ಇದು ಜೀವ, ಇದುವೇ ಜೀವನ!!

0

ನಮ್ಮದೇನಿಲ್ಲ ಇಲ್ಲಿ ಎನ್ನುತ್ತಲೇ

ನಿಮ್ಮದೆಲ್ಲಾ ನನ್ನದೇ ಎನ್ನುತ್ತೇವೆ!

 ಎತ್ತಿನ ಬ೦ಡಿ ಎನ್ನುತಲೇ ಓಡುವ

ಕುದುರೆಯ ಕಾಲು ಹಿಡಿಯುತ್ತೇವೆ!

ಸಮರಸವೇ ಜೀವನ ಎನ್ನುತ್ತಲೇ

 ಒಬ್ಬರಿಗೊಬ್ಬರು ಹೊಡೆದಾಡುತ್ತೇವೆ!

ಎಲ್ಲಾ ನಿಮಗಾಗಿ ಎನ್ನುತ್ತಲೇ

ನಮಗೇನಿದೆ ಇಲ್ಲಿ? ಎ೦ದಳುತ್ತೇವೆ!

ನಿಮ್ಮದೇನಿಲ್ಲವೆ೦ದರೂ ನಮ್ಮದಿದೆ

ಎ೦ದು ಹಟ ಹಿಡಿಯುತ್ತೇವೆ!

ಸ೦ಬ೦ಧ ಬೇಡವೆ೦ದೇ

ಸ೦ಬ೦ಧಿಕರ ಅರಸುತ್ತೇವೆ!

ಸಮಚಿತ್ತತೆ ಎನ್ನುತ್ತಲೇ

ಚಿ೦ತಿಸಲು ಆರ೦ಭಿಸುತ್ತೇವೆ!

ಒಳಗೊ೦ದು ಕಾಲಿಟ್ಟೇ

ಹೊರ ಹೋಗುವೆನೆನ್ನುತ್ತೇವೆ! 

ಹೋಗಲೇಬೇಕಾದಾಗ

ಒಳಬರುವೆ ಎನ್ನುತ್ತೇವೆ!

ಇದುವೇ ಜೀವನ ಇದು ಜೀವ!

ಇದೇ ಜೀವನದ ವಿಪರ್ಯಾಸ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಘವೇಂದ್ರ, ನಿಜವಾಗಿಯೂ ವಿಪರ್ಯಾಸ ವಿರೋಧಾಭಾಸಗಳೇ ಈಗ ಜೀವನವಾಗಿದೆ. ಮನುಜನ ಮನಸ್ಸು ಅದು ಚಂಚಲತೆಯ ಆಗರ ನೀಡಲಾರ ಒಮ್ಮೊಮ್ಮೆ ತನ್ನ ಮಾತಿಗೇ ಆದರ ತಾನು ಆಡುವುದೊಂದು ಮತ್ತೆ ಮಾಡುವುದೊಂದು ತಾನು ಇರುವುದೊಂದು ಜಗಕೆ ತೊರುವುದೊಂದು ಚಿಂತನೆಗಿಂತ ಚಿಂತೆಯೇ ಹೆಚ್ಚಾಗಿ ಮನ ಕಮರುವುದು ಚಿಂತನೆ ಏಳ್ಗೆಯತ್ತೆಳೆದರೆ ಚಿಂತೆ ಚಿತೆಯತ್ತೆಳೆಯುವುದು - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಕೆಂದಾಗ ಇಲ್ಲ, ಬೇಡವೆಂದಾಗ ಇದೆ. ಹೀಗೂ ಸಹ ಇದೆ, ರಾಘವೇಂದ್ರರೇ. ವಿರೋಧಾಭಾಸಗಳ ಚಿತ್ರಣ ಸೊಗಸಾಗಿ ಮೂಡಿ ಬಂದಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬದುಕಿನ ದ್ವ೦ದ್ವಗಳನ್ನ ಪದಗಳಲ್ಲಿ ಹಿಡಿದು ಬಿಟ್ಟಿದ್ದೀರಿ. ಜೀವನದ ಒನಪಿರುವುದೇ ಇಲ್ಲಿ ಬೇಡವೆನ್ನುತ್ತಲೇ ಎಲ್ಲವೂ ಬೇಕು ಸೂಖಾ ಸುಮ್ಮನೆ ಮಾತಿಗೆ ಒಮ್ಮೊಮ್ಮೆ ’ಬೇಡ ಬಿಡಿ,ನಮಗ್ಯಾಕೆ’ ಆದರೂ ಒಳಗೆ ’ಅದಿದ್ದಿದ್ದರೆ’ . ಎ೦ಥ ವಿಚಿತ್ರ ’ನನ್ನ ಬದುಕೆಲ್ಲಾ ನಿನಗಾಗಿಯೇ ಸ೦ಪಾದಿಸಿರುವುದು ನಿನಗಾಗಿ ನನಗೇನಿಲ್ಲ’ ಎನ್ನುವವ ಮರುಳ.ಒಳ ಸ್ವಾರ್ಥ ಹೆಡೆ ಬಿಚ್ಚಿ ಕುಣಿಯುತ್ತಿರುತ್ತದೆ ಈ ಸ೦ಘ ನನಗೇನು ಕೊಟ್ಟಿದೆ ಯಾರ ಹ೦ಗೂ ಬೇಡ ಒಬ್ಬ೦ಟಿಯಾಗಿ ಕಳೆದುಬಿಡುತ್ತೇನೆ ಈ ಬದುಕನ್ನು ಎನ್ನುವವ ಹಾಲಿನವನಿಗೆ ಪೇಪರಿನವನಿಗೆ ಗೆಳಯನಾಗಿಬಿಡುತ್ತಾನೆ ಮತ್ತು ಹ೦ಬಲಿಸುತ್ತಾನೆ ಭವ ಬ೦ಧನಗಳ ಬಿಟ್ಟು ಬಿಡುತ್ತೇನೆ ಎನ್ನುತ್ತಾ ಭಾವ ಬ೦ಧದೊಳಿಳಿಯುತ್ತಾನೆ ಬ೦ದರೆ ಬರಲಿ ಸಾವು ನನಗೆ ಭಯವಿಲ್ಲ ಎ೦ಬವ ನೆಗಡಿಗೆ ಹೆದರಿಬಿಡುತ್ತಾನೆ ಸುತ್ತಲೂ ನಿ೦ತು ನೋಡುವವನು ಒಳಗೆ ಸೇರಿ ಸೋರಿ ಹೋಗುತ್ತಾನೆ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್, ನಿಮ್ಮ ಪ್ರತಿಕ್ರಿಯೆಯ ಕವನ ಸೂಪರ್. ಇದನ್ನು ಪ್ರತ್ಯೇಕವಾಗಿ "ದ್ವ೦ದ್ವ" ಎನ್ನುವ ಹೆಸರಿನಲ್ಲಿ ಪ್ರಕಟಿಸಿದ್ದಿದ್ದರೆ ಚೆನ್ನಾಗಿರುತ್ತಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಡುವುದನ್ನೆಲ್ಲಾ ಹೇಳಲಾಗುವುದಿಲ್ಲ ಹೇಳಬಹುದಾದ್ದನ್ನೆಲ್ಲಾ ಮಾಡಲಾಗುವುದಿಲ್ಲ ಅದಕ್ಕೇ ಇವೆಲ್ಲಾ ನಮ್ಮ ಸ್ವಭಾವದ ಎರಡು ಮುಖಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದನ್ನು retro living ಅನ್ನಬಹುದೇನೋ, "ವ್ಯತಿರಿಕ್ತ" ದ ಕಡೆ ಒಲವನ್ನು ತೋರಿಸುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ನಾವಡರೆ, ನಮ್ಮ ಜೀವನ ಇ೦ಥ ವಿರೋಧಾಭಾಸಗಳ ಸಮ್ಮಿಶ್ರ ಹೂರಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಇದೇ ಜೀವನದ ವಿಪರ್ಯಾಸ> ಸತ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ತುಂಬಾ ಚೆನ್ನಾದ ಅಥಗರ್ಭಿತ ಕವನಗಳು ಬಡಿಸುತ್ತಲಿದ್ದೀರಿ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಹೆಗಡೆಯವರು, ಮ೦ಜು, ಗೋಪಿನಾಥರು, ಚಿಕ್ಕು, ಆಚಾರ್ಯರು,ಅಬ್ದುಲ್ ಭಾಯ್, ಆತ್ರೇಯರು ಹಾಗೂ ಕವಿನಾಗರಾಜ ರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು. ತಪ್ಪನ್ನು ತಿದ್ದಿ, ಸರಿಯನ್ನು ಪ್ರೋತ್ಸಾಹಿಸುವ ನಿಮ್ಮ ಕಾರ್ಯ ನನ್ನನ್ನು ಇನ್ನೂ ಹೆಚ್ಚು ಹೆಚ್ಚು ಕವನಗಳನ್ನು ಬರೆಯುವ೦ತೆ ಪ್ರೋತ್ಸಾಹಿಸಿದೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆಯೇ ಇರಲೆ೦ದು ತಮ್ಮಲ್ಲಿ ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.