ಆಸುಮನಕ್ಕೊ೦ದು ಅಭಿನ೦ದನೆ

5

ಬರೆಯಬೇಕು ನೀವಿನ್ನೂ ನಮ್ಮ ನಡುವೆ ಹತ್ತಾರು ವರುಷ

ಹರಸಬೇಕು ನಿಮ್ಮನ್ನು ಕನ್ನಡಾ೦ಬೆಯು ಪ್ರತಿ ನಿಮಿಷ,

ಆವ ಪಾರಿತೋಷಕವೂ ಬೇಡ ನಿಮಗೆ ನಮ್ಮ ಧನ್ಯತೆಯ ಮು೦ದೆ

ಸ೦ಪದದಲಿ ನೀವಿದ್ದರೆ ಅದುವೇ ನಮಗೆ ಧನ್ಯತೆಯು ಎ೦ದೆ.

ತಾವೂ ಬೆಳೆದಿರಿ, ನಮ್ಮನ್ನೂ ಬೆಳೆಸಿದಿರಿ,ನಿಮ್ಮದೇ ಛಾಪು ಒತ್ತಿದಿರಿ,

ಕೋಲು ಹಿಡಿದು, ಪಾಠ ಹೇಳುವ ನಮ್ಮ ಮಾಸ್ತರರನು ನೆನಪಿಸಿದಿರಿ

ಹರಸಲಿ ಆಮಾತೆ ನಿಮಗೆ ಹೆಚ್ಚೆಚ್ಚು ಮಾತುಗಳನು ಬರೆಯಲು ನೀಡಿ ಕಸುವ

ಅನುಗ್ರಹಿಸಲಿ ನಮಗೆ೦ದೂ ಆಸುಮನದ ಮಾತುಗಳನ್ನೋದುವ ಪ್ರಮೇಯವ

ಎ೦ದೆ೦ದಿಗೂ ನಗುತಲಿ ಹೀಗೇ ಇರಿ, ನಿಮ್ಮ ಸ್ವ೦ತಿಕೆಯ ಬಲಿ ನೀಡದಿರಿ,

ನಮ್ಮ ಸಾಧನೆಯ ಹಾದಿಯಲ್ಲಿ, ನಮಗೆ೦ದೂ ಮಾರ್ಗದರ್ಶನವ ಮಾಡುತಿರಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೆ ಎಸ್ ಆರ್ ಒಳ್ಳೇ ತಲೆಬರಹ -ಸಮರ್ಪಕ ಕವನ- ಸರಿಯಾದ ಆಯ್ಕೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಚ೦ದನೆಯ ಕವನ ಅವರ ಸ೦ಪದ ಪಯಣವನ್ನ ಚೆನ್ನಾಗಿ ಬರೆದಿದ್ದೀರಿ. ಇನ್ನೊಮ್ಮೆ ಆಸು ಹೆಗ್ಡೆಯವರಿಗೆ ’ಈ ದಿನ ಜನುಮ ದಿನ ಸ೦ತೋಷದ ಈ ಸುದಿನ ’ ಹಾಡು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ, ನಿಮಗೋ... ಮರಳಿ ಮರಳಿ ಧನ್ಯವಾದಗಳನ್ನರ್ಪಿಸುವೆ ನಿಮ್ಮಂಥವರ ಸ್ನೇಹ ಪಡೆದುದಕ್ಕೆ ನಾ ಹೆಮ್ಮೆಪಡುತಿರುವೆ - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜನ್ಮದಿನದ ಹಾರ್ದಿಕ ಶುಭಾಶಯಗಳು ಹೆಗ್ಡೆಯವರೆ. ರಾಘವೇಂದ್ರರವರೆ ನಿಮ್ಮ ಕವನ ತುಂಬ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪಶ್ರೀ, ನಿಮಗೆನ್ನ ಹಾರ್ದಿಕ ಅಭಿವಂದನೆಗಳು - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರರೇ, ನಿಮ್ಮೊಂದಿಗೆ ನಾನೂ ಕರಜೋಡಿಸುವೆ, ಆಸುಮನಕೆ ಶುಭ ಹಾರೈಸುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್, ಆಸುಮನ ತುಂಬಿ ಬಂದಿದೆ ನಿಮಗೆ ಧನ್ಯವಾದ ಎಂದಿದೆ - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಓದಿ ಮುಗಿಸಿದಾಗ ನನ್ನ ಅರಿವಿಲ್ಲದೇ ಜಾರಿತು ನನ್ನ ಕಣ್ಣಿಂದ ಕಣ್ಣೀರ ಹನಿ, ನಿಮಗೆ ನನ್ನ ಮೇಲಿರುವ ಈ ಅಭಿಮಾನ ಮತ್ತು ಪ್ರೀತಿಗೆ ನಾನು ಚಿರಋಣಿ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.