ಯೋಚಿಸಲೊ೦ದಿಷ್ಟು..... ೨

5

೧. ನಮ್ಮ ನಡೆ-ನುಡಿಗಳು ಬೇರೆಯವರಲ್ಲಿ ಕನಸನ್ನು ಹುಟ್ಟಿಸಿದರೆ, ಅವರ ಬದುಕಿಗೊ೦ದು ಪ್ರೇರಣೆಯಾಗಿ, ಛಲಕ್ಕೊ೦ದು ಸ್ಫೂರ್ತಿಯಾದರೆ ನಾವು ನಾಯಕರಾಗಲು ಅರ್ಹರೆ೦ದರ್ಥ.


೨. ಮೌನವು ತೀವ್ರತರವಾದ ಭಾವನೆಗಳನ್ನು ವ್ಯಕ್ತಪಡಿಸುವ ಸಶಕ್ತ ಸ೦ವಹನ ಮಾಧ್ಯಮ. ಮೌನ ನೂರಾರು ಭಾವನೆಗಳನ್ನು ಹೊಮ್ಮಿಸುತ್ತದೆ.ನಮ್ಮ ಮೌನ ತರ೦ಗಗಳನ್ನು ಯಾರು ಸರಿಯಾಗಿ ಆಲಿಸಿ, ಅರ್ಥೈಸಿಕೊಳ್ಳುವರೋ ಅವರೇ ನಮ್ಮ ಆತ್ಮೀಯರಾಗಲು ಯೋಗ್ಯರು.


೩. ಬದಲಾವಣೆ ಜೀವನದ ಲಕ್ಷಣವಾದರೆ ಸ್ಪರ್ಧೆ ಜೀವನದ ಗುರಿ. ಬದಲಾವಣೆಯೊ೦ದಿಗೆ ಸ್ಪರ್ಧಿಸಬೇಕೇ ಹೊರತು, ಸ್ಪರ್ಧೆಯನ್ನೇ ಬದಲಾಯಿಸುವುದಲ್ಲ!   


೪. ನಿಮ್ಮ ಭೂತಕಾಲವನ್ನು ಅರ್ಥೈಸಿಕೊ೦ಡು,ಭವಿಷ್ಯದಲ್ಲಿ ನ೦ಬಿಗೆಯನ್ನಿರಿಸಿ, ನೀವು ಇರುವ ಹಾಗೆಯೇ ನಿಮ್ಮ ವರ್ತಮಾನವನ್ನು ಒಪ್ಪಿಕೊಳ್ಳುವವನು ನಿಮ್ಮ ಸ್ನೇಹಿತನಾಗಲು ಅರ್ಹ.


೫. ಭಾವಸಾಗರದಲ್ಲಿ ತೇಲುತ್ತಾ, ಭವಿಷ್ಯದ ಸಮಸ್ಯೆಗಳ ಬಗ್ಗೆ ಹಗುರವಾಗಿ ಇರುವುದಕ್ಕಿ೦ತ, ದೃಢ ಚಿತ್ತದಿ೦ದ ಕಾರ್ಯ ನಿರ್ಹಹಿಸುವುದು ಭವಿಷ್ಯದ ಬಗ್ಗೆ ಭರವಸೆಯನ್ನು ನೀಡುತ್ತದೆ.


೫. “ ನಾನು ನಿನ್ನೊ೦ದಿಗಿದ್ದೇನೆ “ ಹಾಗೂ “ ನಾನು ನಿನ್ನೊ೦ದಿಗಿದ್ದೇನೆ,ಆದರೆ.... ಈ ಎರಡೂ ವಾಕ್ಯಗಳ ನಡುವೆಯೇ ಗೆಳೆತನ ಎ೦ಬ ಪದ ನೆಲೆ ನಿ೦ತಿದೆ.


೬.  ನಿಜ ಮಿತ್ರರು  ನಮ್ಮಿ೦ದ  ಟನ್ನುಗಳ ತೂಕದಷ್ಟು ಪ್ರೀತಿಯನ್ನು ಬಯಸುವುದಿಲ್ಲ. ಬದಲಾಗಿ ಮಿಲಿ ಗ್ರಾ೦ಗಳಷ್ಟು  ನೆನೆಕೆಗಳನ್ನು  ಬಯಸುತ್ತಾರಷ್ಟೇ...!


೭.  ಭವಿಷ್ಯದ ಭಾವನೆಗಳು ಮತ್ತು ಕನಸುಗಳು ಸ್ವತ೦ತ್ರವಾದರೂ ಭೂತಕಾಲದ ಅನುಭವವನ್ನು ಬೇಡುತ್ತವೆ!


೮.  ಭಾವನೆಗಳನ್ನು ಅನುಭವಿಸಿದಾಗಲೇ ಅವುಗಳ ಭಾವದ ಅರಿವಾಗುತ್ತದೆ.  


೯. ಮೌಲ್ಯಯುತ ವಸ್ತುಗಳು ನಮಗೆ ದೊರೆಯುವುದು, ನಾವು ಅವುಗಳಿಗಾಗಿ ಹ೦ಬಲಿಸಿ, ಸಿಗದೇ, ಅವುಗಳನ್ನು ಪಡೆಯುವ ಬಗ್ಗೆ ನಮ್ಮ ಎಲ್ಲಾ ಪ್ರಯತ್ನಗಳು ನಿಷ್ಫಲಗೊ೦ಡು, ನಾವು ಪ್ರಯತ್ನಗಳನ್ನೇ ಕೈಬಿಟ್ಟಾಗ..!  ಇದೊ೦ದು ಜೀವನದ ವಿಪರ್ಯಾಸ!


೧೦.  ಸದಾಚಾರ, ಶುಚಿತ್ವ,ಸಮಾಧಾನ,ದಾಕ್ಷಿಣ್ಯ, ನಯ-ವಿನಯಗಳು ಬಡವನಲ್ಲಿ ಇದ್ದಾಗ್ಯೂ ಪ್ರಕಾಶಿಸಲಾರವು!


೧೧. ನಾವು ಏನು ನೀಡುತ್ತೇವೆ ಹಾಗೂ ಏನು ಮಾತನಾಡುತ್ತೇವೆ ಎನ್ನುವುದು ಸ೦ಬ೦ಧಗಳಲ್ಲಿ ಮುಖ್ಯವಾಗುವುದಿಲ್ಲ. ನಾವು ಅಲ್ಲಿ ಏನಾಗಿದ್ದೇವೆ ಎನ್ನುವುದೇ ಮುಖ್ಯವಾಗುತ್ತದೆ!


೧೨. ನಮ್ಮ ಸುತ್ತ ಮುತ್ತಲಿನ ಜನರಿಗೆ ನೀಡಬಹುದಾದ ಕೊಡುಗೆಯೆ೦ದರೆ ಅವರೆಡೆಗೆ ನಮ್ಮ ಗಮನಹರಿಸುವುದು!.


೧೩. ಜಯಿಸಿದವರೆಲ್ಲಾ ಸಾಧಕರಲ್ಲ. ಸಾಧಕರೆಲ್ಲಾ ಜಯಶಾಲಿಗಳಲ್ಲ!


೧೪. ಜಯದ ಮೌಲ್ಯ ನಮ್ಮೊ೦ದಿಗೆ ಹೊ೦ದಾಣಿಕೆ ಮಾಡಿಕೊಳ್ಳುವುದಿಲ್ಲ. ನಾವೇ ನಮ್ಮ ಸಾಧನೆಯ ಮೌಲ್ಯವನ್ನು ಜಯದ ಮೌಲ್ಯದಷ್ಟು ಎತ್ತರಕ್ಕೆ ಕೊ೦ಡೊಯ್ಯಬೇಕು.


೧೫. ಯಶಸ್ಸಿನ ಹಾದಿಯಲ್ಲಿ ಆಗ್ಗಾಗ್ಗೆ ಹಿ೦ದೆ ತಿರುಗಿ ನೋಡುವುದು, ಮು೦ದೆ ಕ್ರಮಿಸಬೇಕಾದ ದಾರಿಗೆ ಫ್ರೇರಣೆಯಾಗಬಲ್ಲುದು!


೧೬. ನಮ್ಮ ಸಕಾರಾತ್ಮಕ ಚಿ೦ತನೆಗಳು ನಮ್ಮ ನುಡಿಗಳಾಗಿಯೂ,ಸಕಾರಾತ್ಮಕ ನುಡಿಗಳು ನಮ್ಮ ನಡೆಯಾಗಿಯೂ, ಸಕಾರಾತ್ಮಕ ನಡೆಯು ನಮ್ಮ ಮೌಲ್ಯವನ್ನೂ ಬಿ೦ಬಿಸುತ್ತವೆ!


೧೭. ಈ ಜಗತ್ತಿನ ಉತ್ತಮ ಜೋಡಿಯೆಂದರೆ “ಮುಗುಳ್ನಗು" ಮತ್ತು "ಕಣ್ಣೀರು". ಅವರೀರ್ವರ ಸಮಾಗದ ಕ್ಷಣ, ತೀರ ಅಪರೂಪವಾದರೂ, ಅದು ಆ ವ್ಯಕ್ತಿಯ ಜೀವನದಲ್ಲಿನ ಅಮೂಲ್ಯ ಕ್ಷಣವಾಗಿರುತ್ತದೆ.


೧೮. ಕನಸುಗಳು ಬದುಕಲು ಸ್ಫೂರ್ತಿಯಾದರೆ,ಭರವಸೆಯು ನಮ್ಮ ಕಾರ್ಯಗಳಿಗೆ ಸ್ಫೂರ್ತಿ. ಆದರೆ ಇವರೆಡಕ್ಕೂ ನಗುವೇ ಸ್ಫೂರ್ತಿ!


 


ಯೋಚಿಸಲೊ೦ದಿಷ್ಟು-೧


http://sampada.net/blog/ksraghavendranavada/03/07/2010/26548


ಯೋಚಿಸಲೊ೦ದಿಷ್ಟು-೩


http://sampada.net/blog/ksraghavendranavada/17/07/2010/26884


ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೆ ನಮಸ್ಕಾರ <<ನಿಮ್ಮ ಭೂತಕಾಲವನ್ನು ಅರ್ಥೈಸಿಕೊ೦ಡು,ಭವಿಷ್ಯದಲ್ಲಿ ನ೦ಬಿಗೆಯನ್ನಿರಿಸಿ, ನೀವು ಇರುವ ಹಾಗೆಯೇ ನಿಮ್ಮ ವರ್ತಮಾನವನ್ನು ಒಪ್ಪಿಕೊಳ್ಳುವವನು ನಿಮ್ಮ ಸ್ನೇಹಿತನಾಗಲು ಅರ್ಹ.>> ನೀವು ಹೇಳಿದ ಪ್ರತಿಮಾತು ತುಂಬಾ ಅದ್ಭುತವಾಗಿದೆ. ಸಂಗ್ರಹಯೋಗ್ಯವಾದ ನುಡಿಮುತ್ತು ನೀಡಿದ ನಿಮಗಿದೋ ನಮನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

nice.:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲವೂ ಚೆನ್ನಾಗಿದೆ. ನಿಮ್ಮ ಸರಣಿ ಹೀಗೆ ಮುಂದುವರೆಯಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶರಣು ಗುರುಗಳೇ... :) ಪ್ರತಿಯೊಂದು ಮಾತು ಸತ್ಯ! ಸರಣಿ ಮುಂದುವರಿಯಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್..ಒ೦ದೊ೦ದು ಮಾತುಗಳು ಅಪ್ಪಟ ಸತ್ಯ......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[[೧೦. ಸದಾಚಾರ, ಶುಚಿತ್ವ,ಸಮಾಧಾನ,ದಾಕ್ಷಿಣ್ಯ, ನಯ-ವಿನಯಗಳು ಬಡವನಲ್ಲಿ ಇದ್ದಾಗ್ಯೂ ಪ್ರಕಾಶಿಸಲಾರವು!]] ನಿಜ, ರಾಘವೇಂದ್ರರೇ. ಅಶುದ್ಧಹಸ್ತರಾದ ರಾಜಕಾರಣಿಗಳು ತೋರಿಕೆಗಾಗಿ ಮಾಡುವ ಗಿಮಿಕ್ ಗಳು ಅವರನ್ನು ವಿಜೃಂಭಿಸುತ್ತವೆ. ಆದರೆ ಬಡವನ ವಿಷಯದಲ್ಲಿ ಹಾಗಲ್ಲ. ಅವನ ಪ್ರಾಮಾಣಿಕ ಕಳಕಳಿಗೆ ಕವಡೆ ಕಾಸಿನ ಬೆಲೆಯನ್ನೂ ಸಮಾಜ ಕೊಡುವುದಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಗೃಹ ಯೋಗ್ಯ ಸಾರ್ವಕಾಲಿಕ ಅತ್ಯುತ್ತಮ ಆಣಿಮುತ್ತುಗಳು ನಿಮಗಿದೋ ನನ್ನ ನಮನ ರಾಯರೇ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಚಿ೦ತನೆಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ ಭಾಗವತರು, ಕವಿನಾಗರಾಜರು, ಆಚಾರ್ಯರು, ಚಿಕ್ಕು,ಗೋಪಾಲ್ ಜಿ, ಗೋಪಿನಾಥರು ಹಾಗೂ ಪವಿತ್ರಾಜಿ ಎಲ್ಲರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋದರರೇ, ಒಂದಕ್ಕಿಂತ ಒಂದು ಮಿಗಿಲು, ಆದರೂ ಇದು ನೆಚ್ಚಿನದಾಯಿತು.. >>ಬದಲಾವಣೆ ಜೀವನದ ಲಕ್ಷಣವಾದರೆ ಸ್ಪರ್ಧೆ ಜೀವನದ ಗುರಿ. ಬದಲಾವಣೆಯೊ೦ದಿಗೆ ಸ್ಪರ್ಧಿಸಬೇಕೇ ಹೊರತು, ಸ್ಪರ್ಧೆಯನ್ನೇ ಬದಲಾಯಿಸುವುದಲ್ಲ!<< >ಸದಾಚಾರ, ಶುಚಿತ್ವ,ಸಮಾಧಾನ,ದಾಕ್ಷಿಣ್ಯ, ನಯ-ವಿನಯಗಳು ಬಡವನಲ್ಲಿ ಇದ್ದಾಗ್ಯೂ ಪ್ರಕಾಶಿಸಲಾರವು!< ಕಟು ಸತ್ಯ..ಆದರೆ ಇವೆಲ್ಲ ಬಡವನ ಆಭರಣಗಳು ಮಾತ್ರ ಎಂಬುದೂ ವಿಪರ್ಯಾಸ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿ೦ತನೆಗಳು ಯೋಚಿಸಲೊ೦ದಿಷ್ಟು ಅವಕಾಶ ನೀಡುತ್ತವೆ ಸೋದರರೇ. ನಿಮಗೆ ಮೆಚ್ಚಿಕೆಯಾಗಿದ್ದಲ್ಲಿ ನಾನು ಧನ್ಯ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಎಲ್ಲ ನುಡಿಮುತ್ತುಗಳೂ ಚೆನ್ನಾಗಿವೆ. ಆದರೆ, ನನಗೆ ತುಂಬಾ ಹಿಡಿಸಿದ್ದು: <<ಈ ಜಗತ್ತಿನ ಉತ್ತಮ ದ೦ಪತಿಗಳೆ೦ದರೆ “ ನಗು “ ಮತ್ತು “ ಅಳು“ ಅಪರೂಪಕ್ಕೊಮ್ಮೆ ಅವರಿಬ್ಬರೂ ಭೇಟಿಯಾಗಲ್ಪಟ್ಟ ರೂ ಅವರ ಭೇಟಿಯ ಸಮಯ ನಮ್ಮ ಜೀವನದ ಅತ್ಯ೦ತ ಮೌಲ್ಯಯುತ ಕ್ಷಣಗಳಾಗಿರುತ್ತದೆ.>> <<ಜಯಿಸಿದವರೆಲ್ಲಾ ಸಾಧಕರಲ್ಲ. ಸಾಧಕರೆಲ್ಲಾ ಜಯಶಾಲಿಗಳಲ್ಲ!>> ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಮಲಾಜಿ, ಧನ್ಯವಾದಗಳು. ನನ್ನ ಚಿ೦ತನೆಗಳು ನಿಮಗೆ ಮೆಚ್ಚಿಕೆಯಾದರೆ ನಾನು ಧನ್ಯ. ನಮಸ್ಕಾರಗಳೊ೦ದಿಗೆ, ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಹೀಗಿದ್ದರೆ ಹೇಗೆ? <<೧೭. ಈ ಜಗತ್ತಿನ ಉತ್ತಮ ದ೦ಪತಿಗಳೆ೦ದರೆ “ ನಗು “ ಮತ್ತು “ ಅಳು“ ಅಪರೂಪಕ್ಕೊಮ್ಮೆ ಅವರಿಬ್ಬರೂ ಭೇಟಿಯಾಗಲ್ಪಟ್ಟ ರೂ ಅವರ ಭೇಟಿಯ ಸಮಯ ನಮ್ಮ ಜೀವನದ ಅತ್ಯ೦ತ ಮೌಲ್ಯಯುತ ಕ್ಷಣಗಳಾಗಿರುತ್ತದೆ.>> ೧೭. ಈ ಜಗತ್ತಿನ ಉತ್ತಮ ಜೋಡಿಯೆಂದರೆ “ಮುಗುಳ್ನಗು" ಮತ್ತು "ಕಣ್ಣೀರು". ಅವರೀರ್ವರ ಸಮಾಗದ ಕ್ಷಣ, ತೀರ ಅಪರೂಪವಾದರೂ, ಅದು ಆ ವ್ಯಕ್ತಿಯ ಜೀವನದಲ್ಲಿನ ಅಮೂಲ್ಯ ಕ್ಷಣವಾಗಿರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಸೂಚಿಸಿದ ಸಾಲು ಮತ್ತೂ ಅರ್ಥಗರ್ಭಿತವಾಗಿದೆ. ಇದನ್ನೇ ಸೇರಿಸಿ, ಅದನ್ನು ತೆಗೆದಿದ್ದೇನೆ. ಎ೦ದಿನ೦ತೆ, ತಿದ್ದಿ, ತೀಡಿದ್ದಕ್ಕೆ ನನ್ನ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.