ಕಲಸು ಮೇಲೋಗರ

0

ಇಲ್ಲಿ ಎಲ್ಲವೂ ಕಲಸು ಮೇಲೋಗರ

ಒಮ್ಮೆ ಸಾ೦ಬಾರು, ಮತ್ತೊಮ್ಮೆ ಸಾರು.

ಆಗಾಗ ಪಡುವಲಕಾಯಿ ಸಿಹಿ!

ಮೊಗೇ ಸೌತೆಕಾಯಿ ಮುದ್ದುಳಿ.

ನೆ೦ಜಿಕೊಳ್ಳಲು ನೀರುಳ್ಳಿ ಪಕೋಡಾ.

ಒಮ್ಮೆಲೇ ಸಿಗಬಹುದು ಆಲೂ ಬೋ೦ಡಾ!

ಇಲ್ಲಿ ಈಜಿದಾಗಲೇ ಪರಮಸುಖ,

ಸ೦ತಾನವೆ೦ಬ ಸೋಹನ್ ಪಾಪಡಿ!

ಆಗಾಗ ತೇಲುವ ಬಲೂನುಗಳ೦ತೆ ಬೂ೦ದಿಲಾಡುಗಳು.

ನಿರೀಕ್ಷಗಳೆಲ್ಲಾ ಆಕಾಶದಲ್ಲಿ ಹಾರುವ ಗಾಳಿಪಟಗಳ೦ತೆ

ಸಿಕ್ಕಿ ಹಾಕಿಕೊಳ್ಳಬಹುದು ಕಾಣದ ಮರದ ಗೆಲ್ಲುಗಳಿಗೆ,

ರುಚಿ ರುಚಿಯಾದ ಖಾರದ    

ಮೆಣಸಿನ ಕಾಯಿ ಬೋ೦ಡಗಳ೦ತೆ!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಂಸಾರದ ಕಲಸು ಮೆಲೋಗರ ಸವಿದವನೇ ಬಲ್ಲನು ಅದರ ರುಚಿಯಾ ಇಲ್ಲದವರಿಗೇನು ಗೊತ್ತು ಅದರ ರುಚಿ ಬಂತಾ ಫೋಟೋ..?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಲ್ಲವನೇ ಬಲ್ಲ ಬೆಲ್ಲದ ಸವಿಯಾ ಅ೦ದ ಹಾಗೆ ಸ೦ಸಾರದ ಸವಿಯೇ ಬೇರೆ, ಪ್ರತಿಕ್ರಿಯೆಗಾಗಿ ವ೦ದನೆಗಳು. (ವಿಷಯಾ೦ತರ: ಭಾವಚಿತ್ರಗಳು ತಲುಪಿತು, ಮನಸ್ಸಿಗೆ ಮುದ ನೀಡಿತು. ಭಾರೀ ಚೆನ್ನಾಗಿ ಭಾವಚಿತ್ರಗಳನ್ನು ತೆಗೆದಿದ್ದೀರಿ. ನೀವು ತೆಗೆದ ನನ್ನ ಭಾವಚಿತ್ರಗಳನ್ನು ನೋಡಿ, ನಾನು ಅಷ್ಟು ಸು೦ದರನೆ? ಯಾ ನಿಮ್ಮ ಮೊಬೈಲ್ ಕ್ಯಾಮೆರಾ ಕೈಚಳಕವೇ ಒ೦ದೂ ಅರಿವಾಗದೇ, ಒ೦ದು ಕ್ಷಣ ಸುಮ್ಮನೆ ಕುಳಿತೆ.)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಾನು ಅಷ್ಟು ಸು೦ದರನೆ? ಯಾ ನಿಮ್ಮ ಮೊಬೈಲ್ ಕ್ಯಾಮೆರಾ ಕೈಚಳಕವೇ ಒ೦ದೂ ಅರಿವಾಗದೇ, ಒ೦ದು ಕ್ಷಣ ಸುಮ್ಮನೆ ಕುಳಿತೆ.>> ಓಯ್, ಎ೦ಥ ಮಾರಾಯರೇ, ನೀವು ನಿಜವಾಗಲು ಸು೦ದರವಾಗಿದ್ದೀರಿ, ಎ೦ಥಕ್ಕೆ ಅನುಮಾನ?? :):)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ಅದೇ ಅಂದ್ಕೊಂಡೆ ಅಲ್ಲ ಅವರಿಗೇ ತಮ್ಮ ಸುಂದರತೆಯಲ್ಲಿ ನಂಬಿಕೆಯಿಲ್ಲವಲ್ಲ ಅಂತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದರೆ ನಾವಡರ ಫೋಟೋ ಇನ್ನು ಬದಲಾಗಿಲ್ಲವಲ್ಲ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿವಿಧ ಭಕ್ಷ್ಯಗಳನ್ನು ಹೇಳಿ ಮನಸ್ಸಿಗೆ ಮುದ ನೀಡಿದ್ದೀರಿ. ಬಾಯಲ್ಲಿ ನೀರೂರುವಂತೆ ಮಾಡಿದ್ದಿರಿ. ಆದರೆ ದೇಹಕ್ಕೆ ಯಾವಾಗ ನಾವಡರೆ. ಮುಂದಿನ ಬಾರಿ ಹೊರನಾಡಿಗೆ ಬಂದಾಗ ನಮಗೆ ಈ ತಿಂಡಿಗಳೆಲ್ಲಾ ಸಿಗಬಹುದೆ. (ತಮಾಷೆಗೆ) ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.