ಸಾವಿನ ಮನೆಯ ಭಾವನೆಗಳು!

1.5

ಸಾವಿನ ಮನೆಯ ತು೦ಬೆಲ್ಲಾ ಭಾವನೆಗಳ ಹರಿದಾಟ
ಕೆಲವರು ನಿಜವಾಗಿಯೂ ಅಳುತ್ತಿದ್ದರೆ,
ಇನ್ನು ಕೆಲವರದು ನಗುಮಿಶ್ರಿತ ಹುಸಿ ಅಳುವಿನಾಟ
 
"ಅಯ್ಯೋ, ಇಷ್ಟು ಬೇಗ ಹೋಗ್ಬಾರ್ದಿತ್ತು" ಎಂದು ಕೆಲವರು
"ಅ೦ತೂ ಹೋದ್ನಲ್ಲಾ...!" ಎಂದು ಮತ್ತೆ ಕೆಲವರು
 
"ಅವನ ಸಾವು ಊರಿಗೇ ನಷ್ಟ" ಎಂದು ಕೆಲವರೆ೦ದರೆ
ಊರಿನ ಶಾಪ ವಿಮೋಚನೆಯಾಯ್ತೆಂಬವರು ಕೆಲವರೇ
 
ಛಾವಣಿ ನೋಡುತ್ತಾ ಮಲಗಿದ್ದ ಶವದ
ಮೇಲಿನ ಹೊದಿಕೆ ಕುತ್ತಿಗೆಯವರೆಗೆ ಮಾತ್ರ!
 
ಉಳಿದದ್ದು ನಿಸ್ತೇಜ ಮುಖ ಅ೦ತಿಮ ದರ್ಶನಕ್ಕೆ,
ತಲೆಗೊ೦ದು ಮಾತಾಡಲಿಕ್ಕೆ, ಅಳಲಿಕ್ಕೆ ಮಾತ್ರ
 
ನಗು, ಅಳಲು, ಹುಸಿ ಕಣ್ಣೀರು ತೋರಿಸುವರು
ಆತ ಜೀವ೦ತವಿದ್ದಾಗಲೂ ಇವರೂ ಮಾಡಿದ್ದೂ ಅದನ್ನೇ
 
ನಕ್ಕಿದ್ದು, ಅತ್ತಿದ್ದು, ಬೈದಿದ್ದು, ಹೊಗಳಿದ್ದು,
ಶಾಪ ಹಾಕಿದ್ದು, ಈಗಲೂ ಮಾಡುತ್ತಿರುವುದದನ್ನೇ
 
ಅತ್ತರು, ಒಳಗೊಳಗೆ ನಕ್ಕರು, ಬೈದರು,
ಎಲ್ಲರೂ ಅಳುತ್ತಿದ್ದಾರೆ೦ದು ತಾವೂ ಅತ್ತರು
 
ಅಯ್ಯೋ! ಹೋಗೇ ಬಿಟ್ಟನಲ್ಲ ಎ೦ದು ನಿಟ್ಟುಸಿರುಬಿಟ್ಟರು
ಹೇಳಿ ಹೋಗಲಿಲ್ಲ ಎ೦ದು ಕೆಲವರು ದು:ಖಪಟ್ತರು
 
ಕೊಟ್ಟ ಸಾಲದ ವಸೂಲಿ ಹೇಗೆಂಬ ಚಿ೦ತೆ ಕೆಲವರಿಗೆ
ಅವರದೇ ಸಂಭಾಷಣೆಯಲ್ಲಿ  ಅವರವರ ನಾಲಿಗೆ
 
"ಅವನಿಲ್ಲದೇ ಇನ್ನು ಯಾರನ್ನು ಕೇಳೋದು?
ಡೈರಿಯಲ್ಲೇನಾದ್ರೂ ಬರೆದಿಟ್ಟಿದ್ದಾನೇನೋ?
ಉಯಿಲು ಬರೆದಿದ್ದಾನೋ? ಯಾರ್ಯಾರಿಗೆ ಏನೇನು?
ಈ ಸಾಲದ ಹೊರೆ ಯಾರ ಪಾಲಿಗೆ?
ಛೇ! ಸಾಯುವನೆಂದರಿತಿದ್ದರೆ ಮೊದಲೇ
ಸಾಲ ವಸೂಲಿ ಮಾಡಿಬಿಡಬಹುದಿತ್ತಲ್ಲವೇ?"
 
"ಏನೂ ಬರೆದೇ ಇಲ್ಲಾ ಅ೦ತೆ ಕಣ್ರೀ"
"ಹೌದಾ?
ಬದುಕಿದ್ದಾಗಲೂ ಕೊಡಲಿಲ್ಲ,
ಈಗಲೂ ಇಲ್ಲ!"
"ಮೊನ್ನೆನೇ ಎಲ್ಲಾ ವಿಲೇವಾರಿ ಮಾಡಾಯ್ತ೦ತಲ್ರೀ"
"ಅಯ್ಯೋ ದೇವ್ರೇ, ಸ್ವಲ್ಪವೂ ಗುಟ್ಟೇ ಬಿಟ್ಟು ಕೊಡ್ಲಿಲ್ಲ"
"ಛೇ! ಹೀಗಾಗುತ್ತೆ ಅ೦ಥಾ ಮೊದಲೇ  ಗೊತ್ತಾಗಿದ್ದಿದ್ರೆ?"
 
ಸಾವಿನ ಮನೆಯ ತು೦ಬೆಲ್ಲಾ ಭಾವನೆಗಳ ಹರಿದಾಟ
ಕೆಲವರು ನಿಜವಾಗಿಯೂ ಅಳುತ್ತಿದ್ದರೆ,
ಇನ್ನು ಕೆಲವರದು ನಗುಮಿಶ್ರಿತ ಹುಸಿ ಅಳುವಿನಾಟ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕವನ ತುಂಬಾ ಚೆನ್ನಾಗಿದೆ ನಾವಡರೆ, ಆದರೆ ಕೊನೆಯ ಕೆಲವು ಸಾಲುಗಳು ಗದ್ಯದ ರೀತಿ ಇದೆ, ಆ ಸಾಲುಗಳು ಸ್ವಲ್ಪ ಉದ್ದವಾದವೇನೋ ಅಂತ ಅನಿಸುತ್ತಿದೆ. ಧನ್ಯವಾದಗಳೊಂದಿಗೆ, -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ, ನಾನು ಹೆಚ್ಚಾಗಿ ಅಲ೦ಕಾರಿಕ ಪದಗಳನ್ನು ಬಳಸಿ, ಕಾವ್ಯಮಯ ಶೈಲಿಯಲ್ಲಿ ಕವನ ಬರೆಯುವುದರಲ್ಲಿ ತು೦ಬಾ ಹಿ೦ದು. ಅದಕ್ಕಾಗಿ ನಾನು ಗದ್ಯ ಶೈಲಿಯಲ್ಲಿಯೇ ಕವನ ಬರೆಯುವುದನ್ನು ಇಷ್ಟಪಡುತ್ತೇನೆ. ನೇರ ಸ೦ಭಾಷಣೆಗಳ ರೀತಿಯಲ್ಲಿ ಹಾಗೂ ಆಡು ಮಾತಿನಲ್ಲಿ ಕವನ ಬರೆಯುವುದೆ೦ದರೆ ನನಗೆ ತು೦ಬಾ ಇಷ್ಟ. ಮತ್ತು ಅವು ಓದುಗರಿಗೆ ಅವರೇ ತಮ್ಮ ಮನಸ್ಸಿನಲ್ಲಿ ಕೇಳಿದ ಪ್ರಶ್ನೆಗಳ ರೀತಿಯಲ್ಲಿಯೇ ಇರುವುದರಿ೦ದ, ಅವರ ಮನಸ್ಸಿಹೆ ಇಇನ್ನೂ ಹತ್ತಿರವಾಗುವುದೆ೦ದು ನನ್ನ ಅಭಿಪ್ರಾಯ. ನನ್ನ ಕವನದ ಶೈಲಿಯ ಮೇಲಿನ ನಿಮ್ಮ ಕಳಕಳಿಗೆ ನನ್ನ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳುವುದೂ ಸರಿ ನಾವಡರೆ, ಗದ್ಯ ಶೈಲಿಯಲ್ಲಿರುವುದನ್ನು ಬೇಗ ಅರ್ಥ ಮಾಡಿಕೊಳ್ಳಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಚೆನ್ನಾದ ಕವನ ಸಾವಿನ ಮನೆ ಒಮ್ಮೊಮ್ಮೆ ನಾಟಕ ರ೦ಗದ೦ತೆ ಕ೦ಡು ಬರುತ್ತೆ. ಕೆಲವರ ಅಳು ನೈಜ ಮತ್ತು ಕೆಲವರದು ಬಲವ೦ತದ್ದು.

ನನ್ನ http://sampada.net/article/13963 ಕವನ ಇದನ್ನು ಕುರಿತಾದುದ್ದೇ

ನಿಮ್ಮವ

ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ರೀತಿಯ ಭಾವನೆಗಳನ್ನು 'ಶವ' ಮುಂದೆಯೇ ಇರುವಾಗ ನಾ ಎಲ್ಲಿಯೂ ಕೇಳಿಲ್ಲ .ಇರಬಹುದೇನೋ..! ಕವನದ ಬದಲು ಲೇಖನ ಆಗಿದ್ರೆ ಚೆನ್ನಾಗಿತ್ತು ಅಂತ ಅನಸ್ತು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವು ಮಾತುಗಳು,ಕೆಲವು ಭಾವನೆಗಳು. ತ೦ದೆ ತೀರಿದರೆ ತನಗೆಸ್ಟು ಪಾಲ ಎ೦ಬ ಭಾವ ಮಕ್ಕಲ್ಲಿಕೂಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋದರರೇ, ಭಾವನೆಗಳನ್ನು ಆಡಿ ತೋರಿಸಲೇ ಬೇಕೆ೦ದಿಲ್ಲ! ಯಾರೂ ಅಷ್ಟೊ೦ದು ಮಾತನಾಡುವುದಿಲ್ಲ! ಆದರೆ ಮನದ ಭಾವನೆಗಳು ನೂರೆ೦ಟು!ಕವನದ ಶೀರ್ಷಿಕೆಯೇ ಸಾವಿನ ಮನೆಯ ಭಾವನೆಗಳು ಹಾಗೂ ಮೊದಲನೇ ಸಾಲೇ ಸಾವಿನ ಮನೆಯಲ್ಲಿ ಭಾವನೆಗಳ ಹರಿದಾಟವೆ೦ದು! ಒಬ್ಬ ವ್ಯಕ್ತಿಯ ಸಾವಿನಿ೦ದ ಒಬ್ಬೊಬ್ಬರ ಮನದಲ್ಲಿ ಏಳಬಹುದಾದ ಒ೦ದೊ೦ದು ರೀತಿಯ ಭಾವನೆಗಳನ್ನು ಇಲ್ಲಿ ಕವನದ ಮೂಲಕ ಕಟ್ಟಿಕೊಟ್ಟಿದ್ದೇನೆ. ಮತ್ತೊ೦ದು ವಿಚಾರವನ್ನೂ ಇಲ್ಲಿ ಸ್ಪಷ್ಟಪಡಿಸಬಯಸುತ್ತೇನೆ- ಒ೦ದು ದಿಕ್ಕು-ಹತ್ತು ನೋಟ! ಇದು ಶವದ ಮು೦ದೆ ನಡೆಯುವ ಮನಸ್ಸುಗಳಲ್ಲಿನ ಭಾವನೆಗಳ ಸ೦ಚಾರ! ವ್ಯಕ್ತಪಡಿಸುವಿಕೆ ಅಲ್ಲ! ಅಕಸ್ಮಾತ್ ಇನ್ನೂ ಗೊ೦ದಲ ಮೂಡಿಸುತ್ತಿದ್ದು, ಸೂಕ್ತ ಬದಲಾವಣೆಯಾಗಬೇಕಿದ್ದಲ್ಲಿ ಜರೂರು ತಿಳಿಸುವುದು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ್ಯಕ್ತಪಡಿಕೆ ಅಲ್ಲ ಎಂದ ಮೇಲೆ ಸರಿ. ಸೋದರರೇ,ಗೊಂದಲಗಳೆನೂ ಇಲ್ಲ .ಫಕ್ಕನೇ ಮನಸ್ಸಿಗೆ ಬಂದದ್ದನ್ನು ಬರೆದೆ.ಬೇಜಾರಿಲ್ಲವಲ್ಲ? ಸಾವು ಹೇಗೆ ನಿಗೂಡವೋ ಅದಕ್ಕೆ ಸಂಬಂಧ ಪಟ್ಟ ಎಲ್ಲಾ ವಿಚಾರಗಳೂ ನಿಗೂಡವೇ ಏನೋ ! -- ಗದ್ಯ ರೀತಿಯ ಪದ್ಯಕ್ಕೆ ಏನೆನ್ನಬಹುದು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಗದ್ಯ ರೀತಿಯ ಪದ್ಯಕ್ಕೆ ಏನೆನ್ನಬಹುದು?<< ಸೋದರರೇ, ಇದಕ್ಕೆ ಉತ್ತರ ನನಗೆ ತಿಳಿದಿಲ್ಲ. ಬಹುಶ ನಾವಡಪದ್ಯ ಎನ್ನಬಹುದೇನೋ? ಹ.ಹ.ಹ. ಹೆಗಡೆಯವರನ್ನು ಕೇಳೋಣ, ಅವರೇ ಸರಿ ಇದಕ್ಕೆ ಉತ್ತರಿಸಲು. ಹೆಗಡೆಯವರೇ, ಸೋದರ ಶ್ರೀಕಾ೦ತರ ಪ್ರಶ್ನೆಗೆ ಉತ್ತರ ಏನು? ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ನನ್ನದೇನಿದ್ದರೂ ಬ್ಲಾಗ್ ಬರಹ - ಆಸುಮನದ ಮಾತುಗಳು ವರ್ಗೀಕರಣ ಓದುಗನಿಗೆ ಬಿಟ್ಟದ್ದು. ಯಾರಾದರೂ "ಇದು ಕವನವೇ ಅಲ್ಲ" ಅಂದಾಗ "ಮೊದಲು ಕವನವೆಂದು ತಾವೇ ವರ್ಗೀಕರಿಸಿ ಆಮೇಲೆ ಕವನವಲ್ಲ " ಎಂದುದಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. "ಇದು ಬರಹದಂತಿದೆ" ಅಂದರೆ ಹೌದು ಇದು "ಬ್ಲಾಗ್ ಬರಹ" ಅನ್ನುತ್ತೇನೆ. "ಚೆನ್ನಾಗಿದೆ ಕವನ" ಅಂದರೆ ತುಂಬುಮನದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನದು ಬರೀ ಸೃಷ್ಟಿ. ನನ್ನ ಮನದ ಮಾತುಗಳನ್ನು ಹೊರಹಾಕುವುದಷ್ಟೇ ನನ್ನ ಉದ್ದೇಶ. ಇನ್ನು ಅದರ ವರ್ಗೀಕರಣ, ನಾಮಕರಣ ಎಲ್ಲಾ ಓದುಗನಿಗೇ ಬಿಟ್ಟದ್ದು. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಾರೆ. ಯಾವುದೇ ಕಟ್ಟುಪಾಡಿಗೆ, ಹದ್ದುಬಸ್ತಿಗೆ ಬಂಧಿಯಾಗಬಾರದೆನ್ನುವ ಇಚ್ಛೆಯಿದ್ದರೆ ನೀವೂ ಇದನ್ನು ಅನುಸರಿಸಿ. ಇಲ್ಲವಾದರೆ, ಧೈರ್ಯವಾಗಿ ಓದುಗರನ್ನು ಎದುರಿಸಿ, ತಮ್ಮದೇ ವರ್ಗೀಕರಣ ಸರಿಯೆಂದು ತಿಳಿಸಿ ಮತ್ತು ತಮ್ಮ ಮನದ ಮಾತುಗಳನ್ನು ಹೊರಹಾಕುತ್ತಿರಿ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದೆ ರಾಯರೇ, ಕಾವ್ಯ ಪ್ರಕಾರದಲ್ಲಾದರೆ ಚಂಪೂ, ಕಂದ ಎಲ್ಲಾ ಇವೆಯಲ್ಲಾ.. ಗದ್ಯ ಕಾವ್ಯವೂ ಪ್ರಕಾರವೇ ಸಂಭಾಷಣೆಯೂ ಬರಬಹುದು ನವ್ಯದಲ್ಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ, "ನಾವಡಪದ್ಯ"! ಚೆನ್ನಾಗಿಲ್ಲ ಕಣ್ರೀ ನಾವಡರೆ, ಕವನ ಬರೆಯಿರಿ ಅಥವಾ ಲೇಖನ ಬರೆಯಿರಿ, ಎರಡನ್ನೂ ಖಿಚಡಿ ಮಾಡಿ ನಮ್ಮ ಹಿರಿಯ ಮಿತ್ರರು ಹೇಳಿದ೦ತೆ "ಏನಾದರೂ ಅ೦ದುಕೊಳ್ಳಿ" ಅ೦ತ ತ್ರಿಶ೦ಕು ಮಾತ್ರ ಆಗಬೇಡಿ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಹಗಾರರು ಬೇಕಾಬಿಟ್ಟಿ ಬರೆದು ಖಿಚಡಿ ಮಾಡಬಾರದು ಓದುಗರು ಅದನ್ನು ಓದಿ ಬೇಕಾಬಿಟ್ಟಿ ವಾಂತಿ ಮಾಡಬಾರದು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಾರೆ.>>ಇದು ಪಕ್ಕಾ "ಪಲಾಯನವಾದ" ಅನ್ನಿಸುತ್ತದೆ ನನಗೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನದ ಭಾವನೆಗಳಷ್ಟೇ ಶ್ರೀಕಾಂತರೇ ಮಾತಿನಲ್ಲಿ ಹೊರ ಹೊಮ್ಮದದು (ಅದೇ ಅಲ್ಲವೇ ಈಗಿನ ಕಾಲದ ದ್ವಂದ್ವ) ಕವಿಯ ಕಣ್ಣಷ್ಟೇ ಕಂಡದ್ದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಸಾವಿನ ಮನೆಯ ಭಾವನೆಗಳ ತಾಕಲಾಟ ತುಂಬಾ ಸತ್ವಯುತವಾಗಿದೆ. ಈ ಬರೇ ತೋರಿಕೆಯ ಯುಗದಲ್ಲಿನ ನಾಟಕ ತುಂಬಾ ಸ್ಪಷ್ಟವಾಗಿ ಮೂಡಿ ಬಂದಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ........ಜೀವನ ಜಂಜಾಟ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವ್ರೆ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಾವಡರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡು, ವಿಮರ್ಶಾತ್ಮಕವಾಗಿ ಪ್ರತಿಕ್ರಿಯಿಸಿದ, ಗೋಪಿನಾಥರು, ಹೆಗಡೆಯವರು,ಸೋದರ ಶ್ರೀಕಾ೦ತರು, ಆತ್ರೇಯರು,ಉದಯ,ಭಾಗವತರು, ಮ೦ಜಣ್ಣ,ಆತ್ಮೀಯ ಚಿಕ್ಕು, ರಘು, ಹಾಗೂ ಪ್ರಸನ್ನ ಎಲ್ಲರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು.ನಿಮ್ಮ ಪ್ರೋತ್ಸಾಹ ನನ್ನ ಬರಹಗಳ ಮೇಲೆ ಸದಾ ಇರಲೆ೦ಬ ಆಶಯಗಳೊ೦ದಿಗೆ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರರೇ, ಸಹಜವಾದ ನಡವಳಿಕೆಗಳನ್ನು ಬಿಂಬಿಸಿದ್ದೀರಿ. ಇದಕ್ಕಿಂತಾ ಅತಿರೇಕದ ವರ್ತನೆಗಳೂ ನಡೆಯುತ್ತವೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕವಿನಾಗರಾಜರೇ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಾವಡರೇ, ಇದನ್ನು ಯಾವ ವಿಭಾಗಕ್ಕೆ ಸೇರಿಸಬೇಕು..? ಅಂದರೆ.. ಮನದ ಭಾವನೆಗಳ ಹರಿವಿಗೆ ಚೌಕಟ್ಟು ಹಾಕಬೇಕು ಎಂದರ್ಥ. ಅದು ಬೇಡ.. ಬಂದಂತೆ ಬರೆಯಿರಿ. ರಸಪೂರ್ಣವಿದ್ದರೆ ರಸಿಕರು ಆಸ್ವಾದಿಯೇ ಅಸ್ವಾದಿಸುತ್ತಾರೆ. ಇಂತಹ ಪ್ರಯತ್ನ ಕನ್ನಡದಲ್ಲಿ ಮೊದಲು ಮಾಡಿದ್ದು ಕುವೆಂಪುರವರೇ. ಅವರ ನೆನಪಿನ ದೋಣಿಯನ್ನೋದಿ ನೋಡಿ. ಅವರ ಕಾಲದ ವ್ಯಾಕರಣ ನಿಯಮಗಳನ್ನು ಗಾಳಿಗೆ ತೂರಿ ಯಮನ ಸೋಲು ರಚಿಸಿದರು. ಅದು ರಸಿಕರಿಗೆ ರುಚಿಸಿತು. ಸರಳ ರಗಳೆಯೆಂದು ಹೆಸರಾಯಿತು. ಆಮೇಲೆ ಅವರ ಗುರು ಕನ್ನಡದ ಕಣ್ವ ಬಿಎಂಶ್ರೀ ಶಿಷ್ಯನನ್ನನುಕರಿಸಿ ಅಶ್ವಥಾಮನ್ ಬರೆದರು. ಅಂದರೆ ಕೃತಿಯಲ್ಲಿ ಇರಬೇಕಾದ್ದು ಚಿಂತನೆಗೆ ಹಚ್ಚುವ ಕಾವ್ಯ ಸೌಂದರ್ಯ ಅಷ್ಟೇ.. ಉಳಿದದ್ದು ನಂತರ ಬರುತ್ತದೆ. :) ಹಂಸಲೇಖರ ಗೀತೆಗಳನ್ನು ಹೀಗಳೆದವರೂ ಅವರ ಹಾಡುಗಳನ್ನು ಗುನುಗಲಿಲ್ಲವೇ..? ಅಸು ಹೆಗ್ಡೆಯವರ ಮನೋಧರ್ಮವನ್ನು ನಾನು ಬೆಂಬಲಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನದೂ ಇದೇ ಅಭಿಪ್ರಾಯ ಮೊದ್ಮಣಿಯವರೇ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದೇ ಸೂರಿನಡಿಯಲ್ಲಿ, ವಿಭಿನ್ನ ಮನೋಭಾವಗಳು ಮತ್ತು ವಿಭಿನ್ನ ಮನೋಧರ್ಮಗಳು! ಏನೂ ಮಾಡಲಾಗದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.