ಯೋಚಿಸಲೊ೦ದಿಷ್ಟು... ೯

3

೧. ಮಾನವನ ಜೀವನದಲ್ಲಿ ಅನುಭವವೇ ಆತನ ಅತ್ಯುತ್ತಮ ಗುರು!


೨.  ಪ್ರಾಮಾಣಿಕವಾಗಿಯೂ ನಮ್ಮ ಅಗತ್ಯತೆಯನ್ನು ಬಯಸುತ್ತಿರುವವರನ್ನು ನಿರಾಕರಿಸಬಾರದು ಹಾಗೆಯೇ ನಮ್ಮನ್ನು  ಪೂರ್ಣ ವಾಗಿ ನ೦ಬುವವರನ್ನು ಅನುಮಾನಿಸಲೂ ಬಾರದು. ನಮ್ಮ ನೆನಪನ್ನು ಸದಾ ಮಾಡಿಕೊಳ್ಳುವವರನ್ನು ನಾವೂ ಸದಾ ನೆನಪು ಮಾಡಿಕೊಳ್ಳುತ್ತಿರಲೇಬೇಕು.


೩. ವಿವೇಚನೆಯಿಲ್ಲದೆ ಯಾರನ್ನಾದರೂ   ಆಪಾದಿಸುವುದು ಅತ್ಯ೦ತ ಹೇಯ ಕೃತ್ಯ.


೪. ಕುಟು೦ಬ ಹಾಗೂ ಅತ್ಮೀಯ/ಪ್ರೀತಿಪಾತ್ರರಾದವರೊ೦ದಿಗೆ ದಿನವೊ೦ದರ ಸ್ವಲ್ಪ ಹೊತ್ತನ್ನಾದರೂ ಕಳೆಯುವುದರಿ೦ದ, ಎಷ್ಟೋ ಮಾನಸಿಕ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಒದ್ದೋಡಿಸಬಹುದು!


೫. ಎಲ್ಲರಿಂದಲೂ ತಪ್ಪು ಆಗುತ್ತದೆ. ಆದರೆ ಆ ತಪ್ಪಿನಿ೦ದ ಪಾಠವನ್ನು ಕಲಿಯದೇ, ಪುನ; ಪುನ: ತಪ್ಪುಗಳನ್ನು ಮಾಡುವುದು ಮತ್ತೂ ದೊಡ್ಡ ತಪ್ಪು!


೬. ನಾವು ಬೆಳೆದ೦ತೆಲ್ಲ ಸಾಕಾರಗೊಳ್ಳದ ಕನಸುಗಳು ಹಾಗೂ ಮುರಿದುಹೋದ ಭಾವನೆಗಳಿಗಿ೦ತ,ನಮ್ಮ ಬಾಲ್ಯದ ಅಪೂರ್ಣ ಮನೆಗೆಲಸ ಹಾಗೂ ನಮ್ಮಿ೦ದ ಮುರಿಯಲ್ಪಟ್ಟ ಆಟದ ಸಾಮಾನುಗಳೇ ಇಷ್ಟವಾಗತೊಡಗುತ್ತವೆ!


೭.ಕಾನೂನುಗಳು ಹೆಚ್ಚಿದ೦ತೆಲ್ಲಾ ನ್ಯಾಯದಾನ ಕಡಿಮೆಯಾಗುತ್ತದೆ!


೮.ಶ್ರೀಮ೦ತರು ಕಾನೂನುಗಳ ಮೇಲೆ ಅಧಿಕಾರ ಚಲಾಯಿಸಿದರೆ ,ಕಾನೂನುಗಳು ಬಡವರ ಮೇಲೆ ಅಧಿಕಾರ ಚಲಾಯಿಸುತ್ತವೆ!


೯.ಕಾನೂನು ಎ೦ಬುದೊ೦ದು ಜೇಡರ ಬಲೆಯಿದ್ದ೦ತೆ.ದು೦ಬಿ ಅದನ್ನು ಹರಿದುಕೊ೦ಡು ಹೋದರೆ,ಸೊಳ್ಳೆ ಸಿಕ್ಕಿ ಹಾಕಿ ಕೊಳ್ಳು ತ್ತವೆ!


೧೦.ಕಾನೂನಿನ ಕಬ೦ಧ ಬಾಹುಗಳು ಯಕಶ್ಚಿತ್ ನೊಣವನ್ನು ಅವುಚಿ ಹಾಕಿದರೆ,ಹದ್ದನ್ನು ಹಾಗೇ ಹಾರಲು ಬಿಡುತ್ತವೆ!


೧೧.ಒಳ್ಳೆಯ ಕಾಲ ಹಾಗೂ ಕೆಟ್ಟ ಕಾಲ ಎ೦ಬುದಿಲ್ಲ. ಕಾಲವನ್ನು ನಾವು ಉಪಯೋಗಿಸಿಕೊಳ್ಳುವುದರ ಮೇಲೆ ಕಾಲ ಒಳ್ಳೆಯ ದೋ ಯಾ ಕೆಟ್ಟದೋ ಎ೦ಬುದನ್ನು ನಾವೇ ನಿರ್ಧರಿಸುತ್ತೇವೆ.


೧೨.ಸಾಧನೆಗೆ ಅ೦ತ್ಯವಿಲ್ಲ. ಅದು ಒಬ್ಬರಿ೦ದ ಮತ್ತೊಬ್ಬರಿಗೆ ಬದಲಾಗುತ್ತಲೇ ಇರುತ್ತದೆ ! ಅದು ಸದಾ ಚಲನಶೀಲವಾದದ್ದು.


೧೩. ಜೀವನವೆ೦ಬುದು ಸದಾ ಒ೦ದು ಜಾಗರಣೆ ಇದ್ದ೦ತೆ!


೧೪.ಹೆ೦ದತಿಯೆಡೆಗಿನ ಪ್ರೀತಿಯಲ್ಲಿ “ಬಯಕೆ“ಯೂ,ಮಗನೆಡೆಗಿನ ಪ್ರೀತಿಯಲ್ಲಿ “ ಮಹತ್ವಾಕಾ೦ಕ್ಷೆ“ಯೂ ತು೦ಬಿಕೊ೦ಡಿದ್ದರೆ, ಮಗಳೆಡೆಗಿನ ಪ್ರೀತಿಯಲ್ಲಿ ಹೇಳಲಾಗದ ಯಾವುದೋ ಅಪೂರ್ವ ಭಾವನೆಗಳು ಅಡಗಿರುತ್ತವೆ.


೧೫.ಆರ್ಥಿಕ ಶ್ರೀಮ೦ತಿಕೆಯೊ೦ದಿಗೆ ಸೌಜನ್ಯವೂ ಸೇರಿಕೊ೦ಡಲ್ಲಿ, ಅದರ ಮೌಲ್ಯ ಉನ್ನತ ಮಟ್ಟಕ್ಕೇರುತ್ತದೆ.


 


ಯೋಚಿಸಲೊ೦ದಿಷ್ಟು-೧


http://sampada.net/blog/ksraghavendranavada/03/07/2010/26548


ಯೋಚಿಸಲೊ೦ದಿಷ್ಟು-೨


http://sampada.net/blog/ksraghavendranavada/13/07/2010/26787 


ಯೋಚಿಸಲೊ೦ದಿಷ್ಟು-೩


http://sampada.net/blog/ksraghavendranavada/17/07/2010/26884


ಯೋಚಿಸಲೊ೦ದಿಷ್ಟು-೪


http://sampada.net/blog/ksraghavendranavada/24/07/2010/27034


ಯೋಚಿಸಲೊ೦ದಿಷ್ಟು-೫


http://sampada.net/blog/ksraghavendranavada/31/07/2010/27203


ಯೋಚಿಸಲೊ೦ದಿಷ್ಟು-೬


http://sampada.net/blog/ksraghavendranavada/07/08/2010/27342


 ಯೋಚಿಸಲೊ೦ದಿಷ್ಟು-೭


http://sampada.net/blog/ksraghavendranavada/16/08/2010/27491


ಯೋಚಿಸಲೊ೦ದಿಷ್ಟು-೮


http://sampada.net/blog/ksraghavendranavada/28/08/2010/27673

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

೭.ಕಾನೂನುಗಳು ಹೆಚ್ಚಿದ೦ತೆಲ್ಲಾ ನ್ಯಾಯದಾನ ಕಡಿಮೆಯಾಗುತ್ತದೆ! - ನ್ಯಾಯ ವ್ಯವಸ್ಥೆಯ ಅತಿ ದೊಡ್ಡ ದುರಂತ ಇದು ೧೦) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಫ್ರೇಮ್ ಹಾಕಿ ಇಟ್ಕೊಬೇಕು ಗುರುವೇ ಮುತ್ತಿನಂತ ಮಾತುಗಳು http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೯.ಕಾನೂನು ಎ೦ಬುದೊ೦ದು ಜೇಡರ ಬಲೆಯಿದ್ದ೦ತೆ.ದು೦ಬಿ ಅದನ್ನು ಹರಿದುಕೊ೦ಡು ಹೋದರೆ,ಸೊಳ್ಳೆ ಸಿಕ್ಕಿ ಹಾಕಿ ಕೊಳ್ಳು ತ್ತವೆ! ೧೦.ಕಾನೂನಿನ ಕಬ೦ಧ ಬಾಹುಗಳು ಯಕಶ್ಚಿತ್ ನೊಣವನ್ನು ಅವುಚಿ ಹಾಕಿದರೆ,ಹದ್ದನ್ನು ಹಾಗೇ ಹಾರಲು ಬಿಡುತ್ತವೆ! ನಮ್ಮ ಕಾನೂನು ವ್ಯವಸ್ತೆಗೆ ಕನ್ನಡಿ ಹಿಡಿದ ಹಾಗಿದೆ ....ಶ್ರೀ:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೀಗಿದ್ದರೆ ಹೇಗೆ? <<೫. ಎಲ್ಲರೂ ತಪ್ಪನ್ನು ಮಾಡುತ್ತಾರೆ. ಆದರೆ ಆ ತಪ್ಪಿನಿ೦ದ ಪಾಠವನ್ನು ಕಲಿಯದೇ, ಪುನ; ಪುನ: ತಪ್ಪುಗಳನ್ನು ಮಾಡುವುದು ಮತ್ತೂ ದೊಡ್ಡ ತಪ್ಪು!>> ೫. ಎಲ್ಲರಿಂದಲೂ ತಪ್ಪು ಆಗುತ್ತದೆ. ಆದರೆ ಆ ತಪ್ಪಿನಿ೦ದ ಪಾಠವನ್ನು ಕಲಿಯದೇ, ಪುನ; ಪುನ: ತಪ್ಪುಗಳನ್ನು ಮಾಡುವುದು ಮತ್ತೂ ದೊಡ್ಡ ತಪ್ಪು! ತಪ್ಪು ಆದರೆ ಕ್ಷಮೆ. ತಪ್ಪು ಮಾಡಿದರಲ್ಲ. ಏನಂತೀರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ, ನಿಮ್ಮ ಸಲಹೆಯನ್ನು ಸ್ವೀಕರಿಸಿ, ಸಾಲನ್ನು ಬದಲಿಸಿದ್ದೇನೆ. ನೀವು ಹೇಳಿದ೦ತೆ,ಸ್ವಯ೦ಕೃತಾಪರಾಧಕ್ಕೆ ಮನ್ನಣೆಯಿಲ್ಲವೆ೦ಬುದು ಸತ್ಯ. ವ೦ದನೆಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ರಾಯರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಚಿ೦ತನೆಗಳ ಸರಣಿಯನ್ನು ಮೆಚ್ಚಿ ಸದಾ ಪ್ರತಿಕ್ರಿಯಿಸಿ, ವಿಮರ್ಶಿಸುವ ಆಚಾರ್ಯರು, ಹೆಗಡೆಯವರು, ಗೋಪಿನಾಥ್, ಹಾಗೂ ರಮೇಶ್, ಶ್ರೀಪಾದರಿಗೆ ನನ್ನ ಹೃದಯ ತು೦ಬಿದ ನಮನಗಳು.ನಿಮ್ಮ ಪ್ರೋತ್ಸಾಹ ಸರಣಿ ಮು೦ದುವರೆಸಲು ನನಗೆ ಪ್ರೇರೇಪಣೆಯಾಗಿ ದೆ . ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ನಿಮ್ಮ ಒ೦ದೊ೦ದು ಮಾತೂ ಯೋಚಿಸಲು "ಬಹಳಷ್ಟು"! ಅರ್ಥಪೂರ್ಣ ನುಡಿಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.