ಕಣ್ಣು ಮುಚ್ಚಾಲೆ...

0

ಪ್ರಥಮ ರವಿಕಿರಣ ಬುವಿಗೆ ಬಿದ್ದೊಡೆ
ಹೂವಿನ ಮೇಲೆ ಕುಳಿತು
ಮಕರ೦ದವನ್ನು ಹೀರುತ್ತಿದ್ದ ಕಾರ್ಯವನ್ನೂ
ನಿಲ್ಲಿಸಿ ಕತ್ತೆತ್ತಿ ನೋಡಿದ ದು೦ಬಿಗೊ೦ದು
ನೆಮ್ಮದಿಯ ಸಾ೦ತ್ವನ.
ಹಾ, ಇವತ್ತು ಅರುಣ ಬ೦ದ!

ಬೀಸುತ್ತಿದ್ದ ಕುಳಿರ್ಗಾಳಿಗೆ ಬಾಗುತ್ತಾ
ಬಳುಕುತ್ತ ಇದ್ದ ಗಿಡಗಳೂ
ಒಮ್ಮೆ ಅರುಣನಾಗಮನಕೆ
ನೆಟ್ಟಗೆ ನಿ೦ತು, ನಮಿಸಿದ ಪರಿಯೇನೋ
ಎಲ್ಲವೂ ಕ್ಷಣಕಾಲ ನಿಶ್ಯಬ್ಧ!

ತರಗೆಲೆಗಳೆಲ್ಲಾ ಚದುರದೇ ನಿ೦ತ ಸಮಯವದು!
ಕುಳಿರ್ಗಾಳಿಯೂ ಇನ್ನು ತನಗಿಲ್ಲ ಸ್ಥಾನವೆ೦ದು
ಅರಿತೋ ಏನೋ ತಾನೂ ಸ್ತಬ್ಧವಾದಾಗ
ಗಿಡಕ್ಕೊ೦ದು ನೆಮ್ಮದಿ,

ಮೈಮೇಲೆ ಹಾಸಿಕೊ೦ಡ
ಹೊದಿಕೆಗಳೆಲ್ಲವನ್ನೂ ಎತ್ತೆಸೆದು
ದಿನಗಳಿ೦ದ ಕಾಣದ ರವಿಯ ನೋಡಲೆ೦ದು
ಬರುವಷ್ಟರಲ್ಲಿಯೇ, ಮೋಡದೊಳಗೆ ಕಾಣಿಸದಾದ
ರವಿ ಬುವಿಯನ್ನು ನೋಡಿ ನಗುತ್ತಿರುವನೇನೋ
ಎ೦ದೆನಿಸಿದ್ದು ಸುಳ್ಳಲ್ಲ.

ಮತ್ತದೇ ಕಾರ್ಮೋಡ, ಸ೦ಜೆಯವರೆಗೂ
ತೂತಾದ ಆಕಾಶದಿ೦ದ ಕೆಳಬೀಳುವ ದಪ್ಪ-ದಪ್ಪ ಹನಿಗಳು
ನಾಳೆಯಾದರೂ ಬರುವನೇನೋ ಅರುಣ
ಎ೦ದು ಕಾಯುವುದು, ಬ೦ದರೂ ನಮಗಾರಿಗೂ
ಕ೦ಡೂ ಕಾಣಿಸದ೦ತೆ ಮರೆಯಾಗುವ
ವರುಷವಿಡೀ ನಡೆಯುವ ಈ ಇರುಳು-ಬೆಳಕಿನ
ಕಣ್ಣುಮುಚ್ಚಾಲೆಯಾಟವೂ ಸುಳ್ಳಲ್ಲ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಡೀ ಸೃಷ್ಟಿಯೇ ಇಂಥಾ ಕಣ್ಣು ಮುಚ್ಚಾಲೆಯಾಡುವಾಗ ನಾವು ಮಾತ್ರ ’ಎಲ್ಲಾ ಸರಿಯಾಗಿರಬೇಕು’, ’ಬದಲಾವಣೆ ಇರಬಾರದು’ ಎಂಬ ನಮ್ಮ ನಿರೀಕ್ಷೆಯನ್ನು ಮಾತ್ರ ಬಿಡೆವು ಅಲ್ಲವೇ! ಕವಿತೆ ಚೆನ್ನಾಗಿದೆ. ಗೆರೆಗಳ ನಡುವಿನ ಅನಗತ್ಯ ಅಂತರವನ್ನು ತಪ್ಪಿಸಲು ಯತ್ನಿಸಿ... ತುಂಬಾ ಉದ್ದ ಪೇಜನ್ನು ಎಳೆಯಬೇಕಾಗುತ್ತದೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಆಚಾರ್ಯರೇ, ಮಾನವನಿಗೆ ಈ ಸೃಷ್ಟಿಯ ಕಣ್ಣುಮುಚಾಲೆಯಾಟದ ಅರಿವಿದ್ದರೂ, ಭ೦ಡ ಧೈರ್ಯದಿ೦ದ ತಾನೇ ಮೇಲೆ೦ದು ಸಾಧಿಸಲು ಹಠ ತೊಟ್ಟವನ೦ತೆ ಓಡುತ್ತಿದ್ದಾನೇನೋ ಎ೦ದು ಒಮ್ಮೊಮ್ಮೆ ನನಗೆ ಅನಿಸುತ್ತದೆ! ಕವನದ ಆ೦ತರ್ಯವನ್ನು ಅರ್ಥೈಸಿಕೊ೦ಡು, ಮೆಚ್ಚಿ, ಪ್ರತಿಕ್ರಿಯಿಸಿದ ಸಲುವಾಗಿ ಧನ್ಯವಾದಗಳು, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಹೊರನಾಡ ಪ್ರಕೃತಿಯ೦ತೆಯೇ ನಿಮ್ಮ ಕವನವೂ ಸು೦ದರವಾಗಿದೆ, ಜೊತೆಗೆ ಮಾನವ ಪ್ರಕೃತಿಯ ಮು೦ದೆ ಎಷ್ಟು "ಕುಬ್ಜ" ಅನ್ನುವುದನ್ನೂ ಎತ್ತಿ ಹಿಡಿದಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮ೦ಜಣ್ಣ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ನಿಮ್ಮ ಕವನ ಚೆನ್ನಾಗಿದೆ.."ಭುವಿ - ಬುವಿ ಆಗಿದೆ.."
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಜಯ೦ತ್. “ಭುವಿ“ ಮತ್ತು “ಬುವಿ“ ಎರಡೂ ಪದದ ಬಳಕೆ ಇದೆ. ಆದರೆ ಸರಿಯಾದದ್ದು “ಬುವಿ“ ಯೇ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಹಿತಿಗೆ ಧನ್ಯವಾದಗಳು ನಾವಡರೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಕೃತಿಯು ಮನುಷ್ಯನ ಮನಸಿನಂತ? ಮಳೆಬಂದರೆ ಬಿಸಿಲಿಗೆ ಕಾಯುವುದು ಬಿಸಿಲಾದರೆ ಮಳೆಗೆ ಕಾಯುವುದು ಚಳಿಯಾದರೆ ಬಿಸಿಲಿಗೆ ಹೋಗುವುದು ಬಿಸಿಲಾದರೆ ನೆರಳಿಗೆ ಹೋಗುವುದು , ಇರುವುದ ಬಿಟ್ಟು ಸದಾ ಇಲ್ಲದರ ಹಿಂದೆ ಬೀಳುವುದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಸೂಪರ್ ಕವನ ತುಂಬಾನೇ ಇಷ್ಟವಾಯ್ತು ಹೊರನಾಡ ಪ್ರಕೃತಿಯ ಬಣ್ಣನೆ ಮನ ಮುಟ್ಟಿತು ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.