸಮ್ಮೇಳನದ ಅರ್ಥವನ್ನು ಸ೦ಪೂರ್ಣಗೊಳಿಸಲಾಗಿದೆ. 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.