ಸಾಧನೆಯ ಹಾದಿಯಲ್ಲಿ.....

4

ಅರಿತು ಬಾಳುವಾಗಲೇ ಹೆಜ್ಜೆ ಹೆಜ್ಜೆಯಲೂ ಆಪತ್ತಿನ ಪೆಟ್ಟು
ಅದನೆದುರಿಸಿ ನಡೆವಲ್ಲಿಯೇ ಇದೆ ನೆಮ್ಮದಿಯ ಗುಟ್ಟು
ಒಮ್ಮೆ ಜಾರಿ ಬಿದ್ದರೇನು?
ನಡೆಯಲಿ ಹತ್ತಾರು ಬಾರಿ ಮೇಲೇಳುವ ಪ್ರಯತ್ನ
ನಿಮ್ಮ ಸಮಯ ನಿಮ್ಮಲ್ಲಿಯೇ ಇದೆ
ಸಮಯವಿದೆಯೆ೦ದು ಮಾಡಿದರೆ ನಿಧಾನ
ಆಗುವುದು ಬಾಳೂ ಸಾವಧಾನ
ಸೋಮಾರಿತನವೆ೦ಬುದು ಶಾಪ
ಇರಲಿ ಚುರುಕು, ಆದರೆ ನೆನಪಿರಲಿ
ಅತಿವೇಗವೇ ಅಪಘಾತಕ್ಕೆ ಕಾರಣ!
 
ನಿಮ್ಮದೇ ದಾರಿ ಬೇಕೆಂಬ (ಬೇರೆ ಎಂಬ) ಗೊ೦ದಲ ಬೇಡ
ಬಿದ್ದರೆ ಮೇಲೆತ್ತಲಾರೂ ಇಲ್ಲವೆ೦ಬ ಅನುಮಾನವೂ ಬೇಡ
ನಿಮ್ಮ ಬೆನ್ನ ಹಿ೦ದಿರಲಿ ನಿಮ್ಮ ಪ್ರಯತ್ನದ ಜೇಡ
ಬಿದ್ದರೆ ನೀವೇ ಏಳುವಿರಿ, ಮೇಲೆದ್ದು ಮತ್ತೆ ನಡೆಯುವಿರಿ,
ಅ೦ಜಿಕೆ ಬೇಡ. ಸಾಧನೆಯ ಹಾದಿಯಲ್ಲೆ೦ದಿಗೂ
ಉಲ್ಲಾಸದ ಹೆಜ್ಜೆಗಳಿರಲಿ, ಆಪತ್ತು ಬಾರದಿರದು
ಅದನೆದುರಿಸುವ ಸ್ಥೈರ್ಯವೊ೦ದಿರಲಿ
ಕಾಲ ನಡೆಸುತ್ತದೆ ನಿಮ್ಮನ್ನು
ಹೆಚ್ಚೆಚ್ಚು ಅನುಭವಗಳ ಬುತ್ತಿಯೊ೦ದಿಗೆ
ಆ ಮೇಲಿನೆಲ್ಲಾ ದಿನಗಳಿರುವವು ನಗುವಿನ ಬುಗ್ಗೆಯೊ೦ದಿಗೆ!


 


 


 


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಘವೇಂದ್ರ, ನಿಜ ಹೇಳಿದಿರಿ. ಅರಿತು ಬಾಳುವಾಗಲೇ ಇಲ್ಲಿ ಹೆಜ್ಜೆ ಹೆಜ್ಜೆಗೂ ಆಪತ್ತು ಇನ್ನು ಒಟ್ಟಾರೆ ಬಾಳುವವರ ಗತಿ ದೇವರಿಗೇ ಗೊತ್ತು ಜೊತೆಗೆ ಇದ್ದರೆ ಪ್ರಯತ್ನದ ಜೇಡ ನಿಜಕ್ಕೂ ಇಲ್ಲಿ ಅಂಜಿಕೆಯೇ ಬೇಡ - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ನಮಸ್ಕಾರ . ಉತ್ತಮ ಹಿತನುಡಿಯ ಕವನ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿತವಚನಗಳ ನಲ್ನುಡಿ ಸಕತ್ ರಾಯರೇ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅರಿತು ಬಾಳುವಾಗಲೇ ಹೆಜ್ಜೆ ಹೆಜ್ಜೆಯಲೂ ಆಪತ್ತು! ಅದನೆದುರಿಸಿ ನಡೆವಲ್ಲಿಯೇ ಇದೆ ನೆಮ್ಮದಿಯ ಗುಟ್ಟು!<< ಅಕ್ಷರಶಃ ನಿಜ ಸರ್, ಹಿತವಚನಗಳಿಂದ ಕೂಡಿ ಕವನ ತುಂಬಾ ಅರ್ಥಪೂರ್ಣವಾಗಿದೆ. ಧನ್ಯವಾದಗಳು ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನಂತೆ? ಬಿದ್ದರೇನಂತೆ? ನೋವೆಂಬುದೇನೆಂದು ತಿಳಿಯಿತಂತೆ! ನೋಡಿ ನಡೆಯಲು ಕಲಿತೆನಂತೆ! ರಾಘವೇಂದ್ರರೇ, ನಿಮ್ಮದು ಚೆನ್ನಾಗಿರುವ ಅನಿಸಿಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿರ್ಕಿಯಿಸಿದ ಹೆಗಡೆಯವರು,ಭಾಗ್ವತರು, ಗೋಪಿನಾಥರು,ಆ೦ಬಿಕಾ ಹಾಗೂ ಕವಿನಾಗರಾಜರಿಗೆ ನನ್ನ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.