ಮರಣ ಭಯ

5

ನಗುವ ಹೂವೇ,ಅರಳುವ ಮುನ್ನವೇ

ಬಾಡಿ ಹೋದೆಯಲ್ಲ.

ಧಾರಾಕಾರ  ವರ್ಷ-ಬಿರು ಶೀತಲ ಮಾರುತಗಳಿಗೂ ಬಗ್ಗದೆ

ತುಸು ಬಾಗಿ, ಬೆ೦ಡಾಗಿ, ಮತ್ತೆ ತಲೆ ಎತ್ತುವ  ನೀನು!!

ಸು೦ದರ ಹೂವೇ ಬೇಕೆನ್ನುವವರೆಲ್ಲಾ,

ಕೊಯ್ದು, ಹಿಚುಕಿ ಬಿಸುಡುವರೆಲ್ಲಾ.

ನಿನ್ನ ಅಶ್ರುಧಾರೆಯ ಕಾಣದ ಕಣ್ಣು

ತನ್ನ ಚೆಲುವೆಯ ಸು೦ದರ ಮುಡಿಯ ಕ೦ಡೀತು!

ಕಣ್ತು೦ಬಿಕೊ೦ಡೀತು.

ನೀ ಮೊಗ್ಗಾಗಿಯೇ ಇರು, ಎ೦ದಿಗೂ ಅರಳದಿರು!

ಅರಳದಿರೆ ಮುದುಡಿಸಿಕೊಳ್ಳುವ  ಭಯವಿಲ್ಲ!

ನಗುವ ಹೂವಿನ ತಾಯಿಯೇ,

ನೀ ಪ್ರಸವಿಸದಿರು ಇನ್ನೆ೦ದೂ,

ಪ್ರಸವಿಸದಿರೆ, ನಿನಗೆ ಅಳುವ ಭಯವಿಲ್ಲ!

ಮರಣದ ಭಯ ಮಾತ್ರ!!!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

<ನಿನ್ನ ಅಶ್ರುಧಾರೆಯ ಕಾಣದ ಕಣ್ಣು ತನ್ನ ಚೆಲುವೆಯ ಸು೦ದರ ಮುಡಿಯ ಕ೦ಡೀತು!> ಈ ಸಾಲುಗಳು ಸಕತ್ ನಾವಡವ್ರೆ ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಏನಿದು ಕವಿತೆಗಳ ಸಾಲು ಚಿರ ವಿರಹಿ ಕವಿಯಾಗ್ತಾನಂತೆ, ಒಂದು ಸಂಪದದ ಸಂಮಿಲನ ತಪ್ಪಿ ಹೋದದ್ದಕ್ಕೋ ಅಥವಾ...? ಉತ್ತಮ ಕವಿತೆ ರಾಯರೇ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೇ, ಎಲ್ಲಾ ಆಸುಮನ, ನಿಮ್ಮ ಮಹಿಮೆ.ಏನೋ ಒ೦ದಿಷ್ಟು ಬರೆಯುತ್ತೇನೆ. ನೀವು ಮೆಚ್ಚಿ ಹರಸುತ್ತೀರಿ. ಅದುವೇ ನನಗೆ ಸಾಕು. ಸಮ್ಮಿಲನ ತಪ್ಪಿಸಿಕೊ೦ಡಿದ್ದಕ್ಕ೦ತೂ ಖೇದವಿದೆ. ಆದರೆ ಚಿರವಿರಹಿಯಾಗಲಾರೆ. ಮು೦ದೆ ಅವಕಾಶ ಇದ್ದೇ ಇದೆಯಲ್ಲ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಚಿಕ್ಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಂಡಿತವಾಗ್ಲು ಈ ಕಡೆಯ ಸಾಲು ಮಾತ್ರ ಸ್ವಲ್ಪ>>>ಮರಣದ ಭಯ ಮಾತ್ರ!!!!<<<< ಭಯವನ್ನೆ ತರಿಸುತ್ತದೆ. ಆದರು ಕವನ ಮಾತ್ರ ಅದ್ಭುತವಾಗಿದೆ ಧನ್ಯವಾದಗಳು ksraghavendranavada ಸರ್. ವಸಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಸ೦ತ್,ಹೆಣ್ಣನ್ನು ಹೂವಿಗೆ ಹೋಲಿಸಿ ಬರೆದ ಕವಿತೆ ಇದು. ಮರಣದ ಭಯ ಮಾತ್ರ ಪದದಲ್ಲಿ ಎ೦ದರೆ ಸಮಾಜದಲ್ಲಿ ನಮ್ಮ ಕುಟು೦ಬಗಳು ಸ೦ತಾನ ವಿಹೀನ ಸ್ತ್ರೀಯನ್ನು ನೋಡಿಕೊಳ್ಳುವ ಪರಿಯನ್ನು ಆ ಪದದಲ್ಲಿ ವ್ಯಕ್ತಪಡಿಸಿದ್ದೇನೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರವರೇ, ಕವನ ಚೆನ್ನಾಗಿದೆ. ಪ್ರತಿಯೊಂದು ಸಾಲು ಅರ್ಥಪೂರ್ಣ. ಕಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಮಲಾಜಿ, ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಿಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಹೂವಾಗಿ ಎರಡು ದಿನ ಕಣ್ಮನಗಳಿಗೆ ಮುದನೀಡಿ ಪರವಾಗಿಲ್ಲ ನಂತರ ಹೋದರೂ ತಾನು ಮುದುಡಿ ಎರಡು ದಿನದ ಬಾಳು ಅನ್ಯರಿಗೆ ನೀಡಿದರೆ ಸಂತಸ ಜನ್ಮಸಾರ್ಥಕವಲ್ಲವೇ ಆಮೇಲೆ ತಾನಾದರೂ ಕಸ? - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಹೆಗಡೇಜಿ,ನಿಮ್ಮ ಮಾತನ್ನು ಒಪ್ಪಿದೆ. ಆದರೆ,ಹೂವಿನ ಬದುಕನ್ನು ನೋಡಿದ ಕವಿಯೊಬ್ಬನ ಬೇಸರದ ಮಾತುಗಳು ಮೇಲಿನ ಕವಿತೆ. ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಿಕ್ಕೆ ವ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀ ಮೊಗ್ಗಾಗಿಯೇ ಇರು, ಎ೦ದಿಗೂ ಅರಳದಿರು!--ಕಾಳಜಿ ಅರಿವಾಗುತ್ತದೆ.. ಆದರೆ ಅರಳಲೆ ಬೇಕು..ಮುದುಡಲೆ ಬೇಕು..ಅದೆ ಜೀವನ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತೀಜಿ ವ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನೀ ಮೊಗ್ಗಾಗಿಯೇ ಇರು, ಎ೦ದಿಗೂ ಅರಳದಿರು! ಅರಳದಿರೆ ಮುದುಡುವ ಭಯವಿಲ್ಲ!>> ಅರಳಿ, ಕಂಪ ಬೀರಿ ನಲಿದಾಡಿದರೆ ಬದುಕು ಸಾರ್ಥಕವಲ್ಲವೇ ಅರಳದೆ ಮುದುಡಿ ಕುಳಿತರೆ ಇರುವಷ್ಟೂ ಬದುಕು ನರಕವಾಗದೆ ದಿನವಾದರೇನಂತೆ, ಕ್ಷಣವಾದರೇನಂತೆ ಅರಳುವುದೇ ಬದುಕಿನ ಗುರಿಯಾದಾಗ ಬಾಡುವ ಏಕೆ ಚಿಂತೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಕವಿತೆ ನಾವಡರೆ, ಆದರೆ ಹೂವು ಅರಳಿ, ಗುಡಿಗೋ ಮುಡಿಗೋ ಏರಿದಾಗಲೇ ಅದರ ಜನ್ಮ ಸಾರ್ಥಕವಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ನಿಮ್ಮ ಮಾತು ಒಪ್ಪತಕ್ಕದ್ದೇ ಮ೦ಜು. ಆದರೆ, ಹೂವನ್ನು ಮುಡಿಗೇರಿಸಿಕೊಳ್ಳುವುದಕ್ಕಿ೦ತ, ಗಿಡದಲ್ಲಿಯೇ ಬಿಟ್ಟರೆ ಆ ಗಿಡದ ಸೌ೦ದರ್ಯ ಇಮ್ಮಡಿಸುತ್ತದಲ್ಲವೇ? ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಸಲುವಾಗಿ ನನ್ನ ವ೦ದನೆಗಳು. ನಮಸ್ಕಾರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ತು,ಹೂವು ಅರಳಿದರೆ ಚೆ೦ದವೇ, ಅದರ ಚೆ೦ದವನ್ನು ನೋಡಿ ಆನ೦ದಪಡುವುದಕ್ಕಿ೦ತ ಅದನ್ನು ಕಿತ್ತು, ತಾನಾಗಿ ಬಾಡಿಸುವವರ ವಿರುಧ್ಧದ ನೋವು ನನ್ನದು. ಆ ನೋವು ಈ ರೀತಿಯ ವಿಷಾದದಲ್ಲಿ ಮುಕ್ತಾಯಗೊ೦ಡಿದೆ. ಅದಕ್ಕೇ ಕವಿ ``ನೀ ಅರಳಿ ಬಾಡಿಸಿಕೊಳ್ಳುವುದಕ್ಕಿ೦ತ ಮೊಗ್ಗಾಗಿಯೇ ಇರು, ಅರಳದಿರು! ಎ೦ದು ಹೂವಿಗೆ ಹೇಳುತ್ತಿದ್ದಾನೆ. >>ಅರಳದಿರೆ ಮುದುಡುವ ಭಯವಿಲ್ಲ!>> ಸಾಲನ್ನು ಮೇಲಿನ ಅರ್ಥ ಬರುವ೦ತೆ ಬದಲಿಸಿದ್ದೇನೆ.ಸರಿಯೇ ಎ೦ದು ತಿಳಿಸಿ. ಕವನ ಮೆಚ್ಚಿ ಪ್ರತಿಕ್ರಿಯಿಸಿದ ಸಲುವಾಗಿ ನನ್ನ ವ೦ದನೆಗಳು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಭಾವವನ್ನು ಅರ್ಥ ಮಾಡಿಕೊಂಡಿದ್ದೆ. ಆದರೆ ಆ ಸಾಲು ಕೂಡ ಕವಿತೆಯ ಭಾವಕ್ಕೆ ಅನುಗುಣವಾಗಿ ಸರಿಯಾಗಿ ಇದೆ. ಆದರೆ ಓದುವ ಸಮಯದಲ್ಲಿ ಮನಸ್ಸಿನಲ್ಲಿ ಮೂಡಿ ಬಂದದ್ದನ್ನು ಹೇಳಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾವಡ ಸಿರ್ ಅದ್ಭುತ ಕವನ ತು೦ಬಾ ಚೆನ್ನಾಗಿದೆ ನಿಮ್ಮ ಕವನಕ್ಕೊ೦ದು ನನ್ನ ಪ್ರತಿಕವನ ಚಿಗುರು ಮೈತಳೆದು ಹೂವಾಗುವ ಕಾಲ ಕುಣಿತ ನಲಿತದ ಮಳೆಗಾಲ ಹೂ ಕಾಯಾಗುವ ಕಾಲ ಹುಳಿತ ಮತ್ತು ಬಲಿತ ಚಳಿಗಾಲ ಕಾಯಿ ಹಣ್ಣಾಗುವ ಕಾಲ ಒಡೆತ ಮತ್ತು ಇಳಿತದ ಬೇಸಗೆಕಾಲ ಚಿಗುರು ಹೂ ಕಾಯಿ , ಹಣ್ಣು ಸಹಜ ಬದುಕಿನದ್ಭುತವದು ನಿಜ ಹೂ ಮಾಗುವಿಕೆ ಬಹು ಬೇಗ ಪ್ರಸವಿಸದಿರೆ ಸ್ರುಷ್ಟಿಕ್ರಿಯೆಗಿಲ್ಲ ಜಾಗ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಕವನಕ್ಕೊ೦ದು ಪ್ರತಿಕವನ ಚೆನ್ನಾಗಿದೆ. ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆ ಸರ್. ಇದನ್ನ ಓದಿದಾಗ ಬೇಂದ್ರೆಯವರ. ಕಾಡು ಮಲ್ಲಿಗೆಯೊಂದು ಕಾಡಿನಲ್ಲಿ ನರಳುತಿದೆ ಬಾಡಿಹೋಗುವ ಮುನ್ನ ಕೀಳುವವರಾರಿಲ್ಲವೆಂದು ಕವಿತೆ ನೆನಪಿಗೆ ಬಂತು. ನಿಮ್ಮ, ವೀರಭದ್ರಪ್ಪ ಅಂಗೂರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಅ೦ಗೂರರೇ, ಅದರ ನೆನಪಿನಲ್ಲಿಯೇ ಅದರ ವಿರುಧ್ಧವಾಗಿ ಬರೆದ ಕವನವಿದು. ಕವನ ಮೆಚ್ಚಿಕೊ೦ಡಿದ್ದಕ್ಕೆ ವ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>ನೀ ಮೊಗ್ಗಾಗಿಯೇ ಇರು, ಎ೦ದಿಗೂ ಅರಳದಿರು! ಅರಳದಿರೆ ಮುದುಡಿಸಿಕೊಳ್ಳುವ ಭಯವಿಲ್ಲ!< ಕವಿಯ ಕಾಳಜಿ ವ್ಯಕ್ತವಾದ ಸಾಲುಗಳು..ಹೃದಯ ಸ್ಪರ್ಶಿ ಕವನ.. ಸಹೋದರರೆ ಮನ ಮುಟ್ಟಿತು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು ಸೋದರರೇ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, >>>ನಗುವ ಹೂವಿನ ತಾಯಿಯೇ, ನೀ ಪ್ರಸವಿಸದಿರು ಇನ್ನೆ೦ದೂ, ಪ್ರಸವಿಸದಿರೆ, ನಿನಗೆ ಅಳುವ ಭಯವಿಲ್ಲ!>>> ಸಕ್ಕತಾಗಿದೆ ಕಣ್ರೀ..ನೀವ್ಯಾವಾಗ ಕವಿಗಳಾಗಿ ಬಿಟ್ರಿ ನಾವಡರೆ ??? -ಚೈತನ್ಯ ಭಟ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೈತೂ, ಎಲ್ಲಾ ಸ೦ಪದದ ಮಹಿಮೆ!! ಕವನವನ್ನು ಮೆಚ್ಚಿ, ಪ್ರತಿರ್ಕಿಯಿಸಿದ ಸಲುವಾಗಿ ಧನ್ಯವಾದಗಳು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.