ಬೆಳಕಿ೦ಡಿ...

0

ಕಳೆದು ಕೂಡುವ ಲೆಕ್ಕಾಚಾರದ ಜೀವನದಲ್ಲಿ  


ಸಾಮಾನ್ಯವಾಗಿ ಎಲ್ಲವೂ ವ್ಯವಕಲನವೇ!


ಎಲ್ಲಿ ಕಾಲಿಟ್ಟರೂ ಅಲ್ಲಲ್ಲಿಗೆ ಅ೦ದಿನದು.


ನಾಳೆನ ಚಿ೦ತೆಯಲಿದ್ದರೆ,


ಇ೦ದಿನ ಸ೦ತಸದ ವ್ಯವಕಲನ


ಇ೦ದಿನ ಸ೦ತಸದ ಆಚರಣೆಯಲ್ಲಿರುವಾಗಲೇ


ಭವಿಷ್ಯದ ಚಿ೦ತೆ ಎದುರಾದರೆ


ಅ೦ದಿನ ಕೂಳಿನ ನೆಮ್ಮದಿಗೂ ತತ್ವಾರ!


ಬೇಡವೆ೦ದರೂ  ಕೂಡಲೇಬೇಕು


ಕಳೆಯಲೇಬೇಕು!


ಇ೦ದಿನ ಸ೦ತಸದ ಜೊತೆಗೆಯೇ


ನಾಳಿನ ಭವಿಷ್ಯಕ್ಕೊ೦ದು ಆಸರೆ.


ಎಲ್ಲರ ನಡುವೆಯೂ ನಮ್ಮದೇ ಬೇರೆಯಾದರೆ


ಅದರಲ್ಲಿಯೂ ಒ೦ದು ನೆಮ್ಮದಿ!


ಭೂತದ ಚಿ೦ತೆಯೇ ವರ್ತಮಾನದ


ಹಾದಿಗೆ ತೊಡಕಾದರೆ,


ಭವಿಷ್ಯದ ಕನಸಿಗೆಲ್ಲಿ ಹಾದಿ?


ಮುಳುಗುವುದು ಒ೦ದು ವಿಧವಾದರೆ


ಮುಳುಗಿಯೂ ಮುಳುಗದ೦ತಿರುವುದು


ಮತ್ತೊ೦ದು ವಿಧ!


ಮುಳುಗಲೂ ಬೇಕು, ಎದ್ದು ಬರಲೂ ಬೇಕು


ಜೀವನಕ್ಕೊ೦ದು ನೆಮ್ಮದಿ ಬೇಕು.


ಕತ್ತಲ ಗುಹೆಯೊಳಗಿನ ಒ೦ದು


ಸಣ್ಣ ಬೆಳಕಿನ ಕಿ೦ಡಿಯ೦ತೆ


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೂಪರ್ ಸರ್ "ಭೂತದ ಚಿ೦ತೆಯೇ ವರ್ತಮಾನದ ಹಾದಿಗೆ ತೊಡಕಾದರೆ,ಭವಿಷ್ಯದ ಕನಸಿಗೆಲ್ಲಿ ಹಾದಿ?" ಸಾಲುಗಳು ತುಂಬಾ ಹಿಡಿಸಿತು ಕಾಮತ್ ಕುಂಬ್ಳೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊದು ನಾವಡರವರೆ..ಈ ಎಡರು ತೊಡರಿನಲ್ಲೆ ಜೀವನ ಅಲ್ವೆ..ಆದರು ಎಲ್ಲೋ ಬೆಳಕಿನ ಕಿಂಡಿ ಇದೆ ಎಂತಲೆ ನಾವೆಲ್ಲ ಸಾಗುವುದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಚಿ೦ತೆಗೆ ಹಚ್ಚುವ ಕವನ ನೀಡಿರುವಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಾಸರ "ಈಸಬೇಕು ಇದ್ದು ಜಯಿಸಬೇಕು" ನುಡಿಗೆ ತಕ್ಕಂತಿದೆ ಕವನ. ಚಿಂತೆಗೆ ಹಚ್ಚುವ ಕವನ ರಾಘಣ್ಣ... <ಮುಳುಗುವುದು ಒ೦ದು ವಿಧವಾದರೆ ಮುಳುಗಿಯೂ ಮುಳುಗದ೦ತಿರುವುದು ಮತ್ತೊ೦ದು ವಿಧ!> ನಿಜಕ್ಕೂ ಸತ್ಯವಾದ ಮಾತು, ಜೀವನದಲ್ಲಿ ಎಲ್ಲವನ್ನು ಹಚ್ಚಿಕೊಂಡು, ಹಚ್ಚಿಕೊಳ್ಳದೆ ಇರುವ ಕಲೆ ಸಿದ್ಧಿಸುವುದು ಬಹಳ ಕಠಿಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಮುಳುಗಲೂ ಬೇಕು, ಎದ್ದು ಬರಲೂ ಬೇಕು>>> ಉತ್ತಮ ಕವನ ರಾಯರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ! ಸತ್ಯವೆಂದೆನಿಸುವ ಮಾತುಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಉವಾಚವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಕಾಮತರು,ಮಾಲತಿ,ಕಾರ್ತಿಕ್,ಗೋಪಿನಾಥರಾಯರು,ಮ೦ಜಣ್ಣ ಹಾಗೂ ಆಚಾರ್ಯರಿಗೆ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.