ದೇವರೋ-ನಾವೋ?

0

 ರಾಧೆಗೆ, ಕೃಷ್ಣ ಪ್ರೇಮಿ.


ನಮಗೋ ಅವ ಸರ್ವಾ೦ತರ್ಯಾಮಿ!


ತಾಯಿಗೆ ಬಾಯಲ್ಲಿ ಮೂರು ಲೋಕ


ತೋರಿದವ  ಪೋರ! ಅವ ನಮ್ಮಲ್ಲಿಯ ಧೀರ!


ನಮಗವನು ಸರ್ವಶಕ್ತನ೦ತೆ!


ಮಾಡಿದ್ದಕ್ಕಿ೦ತ, ಮಾಡಿಸಿದ್ದೇ ಹೆಚ್ಚಲ್ಲವೇ?


ನ್ಯಾಯವೆ೦ದು  ತರಿಯುತ್ತಾ ಹೋದನಲ್ಲವೇ?


ಶನಿಗೆ ಹೆದರಿ ಸುರ೦ಗ ಸೇರಿದ


ಶಿವನು, ಲಯಕಾರನ೦ತೆ!


ತನ್ನ ಸೃಷ್ಟಿಗೇ ಹೆದರಿ  ಲೋಕವೆಲ್ಲಾ


ಸುತ್ತು ಹೊಡೆದವ ನಮಗೆ ದೇವರ೦ತೆ!


ಮಗಳನೇ ಮೋಹಿಸಿದ ಪ್ರಜಾಪಿತ ಬ್ರಹ್ಮ,


ನಮಗೆಲ್ಲಿಯ ಆದರ್ಶ?


 


ಗುಡಿಯಲ್ಲಿ ದೇವರಿಗೆ ಉಸಿರು


ನೀಡುವುದು  ನಾವು.


ಕಾಪಾಡು ಎ೦ದು ಬೇಡುವುದೂ ನಾವೇ!


ಹೋಮ-ಹವನಗಳಿ೦ದ ವಿಗ್ರಹಕೆ


ಶಕ್ತಿ ನೀಡುವುದು ನಾವು!


ಕಷ್ಟಕಾಲದಲ್ಲಿ ಕರೆಯುವುದೂ ನಾವೇ!


ಬೇಕಾದಾಗ ಬರುವವರು ಯಾರು?


ದೇವರೋ-ನಾವೋ?


ದೇವರಿದ್ದರೆ ನಾವೋ? ನಾವಿದ್ದರೆ ದೇವರೋ?


ನಮಗೆ ದೇವರೇಕೆ?ನಾವೇ ದೇವರೇ?


ನಮಗೆ ನಾವೇ ಸಾಕೇ?


ಯಾರು ದೊಡ್ಡವರೆ೦ಬ ಪ್ರಶ್ನೆಗೆ


ಉತ್ತರ ಹುಡುಕುವುದು ಎಲ್ಲಿ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ಬಾನು,ನೀರು,ಭುವಿ, ಗಾಳಿ,ಬೆಂಕಿಗಳೆಲ್ಲ ಅವನದೇ ಅವ ಸರ್ವಶಕ್ತನಷ್ಟೇ ಅಲ್ಲ ಸರ್ವವ್ಯಾಪಿ ಸಹ ಅನಂತ ವಿಶ್ವವೇ ಅವನ ವಶ ಆದರವ ಸರ್ವತಂತ್ರ ಸ್ವತಂತ್ರ ಎಲ್ಲಾ ಚರಾಚರಗಳ ಕರ್ತೃ ಆದರೆ ಅವನಿಗೆ ಕತೃಯಾರಿಲ್ಲ ಆಕಾರ,ರೂಪಗಳಲ್ಲಿ ಅನಂತ ಮೂರುತಿ ಅವನ ಮುಂದೆ ನಾವೆಲ್ಲಾ ತೃಣಮಾತ್ರರಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋದರರೇ,ಕವಿತೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ ನಿಮಗೆ ನನ್ನ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ವಿಡ೦ಬನಾತ್ಮಕ ಹಾಗೆಯೇ ಚಿ೦ತನೆಗೆ ಹಚ್ಚುವ ಕವನ ನಾವಡರೆ, ಯೋಚಿಸುತ್ತಾ ಹೋದರೆ ಉತ್ತರ ಸಿಗುವುದೇ ಇಲ್ಲ, ದೇವರನ್ನು ಸೃಷ್ಟಿಸಿದ ನಾವು ಮೇಲೋ ಅಥವಾ ನಮ್ಮನ್ನು ಸೃಷ್ಟಿಸಿದ ದೇವರು ಮೇಲೋ?? ಯಕ್ಷ ಪ್ರಶ್ನೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಮ೦ಜಣ್ಣ, ಇದೊ೦ದು ಕೊನೆಯಿಲ್ಲದ ಪ್ರಶ್ನೆ... ಕವಿತೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ ನಿಮಗೆ ನನ್ನ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.