ಮ೦ಜು ಮುಸುಕಿದ ಮಬ್ಬು...

2

ಶಿಖರದ ಮೇಲೆ  ನಿ೦ತು ಒಮ್ಮೆ

ಕೆಳಗೆ ಕಣ್ಣು ಹಾಯಿಸಿದಾಗ

ಕ೦ಡದ್ದು ನನಗೊ೦ದು ಮಹಾಪ್ರಪಾತ!

ಮನುಜರ ನಡುವಿನ ಬೀಭತ್ಸ ಹೋರಾಟ! 

ನೆತ್ತರ ನದಿಯ ಭೋರ್ಗರೆತ!

ಮೂಗಿಗೆ ಬಡಿದದ್ದು

ನೆತ್ತರ ಕಮಟು ವಾಸನೆ!

ಶವಗಳ ಸಾಲು ಸಾಲು!

ತನಗಾಗಿ, ತನಗಲ್ಲದ್ದಕ್ಕಾಗಿ

ಕಣ್ಣೀರು ಸುರಿಸುವ ಧರೆ!

ನೆತ್ತರ ನಡುವೆ ಅಡಗಿಹ

ಕಣ್ಣೀರ ಬಿ೦ದುಗಳು!  

ಶಿಖರ ಮುಟ್ಟುವ ತವಕದಲಿ

ತಳವನೇ ಕೊರೆದ ಆಸೆ-ಆಕಾ೦ಕ್ಷೆಗಳು!

ನಾನು-ನನ್ನದೆ೦ಬ ಹುಸಿ ನಿರೀಕ್ಷೆಯಲ್ಲಿ

ವ್ಯಾಪ್ತಿಯನರುಹುತಿಹ ಗಡಿರೇಖೆಗಳು!

ಎಲ್ಲಿ ಹೋದವು ಮಾನವೀಯತೆಯಿ೦ದ

ಮಿಡಿಯುವ ಹೃದಯಗಳು?

ಪ್ರತಿ ಮು೦ಜಾವಿನ ಅರುಣ ಕಿರಣಗಳಲಿ

ಹೊಸತೊ೦ದನ್ನು ಹುಡುಕುವ ತವಕ!

ಎಲ್ಲಿಹುದು ಬಾಳಿನ ದಾರಿದೀಪವಿ೦ದು?

ಒಮ್ಮೆಯಾದರೂ ಕ೦ಡೇನೇ  ಮ೦ದಹಾಸದ

ಶಾ೦ತ ಮುಖ ಮುದ್ರೆಯನು?

ಮ೦ಜು ಮುಸುಕಿದ ಮಬ್ಬಿನಲಿ

ಕೈ ಹಿಡಿದು ನಡೆಸುವ ಆ ನ೦ಬಿಕೆಯನು?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಲ್ಲದಕ್ಕೂ ಮುಖ್ಯ ನಂಬಿಗೆ, ವಿಶ್ವಾಸ ಮತ್ತು ಪ್ರೀತಿ ಇವಿಲ್ಲದಿರೆ ಬೇರೆ ಏನೂ ಇಲ್ಲ ಉತ್ತಮ ಕವನ ರಾಯರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಮು೦ಜಾನೆಯ ಮೊದಲ ನೋಟಕ್ಕೆ ಸ೦ಪದದಲ್ಲಿ <<ಕ೦ಡದ್ದು ನನಗೊ೦ದು ಮಹಾಪ್ರಪಾತ!>> ಕವನ ಚೆನ್ನಾಗಿದೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪದಗಳ ಜೋಡಣೆ ತುಂಬಾ ಇಷ್ಟ. ಒಳ್ಳೆಯ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಿದ್ದವು ಮಾನವೀಯತೆಯ ಹೃದಯಗಳು ಇನ್ನೊಬ್ಬರಿಗಾಗಿ ಬರೆದಂತಹ ಶಾಸ್ತ್ರಗಳು, ಎಷ್ಟೆಂದು ಇನ್ನೊಬ್ಬನನ್ನು ತಡೆಗಟ್ಟಿಯಾವು. ಶಾಂತ ನೀತಿ ಕಲಿಸಿದಾತನ ಹೆಸರಲ್ಲೇ ನಡೆಯುತ್ತದೆ ರಕ್ತಪಾತ ವರುಷಗಳಿಂದ ನಮ್ಮೊಳಗಿನ ನಮ್ಮತನವ ಮಾರುವ ನಮಗೆ ಇನ್ನೆಲ್ಲಿಯ ನಾಚಿಕೆ! ನೆತ್ತರ ವಾಸನೆಯಡಿ ನಿಂತು ಇದು ಅರ್ಥವಾಗುತ್ತಿದೆ ಇದೇ ಬದುಕು, ಇದನ್ನು ಬಿಟ್ಟು ನಿಂತಹ ಜಗತ್ತು ಕಣ್ಣಿಗೆ ಕಾಣುವುದೇ ಇಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ನಮಸ್ಕಾರ. ಗಂಭೀರ ವಿಷಯದೊಂದಿಗೆ ಕವನ ತುಂಬಾ ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರರೇ, ಮಾನವೀಯತೆಗಾಗಿ ಮಿಡುಕುವ ಜೀವಗಳು ಇವೆ ಎಂಬುದಕ್ಕೆ ನಿಮ್ಮ ಕವನ ಮತ್ತು ಅದಕ್ಕೆ ಪ್ರತಿಕ್ರಿಯಿಸುವವರೇ ಸಾಕ್ಷಿ. ಆದರೆ ಮಿಡಿಯುವ ಹೃದಯಗಳ ಬಡಿತ ಕೇಳುವವರಾರು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಎಲ್ಲಿ ಹೋದವು ಮಾನವೀಯತೆಯಿ೦ದ ಮಿಡಿಯುವ ಹೃದಯಗಳು?>>> ಈ ಪ್ರೆಶ್ನೆ ಬಹಳ ಪ್ರಸ್ತುತವೆನಿಸಿತು... ಕವನ ಚೆನ್ನಾಗೈತೆ.... ಶಫಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮೆಚ್ಚಿ ಪ್ರತಿಕ್ರಿಯಿಸಿದ ಗೋಪಿನಾಥರು, ಸುಬ್ರಹ್ಮಣ್ಯ ಮಾಚಿಕೊಪ್ಪರು, ಮ೦ಜು, ಚಿಕ್ಕು, ಆಚಾರ್ಯರು,ಕವಿನಾಗರಾಜರು ಹಾಗೂ ಶಫಿಯವರು ಎಲ್ಲರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೆಯೇ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.