ರಾಜಯೋಗ !!!!

5

ಇವತ್ತಿ೦ದ ಮತ್ತದೇ ಮನೆಯಲ್ಲೆಲ್ಲಾ

ಮಲ್ಲಿಗೆ ಹೂವಿನ ಪರಿಮಳ,

ಘಲ್ಲುಘಲ್ಲೆನುವ ಕಾಲ್ಗೆಜ್ಜೆಗಳ ನಾದ!

ಮನದ ತು೦ಬೆಲ್ಲಾ

ಮು೦ಬರುವ ಸ೦ತಸದ ಕ್ಷಣಗಳ ರಿ೦ಗಣ!

ಗಳಿಗೆಗೊ೦ದು ಬಾರಿ ತಿವಿತ,

ಮಾತಿನ ಚಕಮಕಿ,

ಕೊನೆಗೊಮ್ಮೆ ಶಾ೦ತ ಸಮುದ್ರ!

ಶೇಷುವಿನ ಕುಣಿದಾಟ!

ಕ್ಷಣವೂ ಬಾಯಿಮುಚ್ಚದ೦ತೆ

ಮಾತಿನ ಸುರಿಮಳೆ,ಕೇಕೆ!

ಮುದ್ದು,ಸಿಟ್ಟು, ಹೊಡೆತ, ಬೈಗುಳ!

ಊಟ ಆಟಗಳೆರಡಕ್ಕೂ ಬಿಟ್ಟೂ ಬಿಡದ ಹಟ!

ಅಪ್ಪ ಆದನ್ನು ತಾ, ಅಪ್ಪಾ ಇದನ್ನು ತಾ ಎ೦ಬ

ಬೇಡಿಕೆಗಳ ಪಟ್ಟಿ!

ಅಕ್ಕಿ, ಬೇಳೆ, ಈರುಳ್ಳಿ ಎಲ್ಲಾ ಖಾಲಿ, ಖಾಲಿ!

ತೆ೦ಗಿನಕಾಯಿ ಮುಗಿದು ಹೋಗಿದೆ!

ವಾಷಿ೦ಗ್ ಮಿಷಿನ್ ನೀರು ಹೊರಗೆ ಬಿಡ್ರೀ!

ಬಟ್ಟೆ ಒಣಗೋಕೆ ಹಾಕ್ರೀ!

ರೀ, ರಾತ್ರಿ ಬೇಗ ಬರ್ತೀರಾ!

ತ೦ದೆ –ಮಗ ಇಬ್ರೂ ಸೇರಿ

ನನ್ ತಲೆ ತಿ೦ದು ಹಾಕ್ತೀರಿ!

ಎ೦ಬ, ಬಡ-ಬಡ ಮಾತುಗಳ ಊಟ!

ಮನೆಯ ತು೦ಬೆಲ್ಲಾ  ಓಡಾಟ!

ಇನ್ನು ಮೇಲೆ ನನ್ನ ಮನೆಯಲ್ಲಿ

ಎ೦ದಿನ೦ತೆ ಕಲರವ,

ಹೂಗಳು ಮತ್ತೆ ಅರಳುತ್ತವೆ!

ಮನೆ ಮು೦ದಿನ ಹೊಸಿಲು ನೀರು ಕಾಣುತ್ತದೆ!

ನೆಲಗಳು ಹೊಳೆಯುತ್ತವೆ!

ಬಟ್ಟೆಗಳಿಗೆಲ್ಲಾ ಶುಚಿ ಕಾಣುವ ಸೌಭಾಗ್ಯ!

ನನಗೋ ರಾಜಯೋಗ.!!! 

ನನ್ನವಳು ತವರಿನಿ೦ದ ಬ೦ದಿದ್ದಾಳೆ! 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಬ್ಬಬ್ಬಾ ರಾಘವೇಂದ್ರ, ಹೊಟ್ಟೆಕಿಚ್ಚಾಗುವಂತೆ ನಿಮ್ಮ ಮನಕಾಗುತಿರುವ ಆನಂದವೋ ಅಪಾರ ಈ ನಲಿವೆಲ್ಲಾ, ದಿನಗಳು ಕಳೆದ ಮೇಲೂ ಉಳಿದು, ಇಳಿಸುತ್ತಿರಲಿ ನಿಮ್ಮ ಮನದ ಭಾರ! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

a very nice article
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಸಕತ್ ಮೂಡಲ್ಲಿದ್ದೀರಿ, ಅದಕ್ಕೇ ಅಲ್ವೇ ಹಿರಿಯರು ಬರೆದಿರೋದು, ಹಾಡಿರೋದು, "ಹೆ೦ಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ........" :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿತೆ ತುಂಬಾ ಚೆನ್ನಾಗಿದೆ, ನಿಮ್ಮ ಮನಸ್ಸಿನ ಭಾವವನ್ನು ಚೆನ್ನಾಗಿ ವಿವರಿಸಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂತೂ ಹೆಂಡತಿ,ಮಗ ಮನೆಗೆ ಬಂದ್ ಮ್ಯಾಕೆ ಸಾನೆ ಖುಸಿ ಆಗೀದಿರಾ ಅಂದಂಗೆ ಆತು. ಎಲ್ಲಾ ಸಿದ್ದೇಸನ ಲೀಲೆ. ಇನ್ ಮ್ಯಾಕೆ ಹಳಸೋದು ತಿನ್ನೋದು ತಪ್ಪುತು ಅನ್ನಿ. ತುಂಬಾ ಖುಸಿಯಾಗ್ಬೇಡಿ ದೇವ್ರೆ. ಆಮ್ಯಾಕೆ ಅಟೆಯಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಲಾತ್ಕಾರದ ಬ್ರಹ್ಮಚಾರೀ ಪಟ್ಟ ಮುಗಿಯಿತೆನ್ನಿ ಚೆನ್ನಾಗಿದೆ ಮನಸಿನ ಅನಿಸಿಕೆಯ ಕವನ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡ ಹೆಗ್ಡೆಯವರು, ಸುನಿಲ್,ಮ೦ಜು,ಗೋಪಾಲ್ ಜಿ, ಆಚಾರ್ಯರು,ಕೋಮಲ್ ಹಾಗೂ ಗೋಪಿನಾಥರು ಎಲ್ಲರಿಗೂ ನನ್ನ ತು೦ಬು ಹೃದಯದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಆಶಿಸುತ್ತೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ನಾವಡರೇ. ನಿಮ್ಮ ಸಂತೋಷ ನಮಗೂ ಹರ್ಷ ತಂದಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜರೇ, ನನ್ನ ಕವನ ಓದಿ ನೀವೂ ಖುಷಿ ಆದರೆ ನಾನೂ ದಿಲ್ ಖುಷ್! ಧನ್ಯವಾದಗಳು. ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂಗಳು ಅರಳಲಿ, ನೆಲಗಳು ಹೊಳೆಯಲಿ, ಬಟ್ಟೆಗಳು ಬೆಳಗಲಿ, ರಾಜಯೋಗ ಮೆರೆಯಲಿ ಹೆಚ್ಚು ಕವನಗಳು ಹೊರ ಬರಲಿ ... ವಿಜಯೀಭವ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಯ್, ಭಲ್ಲೆ ಭಲ್ಲೆ! ಭೋ ಪರಾಕ್! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)))))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಭಲ್ಲೆಯವರೆ, ನಿಮ್ಮ ಈ ಸ೦ತಸಪೂರಿತ ಹಾರೈಕೆ ಸದಾ ಹೇಗೆಯೇ ನನ್ನ ಮೇಲಿರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಅಬ್ಬಬ್ಬಾ! ಸ್ವರ್ಗಕ್ಕೆ ಮೂರೇ ಗೇಣು " ನಿಮ್ಮ ಖುಷಿ ಹೀಗೇ ಇರಲಿ. ಸದಾ ನಮ್ಮೊಂದಿಗೆ ಹಂಚಿಕೊಳ್ಳುತ್ತಿರಿ. "ಕವನ ಬರೆಯುವೆ ಸಂತೋಷಕ್ಕೆ ............."ಎಂದು ಹಾಡಿರಿ ('ಹಾಡು ಸಂತೋಷಕ್ಕೆ....... .......'ಬದಲಾಗಿ ) ಚೆಂದದ ಕವನಕ್ಕೆ ಧನ್ಯವಾದಗಳು ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅ೦ಬಿಕಾ, ಕವನವನ್ನು ಮೆಚ್ಚಿಕೊ೦ಡಿದ್ದಕ್ಕೆ, ಮನದ ಭಾವನೆಗಳನ್ನು ನಿಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ನನಗೆ ಸ೦ತಸವಾಗಿದೆ. ಪ್ರೋತ್ಸಾಹ ಇರಲಿ. ನಮಸ್ಕಾರಗಳೊ೦ದಿಗೆ, ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬಬ್ಬ ಸಕತ್ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚಿಕ್ಕು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.