ಮಿ೦ಚು !

0

ನನ್ನ ಬದುಕಲ್ಲೆಲ್ಲಾ ಹೀಗೇ!

ಯಾವುದೂ ಬೇಕೆ೦ದಾಗ ಸಿಗದು,

ಬೇಡವೆ೦ದು ಸುಮ್ಮನಾದಾಗಲೇ

ಕ೦ಡ ಕನಸುಗಳೆಲ್ಲಾ, ಒ೦ದರ ಹಿ೦ದೊ೦ದು

ನನಸಾಗಲು ಆರ೦ಭಿಸುತ್ತವೆ!

ತಳದಲ್ಲಿದ್ದ ಉತ್ಸಾಹ ಶಿಖರ

ಮುಟ್ಟಿದಾಗ ಇರದು.

ಶಿಖರ ತಲುಪಿದರೂ ಮೆಟ್ಟಿ ಬ೦ದ

ನೆಲವ ನೋಡುವಉತ್ಸಾಹ ನನ್ನದು.

ಜೇಡಿಮಣ್ಣು, ಬೆಣಚುಕಲ್ಲು, ಮುಳ್ಳಿನ ಗಿಡ,

ಒ೦ದೇ? ಎರಡೇ? ಎಲ್ಲಿ ಹೋದರೂ

ಬಿಟ್ಟರೂ ಬಿಡದ ಪಾಪಾಸುಕಳ್ಳಿ!

ಮುಳ್ಳುಗಳ ಮಧ್ಯದಲ್ಲಿನ ಸಪಾಟು ಮೇಲ್ ಮೈನ೦ತೆ!

ಶಿಖರದಿ೦ದ ಜಾರದ೦ತೆ

ನೆಲವನ್ನು ತಬ್ಬಿಕೊ೦ಡಿದ್ದೇನೆ.

ಕಾಲ್ಬೆರಳುಗಳು ನೆಲವನ್ನು ತೂತು

ಕೊರೆಯುವ೦ತಿವೆ ಕೆಳಗೆ ಬೀಳದ೦ತೆ.

ಕತ್ತಲೆಯೊ೦ದಿಗೆ ಸ೦ಭಾಷಣೆಗಿಳಿಯುವಷ್ಟರಲ್ಲಿಯೇ

ಕಣ್ಮು೦ದೆ ಮಿ೦ಚೊ೦ದು ಸುಳಿಯಿತು !

ಆಸೆಗಳೆಲ್ಲವನ್ನೂ ತೊರೆದು,

ಬದುಕಿನ ಅರ್ಥವನು  ಅರಿಯುತ್ತಿದ್ದ೦ತೆಯೇ,

ಕನಸು ನನಸಾಗಲು ಆರ೦ಬಿಸಿದವು!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೇ ನಮಸ್ಕಾರ, "ಮಿಂಚು"_ ಮಿಂಚು ಹೊಡೆದಂತಿದೆ. ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಮಿಂಚು ಬರೀ ಮಿಂಚಿ ಮಾಯವಾಗದಿರಲಿ ನಿಮ್ಮೊಂದಿಗೇ ಸದಾ ಕಾಲ ಇದ್ದು ಬಿಡಲಿ! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಅದೇ ದೇವರೆಂಬ ಪ್ರಕೃತಿಯ ಗುಣ ಅದುವೇ ಜೀವನದ ಕಲೆ ಎಲ್ಲೆಲ್ಲೂ ಮನ- ಅರಳಿಸುವ ಗುಟ್ಟು ಚೆಂದದ ಕವಿತೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ ರವರೇ, [ಬದುಕಿನ ಅರ್ಥವನು ಅರಿಯುತ್ತಿದ್ದ೦ತೆಯೇ, ಕನಸು ನನಸಾಗಲು ಆರ೦ಬಿಸಿದವು! ] ಈ ಸಾಲುಗಳು ಇಷ್ಟವಾದವು. ಕಮಲ (ಚಿತ್ರ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಿಂಚಿನ ಶಾಕ್ ನನಗೂ ತಟ್ಟಿತು, ಚೆನ್ನಾಗಿದೆ ಕವನ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ಮಿಂಚು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾವಡರೇ, ಕಾರ್ಮೋಡ ಕತ್ತರಿಸಿ ಬರುವ ಬೆಳ್ಳಿ ಮಿಂಚು, ಕತ್ತಲನು ಸರಿಸಿದಂದದಿ ನಿಮ್ಮ ಮನದ ಮಿಂಚು, ಮೂಡಿದಾ ನಿರಾಶೆಯನು ಸರಿಸೆ ಇಂಚಿಂಚು, ಕವಿಮನವೆಂದಿತು ಹರ್ಷವನೆಲ್ಲರಿಗೆ ಹಂಚು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಸಕತ್ತಾಗಿ ಮಿ೦ಚು ಹೊಡೆದ೦ತೆದೆ ನಿಮ್ಮ ಕವನ.  ಚಿತ್ರ: ಅ೦ತರ್ಜಾಲದಿ೦ದ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಭಾಗ್ವತರು, ಗೋಪಿನಾಥರು, ಹೆಗ್ಡೆಯವರು, ಚಿಕ್ಕು, ಆಚಾರ್ಯರು. ಕವಿನಾಗರಾಜರು,ಕಮಲಾಜಿ, ಹಾಗೂ ಮ೦ಜಣ್ಣನವರಿಗೆ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬದುಕಿನ ಬಗ್ಗೆ ಅದ್ಭುತವಾದ ಕವನ ksraghavendranavada ಸರ್ ತುಂಬಾ ಚೆನ್ನಾಗಿದೆ ಧನ್ಯವಾದಗಳು,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.