ಕಾಲದ ಕನ್ನಡಿ: ಈ ದೇಶಕ್ಕಾಗಿ ಹೋರಾಡುವವರ ಕಥೆ ಇಷ್ಟೇ ಏನೋ..!!

3.666665

ನೀವು ಏನಾದ್ರೂ ಹೇಳಿ... ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ.. ಅ೦ಥ ಮತ್ತೊಮ್ರ್ ಪ್ರೂವ್ ಆಗಿ ಹೋಗಿದೆ. ನಮ್ಮ ದೇಶದಲ್ಲಿ ಕೆಲವರ ಹಣೆಬರಹ ನ್ನು ಸುಲಭವಾಗಿ ನಿರ್ಧರಿಸಬಹುದು.. ಹಿ೦ದೆ ಹಾವೇರಿಯಲ್ಲಿ ರೈತರ ಮುಷ್ಕರಕ್ಕೆ ಯಡಿಯೂರಪ್ಪ ಗೋಲಿಬಾರ್ ಗೆ ಆದೇಶ ನೀಡುವುದರ ಮೂಲಕ ಅದಕ್ಕೊ೦ದು ಗತಿ ಕಾಣಿಸಿದರು! ಇ೦ದು ರಾಮ್ ದೇವ್ ಹಣೆಬರಹವನ್ನು ಕೇ೦ದ್ರ ಸರ್ಕಾರ ಈ ರೀತಿ ಬರೆಯಿತು!! ಒಟ್ಟಾರೆ ನಾವು ಬ್ರಿಟೀಶ್ ಸತ್ತೆಯ ಕಾಲಕ್ಕೆ ಹೋಗುತ್ತಿದ್ದೇವೇ ಎ೦ಬುದು ಕಾಲದ ಕನ್ನಡಿಯ ಸ೦ಶಯ!!

ಭರತ ಭೂಮಿಯಲ್ಲಿ ಬ್ರಿಟೀಶ್ ಆಡಳಿತದಿ೦ದ ಮುಕ್ತರಾಗ ಬಯಸಿ ಸ್ವಾತ೦ತ್ರ್ಯದ ಕನಸು ಕ೦ಡು ಅದಕ್ಕಾಗಿ ಹೋರಾಡಿದವರು- ಶೋಷಿತ ವರ್ಗ – ತಮ್ಮ ಬೇಡಿಕೆ ನ್ನು ನ್ಯಾಯಬಧ್ಧವಾಗಿ ಕೇಳುವವರು- ಜನ ಕಲ್ಯಾಣಕ್ಕಾಗಿ ಹಾತೊರೆದು ಮುನ್ನುಗ್ಗು ವರು – ರಾಜಕೀಯ ವ್ಯವಸ್ಥೆಯನ್ನು ಸುಧಾರಿಸ ಬಯಸುವವರು ಮು೦ತಾದವರ ಹೋರಾಟದ ಅ೦ತ್ಯ ಹೀಗೇ!! ಸರಿ ಸುಮಾರು ಬ್ರಿಟೀಷರಿ೦ದ ಆರ೦ಭವಾದ ಈ ಪ್ರಜೆಗಳ ಧ್ವನಿಯನ್ನು ಅವರುಗಳ ಗ೦ಟಲನ್ನೇ ಹಿಸುಕುವ ಮೂಲಕ ,ಅವರ ಹೋರಾಟಕ್ಕೊ೦ದು ಅನೈತಿಕ ಅ೦ತ್ಯ ನೀಡುವ ಈ ಕ್ರಮ ದುರದೃಷ್ಟವಶಾತ್ ಇಲ್ಲಿಯವರೆವಿಗೂ ಮು೦ದುವರೆದಿದೆ!!
ಹಾಗ೦ತ ಎಲ್ಲ ಹೋರಾಟಗಳೂ ಇದೇ ಅ೦ತ್ಯವನ್ನು ಕ೦ಡವೇ ಎ೦ದರೆ ಖಚಿತ ದ ಉತ್ತರ ನೀಡಲಿಕ್ಕಾಗುವುದಿಲ್ಲ.. “ಕೆಲವು ಸಮಸ್ಯೆಗಳು ತಾವಾಗೇ ಸೃಷ್ಟಿಯಾದರೆ ಕೆಲವನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ“ ಎ೦ಬ ನಾವಡ ಉವಾಚವೊ೦ದಿದೆ.. ಅದರ ಪ್ರಕಾರ ಪ್ರಸಕ್ತ ಭರತಭೂಮಿಯಲ್ಲಿಯೂ ಏಕೆ ಸಮಸ್ತ ಜಗತ್ತಿನಲ್ಲಿಯೂ ಸರ್ಕಾರ ಗಳು ಹಾಗೂ ಜನತೆಗಳ ವಿಚಾರದಲ್ಲಿ ನಡೆಯುತ್ತಿರುವುದು ಇದೇ!!
ಅಮೇರಿಕಾ ಸ೦ಯುಕ್ತ ಸ೦ಸ್ಠಾನ ಹಾಗೂ ರಶ್ಯಾಗಳ ನಡುವಿನ ಶೀತಲ ಸಮರದ ಕೂಸು ಈ ಲಾಡೆನ್.. ರಶ್ಯಕ್ಕೆದುರಾಗಿ ಅವನನ್ನು ಬೆಳೆಸಿದ್ದು ಇದೇ ಅಮೇರಿಕಾ! ತನ್ನ ಬುಡಕ್ಕೇ ಕೊಳ್ಳಿ ಇಟ್ಟಾಗ, ಏಕ್ ದ೦ ಸಮಯಪ್ರಜ್ಞೆ ತೋರಿದಾ ಅಮೇರಿಕಾ ಮೊನ್ನೆ ಅವನನ್ನು ಕೊ೦ದು ಹಾಕಿತು! ಸದ್ದಾ೦ ಕಥೆಯೂ ಇದೇ! ಈಗಿನ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ, ಪಾಕಿಸ್ಠಾನ- ಆಪಘಾನಿಸ್ಠಾನ,ಕಜಕ್ ಸ್ಠಾನ್ ಮು೦ತಾದವುಗಳಲ್ಲಿ ನಡೆಯುತ್ತಿರುವ ಆ೦ತರಿಕ ಹೋರಾಟಗಳ ಹಣೆಬರಹವನ್ನು ನಿರ್ಧರಿಸಿರುವುದೂ ಇದೇ ಅಮೇರಿಕಾ! ಸೌದಿ ದೇಶಗಳ ನಡುವಿನ ಆ೦ತರಿಕ ಕಲಹಗಳಲ್ಲಿಯೂ ಅಮೇರಿಕಾದ ಪಾಲಿದೆ ಎ೦ಬುದೂ ಸತ್ಯ! ಜರ್ಮನಿಯ ಹಿಟ್ಲರ್, ಚೀನಾದ ಮಾವೋತ್ಸೇತು೦ಗ್, ರಶ್ಯಾದ ಲೆನಿನ್, ಸ್ಟಾಲಿನ್, ಉಗಾ೦ಡಾದ ಇದಿ ಅಮೀನ್, ಈಗಿನ ಕರ್ನಲ್ ಗಡಾಫಿ ಹಾಗೂ ಇರಾಕಿನ ಸದ್ದಾ೦ ಹುಸೇನ್ ಎಲ್ಲರೂ ತಮ್ಮ ಧಿಕಾರದ ಆರ೦ಭದಲ್ಲಿ ಒಳ್ಳೆಯ ಆಡಳಿತ ನೀಡಿ ಆನ೦ತರ ಸರ್ವಾಧಿಕಾರಿ ಳಾದವರೇ.. ಸಮಯಕ್ಕೆ ತಕ್ಕ ಹಾಗೆ ಪ್ರಜೆಗಳ ಹಕ್ಕುಗಳ ದಮನ ಮಾಡಿದವರೇ..!!
ನಮ್ಮ ಸ್ವಾತ೦ತ್ರ್ಯ ಹೋರಾಟಗಾರರಾದ ಭಗತ್ ಸಿ೦ಗ್ ತ೦ಡಕ್ಕಾದ ಅ೦ತ್ಯ ಗಮನಿಸಿ! ಒಬ್ಬರ ನ೦ತರ ಒಬ್ಬರ೦ತೆ ಅವರನ್ನು ಬ್ರಿಟೀಶ್ ಅರಸೊತ್ತಿಗೆ ಗಲ್ಲು ೦ಬಕ್ಕೇರಿಸಿತು! ನೇತಾಜಿ ಕಥೆ ಹಾಗಾಯಿತು!! ನೆಹರೂರವರ ಮಹತ್ವಾ ೦ಕ್ಷೆ ನೇತಾಜಿಯವರ ದಮನಕ್ಕೆ ಕಾರಣೀಭೂತವಾಯಿತು! ಸ್ವತ: ಬಾಪೂ ಕಥೆಯೂ ದಾರುಣ ಅ೦ತ್ಯದಲ್ಲಿ ಪರ್ಯಾವಸಾನವಾಯಿತು!! ದೀನದಯಾಳರ ಕಥೆ ಹೇಳ ಹೆಸರಿಲ್ಲದ೦ತಾಯ್ತು!
ಬ್ರಿಟೀಷ್ ಸ೦ವಿಧಾನದ ಯಥಾರೂಪವಾದ “ಮಹಾನ್ ಭಾರತ“ ( ಗ್ರೇಟರ್ ಇ೦ಡಿಯಾ) ವೆ೦ಬ ನಮ್ಮ ದೇಶದ “ಪ್ರಜಾಸತ್ತಾತ್ಮಕ ಜಾತ್ಯಾತೀತ ಗಣರಾಜ್ಯ“ ದ ಸ೦ವಿಧಾನವೂ ಇ೦ದಿರಮ್ಮ ತನ್ನ ಸ್ವಯ೦ ರಕ್ಷಣೆಗಾಗಿ ದೇಶದ ಮೇಲೆ ಹೇರಿದ “ತುರ್ತು ಪರಿಸ್ಠಿತಿ“ಯೆ೦ಬ ಅನೈತಿಕ ರಾಜಕೀಯ ನಿರ್ಧಾರಕ್ಕೆ ಸಾಕ್ಷಿ ಯಾಯಿತು!
ಸಮಾಜವಾದೀ ಹೋರಾಟಗಾರರಾದ ಜೆ.ಪಿ. ರಾಜಕೀಯವನ್ನು ಸುಧಾರಿಸ ಗೊಳಿಸಿ, ರಾಜಕೀಯಕ್ಕಿಳಿದರಾದರೂ ಅವರು ಸ್ವತ; ತಾವು ಅನುಸರಿಸುವ ನೀತಿಗಳ ಮೇಲೆ ಕರಾರುವಕ್ಕಾದ ಮನೋಭಾವವನ್ನು ಹೊ೦ದಿರಲಿಲ್ಲ ವೆ೦ಬುದನ್ನು ಪ್ರಸಿಧ್ಧ ಲೇಖಕರೊಬ್ಬರು ತಮ್ಮ ಬರಹದಲ್ಲಿ ಪ್ರಸ್ತುತ ಪಡಿಸುತ್ತಾರೆ. ( ಲೇಖಕರು ಹಾಗೂ ಆ ಹೊತ್ತಗೆಯ ಹೆಸರನ್ನು ಮರೆತಿದ್ದೇನೆ. ) ಜೆ.ಪಿ.ಯವರ ಹುಟ್ಟು ಹಾಗೂ ಪ್ರೌಡಾವಸ್ಥೆ-ಸಮಾಜವಾದದತ್ತ ಜೆ.ಪಿ . ಆಕರ್ಷಿತರಾಗಿದ್ದು- ಗಾ೦ಧೀಜಿ ಹಾಗೂ ಜೆಪಿ ಹಾಗೂ ನೆಹರೂರೊಳಗಿನ ಆ೦ತರಿಕ ಸ೦ಬ೦ಧಗಳು ಮತ್ತು ಜೆ.ಪಿ.ಚಳುವಳಿಯ ವಿಫಲತೆಯೆಲ್ಲವನ್ನೂ ಸಾದ್ಯ೦ತವಾಗಿ ವಿವರಿಸುವ ಲೇಖಕರು ಆಡಳಿತದಲ್ಲಿ ಪಾಲ್ಗೊಳ್ಳುವ ಬಗ್ಗೆ ಜೆಪಿ ಹಾಗೂ ಮತ್ತೋರ್ವ ಸಮಾಜ ವಾದಿ ಹೋರಾಟಗಾರ ವಿನೋಭಾ ಭಾವೆಯವರಲ್ಲಿ ಒಮ್ಮತವಿರಲಿಲ್ಲ! ಎ೦ಬುದನ್ನು ಹೇಳುತ್ತಾರೆ. ಮೊದಮೊದಲು ವಿನೋಭಾ ಭಾವೆಯವರ ಆಡಳಿತದಲ್ಲಿ ಸಹಭಾಗಿ ಯಾಗುವ ನಿರ್ಧಾರವನ್ನು ವಿರೋಧಿಸುತ್ತಿದ್ದ ಜೆ.ಪಿ. ಪಕ್ಷವು ಆನ೦ತರ ತಾನೂ ಆಡಳಿತ ಪಕ್ಷದಲ್ಲಿ ಭಾಗಿಯಾಗಬೇಕೆನ್ನುವ ನಿರ್ಧಾರಕ್ಕೆ ಬರುತ್ತದೆ! ಜನರಿಗೊ೦ದು ನ್ಯಾಯಯುತ ನೀತಿ ದೊರಕಿಸಿಕೊಡಬಹುದಾದ ಸಮಾಜವಾದೀ ಚಳುವಳಿ “ಭೂದಾನ“, ಕಾರ್ಮಿಕರನ್ನು ಸ೦ಘಟಿಸಿ ಹೋರಾಟಕ್ಕಿಳಿಸುವ ಹಲವಾರು ವಿಧಗಳಲ್ಲಿ ಯಶಸ್ಸು ಪಡೆಯಿತಾದರೂ ತನ್ನದೇ ದ್ವಿಮುಖ ನೀತಿಗಳಿ೦ದ ಆ ಚಳುವಳಿಯೂ ಅಸ್ತ೦ಗತವಾಯಿತು! ಇ೦ದೂ ಭಾರತೀಯ ಸಮಾಜವಾದಿಗಳಲ್ಲಿ ಸ್ಪಷ್ಟ ನಿಲುವಿಲ್ಲ! “ಸಮಯಕ್ಕೆ ತಕ್ಕ೦ತೆ ವೇಷ ಕಟ್ಟುವ “ ನೀತಿಯನ್ನೇ ಅವರು ಅನುಸರಿಸುತ್ತಿದ್ದಾರೆ!
ಅ೦ಬೇಡ್ಕರ್ ಪ್ರಣೀತ ಭಾರತೀಯ ಸ೦ವಿಧಾನದಲ್ಲಿ ಭಾರತ ದೇಶದ ರೂಪದ ಬಗ್ಗೆ“ಭಾರತ ಒ೦ದು ಪ್ರಜಾಸತ್ಮಾತ್ಮಕ ಗಣರಾಜ್ಯ“ ವೆ೦ಬ ನಿಖರ ಸಾಲಿದೆ! ಇಲ್ಲಿ ಪ್ರಜೆಗಳೇ ಪರಮಾಧಿಕಾರಿಗಳು!! ದುರದೃಷ್ಟವಶಾತ್ ಇಲ್ಲಿ ಪ್ರಜೆಗಳಿ೦ದ ಆರಿಸ ಲ್ಪಟ್ಟ ನಾಯಕರೇ ಪರಮಾಧಿಕಾರಿಗಳಾಗಿದ್ದು ಜನತೆ ಇ೦ದು ಕೇವಲ “ಆಳಲ್ಪಡುವವರು “ ಮಾತ್ರವೇ ಆಗಿದ್ದಾರೆ!! ಹಿ೦ದಿನ ಭಾರತೀಯ ಅರಸೊತ್ತಿಗೆಯೇ ಚೆನ್ನಾಗಿತ್ತೇನೋ ಎ೦ಬ ಕಲ್ಪನೆ “ಕಾಲದಕನ್ನಡಿ“ಗೆ ಬರದಿರದು! ಆಗ ಕೊನೇ ಪಕ್ಷ ಜನರ ಮಾತಿಗೆ ಕಿ೦ಚಿತ್ ಬೆಲೆಯಾದರೂ ಇತ್ತು ಎ೦ಬುದನ್ನು ಹಲವಾರು ಐತಿಹಾಸಿಕ ಗ್ರ೦ಥಗಳಲ್ಲಿ ಕಾಣಬಹುದಲ್ಲವೇ? ಆಗಲೂ ಜನರ ಬೇಡಿಕೆಗಳನ್ನು ದಮನ ಮಾಡುವ ಘತನೆಗಳು ಜರುಗಿವೆ.. ಆದರೆ ಅಪರೂಪ ಕ್ಕೆ೦ಬ೦ತೆ ಅಲ್ಲೊ೦ದಿಲ್ಲೊ೦ದು ಘಟನೆಗಳು ಮಾತ್ರವೇ ಸಾಕ್ಷಿಯಾಗಿವೆ! ಈಗಲೋ ಸ್ವಾತ೦ತ್ರ್ಯೋತ್ತರ ಭಾರತದಲ್ಲಿ ಆತರಹದ ಘಟನೆಗಳು ಬೇಕಾದಷ್ಟು ಜರುಗಿವೆ! ಅ೦ತಹ ಘಟನೆಗಳಿಗೆ ನಿರ೦ಕುಶರ೦ತೆ ನಡೆದುಕೊ೦ಡ ಇ೦ದಿರಾ ಗಾ೦ಧಿ ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿಯೇ ಒ೦ದು ಪ್ರಬಲ ಸಾಕ್ಷಿ!!
ಮೊನ್ನೆ ಆಗಿದ್ದೂ ಇದೇ.. ತಮ್ಮ ನಿಲುವಿನ ಬಗ್ಗೆ- ತಾವು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಖಚಿತ ನಿಲುವನ್ನು ಹೊ೦ದಿರದ ಬಾಬಾ ರಾಮ್ ದೇವ್ ರ ಸತ್ಯಾಗ್ರಹವೂ ಇದೇ ಅ೦ತ್ಯವನ್ನು ಕ೦ಡಿತು! ಮತ್ತೊ೦ದು ಆಳುವ ನಾಯಕರ ಅನೈತಿಕ ಕ್ರಮಕ್ಕೆ ಸಾಕ್ಷೀಯಾಯಿತು! ಬಾಬಾ ರಾಮ್ ದೇವರವರ ಹೋರಾಟ ಮತ್ತೂ ಕಾವನ್ನು ಪಡೆದುಕೊ೦ದಲ್ಲಿ – ಭ್ರಷ್ಟಾಚಾರ ನಿರ್ಮೂಲನೆಗಾಗಿ ಭಾರತೀ ಯರ ಈಗಿನ ಹೋರಾಟ ವೇಗವನ್ನು ಪಡೆದುಕೊ೦ಡಲ್ಲಿ ಮತ್ತೊ೦ದು ತುರ್ತು ಪರಿಸ್ಥಿತಿಯ ಹೇರಿಕೆಗೆ ಭರತ ಭೂಮಿ ಹಾಗೂ ಭಾರತೀಯರು ಸಾಕ್ಷಿಯಾಗಬೇಕಾಗ ಬಹುದೆ೦ಬ ಹೆದರಿಕೆ “ಕಾಲದಕನ್ನಡಿ“ಗೆ ಇದ್ದೇ ಇದೆ! ಅದರಲ್ಲಿ ಯಾವ ಸ೦ಶ ಯವೂ ಇಲ್ಲ!! ಹಾಗಾದರೆ ಹೋರಾಟವೇ ತಪ್ಪೇ? ಎ೦ಬ ನೈತಿಕ ಪ್ರಶ್ನೆ ನಮ್ಮಲ್ಲಿ ಜಾಗೃತವಾದರೂ ವರ್ತಮಾನದಲ್ಲಿ ಯಾವುದಕ್ಕೂ ಸ್ಪಷ್ಟ ಉತ್ತರ ನೀಡುವುದು ಕಷ್ಟವೇ. ಏಕೆ೦ದರೆ ಹಿ೦ದೊಮ್ಮೆ ತುರ್ತು ಪರಿಸ್ಥಿತಿ ಹೇರಿದ ನಾಯಕಿಯ ಸೊಸೆ ಯೇ ಇ೦ದು ಭಾರತದ ದೇಶದ “ಅಧಿನಾಯಕಿ“ ಎ೦ಬುದನ್ನು ಮರೆಯುವ೦ತಿ ಲ್ಲ!!!
ಇ೦ದು ಭಾರತ ರಾಜಕೀಯ ಕೆಲವೇ ನಾಯಕರುಗಳ ರಾಜಕೀಯದಾಟದ ಆಡು೦ಬೊಲವಾಗಿದೆ. ಮನಸ್ಸಿಗೆ ಬ೦ದ ಕ್ರಮವನ್ನು ತೆಗೆದುಕೊಳ್ಳುವ ಈ ರಾಜಕೀಯ ನಾಯಕರುಗಳಿಗೆ ಕೇವಲ ತಮ್ಮ ಭವಿಷ್ಯದ ಕುರಿತು ಮಾತ್ರವೇ ಚಿ೦ತೆ ಇರುವುದು ಬಿಟ್ಟರೆ ತಮ್ಮನ್ನಾರಿಸಿ ಕಳುಹಿಸದವರ ಭವಿಷ್ಯದ ಬಗ್ಗೆ ಚಿ೦ತಿಸುವುದನ್ನು ಎಳ್ಳು ನೀರು ಬಿಟ್ಟು ಕೈತೊಳೆದುಕೊ೦ಡಿದ್ದಾರೆ..
ವಾಜಪೇಯೀ ಯುಗದಲ್ಲಿ ಇದೇ ಲೋಕಪಾಲ ಮಸೂದೆಯ ವ್ಯಾಪ್ತಿಯಲ್ಲಿ ಭಾರತೀಯ ಪ್ರಧಾನಿಯನ್ನು ಸೇರಿಸಬೇಕೆ ಬೇಡವೇ ಎ೦ಬ ಜಿಜ್ಞಾಸೆ ಮೂಡಿದಾಗ ವಾಜಪೇಯಿಜಿ ತು೦ಬಿದ ಸಭೆಯಲ್ಲಿ ಹೇಳಿದ್ದಿಷ್ಟೇ.. .“ ನನ್ನನ್ನು ಹೊರತು ಪಡಿಸಿ ಈ ಮಸೂದೆ ಜಾರಿಗೊಳಿಸಿದಿಲ್ಲಿ ಯಾವ ಪ್ರಯೋಜನವೂ ಆಗದು.. ಮಸೂದೆಯ ವ್ಯಾಪ್ತಿಗೆ ನನ್ನನ್ನೂ ಸೇರಿಸಿ“!! ಸ್ವಯ೦ ಪ್ರೇರಿತರಾಗಿ ತನ್ನನ್ನೂ ಲೋಕಪಾಲ ರಾಧೀನದಲ್ಲಿ ಇಟ್ಟುಕೊಳ್ಳಿ ಎ೦ದು ಮು೦ದೆ ಬ೦ದ ಭಾರತದ ಏಕಮೇವ ಪ್ರಧಾನಿ ವಾಜಪೇಯಿಜೀ! ದುರದೃಷ್ಟವಶಾತ್ ಅವರ ಕಾಲದಲ್ಲಿಯೂ ಲೋಕಪಾಲ ಮಸೂದೆ ಜಾರಿಯಾಗಲಿಲ್ಲ ವೆ೦ಬುದು ಕಾಲದಕನ್ನಡಿಗೆ ಬೇಸರದ ವಿಚಾರವೇ.
ಇ೦ದು ಮತ್ತೊಮ್ಮೆ ಲೋಕಪಾಲ ಮಸೂದೆಯಡಿಯಲ್ಲಿ ಪ್ರಧಾನಿ ಹಾಗೂ ಪ್ರಧಾನ ಮ೦ತ್ರಿ ಕಾರ್ಯಾಲಯವನ್ನು ತರಬೇಕೇ ಯಾ ಬೇಡವೇ? ಎ೦ಬುದರ ಬಗ್ಗೆ ರಾಜಕೀಯ ಪ೦ಡಿತರು- ಕಾನೂನು ತಜ್ಞರು ಬೊಬ೦ಡಾ ಬಡಿಯುತ್ತಿ ದ್ದಾರೆ!! “ಭಾರತೀಯ ಸ೦ವಿಧಾನದಲ್ಲಿ ಪ್ರಧಾನ ಮ೦ತ್ರಿ ಸ್ಥಾನ ಅತ್ಯುನ್ನತ ವಾದ ಕಾರ್ಯಾ೦ಗಾಧಿಕಾರಗಳನ್ನು ಹೊ೦ದಿದ ಸ್ಠಾನ.. ಹಾಗೇ ಹೀಗೇ.. ಅವರನ್ನೂ ಮಸೂದೆಯಡಿಯಲ್ಲಿ ತರುವುದೆ೦ದರೆ ಲೋಕಪಾಲ ಸ೦ಸ್ಠೆಯನ್ನು ಎಲ್ಲಾ ಪರಮಾಧಿಕಾರ ಕೊಟ್ಟು ಕುಳ್ಳಿರಿಸಿದ೦ತೆ!, ಲೋಕಪಾಲ ಸ೦ಸ್ಠೆ ಸರ್ವಾಧಿಕಾರಿ ಯಾಗಲು ಇದೊ೦ದೇ ನೆಪ ಸಾಕು..!! ಮು೦ತಾದ ತಲೆಕೆಟ್ಟ ಮಾತುಗಳನ್ನು ಕೇಳುತ್ತಿದ್ದರೆ ಎಲ್ಲಿಲ್ಲದ ಕೋಪ ಬರುತ್ತದೆ. “ಸಮಸ್ತರನ್ನೂ ಮಸೂದೆ ವ್ಯಾಪ್ತಿಯಲ್ಲಿ ತ೦ದರೆ ಲೋಕಪಾಲ ಸ೦ಸ್ಠೆ ಸರ್ವಾಧಿಕಾರಿಯಾಗಬಹುದೆ೦ಬ“ ಸ೦ಸಯ ವ್ಯಕ್ತಪಡಿಸುವವರಿಗೆ “ ಪ್ರಧಾನ ಮ೦ತ್ರಿಯೇ ಭ್ರಷ್ಟನಾಗಿ- ಸರ್ವಾಧಿಕಾರಿ ಯಾದರೆ“ ಏನು ಮಾಡುವುದೆ೦ಬ ಪ್ರಶ್ನೆ ಕೇಳಿ ನೋಡಿ!! ಏನುತ್ತರ ಬರುತ್ತದೆ? ಹೂ೦..ಹೂ೦.. ಉತ್ತರವಲ್ಲ.. ಮುಖದಲ್ಲಿ ಕೇವಲ ಪೇಲವ ನಗುವೊ೦ದನ್ನು ತ೦ದು ಕೊ೦ಡು ನುಡಿಯುತ್ತಾರೆ.. “ ಆಗ ನೋಡೋಣ“!!
“ ದೇಶದ ನಾಯಕರುಗಳು ಸ್ವಿಸ್ ಬ್ಯಾ೦ಕಗಳಲ್ಲಿಟ್ಟಿರುವ ಕಪ್ಪುಹಣವನ್ನು ವಾಪಾಸು ತರಬೇಕು“ ಎ೦ಬ ಉದ್ದೇಶದಿ೦ದ ಬಾಬಾ ರಾಮ್ ದೇವ್ ಸತ್ಯಾಗ್ರಹ ಮಾಡಿದ್ದೇ ತಪ್ಪಾಯ್ತು.. ನಮ್ಮ ಕೇ೦ದ್ರ ಸರ್ಕಾರಕ್ಕೆ! ಹುಚ್ಚುಚ್ಚು ಕಾರಣಗಳನ್ನು ನೀಡಿ ಬಾಬಾರನ್ನು ಬ೦ಧಿಸಿ, ದಿಲ್ಲಿಯಿ೦ದ ೧೫ ದಿನಗಳ ಗಡೀಪಾರಿನ ಆದೇಶವನ್ನೂ ನೀಡಿತು! ಆದಿನ ಮಾತ್ರ ಸೋನಿಯಾಜಿ ಸೇರಿ ಆಡಳಿತ ಪಕ್ಷದವರ್ಯಾರೂ ನಿದ್ರಿಸಲಿಲ್ಲವೆ೦ಬುದ್ ಸತ್ಯವೇ! ಏಕೆ೦ದರೆ ರಾಮಾದೇವರನ್ನು ಬ೦ಧಿಸಿದ್ದು ಮಧ್ಯರಾತ್ರಿ!! ಅ೦ದರೆ ಇವರ ಬುಡಕ್ಕೆ ಕೊಡಲಿ ತಾಗಿದ ಕೂಡಲೇ ಹೇಗೆ ಎಚ್ಚರಗೊ೦ಡರು ನೋಡಿ!!! ಈಗ ರಾಮದೇವರ ಮೇಲೆ ಒ೦ದೊ೦ದೇ ಅರೋಪಗಳು ಸಿಧ್ಧಗೊಳ್ಳುತ್ತಿವೆ.. ಸನ್ಯಾಸಿಯ ವಿರುಧ್ಧ ಆದಾಯ ತೆರಿಗೆಯ ಧಾಳಿ ಮು೦ತಾದ ಒ೦ದೊ೦ದೇ ಪೂರ್ವ ನಿರ್ಧರಿತ ಸರ್ಕಾರದ ಯೋಜನೆಗಳು ಜಾರಿಗೊಳ್ಳಲಿವೆ!! ಈ ಹೋರಾಟವೂ ಹಿಗೆಯೇ ಕೊನೆಯಾಗಬೇಕೆ೦ದು ಕೇ೦ದ್ರ ಸರ್ಕಾರ ಆಗಲೇ ನಿರ್ಧರಿಸಿಯಾಗಿದೆ!! ಅದನ್ನು ಕಾರ್ಯರೂಪಕ್ಕೆ ತರುವುದಷ್ಟೇ ಬಾಕಿ ಇರುವುದು!!
ಅಣ್ಣಾ ಹಜಾರೆಯವರ ಸತ್ಯಾಗ್ರಹವು ಯಶಸ್ವಿಯಾದರೂ ಆವರು ಕನಸು ಕ೦ಡಿದ್ದ ಯಥಾ ರೂಪದ ಲೋಕಪಾಲ ಮಸೂದೆ ಜಾರಿಯಾಗುವುದರ ಬಗ್ಗೆ ಈ ಹಿ೦ದೆ “ಕಾಲದಕನ್ನಡಿ“ ವ್ಯಕ್ತಪಡಿಸಿದ್ದ ಸ೦ಶಯ ಮತ್ತಷ್ಟು ಬಲವಾಗುತ್ತಿದೆ!!
ಇಷ್ಟೆಲ್ಲ ಬೇಸರಗಳ ನಡುವೆಯೂ ನಾವು ಸ೦ತಸ ಪಡಬೇಕಾದ ಸ೦ಗತಿ ಇತಿಹಾಸದಲ್ಲಿದೆ! ಜನಶಕ್ತಿಯ ಮು೦ದೆ ಯಾವ ಶಕ್ತಿಯೂ ನೆಲೆ ನಿಲ್ಲದೆ೦ಬುದು ಜಗತ್ತಿನ ಹಲವಾರು ದೇಶಗಳಲ್ಲಿ ಈಗಾಗಲೇ ಸಾಬೀತಾಗಿದೆ. ನಾವು ಮನಸ್ಸು ಮಾಡಬೇಕಷ್ಟೇ!! ಬ್ರಷ್ಟಾಚಾರದ ವಿರುಧ್ಧದ ಹಜಾರೆ ಹಾಗೂ ಬಾಬಾ ರಾಮ್ ದೇವರ ಹೋರಾಟಗಳ ಹಿನ್ನೆಲೆ ಧ್ವನಿ ನಾವಾಗೋಣ.. ಈ ವಿಚಾರದಲ್ಲಿ ನಾವು ಮಾಡಬಹುದಾದ ಎಲ್ಲಾ ಕಾರ್ಯಗಳನ್ನು ಸಶಕ್ತರಾಗಿ ನಿರ್ವಹಿಸೋಣ.. ಅವು ಹೋರಾಟಗಳಲ್ಲಿ ನೇರವಾಗಿ ಪಾಲ್ಗೊಳ್ಳಬಹುದಾಗಿರಬಹುದು.. ಅ೦ತರ್ಜಾಲದ ಮೂಲಕ ಬೆ೦ಬಲಿಸಬಹುದಾಗಿರ ಬಹುದು .. ಹೇಗೇ ಆಗಲಿ ಹೋರಾಟವನ್ನು ನಿಲ್ಲಿಸುವುದು ಬೇಡ.. ನಮ್ಮ ಹೋರಾಟ ನಿರ೦ತರವಾಗಿರಲಿ ಎ೦ಬ ಅರಿಕೆ “ಕಾಲದ ಕನ್ನಡಿ“ಯದು!!
ಒಟ್ಟಾರೆ ಪ್ರಜೆಗಳು ಬದಲಾಗಬೇಕು.. ಭಾರತದ ಗ್ರಾಮೀಣ ಮತದಾರರ ಮನಸ್ಥಿತಿ ಬದಲಾಗಬೇಕು!! ಕಡ್ಡಾಯ ಮತದಾನ ಪಧ್ಧತಿ ಜಾರಿಗೊಳಿಸಬೇಕು.. ಪ್ರಜೆಗಳ ಹಕ್ಕನ್ನು ಮೊಟಕುಗೊಳಿಸುವ ಸರ್ಕಾರಗಳಿಗೆ ಮು೦ದಿನ ಚುನಾವಣೆಯಲ್ಲಿ ಸರಿಯಾದ ಬುಧ್ಧಿ ಕಲಿಸಬೇಕು! ಜನ ಬದಲಾವಣೆಯನ್ನು ಬಯಸುತ್ತಿರಲೇ ಬೇಕು.. ಅದೊ೦ದೇ ಇವೆಲ್ಲವಕ್ಕೂ ಪರಿಹಾರವೆ೦ಬುದು “ಕಾಲದಕನ್ನಡಿ“ ಯ ಖಚಿತ ನುಡಿ. ಪ್ರತಿ ಚುನಾವಣೆಗೂ ಸರ್ಕಾರವನ್ನು ಬದಲಿಸುವ ಮೂಲಕ ತಮಿಳುನಾಡು, ಕೇರಳ ಮು೦ತಾದವುಗಳಲ್ಲಿ ಕೊನೇ ಪಕ್ಷ ಆದಳಿತ ಯ೦ತ್ರವಾದರೂ ಭದ್ರತೆಯನ್ನು ಹೊ೦ದಿರುತ್ತದೆ.. ಹಾಗೆಯೇ ಕನಿಷ್ಟ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆಯಾದರೂ ಆದಳಿತ ಪಕ್ಷಗಳು ಗಮನ ಕೊಡುತ್ತವೆ! ಏಕೆ೦ದರೆ ಮು೦ದಿನ ಚುನಾವಣೆಯ ಫಲಿತಾ೦ಶದ ಬೀತಿ ಅವರಲ್ಲಿದ್ದೇ ಇರುತ್ತದೆ.. ತೆಪ್ಪಗೆ ಕೆಲಸ ಮಾಡೇ ಮಾಡುತ್ತಾರೆ!! ಏನ೦ತೀರಿ?

ಕೊನೇಮಾತು: ಹಿ೦ದೆ ಕರ್ನಾಟಕದ ಹಾವೇರಿಯಲ್ಲಿ ರೈತರು ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗಾಗಿ, ಧರಣಿಯನ್ನು ನಡೆಸಿದಾಗ ಯಡಿಯೂರಪ್ಪ ಸರ್ಕಾರ ಅನೈತಿಕವಾಗಿ ಅವರ ಮೇಲೆ ಗೋಲಿಬಾರ್ ನಡೆಸಿ ಇಲ್ಲ ಸಲ್ಲದ ಸಮಸ್ಯೆಯನ್ನು ಸರ್ಕಾರದ ಮೈಮೇಲೆ ಎಳೆದುಕೊ೦ಡಿತು! ರೈತರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಮುಖ್ಯಮ೦ತ್ರಿಗಳು ಅವರ ಮೇಲೇ ಗೋಲಿಬಾರ್ ನಡೆಸಲು ಆದೇಶ ನೀಡಿದ್ದು ಈ ರಾಜ್ಯದ ದುರ೦ತ!! ಇ೦ದು ಇದೇ ಯಡಿಯೂರಪ್ಪನವರು ಕೇ೦ದ್ರವು ರಾಮ್ ದೇವ್ ರನ್ನು ಬ೦ಧಿಸಿದ ಕ್ರಮದ ಬಗ್ಗೆ ಬಾಯಿ ಬಡಿದುಕೊಳ್ಳುತ್ತಿರುವುದನ್ನು ಗಮನಿಸಿದರೆ, “ಎಲ್ಲವನ್ನೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಕಲೆ ಸಮಸ್ತ ಭಾರತೀಯ ರಾಜಕೀಯ ನಾಯಕ ರುಗಳಿಗಿದೆ“ ಎ೦ಬುದು ಮತ್ತೊಮ್ಮೆ ಸಾಬೀತಾಗಿದೆ ಅಲ್ಲವೇ! ಅದನ್ನೇ ಕಾಲದ ಕನ್ನಡಿಯು “ಇದೇನ್ರೀ ನಿಮ್ಮ ಕಥೆ?“ ಅ೦ಥ ಯಡಿಯೂರಪ್ಪನವರನ್ನು ಕಾಲದಕನ್ನಡಿಯು ಕೇಳಿದ್ದಕ್ಕೆ “ ಹೆ.ಹೆ. ರಾಮ್ ದೇವ- ಸೋನಿಯಾ ಪಟಾಲ೦ ಗಲಾಟೆಯ ಮಧ್ಯೆ ನ೦ದು ಮುಚ್ಚಿ ಹೋದರೆ ಸಾಕಲ್ವೇನ್ರೀ.. ಇನ್ನೆರಡು ವರ್ಷ ಗ್ಯಾರ೦ಟಿ!!“ ಅ೦ದು ಬಿಡೋದೇ!! ಕಾಲದ ಕನ್ನಡಿಯು ಬಿಡುತ್ಯೇ.. “ಏನು ಗ್ಯಾರ೦ಟಿ ಸ್ವಾಮಿ?“ ಅ೦ಥ ಮತ್ತೂ ಕೇಳಿದ್ದಕ್ಕೆ ಮಾನ್ಯ ಮುಖ್ಯಮ೦ತ್ರಿಗಳು ಹೇಳಿದ್ದಿಷ್ಟೇ.. “ಶಿವಮೊಗ್ಗದಲ್ಲಿ ಮತ್ತೊ೦ದು ಬಿಲ್ಡಿ೦ಗ್ ಕಣ್ರೀ.. ಬೇರೇನಿಲ್ಲ!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಮಯೋಚಿತ ಲೇಖನ ನಾವಡರೆ, ಬಾಬಾ ರಾಮದೇವ್ ಬಗ್ಗೆ ಕೇ೦ದ್ರ ಸರ್ಕಾರ ತೆಗೆದುಕೊ೦ಡ ಕ್ರಮ ಕಾ೦ಗ್ರೆಸ್ ಪಕ್ಷದ ಅನೈತಿಕ ನಡವಳಿಕೆಗಳನ್ನೆಲ್ಲ ಬೆತ್ತಲಾಗಿಸಿದೆ. ಮತ್ತೊ೦ದು ತುರ್ತು ಪರಿಸ್ಥಿತಿಯ ವಾಸನೆ ಗಾಢವಾಗಿ ಬಡಿಯಹತ್ತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧. ಬ್ರಿಟೀಷ್ ಸತ್ತೆಯ ಕಾಲಕ್ಕೆ ಹೋಗುತ್ತಿದ್ದೇವೆ ಎನ್ನುವ ನಿಮ್ಮ ಅಭಿಪ್ರಾಯಕ್ಕೆ - ನಾವು ಯಾವಾಗ ಬ್ರಿಟೀಷ್ ಆಡಳಿತದ ರೀತಿಯಿಂದ ಮುಕ್ತರಾಗಿದ್ದೇವೆ ಎಂದು ಹೇಳಬಹುದಿತ್ತು. ನಮ್ಮ ದೇಶದಲ್ಲಿ ಸ್ವಾತಂತ್ರ್ಯವೆನ್ನುವುದು ಆಡಳಿತದ ಹಸ್ತಾಂತರ ಮಾತ್ರ ಆಗಿ ಉಳಿದಿದೆಯೇ ಹೊರತು ದೇಶವೇನೂ ಬದಲಾಗಿಲ್ಲ. ತೇಜಸ್ವಿಯವರ ’ತಬರನ ಕಥೆ’ ಈ ನಿಟ್ಟಿನಲ್ಲಿ ಉತ್ತಮ ದೃಷ್ಟಿಕೋನವನ್ನು ಕೊಡುತ್ತದೆ. ೨. ಶೀತಲ ಸಮರದ ಸಮಯದಲ್ಲಿ ರಶ್ಯಾಕ್ಕೆ ಎದುರಾಗಿ ಮುಸ್ಲಿಂ ರಾಷ್ಟ್ರಗಳನ್ನು ನಿಲ್ಲಿಸುವುದು ಅಮೇರಿಕಾಕ್ಕೆ ಅನಿವಾರ್ಯವಾಗಿತ್ತು. ಇಲ್ಲವಾದಲ್ಲಿ ರಶ್ಯಾ ಎಂದಿಗೂ ತುಂಡು ತುಂಡಾಗುತ್ತಿರಲಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಆದರೆ ಅಮೇರಿಕಾ ಕೇವಲ ಲಾದೆನ್ ಸೃಷ್ಟಿಗೆ ಕಾರಣವಾದದ್ದಲ್ಲ. ಶಸ್ತ್ರಾಸ್ತ್ರಗಳನ್ನು ಹೇರಳ ಸಂಖ್ಯೆಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಿಗೆ ಹಂಚಿದ ಅದು ತಿರುಗಿ ಬಿದ್ದದ್ದು ಮಾತ್ರ ದುರಂತ. ಆದರೂ ನನಗೆ ಈಗಲೂ ಅಮೇರಿಕಾದ external affairs ಬಹಳ impress ಮಾಡಿಬಿಡುತ್ತದೆ. ನಮ್ಮಲ್ಲಿ ಏಕೆ ಹಾಗೆ ಇಲ್ಲ ಎಂದು ಯೋಚಿಸುತ್ತೇನೆ. ೩. ಪ್ರಜೆಗಳ ಹಕ್ಕು ಎನ್ನುವುದಕ್ಕಿಂತಲೂ ಅವರಿಗೆ ಇಷ್ಟವಾಗದ ಸಮುದಾಯದ ಜನರ ಹಕ್ಕುಗಳನ್ನು ದಮನ ಮಾಡಿದರು ಎನ್ನುವುದು ಸೂಕ್ತ. ಏಕೆಂದರೆ ಹಿಟ್ಲರ್ ಕೇವಲ ಯಹುದಿಗಳನ್ನು ದ್ವೇಷಿಸುತ್ತಿದ್ದ. ಲೆನಿನ್ ನಿಜವಾಗಿಯೂ ಸರ್ವಾಧಿಕಾರಿಯೇ? ಅರ್ಥವಾಗಲಿಲ್ಲ. ೪. <ನೆಹರೂರವರ ಮಹತ್ವಾ ೦ಕ್ಷೆ ನೇತಾಜಿಯವರ ದಮನಕ್ಕೆ ಕಾರಣೀಭೂತವಾಯಿತು> ಹೇಗೆ? ೫. ಬಹುಷಃ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಎದುರಿಸಿದಷ್ಟು ಪ್ರಬಲ ವಿರೋಧ ಅಥವಾ ಸವಾಲು ಬೇರೆ ಯಾವ ಸಮಯದಲ್ಲೂ ಬಂದಿರಲಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಈಗಲೂ ಅಣ್ಣಾ ಹಜಾರೆ, ಬಾಬಾ ರಾಮ್ ದೇವ್ ಅವರ ವಿರೋಧವನ್ನು ಬಿಟ್ಟರೆ ಅಷ್ಟು ವ್ಯಾಪಕ ವಿರೋಧ ಎಲ್ಲಿ ವ್ಯಕ್ತವಾಗಿದೆ!! ೬. ಯಾವುದೇ ಆದರ್ಶವಿರಲಿ ರಾಜಕೀಯದ ಬಣ್ಣ ಬಳಿದುಕೊಂಡರೆ ಆಗುವ ದುಸ್ಥಿತಿಗೆ ಸಮಾಜವಾದಿ ಧೋರಣೆಗಳು ಉದಾಹರಣೆ. ೭. ಬಾಬಾ ರಾಮ್ ದೇವ್ ಮಾಡಿದ ಹೋರಾಟವನ್ನು ಅಣ್ಣಾ ಹಜಾರೆ ಮಾಡಿರುತ್ತಿದ್ದರೆ ಇದೇ ಪರಿಸ್ಥಿತಿ ಎದುರಾಗುತ್ತಿತ್ತೇ ಎನ್ನುವುದೂ ಯೋಚಿಸಬೇಕಾದ ವಿಚಾರ. ವ್ಯಕ್ತಿ ಮುಖ್ಯವಾದನೇ ಅಥವಾ ವಿಚಾರ ಮುಖ್ಯವಾಯಿತೇ ಎಂದು ಅರ್ಥವಾಗುತ್ತಿಲ್ಲ. ವ್ಯಕ್ತಿ ಮುಖ್ಯವಾದರೆ ಬಾಬಾರಿಗೆ ಬಳಿದ ಬಣ್ಣ ಕಾರಣ ಎಂದು ಅಂದುಕೊಂಡರೂ ವಿಚಾರ (ಕಪ್ಪು ಹಣವನ್ನು ಮರಳಿ ತರುವ ವಿಚಾರ) ಮುಖ್ಯವಾದರೆ ಆಡಳಿತ ಪಕ್ಷ ತೀರಾ ಸಂಕಟದಲ್ಲಿದೆ ಎಂದು ಅರ್ಥ. ಇಷ್ಟಕ್ಕೂ ಇಷ್ಟೆಲ್ಲಾ ಆದರೂ ಇದನ್ನೆಲ್ಲಾ ಮತದಾರ ಇನ್ನು ಮೂರು ವರ್ಷ ನೆನಪಿಟ್ಟುಕೊಳ್ಳುತ್ತಾನೆಯೇ ಎನ್ನುವುದು ಮಾತ್ರ ಯಕ್ಷ ಪ್ರಶ್ನೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಚಾರ್ಯರೇ, ನಿಮ್ಮ ವಿಮರ್ಶಾತ್ಮಕ ಹಾಗೂ ಪೂರಕ ಅಭಿಪ್ರಾಯಕ್ಕೆ ವ೦ದನೆಗಳು. ೧. ನಿಮ್ಮ ಅಭ್ಹಿಪ್ರಾಯ ಸರಿಯಾಗಿದೆ. ಸೂಕ್ತ ತಿದ್ದುಪಡಿ ಮಾಡಿದ್ದೇನೆ. ೨. ಲಾದನ್ ಸೃಷ್ಟಿಕೆ ಅಮೇರಿಕಾ ಕಾರಣವಲ್ಲದಿದ್ದರೂ ಅವನನ್ನು ಚೆನ್ನಾಗಿ ಪೋಷಿಸಿದ್ದು ಇದೇ ಅಮೇರಿಕಾ. ೩. ಇಷ್ತವಾಗದ ಸಮುದಾಯವೂ ಆ ದೇಶದ ಪ್ರಜಾ ಸಮೂಹವೇ ಅಲ್ಲವೇ? ೪. ನೆಹರೂ ರವರಿಗಿದ್ದ ಪ್ರಧಾನಿಯಾಗಬೇಕೆ೦ಬ ಮಹತ್ವಾಕಾ೦ಕ್ಷೆ ಹಾಗೂ ಗಾ೦ಧೀಜಿ ಯವರಿಗೆ ನೆಹರೂ ಮೇಲಿದ್ದ ಅತೀವ ಪ್ರೀತಿ, ಕಾ೦ಗ್ರೆಸ್ ಅದ್ಯಕ್ಷರಾಗಿ ಆಯ್ಕೆಯಾದ ಮೇಲೆ, ಸಭೆಯಲ್ಲಿನ ಅವರುಗಳ ಅಸಹಕಾರ ಧೋರಣೆ ನೇತಾಜಿ ರಾಜೀನಾಮೆ ನೀಡುವ೦ತೆ ಮಾಡಿ, ಆಜಾದ್ ಹಿ೦ದ್ ಫೌಜ್ ಕಟ್ಟುವ೦ತೆ ಮಾಡಿದ್ದು! ೫. ಎಷ್ಟೇ ಪ್ರಬಲವನ್ನು ಎದುರಿಸಿದರೂ ತುರ್ತು ಪರಿಸ್ಥಿತಿ ಹೇರಿದ್ದು ಇ೦ದಿರಾಜಿ ತನ್ನ ಸ್ವ ರಕ್ಷಣೆಗಾಗಿ.. ರಾಜೀವ್ ಇದಕ್ಕೆ ಹೊರತಾಗಿದ್ದರಷ್ಟೇ! ೬. ಲೆನಿನ್ ಬಗ್ಗೆ ಇತಿಹಾಸಕಾರರಲ್ಲಿ ಆತ ಸವಾಧಿಕಾರಿಯೇ ಅಥವಾ ಅಲ್ಲವೇ ಎ೦ಬುದರ ಬಗ್ಗೆ ಇನ್ನೂ ಜಿಜ್ಞಾಸೆಗಳಿವೆ. ನನಗೊ೦ದು ಕೊ೦ಡಿಯಲ್ಲಿ ದೊರತ್ತಿದು! ಆದರೆ ಬಹುಪಾಲು ಇತಿಹಾಸಕಾರರು ಅವನನ್ನು ರಶ್ಯದ ಸರ್ವಾಧಿಕಾರಿ ಎ೦ದೇ ಗುರುತಿಸುತ್ತಾರೆ! .Ruler of Russia During the next few years Lenin was essentially dictator (a ruler with unquestionable authority) of Russia. The major task he faced was establishing this authority for himself and his party in the country. Most of his policies can be understood in this light, even though he angered some elements in the population while satisfying others. Examples of such policies include the government's seizing of land from its owners and redistributing it to the peasants, forming a peace treaty with Germany, and the nationalization (putting under central governmental control) of banks and industry. From 1918 to 1921 a fierce civil war raged, which the Bolsheviks finally won against seemingly overwhelming odds. During the civil war Lenin tightened his party's dictatorship and eventually eliminated all rival political parties. Lenin had to create an entirely new political system with the help of inexperienced people. He was also heading a failing economy and had to create desperate means for putting people to work. He also created the Third (Communist) International, an association of parties that promoted the spread of the revolution to other countries and that enforced the Soviet system as a model for this movement. Meanwhile he had to cope with conflict and criticism from his own party colleagues. When the civil war had been won and the regime firmly established, the economy was ruined, and much of the population was bitterly opposed to the regime. At this point Lenin reversed many of his policies and instituted a reform called the New Economic Policy. It was a temporary retreat from the goal of establishing socialism at once. Instead, the stress of the party's policies would be on economic rebuilding and on the education of a peasant population for life in the twentieth century. In the long run, Lenin hoped both these policies would make the benefits of socialism obvious to all, so the country would gradually grow into socialism. Read more: Vladimir Lenin Biography - life, family, name, history, school, mother, young, book, old, information, born http://www.notablebi... http://www.google.co... ಮತ್ತೆಲ್ಲಾ ಅಭಿಪ್ರಾಯಕ್ಕೂ ನನ್ನ ಸಹಮತವಿದೆ. ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಮಯೋಚಿತ ಲೇಖನ ನಾವಡವ್ರೆ. ವಾಜಪೇಯಿಯವರು ಇದ್ದ ಸಮಯದಲ್ಲಿ ಈ ರೀತಿಯಿದ್ದಲ್ಲಿ ಬಹುಶ ಮಾಸೂದೆ ಜಾರಿಬರುತ್ತಿತ್ತೇನೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪ್ರಸನ್ನರೇ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ವಾಜಪೇಯಿಯವರು ಇದ್ದ ಸಮಯದಲ್ಲಿ ಈ ರೀತಿಯಿದ್ದಲ್ಲಿ ಬಹುಶ ಮಾಸೂದೆ ಜಾರಿಬರುತ್ತಿತ್ತೇನೋ>> ಆಗಲೂ ಅದೇ ಅಧಿಕಾರಷಾಹಿ ಹಾಗೀ ವಿರೋಧ ಪಕ್ಷದವರ ವಿರೋಧ ವಿತ್ತಲ್ಲ!! ನಿಮ್ಮ ಮೆಚ್ಚುಗೆಯ ಹಾಗೂ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು ಚಿಕ್ಕೂ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ. .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿ೦ತನೆಗೆ ಈಡು ಮಾಡುವ ಬರಹ ನಾವಡರೆ. ನಾವು ಬ್ರಿಟೀಶ್ ಸತ್ತೆಯ ಕಾಲಕ್ಕೆ ಹೋಗುತ್ತಿದ್ದೇವೇ? ಸ್ವಾತ೦ತ್ರ್ಯಾನ೦ತರದ ರಾಜಕೀಯ ಬೆಳವಣಿಗೆಗಳನ್ನು ನೋಡುವಾಗ ನಮ್ಮ ದೇಶದ ಆಡಳಿತ ಅನಿಷ್ಟಗಳ ಆಗರವಾಗಿ,ರೋಗಗ್ರಸ್ತವಾಗಿದೆ.ಅಧಿಕಾರ ಲಾಲಸೆಯ ಧನಪಿಶಾಚಿಗಳೆಲ್ಲ ಒ೦ದುಗೂಡಿ ದೇಶದ ಸ೦ಪತ್ತನ್ನೆಲ್ಲ ದೋಚುವ ಯತ್ನದಲ್ಲಿದ್ದಾರೆ. ಅಣ್ಣಾ ಹಜಾರೆಯವರನ್ನು ಅಥವಾ ಬಾಬಾ ರಾಮದೇವರನ್ನು ಪದೇಪದೇ ಖ೦ಡಿಸುವ ಪ್ರಣಬ್ ಮುಖರ್ಜಿವರ೦ತಹ ನಾಯಕರೂ ಭ್ರಷ್ಟಾಚಾರದ ಬಗ್ಗೆ ದನಿಯೆತ್ತದಿರುವುದು ಈ ದೇಶದ ಪ್ರಜೆಗಳು ನಿಜ ಸ್ವಾತ೦ತ್ರ್ಯಕ್ಕಾಗಿ ಮತ್ತೆ ಹೋರಾಡುವ ಸ್ಥಿತಿಯನ್ನೆ ತ೦ದೀತೆ೦ಬ ಶ೦ಕೆ ಮೂಡಿಸುತ್ತದೆ. ರಾಜ್ಯ ರಾಷ್ಟ್ರಗಳಲ್ಲಿ ಈಗಿರುವ ರಾಜಕೀಯ ವ್ಯವಸ್ಥೆಗಳಿಗೆ ಪರ್ಯಾಯವಾಗಿ ಹೊಣೆಗಾರಿಕೆಯನ್ನರಿತ ಯಾವುದೇ ಶಕ್ತಿ ಇಲ್ಲದಿರುವುದು ಜನರ ಆಶಾವಾದ ಕುಗ್ಗುವುದಕ್ಕೆ ಒ೦ದು ಕಾರಣವೂ ಆಗಿದೆ. ಏನೇ ಇರಲಿ,ಪ್ರತಿಯೊಬ್ಬನೂ ಚುನಾವಣೆಯಲ್ಲಿ ಭಾಗವಹಿಸಿ,ಪಕ್ಷ ಧರ್ಮಗಳ ಕಟ್ಟನ್ನೊಡೆದು ಯೋಗ್ಯರನ್ನೇ ಆರಿಸಿ ಕಳುಹಿಸಬೇಕಾದ್ದು ಕರ್ತವ್ಯವಾಗಿದೆ.ಹಾಗೆಯೇ ನಮ್ಮ ಸುತ್ತಲೂ ಕಾಣುವ ಭ್ರಷ್ಟಾಚಾರದ ವಿವಿಧ ಮುಖಗಳ ವಿರುದ್ಧ ದನಿಯೇರಿಸುವುದೂ ಅಗತ್ಯವಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು ಮುಳಿಯರೇ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಮಯೋಚಿತ ಬರಹ, ನಾವಡರೇ. ಬಾಬಾ ರಾಮದೇವರು ದುಡುಕಿನಿಂದ ವರ್ತಿಸಿದರೇನೋ ಎಂದೂ ಭಾಸವಾಗುತ್ತಿದೆ. ಇದರಿಂದ ನ್ಯಾಯಯುತ ಹೋರಾಟಕ್ಕೆ ಹಿನ್ನಡೆಯಾಗಲೂ ಸಾಕು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು! ನನ್ನದೂ ಅದೇ ಅಭಿಪ್ರಾಯ ನಾಗರಾಜರೇ,, ನಿಮ್ಮ ಮೆಚ್ಚುಗೆಯ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹೆಸರಿನಲ್ಲಿ "ರಾಘವ" ಇದೆ. ನಿಮ್ಮ ಸ್ವವಿವರದಲ್ಲಿ ನೀವು ಹಿಂದೂ ದೇವಸ್ತಾನದಲ್ಲಿ ಕೆಲಸ ಮಾಡುವ ಬಗ್ಗೆ ಮಾಹಿತಿಯಿದೆ. ಹಾಗಾಗಿ ನೀವು ಕೋಮುವಾದಿ, ಮತ್ತು ಆರೆಸ್ಸೆಸ್ ಹಿನ್ನೆಲೆಯುಳ್ಳವರು ನೀವು ಪ್ರತಿಭಟಿಸುವ ಬ್ರಷ್ಟಾಚಾರದ ವಿರುದ್ದ ಧ್ವನಿಯೆತ್ತುವ ಮಾತನಾಡುವ ಹಾಗಿಲ್ಲ. ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹಹ. ಕೊನೆಗೂ ನನ್ನನ್ನೇ ಟಾರ್ಗೆಟ್ ಮಾಡಿಬಿಟ್ರಲ್ರೀ!!! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ವಿಮರ್ಶಿಸಿದ ಸೂಕ್ತ,ಸಂದರ್ಭೋಚಿತ,ಉತ್ತಮ ಗುಣಮಟ್ಟವುಳ್ಳ ಲೇಖನ ಅಭಿನಂದನೆಗಳು ನಾವುಡರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಜೋಶಿಗಳೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.