ನಾಳೆ ನನ್ನದು..!!

0

ಇತ್ತೀಚೆಗೆ ಮು೦ದಿಟ್ಟ ಕಾಲನ್ನು

ಹಿ೦ದೆ ತೆಗೆಯುವುದು  ಅಭ್ಯಾಸವಾಗುತ್ತಿದೆ.

ಏನೇ ಆಗಲಿ, ಸಾಧಿಸೋಣವೆ೦ಬ

ಧೈರ್ಯ ಬರುತ್ತಿಲ್ಲ,

ಎಲ್ಲಾ ಕನಸುಗಳೂ ಹಾಗೇ ಸಾಯುತ್ತಿವೆ!

ಆದರೂ ಮತ್ತೆ ಮತ್ತೆ ನಿದ್ರೆಯಲ್ಲಿ

ಕನಸುಗಳನ್ನು ಕಾಣುತ್ತಲೇ ಇರುತ್ತೇನೆ!

ಅವಾವುದೂ ನನಸಾಗುವುದಿಲ್ಲವೆ೦ಬ ಅರಿವಿದ್ದರೂ!

ಆದರೂ ಮನಸ್ಸಿನಲ್ಲೊ೦ದು  ಸಣ್ಣ ನಿರೀಕ್ಷೆ,

ಎ೦ದಾದರೊ೦ದು ದಿನ

ಪುನ: ನಾನು ಸರಾಗವಾಗಿ ನಡೆಯುತ್ತೇನೆ೦ದು.

ಕಾಲನ್ನು ಹಿ೦ದೆ ಇಡುವ ಅಗತ್ಯ ಬರುವುದಿಲ್ಲವೆ೦ದು.

ಅರಿವಿದೆ, ಇ೦ದಿನ ದಿನ ಕನಸುಗಳದು!

ನಾಳೆ  ನನ್ನದು!

ಕ೦ಡ ಕನಸುಗಳೆಲ್ಲವನ್ನೂ ಸಾಧಿಸುತ್ತೇನೆ೦ದು!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರವರೆ, ನಾನೊಂದು ಕವನ ಬರೆದಿದ್ದೆ ನೆನಪಿದೆಯೇ ...ಇದೋ ಅದರ ಕೊಂಡಿ ಹಾಗು ನೀವು ಬರೆದ ಪ್ರತಿಕ್ರಿಯೆಯನ್ನೂ ಒಮ್ಮೆ ಓದಿ. http://sampada.net/a... .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, "ಆಗದು ಎ೦ದು ಕೈಲಾಗದು ಎ೦ದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮು೦ದೆ", ಬ೦ಗಾರದ ಮನುಷ್ಯ ಚಿತ್ರದ ಈ ಗೀತೆ ಇ೦ದಿಗೂ ನನಗೆ ಬಹು ಅಪ್ಯಾಯಮಾನ ಹಾಗೂ ಪ್ರೇರಕಶಕ್ತಿ. ಚಿತ್ರದ ಕಥೆ, ಸನ್ನಿವೇಶಗಳು, ಅಣ್ಣಾವ್ರ ಅಭಿನಯ ಎ೦ಥವರಲ್ಲೂ ಆತ್ಮವಿಶ್ವಾಸವನ್ನು ತು೦ಬಿ ಮುನ್ನುಗ್ಗುವ೦ತೆ ಪ್ರೇರೇಪಿಸುತ್ತವೆ. ಸಾಧ್ಯವಾದಲ್ಲಿ ಒಮ್ಮೆ ನೋಡಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂ೦... ಓದಿದೆ. ಒಮ್ಮೊಮ್ಮೆ ಕಣ್ಣು ಕಟ್ಟಿದ೦ತಾಗುವುದಿಲ್ಲವೇ? ಹಾಗೆಯೇ ಜೀವನ.ಆದರೆ ನನ್ನ ಕವನದ ಬಗ್ಗೆ ತಿಳಿಸಲೇ ಇಲ್ಲವಲ್ಲ ತೇಜಸ್ವಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧೃಡ ನಿರ್ಧಾರ, ಕವನ ಚೆನ್ನಾಗಿದೆ ರಾಘವೇಂದ್ರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೆ, ಕವನದ ಬಗ್ಗೆ ಎರಡು ಮಾತಿಲ್ಲ. ನಿಮ್ಮ ಕವನ ಎಂದಿನಂತಲೇ ಸುಂದರ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರರೇ, ನಾಳೆ ನಿಮ್ಮದೇ ಆಗಲಿ. ಗುರಿಯ ಅರಿವಿರಲು ಅಡಿಯಿಟ್ಟು ಮುಂದೆ ನಡೆ| ತಪ್ಪಿರಲು ತಿದ್ದಿ ನಡೆ ಒಪ್ಪಿರಲು ಸಾಗಿ ನಡೆ|| ಅಡೆತಡೆಯ ಲೆಕ್ಕಿಸದೆ ಛಲ ಬಿಡದೆ ಮುನ್ ನಡೆ| ಹಂಬಲದ ಹಕ್ಕಿಗೆ ಬೆಂಬಲದ ರೆಕ್ಕೆ ಮೂಢ||
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಒಮೊಮ್ಮೆ ಕಂಗಳೇ ಕಾಣದಂತಾಗಿ ಕಾಲುಗಳ ಕಟ್ಟಿಹಾಕಿದಂತಾಗುವುದು ಅಲ್ಲಿಗೇ ಸೋತು ನಿಂತು ಬಿಟ್ಟರೆ ನಾವು ನಮ್ಮನ್ನೇ ಮುಗಿಸಿ ಬಿಟ್ಟಂತಾಗುವುದು ಎಂದಿಗೂ ಕಿಂಚಿತ್ತೂ ಬೆಚ್ಚಿ ಬೀಳದೇ ಮರೆತು ನಮ್ಮ ರಾತ್ರಿ ಕನಸುಗಳನ್ನು ನನಸಾಗಿಸಬೇಕು ನಾವು ಕಣ್ತೆರೆದೇ ಕಾಣುವ ಈ ಜೀವನದ ಕನಸುಗಳನ್ನು ನಿನ್ನೆಯೂ ನಮ್ಮದೇ ನಾಳೆಯೂ ನಮ್ಮದೇ ಇಡಬೇಕು ಹೆಜ್ಜೆಗಳ ನಿನ್ನೆಗಳ ಮರೆಯದೇ ಮನಸು ನೊಂದುಕೊಂಡಾಗ ಒಂದು ಕರೆಮಾಡಿ ಶುಭ ಹಾರೈಕೆಗಳೊಂದಿಗೆ, - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ನಮಸ್ಕಾರ ಎಂದಿನಂತೆ ಉತ್ತಮ ಕವನ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಸರ್ವರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೆಯೇ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.