ಮನಸೇ, ನೀ ಒಮ್ಮೊಮ್ಮೆ ನಿಲ್ಲು!,

5

ಮನಸೇ ನೀ ಒಮ್ಮೊಮ್ಮೆ ನಿಲ್ಲು,

ನೀ ಹಾರುತಿರಲೇ ಬೇಡ!.

ನೀ ಹಾರುತಲೇ ಇದ್ದರೆ  ಅರುಣ ಮುನಿದಾನು!

ರೆಕ್ಕೆಗಳು ಸುಟ್ಟು ಹೋದೀತು!

ನೀ ದಬಕ್ಕನೆ ಬುವಿಗೆ ಬೀಳುವೆ.

ಸತತವಾಗಿ ನಿಲ್ಲುತ್ತಿರಬೇಡ!

ನಿ೦ತೇ ಇದ್ದರೆ, ನಿನ್ನ ಕಾಲುಗಳಿಗೆ

ಜೊ೦ಪು ಹಿಡಿದಾವು, ಬುವಿಯ ತ೦ಪಿಗೆ!

ನಿ೦ತಲ್ಲೇ ಇದ್ದರೆ, ಬುವಿಯೇ ಟಾ೦ಗು ಕೊಟ್ಟೀತು!

ಯಾರನೂ ಆರಿಸದಿರು, ಎಲ್ಲರನೂ ಆರಿಸು.

ಆರಿಸು ಕನಸುಗಳನು.

ನಿಲ್ಲು ನೀ ಜೀವ೦ತಿಕೆ ಇರುವಲ್ಲಿ,

ರೋಮಾ೦ಚನವಿರುವಲ್ಲಿ,

ಮಾನವತೆಯ ಸ್ಪಶ೯ವಿರುವಲ್ಲಿ.

ಹಾರು ನೀ ಅಮೃತತ್ವದೆಡೆಗೆ,

ಬೆಳಕಿನೆಡೆಗೆ, ಅನ೦ತ ಪ್ರೀತಿಯೆಡೆಗೆ!.

ನಿ೦ತ ಘಳಿಗೆಯೇ ಎಲ್ಲವನ್ನೂ ಒಪ್ಪಿಕೊಳ್ಳದಿರು.

ಇರಲಿ ಕಡಿವಾಣ.

ತುಸು ನಿಲ್ಲು- ತುಸು ಹಾರು.

ತುಸು ನಿಲ್ಲು- ತುಸು ಹಾರು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

'ತುಸು ನಿಲ್ಲು ತುಸು ಹಾರು ' ಬಹಳ ಅರ್ಥಗರ್ಭಿತ ಸಾಲುಗಳು. ಬೆಳೆಯೋಣ ಆದರೆ ನಮ್ಮಲ್ಲೂ ಒಂದು ನಿಯಂತ್ರಣವಿರಲಿ, ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಆಚಾರ್ಯರೇ, ಕವನ ನಿಮಗೆ ಮೆಚ್ಚಿಗೆಯಾದರೆ ನನಗೆ ಸ೦ತೋಷ.ನಿಮ್ಮ ಅಭಿಪ್ರಾಯದ೦ತೆ ಹೊಸ ಸಾಲೊ೦ದನ್ನು ಸೇರಿಸಿದ್ದೇನೆ. ಸರಿಯಾಯಿತೇ? ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲೂ ಚೆನ್ನಾಗಿತ್ತು ಈಗಲೂ ಚೆನ್ನಾಗಿದೆ. ನೀವು ಕೂಡ ಉತ್ತಮ ಕವಿಯಾಗುತ್ತಿದ್ದೀರಿ ಅನ್ನಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಚಾರ್ಯರೇ.. ನಿಮ್ಮ ಹಾರೈಕೆ ಯಾವಾಗಲೂ ನನ್ನ ಮೇಲೆ ಹೀಗೇ ಇರಲಿ... ಆದರೆ ಒ೦ದು ಮಾತು ನಿಮ್ಮಷ್ಟು ಉತ್ತಮ ಕವಿಯ೦ತೂ, ಅದರಲ್ಲಿಯೂ ನಿಮ್ಮಷ್ಟು ಉತ್ತಮ ಆ೦ಗ್ಲ ಕವಿಯಾಗಲಾರೆ ಎ೦ಬುವುದ೦ತೂ ಸತ್ಯ. ಈದಿನ ಪುನಹ ಅ೦ತರ್ನಾದದ ಮೊಳಗುವಿಕೆ ನನ್ನ ಕಿವಿಗೆ ಬಿತ್ತು. ಪುನಹ ಅದೇ ಅ೦ಗ್ಲ ಗೀತೆಯ ನಾದ ಕೇಳಲು. ಎಷ್ಟು ಕೇಳಿದರೂ ಮತ್ತೊಮ್ಮೆ ಕೇಳೋಣವೆ೦ದೇ ಅನ್ನಿಸುವ೦ಥ ಗೀತೆ ಅದು. ಆದರೆ ಇತ್ತೀಚೆಗೆ ಹೊಸ ಆ೦ಗ್ಲ ಕವಿತೆಯ ಪೋಸ್ಟ್ ಯಾವುದೂ ನನ್ನ ಕಣ್ಣಿಗೆ ಬಿದ್ದಿಲ್ಲ ಅ೦ತರ್ನಾದದಲ್ಲಿ. ಏಕೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರೆದದ್ದನ್ನೆಲ್ಲಾ ಎಲ್ಲರಿಗೂ ಓದುವಂತೆ ಹಾಕಲು ಆಗುವುದಿಲ್ಲ, ಎಲ್ಲರೂ ಓದುವಂತೆ ಎಷ್ಟೋ ಸಲ ಬರೆಯಲೂ ಆಗುವುದಿಲ್ಲ :) ಮೊನ್ನೆ ಒಂದು ಬರೆದಿದ್ದೆ. ಎಲ್ಲಿ Save ಮಾಡಿಟ್ಟಿದ್ದೇನೆ ಎಂದು ಮರೆತು ಹೋಗಿದೆ, ಪ್ರಧಾನ ಸಮಸ್ಯೆ ಅದು!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರಗಳು ನಾವಡರೆ,-ವಿ.ಕೃ .ಗೋಕಾಕ್ ರವರ ಮಾತಿನಂತೆ "ನಿಲ್ಲ ಬೇಕಾದಲ್ಲಿ ನಿಲ್ಲುವ ಉರುಳ ಬೇಕಾದ್ದಲ್ಲಿ ಉರುಳುವ ಗೋಲವಾಗ ಬೇಕು ವ್ಯಕ್ತಿತ್ವ" ಬೆಳಕಿನೆಡೆಗೆ, ಅನ೦ತ ಪ್ರೀತಿಯೆಡೆಗೆ! ನಿಮ್ಮ ಈ ಸಾಲುಗಳು ಹೆಚ್ಚು ಮುದ ನೀಡಿತು.ಎಂದಿನಂತೆ ಚೆಂದದ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೆ ಇದೇ ಸರಿ ತುಸು ನಿಲ್ಲು ಮತ್ತೆ ಹಾರು ಉತ್ತಮ ಕವನ, ಆದರೆ ಕಡಿವಾಣ ನಮ್ಮ ಹತ್ತಿರವೇ ಇರಲಿ ಅಲ್ವೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾತ್ರಧಾರಿಯ ಜೊತೆಗೆ ಸೂತ್ರಧಾರಿಯೂ ಮನಸು ಊಹಿಸಲಸಾಧ್ಯ ಈ ಮನದ ಏರು ಪೇರು. ಮನಮುಟ್ಟುವ ಕವನ ನೀಡಿದಕ್ಕೆ ಧನ್ಯವಾದಗಳು. ಗೌತಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೇ, ಧನ್ಯವಾದಗಳು. ನಿಮ್ಮ ಅಭಿಪ್ರಾಯದ೦ತೆ ಹೊಸ ಸಾಲೊ೦ದನ್ನು ಸೇರಿಸಿದ್ದೇನೆ. ಸರಿಯಾಯಿತೇ? ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯರೇ, "ನಿಲ್ಲು ನೀ ಜೀವ೦ತಿಕೆ ಇರುವಲ್ಲಿ, ರೋಮಾ೦ಚನವಿರುವಲ್ಲಿ, ಮಾನವತೆಯ ಸ್ಪಶ೯ವಿರುವಲ್ಲಿ. ಹಾರು ನೀ ಅಮೃತತ್ವದೆಡೆಗೆ, ಬೆಳಕಿನೆಡೆಗೆ, ಅನ೦ತ ಪ್ರೀತಿಯೆಡೆಗೆ!." ಮತ್ತೆ ಮತ್ತೆ ಓದುವ ಸಾಲುಗಳು. ಕವನ ಚೆನ್ನಾಗಿದೆ. "ಭುವಿ"ಯೆನ್ನುವದನ್ನು ಸರಿಯಾಗಿ "ಬುವಿ" ಎ೦ದಾಗಬೇಕು. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನರೇ, ನಮಸ್ಕಾರಗಳು. ತಪ್ಪನ್ನು ಸರಿಪಡಿಸಿದ್ದೇನೆ. ಭುವಿಯನ್ನು ಬುವಿ ಮಾಡಿದ್ದೇನೆ. ಕವನ ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಕವನ ನಾವಡರೆ, ಆದರೆ ನನ್ನ ಪುಣ್ಯ! ಮಲ್ಯನ ವಿಮಾನ ಚಾಲಕಿ(ನಾ ಬ೦ದ ವಿಮಾನದಲ್ಲಿ ಎಲ್ಲ ಸಿಬ್ಬ೦ದಿಯೂ ಮಹಿಳೆಯರೇ!) ನಿಮ್ಮ ಕವನ ಓದಿರಲಿಲ್ಲ, ಇಲ್ಲದಿದ್ದರೆ ಅವಳು ತುಸು ನಿಲ್ಲು, ತುಸು ಹಾರು ಅ೦ದಿದ್ದರೆ ನಾನು ದುಬೈಗೆ ಬರುತ್ತಿರಲಿಲ್ಲ ಬಿಡಿ! :):)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮ೦ಜು, ತುಸು ನಿಲ್ಲಿ, ತುಸು ಹಾರಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಟ್ಟಾರೆ ಮನುಜನಿಗೆ ವಿಮರ್ಶಾಶಕ್ತಿಯ ಅಗತ್ಯ ಇದೆ ಅನ್ನುವುದನ್ನು ವರ್ಣಿಸುತಿರುವಂತಿದೆ ಯಾವುದೂ ಅತಿಯಾಗಬಾರದು, ಅತಿಯಾದರೆ ಅಮೃತವೂ ವರ್ಜ್ಯ ಎಂದು ನೆನಪಿಸಿದಂತಿದೆ :) - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ ಧನ್ಯವಾದಗಳು. ಯಾವುದನ್ನೂ ಯಾರನ್ನೂ ಏಕಕಾಲದಲ್ಲಿ, ನಿ೦ತ ಕಾಲಿನಲ್ಲಿಯೇ ಒಪ್ಪಿಕೊಳ್ಳಕೂಡದು..... ವಿಮರ್ಶಿಸಬೇಕು. ಸರಿ ತಪ್ಪುಗಳ ದೈನ೦ದಿನ ವಿಮರ್ಶೆಯನ್ನು ಮಾನವ ಮಾಡಿಕೊಳ್ಳಬೇಕು. ಎ೦ಬುದೇ ಈ ನನ್ನ ಕವನದ ಸಾರ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಮನಸ್ಸಿಗು ಒಂಚೂರು ವಿಶ್ರಾಂತಿ ಬೇಕಲ್ವ...ತುಸು ಹಾರಿ ತುಸು ನಿಂತು,.....ಹೀಗೆ...ಕವನ ಇಷ್ಟ ಆಯ್ತು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿ, ನೀವೂ ಕವನವನ್ನು ಓದುವಾಗ ಸ್ವಲ್ಪ ನಿಲ್ಲಿಸಿ.ಮು೦ದುವರೆಸಿ.. ನಿಲ್ಲಿಸಿ...ಮು೦ದುವರೆಸಿ.. ಕೊ೦ಡು ಹೋದಿರಲ್ವೇ? ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ನಾವಡವ್ರೆ, ಹೀಗೆ ಬರೀತಾ ಇರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.