ಎಲ್ಲಿಯವರೆಗೆ?

0

ನಾನಿರುವ ಈಗಿನ ಜಾಗ ನನ್ನದಲ್ಲ.

ನಾ ಹೊಸದಾಗಿ ಖರೀದಿಸಲಿರುವ

ಜಾಗವೂ ನನ್ನದಲ್ಲ!

ನಾನಿರುವ ಜಾಗಕ್ಕೆ ನಾಳೆ

 ಮತ್ತೊಬ್ಬ ಬರಬಲ್ಲ!

ಬರದಿದ್ದಲ್ಲಿಯೂ ಆ ಜಾಗ ನನ್ನದಲ್ಲ!

ನನ್ನದೇನಿದೆ ಇಲ್ಲಿ?

ನನ್ನ ಹೆ೦ಡತಿ,ಮಕ್ಕಳು ಅವರು ನನ್ನವರೇ,

ಎಲ್ಲಿಯವರೆಗೆ? ಎನ್ನುವುದೇ ಪ್ರಶ್ನೆ!

ವ್ಯರ್ಥ ಕಸರತ್ತೇಕೆ?

ಎಲ್ಲದೂ ನನ್ನದೇ ಎ೦ಬ

ಭಾವ ಬೆಳೆಸಿಕೊ೦ಡರೆ ಹೇಗೆ?

ಎಲ್ಲದೂ ನನ್ನದೇ ಆದರೆ ಅವನದೇನಿದೆ ಇಲ್ಲಿ?

ನಿಭಾಯಿಸಲಾಗದ ಜವಾಬ್ದಾರಿಯಲ್ಲವೆ ಅದು?

ಕರ್ತವ್ಯ ಪಾಲನೆಗಾಗಿ

ಮತ್ತದೇ ಹೋರಾಟ!

ನಾನು ನನ್ನದೆ೦ಬ ಮಮಕಾರ.

ಒಬ್ಬನಿಗಾಗಿ ಮತ್ತೊಬ್ಬ,

ಮತ್ತೊಬ್ಬನಿಗಾಗಿ ಮಗದೊಬ್ಬ!

ಎಲ್ಲಿಯವರೆಗೆ ಎನ್ನುವುದೇ ಪ್ರಶ್ನೆ!

ನಾನು -ನನ್ನದಕ್ಕೆ ಕೊನೆ ಇದೆಯೇ?

ನನ್ನದೆ೦ಬುದಕ್ಕೆ ಅ೦ತಿಮ ಸಹಿಯಿದೆಯೇ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಲ್ಲ ಇಲ್ಲ ಇಲ್ಲ.. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದೂ ಇದೆಯಾ.. ಕನಕದಾಸ ,ಗೋರಾ ಕುಂಬಾರ ಹೇಳಿದ್ದೂ ಇದೆಯಾ.. ಕೊನೆಗೆ ರೌಡಿ ಜೋಗಿ ಹೇಳಿದ್ದೂ ಇದೆಯಾ ನಾನು ಎಂಬುದು ನಾಳೆ ಮಣ್ಣು ಅಂತ !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವುದೂ ಶಾಶ್ವತವಲ್ಲ, ಆದರೆ ನಮ್ಮೊಂದಿಗೆ ಇರುವಷ್ಟು ಹೊತ್ತು ಅವು ನಮ್ಮವೇ. ನನ್ನದು ಎಂಬುದಕ್ಕೆ ಅಂತಿಮ ಸಹಿ ನನ್ನ ಸಾರ್ಥಕ್ಯ ಭಾವ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ನನ್ನದು ಎಂಬುದಕ್ಕೆ ಅಂತಿಮ ಸಹಿ ಬೀಳುವುದು "ನಾನು" ಅಳಿದ ಮೇಲೆ "ನಾವು" ಎನ್ನುವುದು ತನ್ನ ಸಾಮ್ರಾಜ್ಯವನ್ನು ಇಲ್ಲಿ ಸ್ಥಾಪಿಸಿಕೊಂಡ ಮೇಲೆ - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನದೆ೦ಬುದಕ್ಕೆ ಅ೦ತಿಮ ನಾನು ಅಳಿದ ಮೇಲೆ ಚೆನ್ನಾಗಿದೆ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಮೀಜಿಯಾಗುವ ಲಕ್ಷಣಗಳು ಕಾಣುತ್ತಿದೆಯಲ್ಲಾ. ನಾವಡರೆ ಯಾಕೀ ವೈರಾಗ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಯವಿಟ್ಟು ಸ್ವಾಮೀಜಿಯನ್ನು ಬಿಡಿಸಿ ಹೇಳಿ... ಅಲ್ಲಲ್ಲಾ... ಯಾವ ಸ್ವಾಮೀಜಿ ಎಂದು ಬಿಡಿಸಿ ಹೇಳಿ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿತ್.........??? :P
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾವಡ ಸರ್ ಇ೦ಥ ಹುಡುಕಾಟಗಳನ್ನ ಪ್ರಶ್ನೆಗಳನ್ನ ತು೦ಬಾ ಚೆನ್ನಾಗಿ ಬರೀತೀರ. ಇದು ಆಧ್ಯಾತ್ಮವೋ ಇಲ್ಲಾ ಪ್ರತಿಯೊಬ್ಬ ಮನಷ್ಯ ತನಗೆ ಕೇಳಿಕೊಳ್ಳಬೇಕಾದ ಪ್ರಶ್ನೆಯೋ ? ಎರಡೂ ಹೌದು ಪ್ರಶ್ನೆ ತು೦ಬಾ ದೂರದಿ೦ದ ಬಳಲಿ ಬ೦ದಿದ್ದೇನೆ ಒ೦ದು ಹೊತ್ತಿಗೆ ಜಾಗ ಸಿಗುವುದೇ ಇಲ್ಲಿ? ಉತ್ತರ ಜಾಗ ನಿನ್ನುಪಯೋಗಕ್ಕೆ, ಇನ್ನೇಕೆ ತಡ ಬೆಳಿ, ಕಲಿ, ನಲಿ ಒಲಿ ಈ ಜಾಗ ಜಗಲಿ ಪ್ರಶ್ನೆ ಒಬ್ಬನೇ ಇರುವುದಕೆ ಏಕೋ ಬೇಜಾರು ಕೊಡುವೆಯಾ ಜೊತೆಗೆ ನನ್ನವರೆ೦ಬುವರನು? ಉತ್ತರ ಸರಿ ಇಗೋ ನಿನ್ನ ಮನುಷ್ಯರು (ನಗು) ಸಾಕೇ ? ಇಷ್ಟು ಜನ ಅಪ್ಪ, ಅಮ್ಮ, ಮಗು ಪ್ರಶ್ನೆ ನನ್ನವರಿಗೆ ಇರಲು ಒ೦ದಿಷ್ಟು ಸ್ಥಳ ಮತ್ತು ಕೊಳ ಮತ್ತವರ ಜನಕಾಗಿ ಮಳೆ ಮತ್ತು ಬೆಳೆ? ಉತ್ತರ ಮೌನ … ಮೌನ…. ಮೌನ ನಗು …. ನಗು…....ನಗು ಪ್ರಶ್ನೆ ನಾನು ನಿನಗೊ೦ದು ಗುಡಿ ಕಟ್ಟಲೇ ನಿನ್ನ ನೆನಪಿಗಾಗಿ , ನಿತ್ಯ ನೋಡುವುದಕಾಗಿ? ಉತ್ತರ ಮೌನ … ಮೌನ…. ಮೌನ ನಗು …. ನಗು…....ನಗು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇರುವುದು ನಿನದಲ್ಲ, ಬರುವುದು ನಿನಗಲ್ಲ| ತರಲಾರದ ನೀನು ಹೊರುವೆಯೇನನ್ನು?|| ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ| ಫಲಧಾರೆ ಹರಿಯಗೊಡು ಮರುಳು ಮೂಢ|| ಆತ್ಮೀಯ ರಾಘವೇಂದ್ರರೇ, ನಿಮ್ಮ ಕವಿತೆಯ ಭಾವ ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಸೋದರ ಶ್ರೀಕಾ೦ತರು, ಆಚಾರ್ಯರು, ಹೆಗಡೆಯವರು, ನಾಡಿಗರು,ಚಿಕ್ಕು, ಹರಿ, ಕವಿನಾಗರಾಜರು ಎಲ್ಲರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು. ನನ್ನ ಪ್ರಶ್ನೆಗೆ ಸರಿಯಾದ ಉತ್ತರವನ್ನು ಪಡೆದಿದ್ದೇನೆ೦ಬ ಸ೦ತಸವಿದ್ದು, ಆ ಮಟ್ಟಿಗೆ ನನ್ನ ಕವನವು ತನ್ನ ಸಾರ್ಥಕ್ಯವನ್ನು ಕ೦ಡಿದೆ ಎ೦ಬ ಧನ್ಯತೆಯಿದೆ. ಸದಾ ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಇರಲೆ೦ಬ ಅರಿಕೆಗಳೊ೦ದಿಗೆ, ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.