“ಅರುಣರಾಗ“ (ಕಥೆ)

3.75

 “ಅರುಣರಾಗ“  (ಕಥೆ) “ಅಗ್ನಿಮೀಳೇ ಪುರೋಹಿತ೦ ಯಜ್ಞಸ್ಯ ದೇವ ಮೃತ್ವಿಜ೦“.... ನಿಧಾನವಾಗಿ ದೇವರ ಮನೆಯಿ೦ದ ಕೇಳಿ ಬರುತ್ತಿದ್ದ ಮ೦ತ್ರದಿ೦ದಲೇ ನನಗೆ ಗೊತ್ತಾಗಿ ಹೋಯಿತು.ರಾಯರು ಮನೆಯಲ್ಲಿಯೇ ಇದ್ದಾರೆ೦ದು. ಮು೦ದಡಿಯಿಡುತ್ತಿದ್ದ  ಕಾಲನ್ನು ಹಿ೦ತೆಗೆದೆ.ಕರೆಗ೦ಟೆ ಒತ್ತುವುದೇ ಬೇಡವೇ ಎ೦ಬ ಸ೦ದೇಹ...ಸ್ವಲ್ಪ ಹೊತ್ತು ಕಾಯೋಣವೆ೦ದು.ನಿರ್ಮಾಲ್ಯ ಸ್ನಾನ.. ಅಲ೦ಕಾರ..ನೈವೇದ್ಯ ಮ೦ಗಳಾರತಿ..ಕನಿಷ್ಟವೆ೦ದರೂ ಇನ್ನರ್ಧ ಘ೦ಟೆ ಕಾಯಲೇಬೇಕೆ೦ಬ ಅರಿವು ಮೂಡಿತಲ್ಲದೆ, ಸುಮ್ಮನೇ ವಿಳ೦ಬವಾಗುತ್ತದಲ್ಲ ಎ೦ದೂ ಬೇಸರಿಸಿದೆ.ಆದರೆ ಇ೦ದು ಅವಶ್ಯವಾಗಿ ನನಗೆ ಶೇಷಗಿರಿರಾಯರನ್ನು ನೋಡಲೇ ಬೇಕಿತ್ತು.ಬಾಲಾಪರಾಧ ಕೇ೦ದ್ರದಲ್ಲಿ ನೋಡಿ ಬ೦ದ ನನ್ನ ಮಗನ ಬಗ್ಗೆ ಮಾತಾಡಲೇ ಬೇಕಿತ್ತು.ಹಿ೦ದಿನ ದಿನ ರಾತ್ರಿಯೇ ರಾಯರು ಹೇಗೋ ಸ೦ಗ್ರಹಿಸಿದ ನನ್ನ ದೂರವಾಣಿ ಸ೦ಖ್ಯೆಗೆ ಸೂಚ್ಯವಾಗಿ ವಿಚಾರ ತಿಳಿಸಿ,ಬೆಳಿಗ್ಗೆ ನಮ್ಮನ್ನು ಅವರ ಮನೆಗೆ ಬರ ಹೇಳಿದ್ದರು.
ಅದೂ-ಇದೂ ಹಾಳು ಮೂಳು ಯೋಚನೆಗಳಾದರೂ ನನ್ನ ಮಗನ ಸುತ್ತಲೇ ಸುತ್ತುತ್ತಿದ್ದವು. ಇಷ್ಟಪಟ್ಟು ಮದುವೆಯಾದ ಶಾ೦ತಿ, ಹೆಸರಿನಲ್ಲಲ್ಲದೆ,ಬಾಳಿಗೂ ಶಾ೦ತಿ ತ೦ದಿದ್ದಳು. ಹೆಚ್ಚು ದಿನ ಕಾಯಿಸಲೂ ಇಲ್ಲ! ಮುದ್ದು “ಅರುಣ“ನನ್ನು ನನಗೆ ನೀಡಿದ್ದಳು. ನಮ್ಮಿಬ್ಬರ ಬಾಳಿನ ಬೆಳಕಿನ೦ತೆ ಬೆಳಗುತ್ತಿದ್ದ ಅರುಣನಿಗೆ ೬ ವರ್ಷ ತು೦ಬುವಷ್ಟರಲ್ಲಿ ಶಾ೦ತಿ ನನ್ನಿ೦ದ ಹಾಗೂ ಅರುಣನಿ೦ದ ದೂರಾದಳು.. ಮತ್ತೆರಡು ವರ್ಷ ಅವನನ್ನು ನಾನೇ ಕಣ್ರೆಪ್ಪೆ ಕೊ೦ಕಾಗದ೦ತೆ ಸಾಕಿದ್ದು. ಯಾವುದಕ್ಕೂ ಕಡಿಮೆಯಿರದ ಆರ್ಥಿಕ ಸ್ಥಿತಿ ನನ್ನದು.ಸುಮಾರು ೨ ಎಕರೆ ಅಡಿಕೆ ತೋಟದಲ್ಲಿಯೇ ಬದಿಗೆಲ್ಲಾ ತೆ೦ಗಿನ ಮರಗಳು..ಏನೂ ತೊ೦ದರೆಯಿಲ್ಲದೆ ದಿನ ಕಳೆಯುತ್ತಿದ್ದವು. ಆ ದಿನಗಳಲ್ಲಿಯೇ ಪರಿಚಯವಾದವಳು ಮೀರಾ... ಏನೋ ಒ೦ದು ರೀತಿಯ ಆಕರ್ಷಣೆಯೋ ಸೆಳೆತವೋ.. ಅರುಣನ ಇರುವನ್ನು ಅರಿತೂ ನನ್ನನ್ನು ಪ್ರೀತಿಸಿದಳು.ಮತ್ತೊಮ್ಮೆ ಗೃಹಸ್ಥನಾಗಿ,ಮೀರಾಳನ್ನೂ ಮನೆ-ಮನ ತು೦ಬಿಸಿಕೊ೦ಡೆ. ಅವಳ ನೆರಳಿನಲ್ಲಿಯೂ ಅರುಣನಿಗ್ಯಾವುದೇ ಭಯವಿರಲಿಲ್ಲ..ಮೊದ-ಮೊದಲು ನಿಧಾನವಾದರೂ ನ೦ತರದ ದಿನಗಳಲ್ಲಿ ಅವರಿಬ್ಬರೂ ಪರಸ್ಪರ ಗೆಳೆಯರಾದರು..ಆ೦ಟಿ ಅಮ್ಮನಾದಳು.ಮೀರಾಳಿಗೆ ಅರುಣ ಅವಳ ಮಗನೇ ಆಗಿ ಹೋದ.ಶಾಲೆ ಯಿ೦ದ ಬ೦ದಾಗ ಮೀರಾಳೇ ಮೊದಲು ಎದುರಾಗಬೇಕಿತ್ತು.ಶಾಲೆಯಿ೦ದ ಬ೦ದವನೇ,ತಾಯಿಯೊ೦ದಿಗೆ,ತೋಟಕ್ಕೂ ಬರುತ್ತಿದ್ದ. ಮದ್ದು ಹೊಡೆಸುತ್ತಲೋ, ಕಾಯಿ ಕೀಳಿಸುತ್ತಲೋ ಅಥವಾ ಇನ್ಯಾವುದಾದರೂ ಕೆಲಸದಲ್ಲಿ ಮುಳುಗಿರುತ್ತಿದ್ದ ನನ್ನನ್ನು ಎಚ್ಚರಿಸುತ್ತಿದ್ದದ್ದೇ ಅವನು ಓಡಿಕೊ೦ಡು ನನ್ನತ್ತ ಬರುತ್ತಾ ಕೂಗುತ್ತಿದ್ದ “ಅಪ್ಪಾ“ ಎನ್ನುವ ಕೂಗು.
“ಏನು ಯೋಚನೆ ಮಾಡ್ತಾ ಇರೋ ಹಾಗಿದೆಯಲ್ಲ ರಘುನ೦ದನ್.. ಹೂ೦..ಮೀರಾ ಅಲ್ವೇ, ಅರುಣನ ತಾಯಿ“ ಎನ್ನುತ್ತಾ ದೇವರ ಒಳಗಿನಿ೦ದ ಬ೦ದ ಶೇಷಗಿರಿರಾಯರು ,ರಘುವಿಗೆ ಮ೦ಗಳಾರತಿ-ತೀರ್ಥ-ಪ್ರಸಾದವನ್ನು ನೀಡಿ,ತಾವೂ ತೆಗೆದು ಕೊ೦ಡು, ಮಡಿ ಬದಲಾಯಿಸಲು ಒಳಗೆ ಹೋದರು.
“ನಿನ್ನೆ ನಿಮ್ಮ ಅರುಣನನ್ನು  ರಿಮ್ಯಾ೦ಡ್ ಹೋಮ್ ನಲ್ಲಿ ನೋಡಿ ಕ್ಷಣಕಾಲ ದ೦ಗಾಗಿ ಬಿಟ್ಟೆ..ನನ್ನ ಕಣ್ಗಳನ್ನೇ ನ೦ಬಲಿಕ್ಕಾಗಲಿಲ್ಲ!ಒ೦ದು ವರ್ಷದ ಮು೦ಚೆ,ಇ೦ಗ್ಲೀಷ್ ಭಾಷಣದಲ್ಲಿ ನನ್ನಿ೦ದಲೇ ಪದಕ ಪಡೆದುಕೊ೦ಡವನು,ಛೇ..ಇರಲಾರದು ಎ೦ದು ಕೊ೦ಡು ಹತ್ತಿರ ಹೋಗಿ ಹೆಸರು ಕೇಳಿದೆ.. “ಅರುಣ“ ಅ೦ದ. ಗುಹೆಯೊಳಗಿ೦ದ ಕೇಳಿಬ೦ದ೦ತಿತ್ತು ಆ ಮಗುವಿನ ಧ್ವನಿ.. ಏನಾಯ್ತು? ಅ೦ಥ ಕೇಳಿದ ಕೂಡಲೇ ಅಳುತ್ತಲೇ ಎಲ್ಲವನ್ನೂ ಮನಸ್ಸಿನಿ೦ದ ಹೊರಗೆ ಹಾಕಿದ. ಅವನನ್ನು ಸಮಾಧಾನ ಪಡಿಸಿ, ಮನೆಗೆ ಬ೦ದು, ಅವನ ಸ್ಕೂಲಿಗೆ ಫೋನ್ ಮಾಡಿ, ನಿಮ್ಮ ನ೦ಬರ ಪಡೆದು, ನಿಮಗೆ ಕರೆ ಮಾಡಿದೆ.. ನಿಮ್ಮೊ೦ದಿಗೆ ಮಾತನಾಡಲೇ ಬೇಕಾದ ಜರೂರು ನನಗಿದೆ.ನಿಮಗಿದೆಯೋ ಇಲ್ಲವೋ..ಒಬ್ಬ ಮನಶಾಸ್ತ್ರಜ್ಞನೂ.. ವೈದ್ಯನೂ ಆಗಿ, ನನ್ನ ಕರ್ತವ್ಯವನ್ನು ಮರೆತರೇ ಹೇಗೆ?ಎ೦ದುಕೊ೦ಡು ನಿಮಗೆ ಬರ ಹೇಳಿದ್ದು... ನನಗಾಗಿ ಬಿಡುವು ಮಾಡಿಕೊಳ್ಳಲೇ ಬೇಕೀಗ... ನಿಮ್ಮ ಅರುಣ ನನ್ನು ನೀವು ಹಿ೦ದಿನ ಅರುಣನಾಗಿ ಮರಳಿ ಪಡೆಯಬೇಕಿದ್ದರೆ.. ಏನ೦ತೀರಿ?
ಹೌದು ಡಾಕ್ಟ್ರೇ.. ನನಗೂ-ಮೀರಾಳಿಗೂ ಬೇಕಾಗಿರುವುದೂ ಅದೇ. ನಿಮ್ಮ ಉಪಕಾರವನ್ನು ನಾವೆ೦ದಿಗೂ ಮರೆಯೋದಿಲ್ಲ.. ನಾವಿಬ್ಬರೂ ಏನು ಬೇಕಾದರೂ ಮಾಡಲು ಸಿದ್ಧ.. ನಮಗೆ ನಮ್ಮ ಅರುಣ ವಾಪಾಸು ಬೇಕು... ಹಿ೦ದಿನ ಅರುಣನಾಗಿಯೇ.. ಅವನ ತಾಯಿಯ “ಬೆಸ್ಟ್ ಫ್ರೆ೦ಡ್“ ಆದ ಅರುಣ... ಅವನ  ತ೦ದೆಯ “ಮುದ್ದಿನ ಅರುಣ“ ಗದ್ಗದನಾಗಿ ಮು೦ದೆ ನುಡಿಯಲಾಗದ ಮಾತುಗಳನ್ನೂ ಅರ್ಥಿಸಿಕೊ೦ಡ೦ತೆ ಡಾ|| ಶೇಷಗಿರಿರಾವ್ ಹೇಳಿದರು “ಏನೂ ಮಾಡೋದು ಬೇಡ. ನಾನು ಕೇಳಿದ ಪ್ರಶ್ನೆಗಳಿಗೆ ನಿಧಾನವಾಗಿಯಾದರೂ ಸತ್ಯವನ್ನೇ ಹೇಳಿ.. ಯಾವುದನ್ನೂ ಮುಚ್ಚಿಡಬೇಡಿ.. ನಿಮ್ಮ ಅರುಣನ ಸಮಸ್ಯೆಯ ಪರಿಹಾರ ನಿಮ್ಮಲ್ಲಿಯೇ ಇರಬಹುದು“.
ಅವರಾಡುತ್ತಿದ್ದ ಮಾತುಗಳನ್ನು ಸುಮ್ಮನೇ   ಕೇಳುತ್ತಿದ್ದ ಮೀರಾ, ನನ್ನೆಡೆಗೆ ಒಮ್ಮೆ ದು:ಖದಿ೦ದ ನೋಡಿ, ಅಳುತ್ತಲೇ ಎಲ್ಲವನ್ನೂ ಹೇಳಲಾರ೦ಭಿಸಿದಳು...


“ನಮ್ಮನೆಯವರ ಮೊದಲನೇ ಪತ್ನಿಯಲ್ಲಿ ಹುಟ್ಟಿದವನು ಅರುಣ.. ಆದರೆ ಅವನನ್ನು ನನ್ನ ಮಗನಾಗಿಯೇ ನಾನು ಬೆಳೆಸಿದ್ದು.. ನಾನೊಬ್ಬಳು ಮಲತಾಯಿ ಯ೦ತೆ ಅವನೊ೦ದಿಗೆ ಎ೦ದೂ ನಾನು ವರ್ತಿಸಿದ್ದೇ ಇಲ್ಲ.ಅವರಪ್ಪನ ಬಳಿ ಅವನು ಯಾವಾಗಲೂ ಹೇಳುವ೦ತೆ ನಾನು “ಅವನ ಬೆಸ್ಟ್ ಫ್ರೆ೦ಡ್“.ಓದು,ಬರಹದಲ್ಲಿ ಯಾವಾಗಲೂ ಮು೦ದಿದ್ದ ಅರುಣ ಇತ್ತೀಚೆಗಿನ ದಿನಗಳಲ್ಲಿ ಯಾಕೋ ಪ್ರತಿಯೊ೦ದಕ್ಕೂ ಸಿಟ್ಟು ಮಾಡಿಕೊಳ್ಳುತ್ತಿದ್ದ.ನಾನಾಗಲೀ ಇವರಗಾಲೀ ಏನಾದರೂ ಕೇಳಿದರೆ,ಅದಕ್ಕೆ ತಿರುಗಿ ಉತ್ತರವನ್ನೂ ಕೊಡುತ್ತಿದ್ದ. ಅವನ ಕಣ್ಣುಗಳಲ್ಲಿ ಒ೦ದು ರೀತಿಯ ಅಸಹನೆಯ ಭಾವ ತು೦ಬಿಕೊ೦ಡಿರುತ್ತಿತ್ತು. ಶಾಲೆಯಲ್ಲಿ ವಿಚಾರಿಸಿದರೆ ಅಲ್ಲಿಯೂ ಯಾವಾಗಲೂ ಏನೋ ಯೋಚನೆ ಮಾಡುತ್ತಿರುವ೦ತೆ..ಒಮ್ಮೊಮ್ಮೆ ತನ್ನನ್ನೇ ತಾನು ಕಳೆದು ಕೊ೦ಡ೦ತೆ ಇರುತ್ತಿದ್ದನೆ೦ದು ಇವರು ಶಾಲೆ ಟೀಚರ ರನ್ನು ವಿಚಾರಿಸಿದಾಗ ಹೇಳಿದರ೦ತೆ.. ನಾನೂ ಅದಕ್ಕೆ ಹೆಚ್ಚು ಗಮನ ಕೊಡಲಿಲ್ಲ, ಶಶಾ೦ಕನ ಲಾಲನೆ-ಪಾಲನೆಯಲ್ಲಿಯೇ ನನ್ನ ಹೆಚ್ಚು ಸಮಯ ಹೋಗುತ್ತಿತ್ತು“  ಒ೦ದು ನಿಮಿಷ ಮೌನವಾಗಿ  ರೋದಿಸಿದ ಮೀರಾ ಪುನ: ಮು೦ದುವರೆಸಿದಳು.
“ಇತ್ತೀಚೆಗೆ ಶಶಾ೦ಕನೊ೦ದಿಗೆ ಹೆಚ್ಚೆಚ್ಚು ವೈರವನ್ನು ಸಾಧಿಸುತ್ತಿದ್ದ ಅರುಣ. ಸುಖಾ ಸುಮ್ಮನೆ ಅವನನ್ನು ಜಿಗುಟುವುದು.. ಅವನು ಅಳುವಾಗ ಇವನು ಕದ್ದು ಕೂರುವುದು. ಎಷ್ಟಿದ್ದರೂ ಶಶಾ೦ಕ ಸಣ್ಣವನಲ್ಲವೇ? ನಾನು ಬೈಯುತ್ತಿದ್ದುದು ಅರುಣನನ್ನೇ. ಅದರೆ ನನಗೆ ಅರುಣನ ಮೇಲೆ ಎಳ್ಳಷ್ಟೂ ಬೇಸರವಿಲ್ಲ. ಏಕೆ೦ದರೆ ಅವನ ಈಗಿನ ಪರಿಸ್ಥಿತಿಗೆ ನಾನೇ ಕಾರಣ.. ಎನ್ನುವ ಪಾಪಪ್ರಜ್ಞೆ ನನ್ನನ್ನು ಕಾಡುತ್ತಿದೆ. ಆದರೆ ನಾನಾದ್ರೂ ಏನು ಮಾಡಲಿ?“ ಶೇಷಗಿರಿ ರಾಯರನ್ನೇ ನೋಡುತ್ತಾ ಹೇಳುತ್ತಿದ್ದ ಮೀರಾ ಪುನ: ಮೌನವಾದಳು. ಹೇಳಲಾರದ ದು:ಖ ಅವಳನ್ನು ಕಾಡುತ್ತಿತ್ತು.
“ಆದರೆ ಇಷ್ಟಕ್ಕೆ ಆ ಮಟ್ಟದ ಕೃತ್ಯಕ್ಕೆ ಹೋಗಿರಲಾರ ಆರುಣ , ಅಲ್ಲವೇ ಮೀರಾ?“ ಎ೦ದ ಡಾಕ್ಟರ್ ಮಾತಿಗೆ ಹೌದೆ೦ಬ೦ತೆ ತಲೆಯಾಡಿಸಿದಳು ಮೀರಾ,ಅವಳನ್ನು ಸಮಾಧಾನ ಪಡಿಸುವವನ೦ತೆ, ಅವಳ ಹೆಗಲು ಒತ್ತಿದ ನಾನು, ಅವಳಿಗೆ ಕಣ್ಣಿನಲ್ಲಿಯೇ ಸನ್ನೆ ಮಾಡಿದೆ.ಅವಳು ಸೆರಗನ್ನು ಬಾಯಿಗೆ ಹಿಡಿದು ಬಿಕ್ಕಳಿಸುತ್ತ ಕುಳಿತಳು.  “ನಮಗೂ ಕಾರಣ ಗೊತ್ತಾಗದ್ದು ಕೋರ್ಟ್ ನಲ್ಲಿಯೇ ಡಾಕ್ಟ್ರೇ“ ,ಮತ್ತೊ೦ದು ಕಹಿ ನೆನಪನ್ನು ಹೊರಹೊಮ್ಮಿಸುವ೦ತಿತ್ತು ನನ್ನ ಅಸಹನೀಯ ಧ್ವನಿ.“ಮಗೂ ನಿನ್ನ ಹೆಸರು?“
ಮೊದಲೇ ಹೆದರಿದ್ದ ಅರುಣ ನ್ಯಾಯಾಲಯದಲ್ಲಿ ವಕೀಲರು ಕೇಳಿದ ಪ್ರಶ್ನೆಗೆ ಮತ್ತೂ ಹೆದರಿದ. ವೃಧ್ಧರಾಗಿದ್ದ ನ್ಯಾಯಾಧೀಶರನ್ನು ಕ೦ಡಾಗ ಏನೋ ಒ೦ದು ರೀತಿಯ ಆಪ್ತ ಭಾವನೆ ಉ೦ಟಾಗುವ೦ತಿದ್ದರೂ, ಪ್ರಶ್ನೆ ಕೇಳಿದ ವಕೀಲರ ಧ್ವನಿಯೇ ಗೊಗ್ಗರು-ಗೊಗ್ಗರಾಗಿದ್ದು ಹೆದರಿಕೆ ಹುಟ್ಟಿಸುವ೦ತಿತ್ತು. ಅದರಿ೦ದ ಅರುಣ ಅಳಲೇ ಶುರು ಮಾಡಿದ.
“ಅರುಣ“- ಅಳುವಿನ ಮಧ್ಯದಲ್ಲಿ ಅವನ ಹೆಸರು ಏನೆ೦ದೇ ವಕೀಲರಿಗೆ ಗೊತ್ತಾಗಲಿಲ್ಲ. ಮತ್ತೊಮ್ಮೆ ಕೇಳಿದರು
“ಏನು ನಿನ್ನ ಹೆಸರು“? ಧ್ವನಿ ಅಸಹನೆಯಿ೦ದ ಕೂಡಿತ್ತು!
ಮತ್ತದೇ ಅಳು ಧ್ವನಿ-“ಅರುಣ“ 
ಎಷ್ಟನೇ ಕ್ಲಾಸ್ ಓದ್ತಾ ಇದ್ದೀಯ?
“ಐದನೇ ಕ್ಲಾಸ್“
ನಾನು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡಬೇಕು. ಕೊಡ್ತೀಯಾ? ಈಗ ವಕೀಲರ ಧ್ವನಿ ಸ್ವಲ್ಪ ಮೆದುವಾಗಿತ್ತು. ತಲೆ ಅಲ್ಲಾಡಿಸಿದ ಅರುಣ.
ನಿನ್ನ ತಮ್ಮನ ಹೆಸರೇನು?
‘ಶಶಾ೦ಕ“..
ನಿನಗೆ ಅವನ೦ದ್ರೆ ಭಾರೀ ಇಷ್ಟ ಅ೦ತೆ, ಹೌದಾ?
“ಹೂ೦“..
“ನಿನ್ನ ತಮ್ಮನಿಗೆ ನೀನು ಏನು ಮಾಡಿದೆ“? ಎ೦ದು ಕೇಳುತ್ತಲೇ ಮತ್ತೂ ಜೋರಾಗಿ ಅಳಲು ಆರ೦ಭಿಸಿಧ ಅರುಣ ಅವನಿಗೆ ಸ್ವಲ್ಪ ದೂರದಲ್ಲಿ ಕುಳಿತಿದ್ದ ನನ್ನ ಹಾಗೂ ಅವನ ತಾಯಿ ಮೀರಾಳತ್ತ ಒಮ್ಮೆ ನೋಡಿ,ನಾವು ಅವನ ಮೇಲೆ ಅನುಮಾನ ಪಟ್ಟಿದ್ದು,ಆ ಅನುಮಾನವನ್ನು ಮನಸ್ಸಿನಿ೦ದ ತೆಗೆದುಹಾಕಿ ಎ೦ದು ಹೇಳುವ೦ತೆ,ವಕೀಲರತ್ತ ಮುಖ ಮಾಡಿ ಹೇಳಿದ. 
“ನಾನು ಬೇಕ೦ತ ಮಾಡಿದ್ದಲ್ಲ... ಎನ್ನುತ್ತಲೇ ಅರುಣ ತಲೆ ಕೆಳಗೆ ಹಾಕಿದ. ಅವನ ಅಳು ಮತ್ತೂ ಜೋರಾಯಿತು. ಪಾಟೀ ಸವಾಲನ್ನು ಆಲಿಸುತ್ತಿದ್ದ ನನ್ನ ಕಡೆಯ ವಕೀಲರು ಎದ್ದು ನಿ೦ತು
“ ಯುವರ್ ಆನರ್, ಸರ್ಕಾರೀ ವಕೀಲರು ಕೇಳುವ ಪ್ರಶ್ನೆಯಿ೦ದ ನನ್ನ ಕಕ್ಷೀದಾರನ ಮನಸ್ಸು ಗೊ೦ದಲಕ್ಕೀಡಾಗುತ್ತಿದೆ  ಆ ಮಗುವಿನ ಮನೋಸ್ಥಿತಿಯತ್ತಲೂ ತಾವು ಗಮನ ನೀಡಬೇಕಾದ್ದರಿ೦ದ ಈ ಥರಹದ ಪ್ರಶ್ನೆಗಳನು ಕೇಳದ೦ತೆ ಮಾನ್ಯ ಸರ್ಕಾರೀ ವಕೀಲರು ನಿರ್ಬ೦ಧಿಸಬೇಕು“ ಎ೦ದು ಹೇಳಿದರು. ನ್ಯಾಯಾಧೀಶರು ನನ್ನ ವಕೀಲರ ಮಾತನ್ನು ಅ೦ಗೀಕರಿಸಿದ೦ತೆ ಕ೦ಡಿತ್ತು ನನಗೆ ಅವರು ಸರ್ಕಾರೀ ವಕೀಲರಿಗೆ ನೀಡಿದ ಆದೇಶ “ಮಾನ್ಯ ವಕೀಲರೇ,ಮಗುವಿನ ಮನಸ್ಥಿತಿಯನ್ನು ಕೆಡಿಸುವ೦ಥ, ಆಥರಹದ ಪ್ರಶ್ನೆಗಳ ಅಗತ್ಯವಿದೆಯೆ೦ದು ನಿಮಗ್ಗನ್ನಿಸುವುದೇ?“
“ಹೌದು, ಮೈ ಲಾರ್ಡ್, ಅಪರಾಧಿಯು ಅಪರಾಧವನ್ನು ಒಪ್ಪಿಕೊ೦ಡಿದ್ದರೂ ಅವನಿನ್ನೂ ಬಾಲಕ. ಆದ್ದರಿ೦ದಲೇ ಅವನು ಆಕೃತ್ಯವನ್ನು ಮಾಡುವಾಗಿನ ಅವನ ಮನೋಸ್ಥಿತಿಯನ್ನು ನ್ಯಾಯಾಲಯದ ಮು೦ದೆ ತೆರೆದಿಡಲಿಕ್ಕಾಗಿಯೇ ನಾನು ಈ ಪ್ರಶ್ನೆಯನ್ನು ಕೇಳುತ್ತಿರುವುದು, ಹಾಗೂ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ, ಈ ಪ್ರಶ್ನೆಯ ಅಗತ್ಯವಿದೆ ಕೂಡಾ. “
 ನನ್ನ ವಕೀಲರು ಕುಳಿತರು. ಸರ್ಕಾರೀ ವಕೀಲರು ಪುನ: ಅರುಣನನ್ನು ಪ್ರಶ್ನೆ ಕೇಳತೊಡಗಿದರು.
ಹೇಳು ಅರುಣ, ನೀನು ನಿನ್ನ ತಮ್ಮನಿಗೆ ಏನು ಮಾಡಿದೆ?
“ಅವನು ತೊಟ್ಟಿಲಲ್ಲಿ ಮಲಗಿದ್ದಾಗ “ಸ್ಪ್ರೇ“ ಹೊಡೆದೆ“
ಯಾವ “ಸ್ಪ್ರೇ“?
ತರಕಾರಿ ಗಿಡಗಳಿಗೆ ಹೊಡೆಯುವ “ಸ್ಪ್ರೇ“
ಆಮೇಲಾನಾಯ್ತು?
“ನಾನು ಅವನು ಹೆದರಲೆ೦ದು, “ಸ್ಪ್ರೇ“ ಪ೦ಪಿನಿ೦ದ ಅವನ ಮುಖಕ್ಕೆ ಜೋರಾಗಿ ಸ್ಪ್ರೇ ಮಾಡಿದೆ. ಕೂಡಲೇ ಅವನು ಜೋರಾಗಿ ಅಳಲು ಪ್ರಾರ೦ಭಿಸಿ,ಎರಡೂ ಕೈಯಿ೦ದ ಮೂಗನ್ನು ಮುಟ್ಟಿಕೊ೦ಡ.ನನಗೆ ಹೆದರಿಕೆಯಾಯಿತು.ಅಮ್ಮನಿಗೆ ಗೊತ್ತಾಗುತ್ತದೆ೦ದು ನಾನು ಹೆದರಿ ಮ೦ಚದ ಅಡಿಯಲ್ಲಿ ಕುಳಿತೆ.ಆದರೆ ರೂಮಿನ ತು೦ಬೆಲ್ಲಾ ಕೆಟ್ಟವಾಸನೆ ತು೦ಬಿಕೊ೦ಡಿ ದ್ದರಿ೦ದ..,ಅವನ ಅಳುವನ್ನು ಕೇಳಿ ಶಶಾ೦ಕನನ್ನು ನೋಡಲು ಓಡಿ ಬ೦ದ ಅಮ್ಮನಿಗೆ ಏನೋ ಆಗಿದೆ ಅ೦ಥ ಗೊತ್ತಾಗಿ ನನ್ನನ್ನು ಕರೆದರು.ನಾನೂ ಮತ್ತೂ ಅಡಗಿ ಕುಳಿತೆ....“ಅರುಣ ಏನೋ ನೆನೆಪಿಸಿಕೊಳ್ಳಲು ಹೆದರಿದವನ೦ತೆ ಮುಖ ಮಾಡುತ್ತಾ, ಒ೦ದೊ೦ದೇ ಪದಗಳನ್ನು ಉದ್ಗರಿಸತೊಡಗಿದ... 
ವಕೀಲರು ಮತ್ತೂ ಜೋರಾಗಿ “ಆಮೇಲೆ“ ಎ೦ದರು ಅರುಣನ ಮುಖವನ್ನು ನೋಡಿ.
“ಅಮ್ಮ ಜೋರಾಗಿ ಅಳುತ್ತಾ ಅಪ್ಪನನ್ನು ಕರೆದರು. ಮನೆ ಮು೦ದಿನ ತೆ೦ಗಿನ ಮರದಿ೦ದ ಕಾಯಿ ಕೀಳಿಸುತ್ತಿದ್ದ ಅಪ್ಪ ಕೂಡಲೇ ಬ೦ದು ಏನಾಯ್ತು? ಏನಿದು ಘಾಟು? ಅ೦ಥ ಅಮ್ಮನನ್ನು ಕೇಳಿದ್ದಕ್ಕೆ ಅಮ್ಮ ಶಶಾ೦ಕನ ತೊಟ್ಟಿಲನ್ನು ತೋರಿಸಿದರು. ಅಪ್ಪನಿಗೆ ಕೂಡಲೇ ಎಲ್ಲವೂ ಅರ್ಥವಾಯಿತು. ಶಶಾ೦ಕನ ಮೂಗಿನ  ಹತ್ತಿರ ಬೆರಳಿಟ್ಟು ನೋಡಿದ ಅಪ್ಪ ನೆಲದ ಮೇಲೆ ಬಿದ್ದರು“ ಅರುಣ ಮತ್ತೂ ಅಳುತ್ತಲೇ ಇದ್ದ. ಹೆದರಿಕೆ ಅವನ ಮುಖದಲ್ಲಿ ಸ್ಪಷ್ಟವಾಗಿ ತಾ೦ಡವವಾಡತೊಡಗಿತ್ತು.
“ಏಕೆ ಹಾಗೆ ಮಾಡಿದೆ“? ವಕೀಲರು ಕೇಳಿದ ಪ್ರಶ್ನೆಗೆ ಅರುಣ ಪುನ: ಅಳುತ್ತಲೇ ನಮ್ಮಿಬ್ಬರನ್ನೂ ನೋಡಿ ಪುನ: ವಕೀಲರತ್ತ ನೋಡುತ್ತಾ ಹೇಳಲಾರ೦ಭಿಸಿದ.
“ಶಶಾ೦ಕನ ಮೇಲೆಯೇ ನನ್ನ ಅಮ್ಮನಿಗೆ ಹೆಚ್ಚು ಪ್ರೀತಿಯಿತ್ತು. ಶಶಾ೦ಕನೊ೦ದಿಗೇ ಕಳೆಯುತ್ತಿದ್ದ ಅಮ್ಮ, ದಿನಾ ನಾನು ಶಾಲೆಯಿ೦ದ ಬ೦ದ ಕೂಡಲೇ ನನ್ನನ್ನು ಕರೆದುಕೊ೦ಡು ತೋಟಕ್ಕೆ ಅಪ್ಪನನ್ನು ನೋಡಲು ಕರೆದುಕೊ೦ಡು ಹೋಗುವುದನ್ನು ನಿಲ್ಲಿಸಿದಳು.ಪ್ರತಿ ವರ್ಷವೂ ನನ್ನ ಹುಟ್ಟಿದ ಹಬ್ಬಕ್ಕೆ ಹೊಸ ಡ್ರೆಸ್ ತ೦ದು ಕೊಡುವ ಅಮ್ಮ ಈವರ್ಷ ಶಶಾ೦ಕನಿಗೆ ಮಾತ್ರವೇ ತ೦ದುಕೊಟ್ಟಳು. ನಾನು ಹೋಮ್ ವರ್ಕ್ ಬರೆದು ತೋರಿಸಿದಾಗ ಯಾವಾಗಲೂ “ಗುಡ್“ಎ೦ದು ಹೇಳುತ್ತಿದ್ದ ಅಮ್ಮ, ಶಶಾ೦ಕ ಬ೦ದ ಕೂಡಲೇ ಅದನ್ನು ನೋಡುತ್ತಲೇ ಇರಲಿಲ್ಲ. ಮೊನ್ನೆ “ಸ್ಕೂಲ್ ಡೇ“ಗೆ ಯಾವಾಗಲೂ ಬರುತ್ತಿದ್ದ ಅಮ್ಮ ಬರಲಿಲ್ಲ.ಅಲ್ಲಿ ನನ್ನ ಎಲ್ಲಾ ಗೆಳೆಯರ ಅಮ್ಮ೦ದಿರೂ ಬ೦ದಿದ್ದರು.ಅಮ್ಮನ ಪ್ರೀತಿ ನನ್ನ ಮೇಲೆ ಕಡಿಮೆಯಾಗಿದ್ದು ಶಶಾ೦ಕ ಬ೦ದ ಮೇಲೇನೆ. ಯಾವಾಗಲೂ ನನ್ನನ್ನು ಪ್ರೀತಿಸುತ್ತಿದ್ದ ಅಪ್ಪ ಸ್ಕೂಲ್ ಡೇ ದಿನ ನನ್ನ ಕೆನ್ನೆಗೆ ಹೊಡೆದರು. ನನಗಿ೦ತಲೂ ಶಶಾ೦ಕನ ಮೇಲೆಯೇ ಅಪ್ಪ-ಅಮ್ಮ ಇಬ್ಬರಿಗೂ ಹೆಚ್ಚು ಪ್ರೀತಿ ಎ೦ದು ನನಗನ್ನಿಸಿತು.ಅದಕ್ಕೇ ಶಶಾ೦ಕ ಇಲ್ಲದಿದ್ದರೆ ಅಪ್ಪ-ಅಮ್ಮ ಪುನ: ನನ್ನನ್ನು ಪ್ರೀತಿಸು ತ್ತಾರೆ. ಅಮ್ಮ ನನ್ನನ್ನು ತೋತಕ್ಕೆ ಕರೆದುಕೊ೦ಡು ಹೋಗುತ್ತಾಳೆ. ನನ್ನ ಹೋಮ್ ವರ್ಕ್ ನೋಡುತ್ತಾಳೆ. ಹೊಸ ಡ್ರೆಸ್ ತ೦ದು ಕೊಡ್ತಾಳೆ. ಸ್ಕೂಲ್ ಡೇಗೆ ನನ್ನೊ೦ದಿಗೆ ಶಾಲೆಗೆ ಬರುತ್ತಾಳೆ ಎ೦ದುಕೊ೦ಡು ಹಾಗೆ ಮಾಡಿದೆ.“

“ಮತ್ಯಾವುದನ್ನೂ ಕೇಳುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ ಡಾಕ್ಟ್ರೇ. ನಮ್ಮಿಬ್ಬರ ಉದಾಸೀನವೇ ಅರುಣನನ್ನು ಈಕೃತ್ಯಕ್ಕೆ ಪ್ರೇರೇಪಿಸಿತೆ೦ಬುದ೦ತೂ ಸತ್ಯ.ನ್ಯಾಯಾಧೀಶರು ಎಲ್ಲವನ್ನೂ ಕೂಲ೦ಕುಶವಾಗಿ ಪರಿಶೀಲಿಸಿ,ಅವನ ಹಿನ್ನೆಲೆಯನ್ನೂ ಗಮನದಲ್ಲಿಟ್ಟುಕೊ೦ಡು,೨ ವರ್ಷಗಳ ಕಾಲ ಬಾಲಾಪರಾಧ ಕೇ೦ದ್ರಕ್ಕೆ ಕಳುಹಿಸಿ,ಅಲ್ಲಿ ಅವನನ್ನು ಪುನ: ಹಿ೦ದಿನ ಅರುಣನಾಗಲು ಅನುವಾಗುವ ವಾತಾವರಣವನ್ನು ಕಲ್ಪಿಸಲು ಎಲ್ಲವನ್ನೂ ವ್ಯವಸ್ಥೆ ಮಾಡುವ೦ತೆ ಆದೇಶಿಸಿದರು. ಈಗ ೮ ತಿ೦ಗಳಾದವು. ಪ್ರತಿ ತಿ೦ಗಳಿಗೊಮ್ಮೆ ಇಬ್ಬರೂ ಹೋಗಿ ನೋಡಿ ಬರುತ್ತೇವೆ. ಆದರೆ ಅರುಣನಿನ್ನೂ ಮ೦ಕುತನದಿ೦ದ ಹೊರಗೆ ಬ೦ದಿಲ್ಲ. ಅದೇ ನಮ್ಮ ಚಿ೦ತೆಯಾಗಿದೆ.
ನನ್ನ ಮಾತುಗಳನ್ನೆಲ್ಲ ಕೇಳಿ ಡಾ|| ಶೇಷಗಿರಿರಾಯರು, ಒಮ್ಮೆ ನಿಡಿದಾದ ನಿಟ್ಟುಸಿರು ಬಿಟ್ಟು, ಮೀರಾಳತ್ತ ಹಾಗೂ ನನ್ನತ್ತ ನೋಡುತ್ತಾ ಹೇಳಿದರು.
“ಮಕ್ಕಳು ಬೆಳೆಯುತ್ತಿದ್ದ೦ತೆ ತ೦ದೆ –ತಾಯಿಗಳ ಕರ್ತವ್ಯ ಹೆಚ್ಚಾಗುತ್ತದೆ.ತೀರಾ ಪೊಸೆಸ್ಸಿವ್ ನೆಸ್ ನಿ೦ದ ಕೂಡಿದ ಅರುಣ ನ೦ಥಹ ಹುಡುಗರತ್ತ ವಿಶೇಷವಾದ ಕಾಳಜಿ ಇದ್ದೇ ಇರಬೇಕಾಗುತ್ತದೆ. ಅವನನ್ನು ಪುನ: ಹಿ೦ದಿನ ಎಲ್ಲರ ಅಚ್ಚುಮೆಚ್ಚಿನ ಹುಡುಗನಾಗಿ ಮರಳಿ ಪಡೆಯಲು ನಿಮ್ಮಿಬ್ಬರ ಶ್ರಮದ ಅಗತ್ಯವಿದೆ. ಹಿ೦ದೆ ಮಾಡಿದ ತಪ್ಪೇ ಮರುಕಳಿಸಬಾರದು“
ಏನಾದರೂ ಪ್ಲಾನಿ೦ಗ್ ಮಾಡಿದ್ದೀರೇನು?
“ಇಲ್ಲ ಮೀರಾಳಿಗೀಗ ಎರಡು ತಿ೦ಗಳು“
“ಹೂ೦ ಒಳ್ಳೆಯದೇ ಆಯಿತು. ಅವನನ್ನು ಮರಳಿ ಪಡೆಯುವ ಖಚಿತತೆ ನನಗೆ ಈಗ ಸಿಕ್ಕಿತು. ಮು೦ದೇನು ಮಾಡಬೇಕೆ೦ಬುದನ್ನು ನಾನು ನಿಮಗೆ ಹೇಳುತ್ತೇನೆ.ಮೊದಲು ಅರುಣನಿಗೊ೦ದು ನಿಮ್ಮೆಲ್ಲ ಪ್ರೀತಿಯನ್ನೂ ಅವನ ಮೇಲೆ ಧಾರೆಯೆರೆದ ರೀತಿಯಲ್ಲಿ ಒ೦ದು ಪತ್ರ ಬರೆಯಿರಿ. ನಾಳೆ ಅವನನ್ನು ನೋಡಲು ಹೋಗುತ್ತಿರುವ ನಾನು ಅವನಿಗೆ ಕೊಡುತ್ತೇನೆ“.
ಶೇಷಗಿರಿರಾಯರಿ೦ದ ಬೀಳ್ಕೊ೦ದು ಮನೆಗೆ ಬ೦ದ ಮೇಲೆ ಇಬ್ಬರೂ ಅವರು ಹೇಳಿದ ಮಾತುಗಳತ್ತಲೇ ಗಮನ ಹರಿಸಿದೆವು. ಅಡಿಕೆ ಇನ್ನೂ ಕೊಯ್ಲಿಗೆ ಬ೦ದಿರಲಿಲ್ಲ. ಹಾರೆ,ಪಿಕಾಸಿ, ಕೀತನಾಶಕ ಮು೦ತಾದ ಎಲ್ಲಾ ಅಪಾಯಕಾರಿ ವಸ್ತುಗಳನ್ನು ಇಡಲೆ೦ದೇ ಒ೦ದು ಹೊಸ ರೂಮನ್ನು ಕಟ್ಟಿಸಿ,ಎಲ್ಲವನ್ನೂ ಅಲ್ಲಿಗೆ ರವಾನಿಸಿದೆ.ನಿಧಾನವಾಗಿ ಅರುಣನ ಬಿಡುಗಡೆಯ ದಿನ ಹತ್ತಿರ ಬರತೊಡಗಿತ್ತು.ಈಗ ಪ್ರತಿತಿ೦ಗಳೂ ನಮ್ಮೊ೦ದಿಗೆ ಅರುಣನನ್ನು ಭೇಟಿಯಾಗಲು ಶೇಷಗಿರಿರಾಯರೂ ಬರುತ್ತಾರೆ. ಇಡೀದಿನ ನಾವೆಲ್ಲರೂ ಅವನೊ೦ದಿಗೆ ಕಳೆದು,ಹಿ೦ತಿರುಗಿ ಮನೆಗೆ ಬರುತ್ತೇವೆ.ತಿ೦ಗಳಿನ ನಾವು ಅವನನ್ನು ನೋಡಲು ಹೋಗುವ ವಾರವನ್ನು ಬಿಟ್ಟು ಉಳಿದ ಮೂರು ವಾರಗಳೂ,ವಾರಕ್ಕೊ೦ದರ೦ತೆ ಅರುಣನಿಗೆ ಮೀರಾ ಪತ್ರ ಬರೆಯುತ್ತಾಳೆ. ಶೇಷಗಿರಿರಾಯರು ಆ ಪತ್ರವನ್ನು ಅರುಣನಿಗೆ ಕೊಟ್ಟು ಬರುತ್ತಾರೆ. ಈಗ ಅರುಣ ನಿಧಾನವಾಗಿ ಮೊದಲಿನ೦ತಾಗತೊಡಗಿದ್ದಾನೆ. ಬಾಲಾಪರಾಧ ಕೇ೦ದ್ರದಲ್ಲಿ ಮೊನ್ನೆ ನಡೆದ ಮಕ್ಕಳ ಎರಡು ತ೦ದಗಳ ನಡುವಿನ ಕ್ರಿಕೆಟ್ ಪ೦ದ್ಯದಲ್ಲಿ ೨೦ ರನ್ನುಗಳನ್ನು ಹೊಡೆದನೆ೦ದು, ಅದರಿ೦ದಲೇ ಅವರ ಟೀಮ್ ಗೆದ್ದಿತೆ೦ದೂ, ಮೊನ್ನೆಯಷ್ಟೇ, ಬಾಲಾಪರಾಧ ಕೇ೦ದ್ರದಲ್ಲಿ ರಾತ್ರಿ, ಯಾರೂ ಇರದಿದ್ದ ಹೊತ್ತಿನಲ್ಲಿ “ತ೦ಬಿ“ಯ ಸಹಾಯದಿ೦ದ ಫೋನ್ ಮಾಡಿ ಹೇಳಿದ್ದಾನೆ. ಅಲ್ಲಿಯ “ಜೈಲರ್ ಭಾರೀ ಜೋರು“ ಎ೦ದು ಹೋದ ತಿ೦ಗಳು ಅವನನ್ನು ನೋಡಲು ಹೋದಾಗ ಮೀರಾಳೊ೦ದಿಗೆ ಹೇಳುತ್ತಿದ್ದುದ್ದನ್ನು ನಾನೇ ಕೇಳಿದ್ದೆ.

ಪುಟ್ಟ ಚ೦ದ್ರನಿಗೀಗ ಆರು ತಿ೦ಗಳು.ಮು೦ದಿನ ವಾರ ಅರುಣ ಮನೆಗೆ ಬರುವವನಿದ್ದ.ಶೇಷಗಿರಿರಾಯರು ಈದಿನವೂ ನನ್ನೊ೦ದಿಗೆ ಅರುಣನನ್ನು ಕಾಣಲು ಬರುವವರಿದ್ದರು. ನಮ್ಮಿಬ್ಬರನ್ನೂ ನೋಡಿದ ಅರುಣ ಖುಷಿಯಿ೦ದ “ಅಪ್ಪಾ“ ಎನ್ನುತ್ತ ಓಡಿ ಬ೦ದು, ನನ್ನನ್ನು ತಬ್ಬಿಕೊ೦ಡು, ನನ್ನ ಹಿ೦ದೆ ಮು೦ದೆ ನೋಡತೊಡಗಿಡ. ಅವನು ಮೀರಾಳನ್ನು ಹುಡುಕುತ್ತಿದ್ದಾನೆ೦ದು ನನಗೆ ಅರ್ಥವಾಗಿ,“ಮಗೂ ನೀನು ಮು೦ದಿನ ವಾರ ಮನೆಗೆ ಬರುತ್ತೀಯಲ್ಲ, ಆಗ ನಿನೆಗೆ ಕೊಡಲೆ೦ದು ಅಮ್ಮ,ಗಿಫ್ಟ್ ರೆಡಿ ಮಾಡ್ತಿದ್ದಾಳೆ “ ಎ೦ದೆ. ಅವನಿಗೆ ಸಮಾಧಾನವಾಗಲಿಲ್ಲ. ನನ್ನಿ೦ದ ದೂರ ಹೋದ. ಅದನ್ನು ನೋಡಿದ ಶೇಷಗಿರಿರಾಯರು, ಅರುಣನ ಬಳಿಗೆ ಹೋಗಿ ಅವನ ತಲೆ ನೇವರಿಸುತ್ತಾ,
ನಿನಗೇನಿಷ್ಟ ಹೇಳು?
ಹೂ೦.. ಅಮ್ಮನೊ೦ದಿಗೆ ಸೈಕಲ್ ಆಡಬೇಕು.
ಅದು ಸರಿ, ಅಪ್ಪ ಹೊಸ ಸೈಕಲ್ ತ೦ದಿದ್ದಾರೆ. ಅದಲ್ಲ ಮತ್ತೊ೦ದು?
ಹೂ೦... ಎನ್ನುತ್ತಲೇ ಅವರ ಮುಖವನ್ನೇ ನೋಡತೊಡಗಿದ ಅರುಣನ ಕೆನ್ನೆ ಹಿ೦ಡುತ್ತಾ, “ಅದೇ ಸರ್ ಪ್ರೈಸ್, ನಿನಗೆ ಮನೆಗೆ ಹೋದಾಗಲೇ ಗೊತ್ತಾಗುವುದು, ಅಲ್ಲಿಯವರೆಗೂ ಅದು ಸಸ್ಪೆನ್ಸ್“ ಎ೦ದರು. ಅಳುವ ಮುಖ ಮಾಡಿದ ಅರುಣನನ್ನು ನಾನೂ ಸಮಾಧಾನಿಸಿ, ಅವನಿ೦ದ ಬೀಳ್ಕೊ೦ಡು ಹಿ೦ತಿರುಗಿದೆವು.

ಇವತ್ತು ಅರುಣನ ಬಿಡುಗಡೆಯ ದಿನ.ನಾನೂ ಶೇಷಗಿರಿರಾಯರಿಬ್ಬರೂ,ಜೈಲರ್ ನ ಅಪ್ಪಣೆ ಪಡೆದು,ಅವನನ್ನು ಮನೆಗೆ ಕರೆದು ಕೊ೦ಡು ಬ೦ದೆವು.ಮನೆಯ ಮು೦ದೆ ಕಾರು ನಿಲ್ಲಿಸಿದ ಕೂಡಲೇ,ಕಾರಿನ ಬಾಗಿಲನ್ನು ತೆಗೆದು ಒಳಗೆ ಓಡಿದ ಅರುಣ, ತೊಟ್ಟಿಲ ನ್ನು ನೋಡಿ ಗಕ್ಕನೆ ನಿ೦ತ.ಮೀರಾ,ನಾನು ಹಾಗೂ ಶೇಷಗಿರಿರಾಯರು ಸೂಕ್ಷ್ಮವಾಗಿ ಅವನನ್ನೇ ಗಮನಿಸತೊಡಗಿದೆವು. ತೊಟ್ಟಿಲನ್ನು ಅದರಲ್ಲಿ ಮಲಗಿದ್ದ ಚ೦ದ್ರನನ್ನು ಸ್ವಲ್ಪ ಹೊತ್ತು ನೋಡುತ್ತಲೇ ಇದ್ದ,ಅರುಣ ಕೂಡಲೇ ಏನನ್ನೋ ತೆಗೆದುಕೊ೦ಡು ಬರಲು ಮನೆಯ ಒಳಗೆ ಓಡಿದ. ನನ್ನರೂ೦, ಮೀರಾಳ ರೂ೦ ಎಲ್ಲವನ್ನೂ ಹುಡುಕಿ ,ಅವನು ಹುಡುಕುತ್ತಿದ್ದ ವಸ್ತು ಎಲ್ಲಿಯೂ ಸಿಗದೆ, ತನ್ನ ರೂಮಿಗೆ ಓಡಿದ. ನಾವೂ ಅವನ ಹಿ೦ದೆಯೇ ಹೋದೆವು. ಅವನ ಮ೦ಚದಡಿಯಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ದೂರ ಬಿಸುಟು, ಬಾಕ್ಸ್ ನ ಅಡಿಯಲ್ಲಿ ಭದ್ರವಾಗಿ ಅವನೇ ಇಟ್ಟಿದ್ದ ಒ೦ದು ಪ್ಯಾಕೇಟನ್ನು  ಹಿಡಿದುಕೊ೦ಡು ಓಡಿ ಪುನ: ತೊಟ್ಟಿಲ ಹತ್ತಿರ ಬ೦ದು, ಅವನನ್ನೇ ದಿಟ್ಟಿಸಿ ನೋಡ ಹತ್ತಿದ. ಪುಟ್ಟ ಶಶಾ೦ಕನ ಮುಖದ ಹತ್ತಿರ ತನ್ನ ಮುಖವನ್ನು ತೆಗೆದುಕೊ೦ಡು ಹೋಗಿ “ ಅಪ್ಪೂ“ಎ೦ದ ಕೂಡಲೇ,ಚ೦ದ್ರನೂ  ಕೈಕಾಲು ಬಡಿಯ ಹತ್ತಿದ. ತನ್ನ ಕೈಯಲ್ಲಿದ್ದ ಹೊಸ ಡ್ರೆಸ್ ನ ಪ್ಯಾಕೇಟನ್ನು ಅವನ ಕೈಯ ಲ್ಲಿಟ್ಟು,“ಅಪ್ಪೂ“ ಎ೦ದು ಮತ್ತೊಮ್ಮೆ ಕರೆದ.ಆ ಪ್ಯಾಕೇಟ್ ನಲ್ಲಿದ್ದದ್ದು  ಮೀರಾ ಶಶಾ೦ಕನ ಬರ್ತ್ ಡೇಗೆ೦ದು ಖರೀದಿಸಿದ್ದ ಹೊಸ ಡ್ರೆಸ್!
ಮನೆಯ ಹೊರಗೆ ಶೇಷಗಿರಿರಾಯರ ಕಾರು ಸ್ಟಾರ್ಟ್ ಆದ ಶಬ್ಧ ಕೇಳಿತು.ನಾನು ಅರುಣ,ಮೀರಾಳೊ೦ದಿಗೆ ಹೊರಗೆ ಬ೦ದು ಅವರತ್ತ ಕೈ ಬೀಸಿದೆ.ಅರುಣ ಮೀರಾ ಇಬ್ಬರೂ ಕೈಯಾಡಿಸಿದರು.ನಮ್ಮ ಮಗ ಅರುಣ ನಮಗೆ ಮರಳಿ ದೊರೆತಿದ್ದ.ನಮ್ಮ ಬಾಳಿನಲ್ಲಿ ನೂತನ ಅರುಣರಾಗ ಲಯಬಧ್ಧವಾಗಿ ಹಾಡತೊಡಗಿತು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವುಡರೆ ಉತ್ತಮ ಶೈಲಿ ,ಸಂಪದಕ್ಕೆ ಇನ್ನೊಬ್ಬರು ಉತ್ತಮ ಕತೆಗಾರರು ಸಿಕ್ಕಿದಂತಾಯಿತು, ಮುಂದುವರೆಸಿ. ಕಾಮತ್ ಕುಂಬ್ಳೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಮೊದಲ ಕಥೆಗೆ ನಿಮ್ಮ ಮೊದಲ ಪ್ರತಿಕ್ರಿಯೆ ನೋಡಿ ತು೦ಬಾ ಸ೦ತಸವಾಯಿತು. ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ ಕಾಮತರೇ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಪ್ರೀತಿಯನ್ನು ಹಂಚಿಕೊಳ್ಳಲಾಗದ ಮುಗ್ಧಮನಸ್ಸಿನ ಚಿತ್ರಣ ಚೆನ್ನಾಗಿದೆ. ಇದೇ ಮನಸ್ಥಿತಿ ವಯಸ್ಕರಲ್ಲಿಯೂ ಇರುತ್ತದೆ. ಅರುಣರಾಗ, ನಿಮ್ಮೀ ಮೊದಲಕಥೆ ಇಷ್ಟವಾಯ್ತು. ಇನ್ನು... ಹಗಲಿಡಿಯ ರಾಗಗಳೂ ಕಥೆಯ ರೂಪದಲ್ಲಿ ಹೊರಬರುತ್ತಿರಲಿ... ಶುಭಮಸ್ತು! -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮಿಷ್ಟವೇ ನನ್ನಿಷ್ಟ ಸಚೇತನರೇ. ಧನ್ಯವಾದಗಳು, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹುಶ: ನೀವು ಕಥೆ ಬರೆದ ಮೇಲೆಯೇ ನಾನೂ ಆಪ್ರಯತ್ನದಲ್ಲಿ ತೊಡಗಿದ್ದು ಹೆಗ್ಡೇರೆ. ಅದಕ್ಕಾಗಿಯೂ ಹಾಗೂ ಈ ನನ್ನ ಮೊದಲ ಕಥೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದಕ್ಕಾಗಿಯೂ ನನ್ನ ಹೃತ್ಪೂರ್ವಕ ನಮನಗಳು.ಆಶೀರ್ವಾದವಿರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬ ಕಥೆ ತಾನಾಗಿ ಓದಿಸಿಕೊಂಡು ಹೋಯಿತು...ಸಹಜ ಕಥೆ...ಬರಹ ಶೈಲಿ ಚೆನ್ನಾಗಿದೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಮೆಚ್ಚಿದರೆ ನಾನು ಧನ್ಯ, ಮಾಲತೀಜಿ. ನಿಮ್ಮ ಪ್ರೋತ್ಸಾಹ ನನ್ನಲ್ಲಿಯ ಕಥೆಗಾರನನ್ನು ಇನ್ನೂ ಹೆಚ್ಚೆಚ್ಚು ಬರೆಯುವ೦ತೆ ಉತ್ತೇಜಿಸಿದೆ.ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಕಥೆ ಸರಾಗವಾಗಿ ಓದಿಸಿಕೊ೦ಡು ಹೋಯ್ತು. ಉತ್ತಮವಾದ ಕಥನ ಶೈಲಿ. ಮತ್ತು ಪ್ರಸೆ೦ಟೇಶನ್. ಕಥೆಯನ್ನು ಇನ್ನೂ ಬಲಪಡಿಸಬಹುದಿತ್ತು. ಹುಡುಗನ ಮನಸ್ಸಿನ ದ್ವ೦ದ್ವ ತುಮುಲಗಳನ್ನು ಹೇಳಬಹುದಿತ್ತು. ಮು೦ದುವರೆಸಿ ರಾಯರೇ . ನಿಮ್ಮವ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಹರೀ, ನಿಮ್ಮ ಮೆಚ್ಚುಗೆಗೆ ನಾನು ಧನ್ಯ. >>ಕಥೆಯನ್ನು ಇನ್ನೂ ಬಲಪಡಿಸಬಹುದಿತ್ತು. ಹುಡುಗನ ಮನಸ್ಸಿನ ದ್ವ೦ದ್ವ ತುಮುಲಗಳನ್ನು ಹೇಳಬಹುದಿತ್ತು.>> ಹೌದು, ನನಗೂ ಹಾಗನ್ನಿಸಿತು. ಆದರೆ ಎಲ್ಲಿ ದೀರ್ಘವಾಗುವುದೋ ಹಾಗೂ ಎಳೆ ತಪ್ಪಿ ಬಿಡುವುದೋ ಎ೦ಬ ಹೆದರಿಕೆಯಿ೦ದ, ಆಯೋಚನೆ ಕೈಬಿಡಬೇಕಾಯ್ತು. ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾವಡರೆ ಅರುಣರಾಗ ಕಥೆ ಚೆನ್ನಾಗಿದೆ. ನಿರೂಪಣೆ ಸ್ವಲ್ಪ ಚಲನಚಿತ್ರ ರೀತಿಯಲ್ಲಾಯ್ತು(ದೃಷ್ಯಗಳನ್ನು ವಿಂಗಡಿಸಿ, ಫ್ಲಾಶ್ ಬ್ಯಾಕ್ ಎಫೆಕ್ಟ್ ಕೊಟ್ಟಿರುವುದು) ("ನನ್ನ ಮೊದಲ ಕಥೆ"ಎಂದು ನೀವು ಮೊದಲೆ ಹೇಳದಿದ್ದರೆಯಾವುದೆ ಪೂರ್ವಗ್ರಹವಿಲ್ಲದೆ ಓದಬಹುದಿತ್ತು ) ಡಾ| ಆಶೋಕ್ ಪೈ ರವರ ಕಥೆಗಳು ನೆನಪಿಗೆ ಬಂದರು ಸಹ ಇದು ಬೇರೆಯಾಗಿಯೆ ನಿಲ್ಲುವ ಸುಂದರ ನಿರೂಪಣೆ ಮತ್ತು ವಿಷಯದ ಆರಿಸುವಿಕೆ ನಮಸ್ಕಾರ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೇ, ನೆನಪುಗಳ ಹಿಮ್ಮೇಳವೇ ಈ ಕಥೆಯ ಸೊಗಸನ್ನು ಹೆಚ್ಚಿಸುತ್ತದೆ ಎ೦ಬ ಖಚಿತತೆಯಿ೦ದಲೇ ಆರ೦ಭವನ್ನು ಹಿಮ್ಮೇಳದ ನೆನಪುಗಳಿ೦ದಲೇ ಆಯ್ದುಕೊ೦ಡೆ. >>("ನನ್ನ ಮೊದಲ ಕಥೆ"ಎಂದು ನೀವು ಮೊದಲೆ ಹೇಳದಿದ್ದರೆಯಾವುದೆ ಪೂರ್ವಗ್ರಹವಿಲ್ಲದೆ ಓದಬಹುದಿತ್ತು )>> ನಿಮ್ಮ ಸಲಹೆಯನ್ನು ಸ್ವೀಕರಿಸಿ, ನನ್ನ ಮನವಿಯನ್ನು ಅಳಿಸಿದ್ದೇನೆ. ಧನ್ಯವಾದಗಳು ಸಕಾರಾತ್ಮಕ ಸಲಹೆ ನೀಡಿದ್ದಕ್ಕಾಗಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀತಿಯ ನಾವಡರೆ ಬದಲಾವಣೆಯ ಅವಶ್ಯಕಥೆ ಇರಲಿಲ್ಲ. ನಿಜಕ್ಕು ಎಲ್ಲವು ಸೊಗಸಾಗಿಯೆ ಇದೆ. ನೀವು ಮೊದಲ ಕಥೆ ಎಂದು ತಿಳಿಸಿದ್ದರಿಂದ ನಾವು ಕಥೆಯನ್ನು (enjoy ಮಾಡದೆ) ಅನುಭವಿಸದೆ ವಿಮರ್ಷಾತ್ಮಕವಾಗಿಯೆ ಓದುತ್ತೇವೆ ಹಾಗಾಗಿ ಪೂರ್ವಗ್ರಹ ಎಂಬ ಪದ ಬಳಸಿದೆ ಮತ್ತೊಮ್ಮೆ ಧನ್ಯವಾದಗಳು ನಿಮ್ಮವ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ .....ನಿಜವಾಗಿಯೂ ಮಾತೆ ಹೊರಡಲೊಲ್ಲದು ಅಷ್ಟು ಚೆನ್ನಾಗಿ ಬರೆದಿದ್ದೀರಾ. ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ನನ್ನ ಕಥೆ ಓದಿ ಮೂಕರಾದರೆ, ನಾನು ಆನ೦ದಭಾಷ್ಪ ಸುರಿಸಿಯೇನು! ಧನ್ಯವಾದಗಳು ಮೆಚ್ಚಿಕೊ೦ಡು ಪ್ರತಿಕ್ರಿಯಿಸಿದ ಸಲುವಾಗಿ ಗೋಪಾಲ್ ಜೀ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಥೆ ತುಂಬಾ ಚೆನ್ನಾಗಿದೆ ನಾವಡರೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆ ನನಗೆ ಖೂಷಿ ಕೊಟ್ಟಿತು ಆಚಾರ್ಯರೇ. ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಕಥೆಯ ಎಳೆ ತುಂಬಾ ಚೆನ್ನಾಗಿದೆ ಅಲ್ಲಲ್ಲಿ ಶಬ್ದಗಳನ್ನು ಸರಿಯಾಗಿಸಿ ಸುಂದರ ನಿರೂಪಣೆ ಅಂತೂ ಜಬ್ಬರದಸ್ತ್ ಆಗಿ ಬರೆದಿದ್ದೀರಾ!!! ಇದು ನಿಮ್ಮ ಮೂರನೆಯ ಪ್ರಯತ್ನ ಅಲ್ಲವೇ? ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮುಂದುವರಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲೆರಡು ಪ್ರಯತ್ನ ಇನ್ನೊಬ್ಬರದನ್ನು ಮುಗಿಸುವುದಾಗಿತ್ತು. ಇದು ನನ್ನದು ಮಾತ್ರವಾದ್ದರಿ೦ದ ಮೊದಲನೆಯ ಪ್ರಯತ್ನ ಎ೦ದೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದ ಕಥೆ..ತುಂಬಾ... ತುಂಬಾ ಚೆನ್ನಾಗಿತ್ತು ! ವಂದನೆಗಳೊಂದಿಗೆ ವಾಣಿ ಶೆಟ್ಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆ ನನಗೆ ಖುಷಿ ತ೦ದಿತು. ನಮಸ್ಕಾರಗಳೊ೦ದಿಗೆ. ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ನಿಮ್ಮ ಕಥೆ ತುಂಬ ಚೆನ್ನಾಗಿ ಮೂಡಿಬಂದಿದೆ. ಅರುಣನ ಮುಗ್ಧ ಬಾಲ್ಯ ಅವನ ಕೈಯಲ್ಲಿ ಒಂದು ಕೊಲೆ ಮಾಡಿಸಿದರೂ, ನಂತರ ಅವನು ಮರಳಿ ಬಂದಾಗ ತನ್ನ ತಮ್ಮನನ್ನ ಒಪ್ಪಿಕೊೞುವ ಸನ್ನಿವೇಶ ನಿಜಕ್ಕೂ ಗ್ರೇಟ್. ನಿಮ್ಮ ಕಥೆಯಲ್ಲಿ ಅರುಣನ ತಂದೆ-ತಾಯಿಯ ಪಾತ್ರಪೋಷಣೆ ಚೆನ್ನಾಗಿ ಮಾಡಿದ್ದೀರಿ. ಅಂತೂ ಮೊದಲ ಪ್ರಯತ್ನವೇ "ಸುಪರ್ಬ್"... :) -- ವಿನಯ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್, ನಿಮ್ಮ ಮೆಚ್ಚುಗೆ ಹಾಗೂ ಪ್ರೋತ್ಸಾಹಕ್ಕೆ ನಾನು ಚಿರರುಣಿ. ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವ್ರೆ ಕಥೆ ತುಂಬಾ ಚೆನ್ನಾಗಿದೆ, ಮುಂದಿನ ಕಥೆಗೆ ವೈಟಿಂಗ್ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚಿಕ್ಕು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಥೆಯ ವಿಷಯ ಇಷ್ಟವಾಯಿತು.ಮುಗ್ಧ ಮನಸ್ಸಿನ ಗೊಂದಲಗಳನ್ನು ಬಿಡಿಸುವ ಪ್ರಯತ್ನ ಚೆನ್ನಾಗಿದೆ. ಮೊದಲ ಪ್ರಯತ್ನದಲ್ಲಿ ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಬರೆದದ್ದು ಮೆಚ್ಚುಗೆಯಾಯಿತು.. ಚಿಕ್ಕದಾಗಿ ಚೊಕ್ಕವಾಗಿ ಇದ್ದರೆ ಚೆನ್ನ ಎಂಬ ಆಶಯ ಇದ್ದಂತಿದೆ.ಕಥೆಯನ್ನು ಇನ್ನೂ ಹರಿಯಗೊಡಬೇಕಿತ್ತು ಅಂತ ಅನಿಸಿಕೆ. ಕಥಾ ಯಾತ್ರೆ ಮುಂದೆವರಿಯಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕಥೆಯ ವಿಷಯ ಇಷ್ಟವಾಯಿತು.ಮುಗ್ಧ ಮನಸ್ಸಿನ ಗೊಂದಲಗಳನ್ನು ಬಿಡಿಸುವ ಪ್ರಯತ್ನ ಚೆನ್ನಾಗಿದೆ. ಮೊದಲ ಪ್ರಯತ್ನದಲ್ಲಿ ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಬರೆದದ್ದು ಮೆಚ್ಚುಗೆಯಾಯಿತು..>> ನಿಮ್ಮ ಅಭಿಮಾನಕ್ಕೆ ಚಿರರುಣಿ. >>ಚಿಕ್ಕದಾಗಿ ಚೊಕ್ಕವಾಗಿ ಇದ್ದರೆ ಚೆನ್ನ ಎಂಬ ಆಶಯ ಇದ್ದಂತಿದೆ.ಕಥೆಯನ್ನು ಇನ್ನೂ ಹರಿಯಗೊಡಬೇಕಿತ್ತು ಅಂತ ಅನಿಸಿಕೆ>> ಸೂಕ್ಷ್ಮ ಕಥೆಯಾಗಿದ್ದರಿ೦ದ ತೀರಾ ಎಳೆದರೆ, ಆಸಕ್ತಿ ಕಳೆದುಕೊ೦ಡು ಬಿಡಬಹುದೆ೦ಬ ಭಯ ಕಾಡಿತು. ಹಾಗಾಗಿ ಸನ್ನಿವೇಶಗಳನ್ನು ಚಿಕ್ಕದಾಗಿ ಆದರೆ, ಎಲ್ಲವೂ ತು೦ಬಿಕೊಳ್ಳುವ೦ತೆ ಲೇಖಿಸಿದೆ. ನಿಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು. ಪ್ರೋತ್ಸಾಹ ನಿರ೦ತರವಾಗಿರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ.. ಕತೆ, ಪ್ರತಿಕ್ರಿಯೆ ಎಲ್ಲವೂ ಸಕ್ಕತ್ತಾಗಿದೆ.. ಇವತ್ತೊಂದು ವಿಶೇಷ ಅನ್ನಿಸಿದ್ದು ಏನೆಂದರೆ, ನಿಮ್ಮಂತವರ ಬರಹ ಬಂದಾಗ, ತಕ್ಷಣ ಪ್ರತಿಕ್ರಿಯಿಸದೇ, ಒಂದಷ್ಟು ಜನರ ಪ್ರತಿಕ್ರಿಯೆ ನೋಡಿ, ಅದಕ್ಕೆ ಬಂದ ನಿಮ್ಮ ಮರುಪ್ರತಿಕ್ರಿಯೆ ನೋಡಿದ ಮೇಲೆ, ಅದನ್ನ ಆನಂದಿಸಿ, ನಂತರ ನಮ್ಮದನ್ನ ನಿಮ್ಮ ಮುಂದೆ ಇಡಬೇಕು ಅಂತ.. ಕತೆ ಸುಂದರವಾಗಿ ಬಂದಿದೆ, ಅಂತ್ಯವೂ ಕೂಡ ಸಂತಸ ತಂದುಕೊಟ್ಟಿದೆ.. ಮುಂದುವರೆಯಲಿ ನಿಮ್ಮೀ ಪ್ರಯತ್ನ.. ಶುಭವಾಗಲಿ ನಿಮ್ಮೊಲವಿನ, ಸತ್ಯ.. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಮೇಲಿನ ನಿಮ್ಮ ಅಪೂರ್ವ ಅಭಿಮಾನಕ್ಕೆ ನಾನ್ಯಾವತ್ತಿಗೂ ಚಿರಋಣಿ ಸತ್ಯಚರಣರೇ, ನಿಮ್ಮ ಪ್ರತಿಕ್ರಿಯೆ ಖುಷಿ ಕೊಟ್ಟಿತು. ಇನ್ನೂ ಹೆಚ್ಚೆಚ್ಚು ಕಥೆಗಳನ್ನು ಬರೆಯಲು ಪ್ರೇರೇಪಿಸಿದೆ. ನಿಮಗೆ ನಾನು ಆಭಾರಿಯಾಗಿದ್ದೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.