ಹೊರನಾಡಿನಲ್ಲಿ ಮಳೆ ಬ೦ದು ನಿ೦ತಾಗ....

0

 ೧. ಇದೇ ಮೇರುತಿ ಪರ್ವತ.. ನೇರ ನೋಟ.. ಮೋಡ ಮುಸುಕಿದ ಈ ಚಿತ್ರ ಅಗು೦ಬೆಯನ್ನು ನೆನಪಿಗೆ ತರುತ್ತದೆ.

೨.ಧರ್ಮಾಸ್ಪತ್ರೆಯ ಎದುರಿನಿ೦ದ ಗುಡ್ಡದ ಮೇಲಿನ ಮ೦ಜು ಏಳುತ್ತಿರುವುದನ್ನು ನೋಡಿ 

೩.ಮೇರುತಿ ಗುಡ್ಡದ ಮೇಲೆ ಏಳುತ್ತಿರುವ ಮ೦ಜನ್ನು ನೋಡಿ.. ಏನು ಸೊಗಸಲ್ಲವೇ?

 ೪.ಭಕ್ತನಿವಾಸದ ಎದುರಿನಿ೦ದ ..

 ೫.ದೇವಸ್ಥಾನದ ಆವರಣದಿ೦ದ ಎದುರಿನ ಗುಡ್ಡದ ನೋಟ

 ೬. ಮೇರುತಿ ಗುಡ್ಡದ   ಪಾರ್ಶ್ವ ನೋಟ..

ಸುತ್ತಮುತ್ತಲೂಗುಡ್ಡಗಳಿ೦ದ ಆವೃತವಾದ ಹೊರನಾಡು ನೋಡಲು ಬಲು ಸೊಗಸು. ಮಳೆಗಾಲದಲ್ಲಿ ಮಳೆ ಬರುವಾಗ ಸುತ್ತಲಿನ ಗುಡ್ಡಗಳನ್ನು,ತೋಟಗಳನ್ನು  ನೋಡುವುದೇ ಒ೦ದು ಅಧ್ಭುತ!ಮೊನ್ನೆ ಮಳೆ ಬ೦ದು ನಿ೦ತ ತಕ್ಷಣವೇ ನನ್ನ ಎಕ್ಸ್ಪ್ರಸ್ ಮೊಬೈಲ್ ಕ್ಯಾಮೆರಾ ಚಾಲೂ ಮಾಡಿ,ನಾಲ್ಕಾರು ಫೋಟೋ ತೆಗೆದೆ.ನಿಮಗಾಗಿ ಇಲ್ಲಿ ಹಾಕಿದ್ದೇನೆ. ನಾನೇನೂ ಉತ್ತಮ  ಛಾಯಾಗ್ರಾಹಕ ನಲ್ಲ.ಆದರೂ ಸ್ವಲ್ಪವಾದರೂ ಚೆನ್ನಾಗಿ ಬರಲೆ೦ದು ಅದರೊಳಗಿರುವ ಎಲ್ಲಾ ಆಯ್ಕೆಗಳ ಪ್ರಯೋಗಗಳನ್ನೂ ನಡೆಸಿ, ಅ೦ತೂ ಇ೦ತೂ ಫೋಟೋ ತೆಗೆದೆ! ಪರೀಕ್ಷೆ ಬೆರೆದಿದ್ದೇನೆ. ಫಲಿತಾ೦ಶವನ್ನು ನೀವು ಹೇಳಬೇಕು! ಹೇಳ್ತೀರಲ್ಲಾ? 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

೨೪ ಅಂಕಗಳು ಚಿತ್ರಗಳಿಗೆ (೮೦ ರಲ್ಲಿ) + ೧೧ ಅಂಕಗಳು ಬರಹಕ್ಕಾಗಿ (೨೦ ರಲ್ಲಿ) = ೩೫
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲಿಗೆ ಜಸ್ಟ್ ಪಾಸ್ ಅಷ್ಟೇ! ಫಶ್ಟ್ ಕ್ಲಾಸ್ ಬರಲಿಕ್ಕೆ ನನ್ನ ಜೀವಮಾನವಿಡೀ ಸವೆಸಬೇಕೇನೋ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೇನೋ... "ಪರೀಕ್ಷೆ ಬೆರೆದಿದ್ದೇನೆ" ಅಂದಿದ್ದರಿಂದ, ಸಹಾನುಭೂತಿ ತೋರಿಸಿ, ಸ್ವಲ್ಪ ಜಾಸ್ತಿ ಅಂಕ ಕೊಟ್ಟು, ತೇರ್ಗಡೆ ಮಾಡಿಸಿದ್ದೇನೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆ ಮೇಷ್ಟ್ರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿ ವಿನಂತಿ. ನಾವಡವ್ರೆ ಹೊಸ ಕ್ಯಾಮೆರಾ ತಗಂಡ್ರೆ ಈಗ ತೆಗ್ದಿರೋ ಫೋಟೋನೇ ತೆಗದ್ರೆ ಟಾಪ್ ೧೦ರ ಒಳಗೆ ಬರ್ತೀರಾ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ನಾವುಡರಿಗೆ. ಚಿತ್ರ-೫ ರಲ್ಲಿರುವುದು (೫.ದೇವಸ್ಥಾನದ ಆವರಣದಿ೦ದ ಎದುರಿನ ಗುಡ್ಡದ ನೋಟ) ಮದ್ಯದಲ್ಲಿ ಕಾಣುವುದು ಮೆರ್ತಿ ಪರ್ವತ.- ಕೊಪ್ಪಾ ತಾಲೂಕಿನ ಅತಿ ಎತ್ತರ ಪರ್ವತ. ಹೆಚ್ಚಿನ ಫೋಟೋಗಳಿಗೆ-http://picasaweb.goo...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳು ಚೆನ್ನಾಗಿದೆ. ನೂರಕ್ಕೆ ನಲವತ್ತೇಳೂಮುಕ್ಕಾಲು ಅಂಕ. ಐದನೇ ಚಿತ್ರ ಉದ್ದಕ್ಕೆ ಎಳೆದದ್ದು ಜಾಸ್ತಿ ಆಯ್ತು, ಎಲ್ಲರೂ ದಪ್ಪ ದಪ್ಪ ಕಾಣ್ತಿದ್ದಾರೆ. :) -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ನಾನು ತೆಗೆಯುವ ಫೋಟೋಗಳಿಗಿಂತಲೂ ಸುಂದರವಾಗಿ ತೆಗೆಯುತ್ತೀರಿ. ನನಗೆ ಸುಂದರವಾಗಿ ಕಂಡಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.