ಸನ್ನಾಹ

0

ತಲೆ ಬಗ್ಗಿಸಿ ನೆಲ ನೋಡುತ,

ಹೆಬ್ಬೆರಳಲಿ ನೆಲ ಕೆರೆಯುತ,

ನನ್ನತ್ತ ನೋಡುವ ನಿನ್ನ ನೋಟದಲಿ,  

ಪಕ್ಕವೇ ಮಲಗಿದ್ದರೂ, ಹೊರಳಿ ಹೊರಳಿ  

ನನ್ನತ್ತ ಬೀಸುವ ನಿನ್ನ ಕಿರುಗಣ್ಣ ನೋಟದಲಿ,

ಜಿಟಿ - ಜಿಟಿ ಮಳೆಯಲಿ,

ಢವ-ಢವ ಎದೆಯಲಿ!

ಬೆಚ್ಚನೆಯ ಸ್ಪರ್ಶ,

ನಿಮಿರುವ ರೋಮ!

ಫಕ್ಕನೇ ಕಾಣುವ ಮಿ೦ಚಿನ೦ತೆ,

ಛ೦ಗನೇ ಜಿಗಿಯುವ ಚಿಗರೆಯ೦ತೆ,

ತಲೆಯೆತ್ತುವ ಬಯಕೆಯ ಬೆ೦ಕಿಗೆ

ತುಪ್ಪ ಸುರಿಯುವ ಮದನನ೦ತೆ,

ಮಿಲನಕೆ ಕರೆಯುವ ಸನ್ನಾಹವೇ  ನಲ್ಲೆ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಯಪ್ಪಾ ಏನ್ರೀ ಇದು. ಸೂಪರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಳೆ ಹನಿಯುತಿರಲು, ತಂಗಾಳಿ ಬೀಸುತಿರಲು, ಹಗಲಲ್ಲೂ ಸನ್ನಾಹವೇ...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ಬ್ ನಾವಡರೆ, ಫುಲ್ಲ್ ರೋಮ್ಯಾಂಟಿಕ್ ಕವನ.. ಪಕ್ಕನೇ-ಫಕ್ಕನೇ ಆಗ್ಬೇಕಲ್ವೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾಂತ್, ಅವರು "ಫಕ್ಕನೇ" ಅಂತಾನೇ ಬರೆದಿದ್ದರು. ನಾನು ಯಾವುದೋ ಯೋಚನೆಯಲ್ಲಿದ್ದವನು ಬದಲಾಯಿಸಲು ಹೇಳಿ ತಪ್ಪುಮಾಡಿದೆ. ಕ್ಷಮಿಸಿ ನೀವು ಮತ್ತು ರಾಘವೇಂದ್ರ ಈರ್ವರೂ. - ಆಸು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹ್ ಹೀಗೋ.. ಆದ್ರೆ ನೀವ್ಯಾವಾಗ ಹೇಳಿದ್ರಿ?ಮಿಂಚೆಯಲ್ಲಿ ತಿಳ್ಸಿದ್ರಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ,ಇದಕ್ಕೆಲ್ಲ ಕ್ಷಮಿಸಿರೆ೦ದು ನಮ್ಮ೦ತಹ ಕಿರಿಯರನ್ನು ನೀವು ಕೇಳಕೂಡದು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾ೦ತರೇ, ನಮ್ಮಲ್ಲಿನ ಮಳೆ ಯಾವಾಗಲೂ ರೊಮ್ಯಾ೦ಟಿಕ್ ಮೂಡನ್ನೇ ಉ೦ಟುಮಾಡುತ್ತೆ. ಪಕ್ಕನೆ ಯನ್ನು ಫಕ್ಕನೆ ಯಾಗಿ ಬದಲಿಸಿದ್ದೇನೆ. ಈ ನನ್ನ ಮೊದಲ ಪ್ರೇಮ ಕವನವನ್ನು ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು ಸೋದರರೇ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ತುಂಬಾ ರೊಮ್ಯಾಂಟಿಕ್ ಮೂಡಿನಲ್ಲಿದ್ದೀರಿ ಇವತ್ತು! ಏನ್ಸಮಾಚಾರ? ನಿಮ್ಮ ಹೊರನಾಡಿನಂಥ ಸುಂದರ ಪರಿಸರದಲ್ಲಿದ್ದರೆ ಎಂತಹ ಅರಸಿಕನೂ ಸಹ ಪ್ರೇಮಗೀತೆಗಳನ್ನು ಬರೆಯಲು ಶುರು ಹಚ್ಚಿ ಬಿಡುತ್ತಾನೆ. ಅಲ್ಲಿರುವ ನೀವೇ ಧನ್ಯರು ಬಿಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಸಿ ಹಸಿಯಾದ ವಾತಾವರಣ, ಬಿಸಿ ಬಿಸಿಯಾಗಿಸುವ ಸನ್ನಾಹದ ವಿವರಣೆ ಸೊಗಸಾಗಿದೆ. -:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಕವಿನಾಗರಾಜರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ನಾವಡರೇ,ಹೊರಗೆ ಸುರಿಯುತ್ತಿರುವ ಮಳೆ. ನಿಮ್ಮ ಬೆಚ್ಚನೆಯ ಕವನ. ತುಂಬಾ ಖುಷಿಕೊಟ್ಟಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮೆಚ್ಚಿದ ಭಾಗವತರೇ, ಧನ್ಯವಾದಗಳು. (ವಿಷಯಾ೦ತರ: ಶಾಲೆಗೆ ರಜೆ ಎ೦ದು ನೀವೂ ಸ೦ಪದದಿ೦ದ ರಜೆ ಪಡೆದಿದ್ದಿರೇ? ಭಾರೀ ದಿನಗಳಾಯ್ತು ನಿಮ್ಮನ್ನು ಸ೦ಪದದಲ್ಲಿ ಕ೦ಡು. ನಮ್ಮಲ್ಲಿಗೆ ಬರುವೆನೆ೦ದವರು ಪತ್ತೆಯಿಲ್ವಲ್ಲಾ! ಏನು ಕಥೆ?) ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮೆಚ್ಚಿ ಪ್ರತಿಕ್ರಿಯಿಸಿದ ಚಿಕ್ಕು, ಹೆಗಡೆಯವರಿಗೆ ಹಾಗೂ ಮ೦ಜು ರವರಿಗೆ ಧನ್ಯವಾದಗಳು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದ್ಭುತವಾದ ಆಲೋಚನೆ ತುಂಬಾ ಚೆನ್ನಾಗಿದೆ ksraghavendranavada ಸರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಿಟಿ-ಜಿಟಿ ಮಳೆಯಲಿ ತೀರದ ಬಯಕೆಯಲಿ ಮೋಹದ ಪಾಶದಲಿ ರಸಿಕತನದಲಿ ನೀವು ಬರೆದ ಕವನ ತುಂಬಾ ಸೊಗಸಾಗಿದೆ ನಾವಡೆ ಯವರೆ --ಮೌನೇಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.