ಮುಖವಾಡ

5

ಒ೦ದೊ೦ದು ತಲೆ, ಒ೦ದೊ೦ದು ದಿಕ್ಕು!


ಒಬ್ಬ ದಡದತ್ತ, ಮತ್ತೊಬ್ಬ ಅವನ ಎಳೆಯುವತ್ತ!


ಎಲ್ಲರಿಗೂ ದಡ ದೂರ!


 


ಒಬ್ಬರಿಗೊಬ್ಬರ ಸಾ೦ತ್ವನವಿಲ್ಲ!


ಯಾರೊಬ್ಬರ ಮುಖದಲೂ ನಗುವಿಲ್ಲ.


ಒಬ್ಬರಿಗೊಬ್ಬರು ಮುಖ ಕೊಡರು,


ನಗುನಗುತ ಮಾತಾಡರು.


ಇಷ್ಟವಿದ್ದೋ ಇಲ್ಲದೆಯೋ?


ಕ೦ಡೂ ಕಾಣದ೦ತೆ ಅ೦ಧರಾಗಿರುವಾಗ,


ಅರಿವಿದ್ದೂ ಇಲ್ಲದ೦ತೆ ನಟಿಸುತ್ತಿರುವಾಗ,


ಹಿರಿಯರಿಗೆ ಮಾತ್ರವೇ ಜವಾಬ್ದಾರಿಯೇ?


 


ಹಿರಿಯರಿಗೆ ಹಿರಿತನ! 


ಕಿರಿಯರಿಗೆ ಕಪಿತನ.


ಎಲ್ಲಿ೦ದೆಲ್ಲಿಗೆ ಹೋಗುವುದೋ ಈ ಜ೦ಜಾಟ!


ಎ೦ದಿಗೆ ಸರಿಯುವುದೋ ಇವರ ಮುಖಕೆ ಮುಸುಕಿದ ಪರದೆ?


ಎಲ್ಲರಿಗೂ ಒ೦ದೇ ಚಿ೦ತೆ!


ನಮ್ಮ ಬೇಳೆ ಬೇಯಿಸಿಕೊಳ್ಳುವುದು ಯಾವಾಗ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

<<ಎಲ್ಲರಿಗೂ ಒ೦ದೇ ಚಿ೦ತೆ ನಮ್ಮ ಬೇಳೆ ಬೇಯಿಸಿಕೊಳ್ಳುವುದು ಯಾವಾಗ?>> ಮೆಚ್ಚಿದೆ ರಾಘವೇಂದ್ರ, ನೀವಂತೂ ಬೇಯಿಸಿಕೊಂಡಿರಲ್ಲ ನಿಮ್ಮ ಬೇಳೆ ಈವಾಗ :) - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ.ಹ.ಹ. ಗುರುವಿಗೆ ತಕ್ಕ ಶಿಷ್ಯನೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಪರದೆಗಳು ಸರಿಯುವುದು ಅಷ್ಟೊ೦ದು ಸುಲಭವಲ್ಲ, ಪರದೇ ಮೆ ರೆಹನೆ ದೋ ಅನ್ನುವವರೇ ಹೆಚ್ಚು ಈ ಕಾಲದಲ್ಲಿ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.