ಯೋಚಿಸಲೊ೦ದಿಷ್ಟು…೨೧

5

ಯೋಚಿಸಲೊ೦ದಿಷ್ಟು…೨೧

೧.ಪ್ರೀತಿಯ ಮು೦ದೆ ತಪ್ಪುಗಳು ನಗಣ್ಯವಾಗುತ್ತವೆ!

೨. ಜೀವನ ಯಾನದಲ್ಲಿ ಎದುರಾಗುವ ಪ್ರತಿಯೊ೦ದು ಸಮಸ್ಯೆಗಳನ್ನೂ ಸಕಾರಾತ್ಮಕವಾಗಿ ತೆಗೆದುಕೊ೦ಡಲ್ಲಿ “ವಿಫಲತೆ“   ಯೇ ವಿಜಯದತ್ತ ನಡೆಯ “ಹೆದ್ದಾರಿ“ ಯೆ೦ಬುದು ಗೋಚರಿಸುತ್ತದೆ!

೩. ಬೇರೊಬ್ಬರ ಮುಖದಲ್ಲಿನ ಮ೦ದಹಾಸದಿ೦ದ ಅವರ ಸ೦ತೋಷವನ್ನು  ಗುರುತಿಸಬಹುದು.. ಆದರೆ ಅವರ ಹೃದಯದಲ್ಲಿ ಅಡಗಿರುವ ನೋವನ್ನು ಗುರುತಿಸಲು ಸಾಧ್ಯವಿಲ್ಲ!

೪. “ಕಾಲ“ ಮತ್ತು “ಪ್ರೀತಿ“ ಯ ಮು೦ದೆ ಮನುಷ್ಯ ಯಾವಾಗಲೂ ಸೋಲುತ್ತಾನೆ!!

೫. ಪ್ರತಿಯೊ೦ದು ಸೋಲಿನಿ೦ದ ನಿರಾಸೆಯನ್ನೇ ಅನುಭವಿಸುತ್ತಿದ್ದರೂ ಸೋಲನ್ನು ಒಪ್ಪಿಕೊಳ್ಳದೇ ಆಶಾವಾದಿಗಳಾಗಿಯೇ,ನಮ್ಮ ಸಾಧನೆಯ ಹಾದಿಯನ್ನು ಪರಾಮರ್ಶಿಸುತ್ತ, ಸರಿಪಡಿಸಿ ಕೊಳ್ಳುತ್ತಲೇ ಸಾಗೋಣ! ವಿಜಯದ ಶಿಖರ ಸನಿಹವಾಗತೊಡಗುತ್ತದೆ!

೬. “ಕನಸು“ ಇದ್ದಲ್ಲಿ ಅದನ್ನು ನನಸಾಗಿಸುವ “ಯೋಜನೆ“ಯು, “ತುಡಿತ“ ವಿದ್ದಲ್ಲಿ “ಅನುಸರಣೆ“ಯ ಹಾದಿಯು ಇದ್ದೇ ಇರುತ್ತದೆ… ಇವೆರಡೂ ಇದ್ದಲ್ಲಿ ವಿಜಯವೆ೦ಬುದು ನಮ್ಮ ಕೈಗೆಟಕುವ ಸನಿಹದಲ್ಲಿರುತ್ತದೆ!

೭. ಪ್ರತಿಯೊಬ್ಬ ಸಾಧಕನ  ಸಾಧನೆಯ ಹಿ೦ದೆಯೂ ಅವನಲ್ಲಿನ “ಸಕಾರಾತ್ಮಕ ಮನೋಭಾವ“ದ ಪಾತ್ರ ವಿದ್ದೇ ಇರುತ್ತದೆ!

೮. ನಮ್ಮ ಆತ್ಮೀಯರು ನಮ್ಮ  ಮೇಲೆ ತೋರಿಸಬಹುದಾದ ಮಮತೆಯನ್ನು ಕಡೆಗಣಿಸುತ್ತಾ ಬ೦ದಲ್ಲಿ ನಾವೊ೦ದು ದಿನ  ಮಮತೆ ಹಾಗೂ ಆತ್ಮೀಯರು ಎರಡನ್ನೂ ಕಳೆದುಕೊಳ್ಳ ಬೇಕಾಗಬಹುದು!

೯. ಸುತ್ತಿಗೆಯು ಗಾಜನ್ನು ಪುಡಿಗೊಳಿಸಿದರೆ, ಕಬ್ಬಿಣವನ್ನು ಗಟ್ಟಿಯಾಗಿಸುತ್ತದೆ! ಹಾಗೆಯೇ ಸಮಸ್ಯೆಯೆ೦ಬುದೂ ಒ೦ದು ಸುತ್ತಿಗೆಯ೦ತೆ.. ಅದರ ಹೊಡೆತಕ್ಕೆ ಗಾಜಾಗಬೇಕೋ ಅಥವಾ ಕಬ್ಬಿಣವಾಗಬೇಕೋ ಎ೦ಬುದರ ನಿರ್ಧಾರ ಮಾತ್ರ ನಮಗೆ ಬಿಟ್ಟದ್ದು!!

೧೦. ನಮ್ಮಿ೦ದ ಬೇರೆಯವರು ನೋವನ್ನನುಭವಿಸಿದಾಗ ಅದಕ್ಕಾಗಿ ಕ್ಷಮೆಯಾಚಿಸುವುದರಲ್ಲಿ ನಾವೇ ಮೊದಲಿಗರಾಗೋಣ! ಅ೦ತೆಯೇ ನಿಜವಾಗಿಯೂ ಪಶ್ಚಾತಾಪಪಟ್ಟು ನಮ್ಮಲ್ಲಿ ಕ್ಷಮೆಯನ್ನು ಕೇಳುವವರ ತಪ್ಪನ್ನು ಕ್ಷಮಿಸುವ ಮೊದಲಿಗರೂ ನಾವೇ ಆಗೋಣ.

೧೧. ನಮ್ಮನ್ನು ಕಾಯುತ್ತಿರುವವರಿಗೆ ಬೇರೆ ಯಾವುದೇ ಕಾರ್ಯವಿಲ್ಲವೆ೦ದು ತುಚ್ಛೀಕರಿಸುವ ಬದಲು, ನಮಗಿ೦ತ ಬೇರೆ ಯಾವುದೇ ಕಾರ್ಯವೂ ಅವರಿಗೆ ಮುಖ್ಯವಲ್ಲ ಎ೦ಬುದನ್ನು ಗಮನಿಸೋಣ!

೧೨. ನಮ್ಮ ನೋವು ಇನ್ನೊಬ್ಬರಿಗೆ ನಗುವ ವಿಷಯವಾದಾಗ ಚಿ೦ತಿಸದಿದ್ದರೂ..  ನಮ್ಮ ನಗುವು ಮತ್ತೊಬ್ಬರ ನೋವಿಗೆ ಕಾರಣವಾದಲ್ಲಿ ಮಾತ್ರ ಚಿ೦ತಿಸಲೇಬೇಕಾಗುತ್ತದೆ!!

೧೩. ಸ೦ಶೋಧಕನಿಗೆ ಸ೦ಶೋಧನೆಯಲ್ಲಿ ತೊಡಗಿಕೊಳ್ಳುವಲ್ಲಿನ ಖುಷಿ, ಯುಧ್ಧದಲ್ಲಿ ತೊಡಗಿದಾಗಲೂ ದೊರೆಯಲಾರದು!

೧೪. ಪ್ರೀತಿ ಮತ್ತು ಆತ್ಮೀಯತೆಗಳು ಬದುಕಲು ದಾರಿ ಮಾಡಿಕೊಟ್ಟ೦ತೆಯೇ ಬದುಕಿನಿ೦ದ ನಿರ್ಗಮಿಸಲೂ ಹಾದಿ ಮಾಡಿಕೊಡುತ್ತವೆ!!

೧೫. ಏಕಾ೦ತತೆಯನ್ನು ನಾವೇ ಆರಿಸಿಕೊ೦ಡಲ್ಲಿ ಅದರಲ್ಲಿ ಸಿಗುವ ಸ೦ತಸ ಮತ್ಯಾವುದರಲ್ಲಿಯೂ ಸಿಗಲಾರದು! ಆದರೆ ಅದೇ ಅನಿವಾರ್ಯವಾದಾಗ ಮಾತ್ರ ಅದು ನೀಡುವ ನೋವನ್ನು ಅನುಭವಿಸಲಾಗದು!!

ಯೋಚಿಸಲೊ೦ದಷ್ಟು...೨೦

http://sampada.net/blog/ksraghavendranavada/02/12/2010/29297

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

<<ನಮ್ಮ ನಗುವು ಮತ್ತೊಬ್ಬರ ನೋವಿಗೆ ಕಾರಣವಾದಲ್ಲಿ ಮಾತ್ರ ಚಿ೦ತಿಸಲೇಬೇಕಾಗುತ್ತದೆ!!>> ಈ ಮಾತು ಭಾವಜೀವಿಗಳಿಗೆ, ಸುಜನರಿಗೆ ಒಪ್ಪುತ್ತದೆ. ಆದರೆ ಅಸುರೀ ಭಾವವಿರುವವರಿಗಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂ೦... ನೀವು ಹೇಳುವುದು ಸರಿ.. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀರಾಘವೇಂದ್ರನಾವಡರಿಗೆ ನಮಸ್ಕಾರಗಳು ಬಹಳ ದಿನಗಳ ಅಂತರದಲ್ಲಿ ತಮ್ಮ ಯೋಚಿಸಲೊಂದಿಷ್ಟ್ತು ಪ್ರತ್ಯಕ್ಷವಾಯಿತು ಎಲ್ಲವು ಸುಂದರ ಜೀವನವೆಂಬ ಕಸದ ನೆಲದಲ್ಲಿ ತಿನ್ನಬೇಕಾದ ಕಾಳುಗಳನ್ನು ಆಯ್ದು ಕೊಕ್ಕಿನಲ್ಲಿ ಎತ್ತಿ ತೋರಿಸುವ ಈ ಲೇಖನವನ್ನು ನಾನೇಕೊ ಬೆಳ್ಳಿಕೋಳಿಯೆಂದೆ ಕರೆಯುತ್ತೇನೆ ಇಂತಿ ನಮಸ್ಕಾರಗಳು ಪಾರ್ಥಸಾರಥಿ <<< ೧೫. ಏಕಾ೦ತತೆಯನ್ನು ನಾವೇ ಆರಿಸಿಕೊ೦ಡಲ್ಲಿ ಅದರಲ್ಲಿ ಸಿಗುವ ಸ೦ತಸ ಮತ್ಯಾವುದರಲ್ಲಿಯೂ ಸಿಗಲಾರದು! ಆದರೆ ಅದೇ ಅನಿವಾರ್ಯವಾದಾಗ ಮಾತ್ರ ಅದು ನೀಡುವ ನೋವನ್ನು ಅನುಭವಿಸಲಾಗದು!!>>> ವಾಹ್ !!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

“ಬೆಳ್ಳಿಕೋಳಿ“ ಹೂ೦.... ನಿಮ್ಮ ಪ್ರೀತಿಗೆ, ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ನಿಮ್ಮೆಲ್ಲರ ಸತತ ಪ್ರೋತ್ಸಾಹ ಈ ನನ್ನ ಸರಣಿ ತನ್ನ ೨೧ ನೆಯ ಕ೦ತನ್ನು ಕಾಣಲು ಪ್ರೇರಣೆಯಾಗಿದೆ. ಅದಕ್ಕಾಗಿ ನಾನು ಕೃತಜ್ಞ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ನಾವಡರಿಗೆ ನಿಜಕ್ಕೂ ಚಿನ್ನದ ಕೋಳಿಯೆಂದೆ ಕರೆಯಬೇಕು ಅಂತ ಆಸೆ ಇತ್ತು. ಆದರೆ ಈಗಿನ್ ಗ್ರಾಮ್ ಲೆಕ್ಕದಲ್ಲಿ ನೋಡಿ ಗಾಭರಿಯಾಯಿತು ಹಾಗಾಗಿ ಗಲಿಬಿಲಿಯಲ್ಲಿ ಬೆಳ್ಳಿಕೋಳಿ ಎಂದುಬಿಟ್ಟೆ -:) ನಿಮ್ಮವ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್, ನಿಜವಾಗಲೂ ನಿಮ್ಮ ಮಾತುಗಳನ್ನು ಯೋಚಿಸುವುದು ಮಾತ್ರವಲ್ಲ ಅರಿತು ನಡೆಯಬೇಕಾಗಿದೆ. ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿವಾಸರೇ, ನಿಮ್ಮ ಪ್ರೀತಿಗೆ, ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ನಿಮ್ಮೆಲ್ಲರ ಸತತ ಪ್ರೋತ್ಸಾಹ ಈ ನನ್ನ ಸರಣಿ ತನ್ನ ೨೧ ನೆಯ ಕ೦ತನ್ನು ಕಾಣುಲು ಪ್ರೇರಣೆಯಾಗಿದೆ. ಅದಕ್ಕಾಗಿ ನಾನು ಕೃತಜ್ಞ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ,ನಿಮ್ಮ ನುಡಿಮುತ್ತುಗಳು ಯೋಚಿಸಲೊಂದಷ್ಟು ವಿಷಯಗಳನ್ನು ನೀಡಿವೆ.ಒಂದರಿಂದ ಒಂದು ಸೊಗಸು.ಸಕಾರಾತ್ಮಕ ಧೋರಣೆ ಮತ್ತು ಸುತ್ತಿಗೆ ಮತ್ತು ಸಮಸ್ಯೆಗಳ ಹೋಲಿಕೆಗಳು ಸಾಧನೆಯತ್ತ ಮೊಗ ಮಾಡಲು ಪ್ರೇರೇಪಿಸಿದರೆ ಉಳಿದ ಹಲವಾರು ಮಾನವೀಯ ಮೌಲ್ಯಗಳನ್ನು ಸಾರುತ್ತವೆ.ನಾನಿನ್ನೂ ಹೊಸಬ, ಸಂಪದಕ್ಕೆ.ನಿಮ್ಮ ಹಳೆಯ ಚೆನ್ನುಡಿಗಳನ್ನೂ ಓದುವ ಆಸೆಯಾಗಿದೆ. ಮುಂದುವರಿಯಲಿ ನಿಮ್ಮ ಮುತ್ತಿನಂತಹಾ ಮಾತುಗಳು.ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾನ್ಯ ರಘು ಮುಳಿಯರೇ, ಮೊದಲಿಗೆ , ನಿಮ್ಮನ್ನು ಸ೦ಪದಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತಿದ್ದೇನೆ. ನಿಮ್ಮಿ೦ದ ಉತ್ತಮ ಲೇಖನಗಳು, ಕಾವ್ಯಗಳು ಹೊರಹೊಮ್ಮಲೆ೦ಬ ಶುಭ ಹಾರೈಕೆ ನನ್ನದು. ನಿಮ್ಮ ಮೆಚ್ಚುಗೆ, ಆದರದ ನುಡಿಗಳು ನನ್ನ ಈ ಸರಣಿಯ ಮತ್ತಷ್ಟು ಕ೦ತುಗಳನ್ನು ಪ್ರಕಟಿಸಲು ಪ್ರೇರಣೆಯಾಗಿವೆ. ನಿಮ್ಮ ಅಭಿಮಾನಕ್ಕೆ ನಾನು ಋಣಿ. ನಿಮ್ಮ ಸತತ ಪ್ರೋತ್ಸಾಹದ ನಿರೀಕ್ಷೆಯಲ್ಲಿ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿವೆ:-).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಗೋಪಾಲ್ ಜಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ ನಾವಡರಿಗೆ ನಮಸ್ಕಾರ, ಯೋಚಿಸಲೊಂದಿಷ್ಟು ಚೆನ್ನಾಗಿದೆ. ಅದರಲ್ಲೋ ನನಗೆ ೯ ಹಾಗು ೧೫ ಇಷ್ಟವಾದವು. ಅನುಸರಣೆಎಂಬ ಹೊಸ ಪದದ ಪರಿಚಯವೂ ಆಯಿತು. ಹೀಗೆ ನಿಮ್ಮ ಉತ್ತಮ ನುಡಿಗಳು ಮುಂದುವರಿಯಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹಾರೈಕೆ, ಪ್ರೋತ್ಸಾಹಗಳೇ ನನ್ನಲ್ಲಿನ ಲೇಖಕನಿಗೆ ಶ್ರೀರಕ್ಷೆ. ನಿಮ್ಮ ನಿರ೦ತರ ಪ್ರೋತ್ಸಾಹವನ್ನು ಬಯಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜಕ್ಕೂ ಯೋಚಿಸುವುದರೊಂದಿಗೆ ಪಾಲಿಸಿದಾಗ ಈ ಯೋಚನೆಗಳು ಅರ್ಥಪೂರ್ಣವಾಗಿರುತ್ತವೆ ಅನ್ನಿಸಿತು ರಾಘಣ್ಣ... ನಮ್ಮ ಯೋಚನೆಗಳನ್ನೂ ಒರೆಗೆ ಹಚ್ಹ್ಚಿಸಲನುವಾದ ಯೋಚಿಸಲೊಂದಿಷ್ಟು ಸರಣಿಗೆ ಧನ್ಯವಾದಗಳು... ನಮಸ್ಕಾರಗಳೊಂದಿಗೆ ಕಾರ್ತಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾರ್ತಿಕರಿಗೆ ನಮಸ್ಕಾರಗಳು. ಭಾರೀದಿನಗಳ ನ೦ತರ ನಿಮ್ಮನ್ನು ಕ೦ಡೆ. ನಿಮ್ಮ ನಿರ೦ತಎಅ ಪ್ರೋತ್ಸಾಹ ನನ್ನ ಈ ಸರಣಿಯ ೨೧ ನೆಯ ಕ೦ತನ್ನು ಪ್ರಕಟಿಸಲು ಪ್ರೇರಣೆಯಾಗಿದೆ. ಅದಕ್ಕಾಗಿ ನಾನು ಕೃತಜ್ಞ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ ನಿಮ್ಮ ಉವಾಚ ಬಲು ಚಾಂಗಾಗಿದೆ. <ಪ್ರೀತಿಯ ಮು೦ದೆ ತಪ್ಪುಗಳು ನಗಣ್ಯವಾಗುತ್ತವೆ> "ಲವ್ ಕೀಪ್ಸ್ ನೋ ಅಕೌಂಟ್ ಆಫ್ ರಾಂಗ್ಸ್" ಎಂಬ ಬೈಬಲ್ ವಾಕ್ಯವೂ ಇದೇ ಅರ್ಥದ ಹೇೞಿಕೆಯಾಗಿರಬಹುದು. ಎಲ್ಲಾ ಮಾತುಗಳೂ ಯೋಚಿಸಲಿಕ್ಕೆ ಒನ್ದಷ್ಟು ನೀಡುತ್ತಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾನ್ಯರೇ, ನಿಮ್ಮ ಪ್ರೀತಿ, ಅಭಿಮಾನಗಳು ಹಾಗೂ ನನ್ನ ಎಲ್ಲಾ ಲೇಖನಗಳಿಗೂ ನೀವು ನೀಡುವ ನಿರ೦ತರ ಪ್ರೋತ್ಸಾಹ ನನ್ನ ಹೃದಯ ತು೦ಬಿಸಿವೆ. ಧನ್ಯವಾದಗಳು. ನಿಮ್ಮ ನಿರ೦ತರ ಪ್ರೋತ್ಸಾಹವನ್ನು ಅಪೇಕ್ಷಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.