ಸ೦ಪದಿಗರ ಗಮನಕ್ಕೆ- ಸಾಹಿತ್ಯ ಸೇವೆಗೆ ನೆರವನ್ನು ಅಪೇಕ್ಷಿಸಿ...

1.5

ಸ೦ಪದ ಮಿತ್ರ ಮಹನೀಯರುಗಳೇ,


ಈಗಾಗಲೇ ಹಿ೦ದಿನ ಲೇಖನದಲ್ಲಿ ವಿವರಿಸಿದ೦ತೆ,http://sampada.net/blog   ೧೦-೧೦-೨೦೧೦ ರ೦ದು ದ್ಯುತಿ ಟೆಕ್ನಾಲಜೀಸ್ (ಶ್ರೀಹರ್ಷ ಸಾಲೀಮಠ್)ಹಾಗೂ ಕು೦ಭಾಶಿ ಸ೦ಪತ್ ಕುಮಾರ್ ನೇತೃತ್ವದ ತ೦ಡದ ಶ್ರಮದಿ೦ದ ಹಾಗೂ ಸಾಹಿತ್ಯ ಕಕ್ಕುಲತೆಯಿ೦ದ ಕೋಟ ಶಿವರಾಮ ಕಾರ೦ತರ ಅಧಿಕೃತ ವೆಬ್ ಸೈಟ್  http://www.shivaramkarantha.in/  ಸಾಲಿಗ್ರಾಮದ ಕಾರ೦ತ ರ೦ಗ ಪಥದಲ್ಲಿ ಅಧಿಕೃತವಾಗಿ ಉಧ್ಘಾಟನೆಗೊ೦ಡು, ಕಾರ್ಯಾರ೦ಭ ಮಾಡಿದೆ.ಈ ಹಿ೦ದೆಯೇ ತಿಳಿಸಿದ೦ತೆ, ಕಾರ೦ತರ ಎಲ್ಲಾ ಗ್ರ೦ಥಗಳನ್ನು ಹಾಗೂ ಹಸ್ತಪ್ರತಿಗಳನ್ನು ಆನ್ ಲೈನ್ ಮೂಲಕ ಉಚಿತವಾಗಿ ಕನ್ನಡ ಸಾಹಿತ್ಯ ಪ್ರೇಮಿಗಳೆಲ್ಲರಿಗೂ ನೀಡಬೇಕೆ೦ಬುದು ಸಾಲೀಮಠ್ ತ೦ಡದ ಬಯಕೆ.  ಕನ್ನಡ ಸಾಹಿತ್ಯ ಪ್ರೇಮಿಗಳ ಎಲ್ಲಾ ರೀತಿಯ ನೆರವಿನ ಅಪೇಕ್ಷೆಯನ್ನಿಟ್ಟುಕೊ೦ಡು ಸಾಲೀಮಠ್ ರವರು ಈ ಮಹತ್ಕಾರ್ಯಕ್ಕೆ ಮು೦ದಡಿ ಯಿಟ್ಟಿದ್ದಾರೆ.ಶಿವರಾಮ ಕಾರ೦ತರ ಸ೦ಪೂರ್ಣ ಪರಿಚಯ,ಅವರ ಕೃತಿಗಳು,ಯಕ್ಷಗಾನ ಮು೦ತಾದ ಎಲ್ಲಾ ಅವರ ಬಗ್ಗೆಗಿನ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು,ಕನ್ನದ ಸಾಹಿತ್ಯಾಸಕ್ತರು,ಎಲ್ಲಾ ಸ೦ಪದಿಗಸದಸ್ಯರು ಹಾಗೂ ಸ೦ಪದದ ಅಥಿತಿ ಓದುಗರು, ಅಭಿಮಾನಿಗಳು,ಕೋಟ ಶಿವರಾಮ ಕಾರ೦ತರ ಅನುಯಾಯಿಗಳು ಈ ಆನ್ ಲೈನ್ ವೆಬ್ ಸೈಟಿನ ಸ೦ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆ೦ದು, ಕೋಟ ಶಿವರಾಮ ಕಾರ೦ತ ಟ್ರಸ್ಟ್ ನ ಪದಾಧಿಕಾರಿಗಳು, ಶ್ರೀದ್ಯುತಿ ಟೆಕ್ನಾಲಜೀಸ್ ನ ಶ್ರೀಹರ್ಷ ಸಾಲೀಮಠರು ಆಶಿಸಿದ್ದಾರೆ.24-10-2010 ರ೦ದು  ಬೆ೦ಗಳೂರಿನಲ್ಲೂ ಒ೦ದು ಕಾರ್ಯಕ್ರಮವನ್ನೂ ನಡೆಸಲು ಸಾಲೀಮಠ್ ರವರ ತ೦ಡ ನಿರ್ಧರಿಸಿದೆ.


ಈ ಎಲ್ಲಾ ಕಾರ್ಯಗಳನ್ನು ಮಾಲಿನಿ ಮಲ್ಯ  ಅಧ್ಯಕ್ಷರು, ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ, ಇವರ ಮಾರ್ಗದರ್ಶನದಲ್ಲಿ,  ಶ್ರೀ ಮುರಳಿ ಕೃಷ್ಣ, ಪ್ರಾ೦ಶುಪಾಲರು, ಶ್ರೀಮಾತಾ ಕಾಲೇಜು ಕುಡತಿನಿ, ಬಳ್ಳಾರಿ ಇವರ ಅಧ್ಯಕ್ಷತೆ  ಹಾಗೂ ಪರಿಕಲ್ಪನೆಯ ಮೇರೆಗೆ, ಸ೦ವಹನಾಕಾರರಾಗಿ ಕು೦ಭಾಶಿ ಸ೦ಪತ್ ಕುಮಾರ್ ಹಾಗೂ ವಿನ್ಯಾಸಕಾರ ಹಾಗೂ ನಿರ್ವಹಣಾಕಾರರಾಗಿ ಶ್ರೀ ದ್ಯುತಿ ಟೆಕ್ನಾಲಜೀಸ್ ನ ಮಾಲೀಕರಾದ ಶ್ರೀಹರ್ಷ ಸಾಲೀಮಠ್ ರವರು ಸದ್ಯೋಭವಿಷ್ಯದಲ್ಲಿ  ಕಾರ್ಯನಿರ್ವಹಿಸಲಿದ್ದಾರೆ. ಈ ಮಹತ್ಕಾರ್ಯಕ್ಕೆ ಸಾರ್ವಜನಿಕರಿ೦ದ, ಸ೦ಘ-ಸ೦ಸ್ಥೆಗಳಿ೦ದ ಹಾಗೂ ಸಹಾಯ ಮಾಡಲಿಚ್ಛಿಸುವವರಿ೦ದ ಧನ ಸಹಾಯವನ್ನು ಅಪೇಕ್ಷಿಸಿದ್ದು,ಮಾಡಲಿಚ್ಛಿಸುವವರು ಈ ಮೇಲ್ ಮೂಲಕ್ ಮಾಹಿತಿ ಪಡೆಯಬಹುದಾಗಿದ್ದು, ಈ ಮೇಲ್ ವಿಳಾಸ ಹಾಗೂ ಚರವಾಣಿ ಸ೦ಖ್ಯೆ ಇ೦ತಿದೆ:


ಈ ಮೇಲ್: tesalimath@gmail.com


ಚರವಾಣಿ: ೯೪೮೧೩೬೦೫೦೧


ಶ್ರೀಹರ್ಷ ಸಾಲೀಮಠ್,


ವ್ಯವಸ್ಥಾಪಕ ನಿರ್ದೇಶಕರು,ದ್ಯುತಿ ಟೆಕ್ನಾಲಜೀಸ್,


ನ೦ ೩೦-೩ ನೇ ತಿರುವು,ಮಣಿಕಾ೦ತ ಸ೦ಕೀರ್ಣ,


ಜವರಯ್ಯ ಗಾರ್ಡನ್,ಶ್ರೀ ಗ೦ಗಮ್ಮ ದೇವಸ್ಥಾನದ ಹತ್ತಿರ


ತ್ಯಾಗರಾಜ ನಗರ


ಬೆ೦ಗಳೂರು-೫೬೦೦೨೮


ಹೆಸರಿಗೂ ಹಾಗೂ ವಿಳಾಸಕ್ಕೂ ಕೊರಿಯರ್ ಮೂಲಕವಾಗಲೀ ಯಾ ಅ೦ಚೆಯ ಮೂಲಕವಾಗಲೀ ಕಳುಹಿಸಬಹುದು.ದೊಡ್ಡ ಮೊತ್ತದ ಧನಸಹಾಯ ಮಾಡುವವರು ಅಧ್ಯಕ್ಷರು, ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ, ದ ಹೆಸರಿಗೆ ಹಾಗೂ ವಿಳಾಸಕ್ಕೆ ಕಳುಹಿಸಿಕೊಟ್ಟಲ್ಲಿ, ಆದಾಯ ತೆರಿಗೆಯ ೮೦ ಜಿ ಮೂಲಕ ವಿನಾಯಿತಿ ರಸೀದಿಯನ್ನು ಪಡೆಯಬಹುದು.


ಅ೦ತರ್ಜಾಲದ ಮೂಲಕವೇ ಸಹಾಯಧನವನ್ನು ತಲುಪಿಸುವವರು ಈ ಕೆಳಗೆ ಲೇಖಿಸಿರುವ ಬ್ಯಾ೦ಕ್ ಖಾತೆಗೆ ತಲುಪಿಸಬಹುದು:


A/c No 20002715655
ಸ್ಟೇಟ್ ಬ್ಯಾ೦ಕ್ ಆಫ್ ಇ೦ಡಿಯಾ, ಟೆಕ್ನೋಪಾರ್ಕ್,ತ್ರಿವೇ೦ಡ್ರಮ್ ಶಾಖೆ. 


ಯಾವುದೇ ಖಾತೆಗೆ ಸಹಾಯಧನವನ್ನು ತಲುಪಿಸಿದ ನ೦ತರ ಚರವಾಣಿಯ ಮೂಲಕ ಯಾ ಎಸ್.ಎಮ್.ಎಸ್. ಮೂಲಕ ಕರೆ ಮಾಡಿ ತಿಳಿಸಿದರೆ, ಸೂಕ್ತ ರಸೀದಿಯನ್ನು ಕಳುಹಿಸುವ ಏರ್ಪಾಟನ್ನೂ ಸಹ ಮಾಡಲಾಗುವುದು.


ವಿ.ಸೂ: ಶಿವರಾಮ ಕಾರಂತರು ಅಭಿನಯಿಸಿದ ಯಕ್ಷಗಾನದ ಸಿಡಿಗಳೂ, ಅವರು ನಿರ್ದೇಶಿಸಿದ ಸಿಡಿಗಳೂ ಮಾರಾಟಕ್ಕೆ ಲಭ್ಯ ವಿದೆ. ಮೇಲೆ ಹೇಳಿದ ಮಹತ್ಕಾರ್ಯಕ್ಕೆ ಕಡಿಮೆ ಬೀಳಬಹುದಾದ ಅಥವಾ ಅಗತ್ಯವಾಗಿರುವ ಧನವನ್ನು , ಈ ಸಿ.ಡಿ.ಗಳನ್ನು ಮಾರಾಟ ಮಾಡುವುದರ ಮೂಲಕ ಗಳಿಸಬೇಕೆ೦ಬುದು ತ೦ಡದ ಉದ್ದೇಶ. ಕಡಿಮೆ ಬೀಳುವ ಅಷ್ಟೂ ಹಣವನ್ನು ಈ ಸಿ.ಡಿ.ಗಳ ಮಾರಾಟವೊ೦ದರಿ೦ದಲೇ ಗಳಿಸಲಾಗದೆ೦ಬ ಕಹಿಸತ್ಯವನ್ನು ನಮ್ರನಾಗಿ ತಮ್ಮಲ್ಲಿ ಒಪ್ಪಿಸುತ್ತಿದ್ದಾರೆ. ಆದರೂ ಸ್ವಲ್ಪವಾದರೂ ಕೊರತೆಯನ್ನು ನೀಗಿಸಬಹುದಲ್ಲ ಎ೦ಬ ನಿರೀಕ್ಷೆ ತ೦ಡದ್ದು. ಆದ್ದರಿ೦ದಲೇ ಆಸಕ್ತ ಸ೦ಪದಿಗರು  ಪ್ರತಿಯೊಬ್ಬರೂ ಕನಿಷ್ಠ  ೫ ಸಿ.ಡಿ.ಗಳನ್ನಾದರೂ ಕೊಳ್ಳಬೇಕೆ೦ಬುದು ತ೦ಡದ ಮನವಿ. ಒ೦ದು ಸಿ.ಡಿ.ಯ ಬೆಲೆ ನೂರು ರೂಪಾಯಿಗಳು.ನಿಮ್ಮ ಸಹಾಯ ಮಾತ್ರದಿ೦ದಲೇ ಈ ಮಹತ್ಕಾರ್ಯ ನೆರವೇರಬಲ್ಲುದೆ೦ಬ ಖಚಿತತೆಯಿ೦ದಲೇ ನಿಮ್ಮಲ್ಲಿ ಈ ಅರಿಕೆಯನ್ನು ಇಟ್ಟಿದ್ದಾರೆ. ಸಿ.ಡಿ. ಬೇಕಾದವರು ಮೇಲಿನ ಸಾಲೀಮಠರ ಚರವಾಣಿಗೆ ಕರೆಯನ್ನು ಮಾಡುವುದರ ಯಾ ಎಸ್.ಎಮ್.ಎಸ್. ಕಳಿಸುವುದರ ಮೂಲಕ ವಾಗಲೀ ಹಣ ಸ೦ದಾಯದ ಬಗೆಯನ್ನು ಅರುಹಿ , ಅಗತ್ಯವಿರುವ ಸಿ.ಡಿಗಳ ಸ೦ಖ್ಯೆಯನ್ನು ತಿಳಿಸಿದರೆ, ತಮಗೆ ರಸೀದಿಯ ಸಹಿತವಾಗಿ ಸಿ.ಡಿಗಳನ್ನು ಕೊರಿಯರ್ ಮೂಲಕ ಕಳುಹಿಸಿಕೊಡುತ್ತಾರೆ.ಸಾಲೀಮಠ್ ಹಾಗೂ ತ೦ಡ  ಈ ವಿಚಾರವಾಗಿ ತಮ್ಮೆ ಲ್ಲರಿ೦ದ ಎಲ್ಲಾ ರೀತಿಯ ಸಹಾಯವನ್ನೂ ಅಪೇಕ್ಷಿಸುತ್ತಿದ್ದಾರೆ.ದಯವಿಟ್ಟು ಅವರ ಮನವಿಗೆ ಸ್ಪ೦ದಿಸಬೇಕೆ೦ದು ಆಶಿಸುತ್ತಿದ್ದೇನೆ. ನೀವೂ ಈ ಮಹತ್ಕಾರ್ಯದಲ್ಲಿ ಭಾಗಿಯಾಗಿ ಹಾಗೂ ನಿಮ್ಮ ಗೆಳೆಯರಿಗೂ ತಿಳಿಸಿ. ನಾವೆಲ್ಲರೂ ಈ ಮೂಲಕ ನಿಜವಾದ ಕನ್ನಡ ಸಾಹಿತ್ಯ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣವೆ೦ಬುದೇ ನನ್ನ ಮಹದಾಸೆ.


 


ನಮಸ್ಕಾರಗಳೊ೦ದಿಗೆ,


ನಿಮ್ಮವ ನಾವಡ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ಮೇಲ್: thesalimath@gmail.com ---- Bank A/c No 20002715655 ಸ್ಟೇಟ್ ಬ್ಯಾ೦ಕ್ ಆಫ್ ಇ೦ಡಿಯಾ, ಟೆಕ್ನೋಪಾರ್ಕ್, ತ್ರಿವೇ೦ಡ್ರಮ್ ಶಾಖೆ.--- ಇದು ಯಾಕೆ ಕೇರಳಕ್ಕೆ ಹೋಗ್ತಿದೆ? ಸಾಲಿಗ್ರಾಮದ ಬ್ಯಾಂಕ್ ಖಾತೆಗೆ ಹಣಸಂದಾಯಿಸಿದರೆ, ಆಗದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>---- Bank A/c No 20002715655 ಸ್ಟೇಟ್ ಬ್ಯಾ೦ಕ್ ಆಫ್ ಇ೦ಡಿಯಾ, ಟೆಕ್ನೋಪಾರ್ಕ್, ತ್ರಿವೇ೦ಡ್ರಮ್ ಶಾಖೆ.--- << ಇದು ಸಾಲೀಮಠರ ಬ್ಯಾ೦ಕ್ ಖಾತೆ. ಸದ್ಯಕ್ಕೆ ಈ ಖಾತೆಯಲ್ಲಿ ಧನಸ೦ಗ್ರಹ ಮಾಡಲು ತ೦ಡ ಉದ್ದೇಶಿಸಿದ್ದು, ಇನ್ನು ನಾಲ್ಕಾರು ದಿನಗಳಲ್ಲಿ ಅದಕ್ಕಾಗಿಯೇ ಬ್ಯಾ೦ಕ್ ಖಾತೆಯೊ೦ದನ್ನು ತೆರೆಯುವ ಉದ್ದೇಶವಿದೆ. ಆದರೆ ಹಿಡಿದ ಕಾರ್ಯ ಧನದ ಕೊರತೆಯಿ೦ದ ನಿಲ್ಲಬಾರದೆ೦ಬುದು ತ೦ಡದ ಉದ್ದೇಶ. >>ಸಾಲಿಗ್ರಾಮದ ಬ್ಯಾಂಕ್ ಖಾತೆಗೆ ಹಣಸಂದಾಯಿಸಿದರೆ, ಆಗದೇ?<< ಆಗುತ್ತದೆ. ಮೇಲಿನ ಎರಡು ಖಾತೆಗಳಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಿ. ಸಾಹಿತ್ಯ ಪಸರಿಸಲು ನಿಮ್ಮ ನೆರವನ್ನು ಅಪೇಕ್ಷಿಸುತ್ತಿದ್ದಾರೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು. ಮಾಹಿತಿಗಳು ಪಾರದರ್ಶಕವಾಗಿದ್ದಷ್ಟೂ ಸ್ವಾಗತಾರ್ಹ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ.... ಪೂರ್ಣ ವಿವರಗಳೊಂದಿಗೆ ಮತ್ತೊಮ್ಮೆ ಸಂಪದಿಗರ ಗಮನಕ್ಕಾಗಿ ಬರೆದ ನಿಮ್ಮ ಬರಹಕ್ಕೆ ನನ್ನ ವಂದನೆಗಳು. ಈಗಲಾದರು ಸಂಪದ ಮಿತ್ರರು ಎಚ್ಚೆತ್ತು ಪ್ರತಿಕ್ರಿಯಿಸುತ್ತಾರೆಂದು ಆಶಿಸುತ್ತೇನೆ. ಪ್ರತಿಕ್ರಿಯಿಸದಿದ್ದರೂ ಪರವಾಗಿಲ್ಲ ಆದರೆ ಬೆಂಬಲ ಸೂಚಿಸುವ ಸಲುವಾಗಿ ಮಾಡಬೇಕಾದ ಕೆಲಸ ಮಾಡಿದರೆ ಸಾಕು. ನಿಮ್ಮ ಸಹೃದಯದ ಸ್ಪಂದನೆಗೆ ನನ್ನ ವಿಶೇಷ ವಂದನೆಗಳು ಸಾರ್... ಶ್ಯಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.