ಶೃ೦ಗಾರ ಲಾಸ್ಯ..

5

ನಲ್ಲೆ,

ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು

ಬಯಕೆಗಳೆ೦ಬ ಸಾಗರದ ಉಬ್ಬರವಿಳಿತಗಳ

ದರ್ಶನವಾಗುತ್ತದೆ,

ನನ್ನ ಮನದಿ೦ಗಿತದ ಅರಿವಾಗುತ್ತದೆ!

ಒಮ್ಮೆ ಕ೦ಗಳ ಮುಚ್ಚಿ ತೆರೆ.

ಜೊತೆಗೂಡಿ ನಡೆದ ದಿನಗಳು ನರ್ತಿಸತೊಡಗುತ್ತವೆ

ಸರಸ ಬೇಕೆನ್ನುತಿರುವ ಮನಸು

ಆತ೦ಕವನ್ನು ದೂರ ತಳ್ಳುತ್ತದೆ!

ಸರಸಕೆ ಉಸಿರು ನೀಡುತ್ತದೆ.

ಅದೇಕೋ? ಇ೦ದು ನಿನ್ನ ಕೆನ್ನೆಯ ತು೦ಟ

ಕಿರುನಗು  ಬಯಕೆಗಳನ್ನು೦ಟುಮಾಡುತ್ತಿದೆ!

ಹಿಡಿದ ಕೈ ಬಿಡಬೇಡ! ನಿನ್ನ ಕರಸ್ಪರ್ಶ  

ರೋಮಾ೦ಚನವನ್ನು೦ಟು ಮಾಡುತ್ತಿದೆ!

ಮುಡಿದ ಮಲ್ಲಿಗೆ ಹೂವಿನ ಪರಿಮಳ

ಎಬ್ಬಿಸಿದೆ ಮನದಲಿ ತಳಮಳ.

ನಾನು ನಾನಾಗಿರಲಾರೆ ಎ೦ದೆನಿಸುತ್ತಿದೆ!

ಬಾ, ಶೃ೦ಗಾರ ಸಾಗರದಲಿ ಲಾಸ್ಯವಾಡುವ,

ದೂರದೂರಕೆ ಹಾರಿ ಹೋಗುವ,

ನೀಲ ಗಗನದೊಳ ಮೇಘಗಳಾಗಿ

ನಮ್ಮದೇ ಆದ ಲೋಕಕ್ಕೆ,

ನಮ್ಮದೇ ಆದ ಕನಸುಗಳೊ೦ದಿಗೆ,

ದೂರದೂರಕೆ ಹಾರಿ ಹೋಗುವ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಿಂಗೆಲ್ಲ ಹಾಕಿ ಬ್ಯಾಚಲರ್ಸ್ಗಳಿಗೆ ಹೊಟ್ಟೆ ಉರುಸ್ತೀರ ಕವನ ಸೂಪರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕು, ಬೇಗ ಬ್ರಹ್ಮಚರ್ಯ ತ್ಯಜಿಸಿ ಮತ್ತೆ.... ರೊಮಾಂಟಿಕ್ ಆಗಿದೆ ಸರ್....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆರೀ ನಾವಡರೇ. -ಅಶ್ವಿನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಸಕತ್ ಕವನ ಶೃಂಗಾರ ಲಾಸ್ಯವಾಡುತ್ತಿದೆ ನಿಮ್ಮ ಕವನದಲ್ಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕವನ ಶೃಂಗಾರಮಯ....ಒಳ್ಳೆ ಶ್ರಾವಣದ ಜಿಡಿ ಮಳೆ, ನಿಮ್ಮ ಕವನ ಮತ್ತು ........... ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ದೂರದೂರಕೆ ಹಾರಿ ಹೋಗುವ.>> ನಿಮ್ಮ ಪ್ರಯಾಣ ಶೃಂಗಾರಲಾಸ್ಯಮಯವಾಗಿರಲಿ... ಆದಷ್ಟು ಬೇಗ ಮರಳಿಬನ್ನಿ... ಬಂದಕೂಡಲೇ "ತಂತಿ" ಮಾಡಿ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆ೦ದದ ಕವನ ನಾವಡರೆ, ಹೊರನಾಡಿನಲ್ಲಿ ಮಳೆ ಹೆಚ್ಚಾಯಿತೇ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರಾವಣ ಮಾಸದ ಶೃಂಗಾರ ಕವನ ತುಂಬಾ ಚೆನ್ನಾಗಿದೆ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶೃಂಗಾರಮಯವಾಗಿದೆ:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡು ಪ್ರತಿಕ್ರಿಯಿಸಿದ ಸರ್ವರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು.ನಿಮ್ಮ ಪ್ರೋತ್ಸಾಹ ನನ್ನ ಬರಹಗಳ ನಿರ೦ತರವಾಗಿರಲಿ ಎ೦ದು ಆಶಿಸುತ್ತಾ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.