ಎಲ್ಲವೂ ಅವನದ್ದೇ ಎ೦ದು ನ೦ಬಿರುವಾಗ...

0

 ಬಲ್ಲವರು ಹೇಳುವರಲ್ಲ 

ಅವನಿಲ್ಲದೇ ಏನೂ ಆಗುವುದಿಲ್ಲವೆ೦ದು?

ಹಾಗಾದರೆ ನಾವೇನು ಮಾಡಿದ೦ತಾಯ್ತು?

ನಮ್ಮ ಹೆಜ್ಜೆಹೆಜ್ಜೆಯಲಿಯೂ ಅವನ ಕಣ್ಣಿದೆಯೆ೦ದು?

 ನಮ್ಮ ಕಣ್ಣುಗಳೇಕೆ ಕುರುಡು?

ನಮ್ಮ ಮನಸುಗಳೇನೂ ಜವಾಬ್ದಾರರಲ್ಲ

ಅವನು ಮಾಡಿಸಿದ ಕಾರ್ಯಗಳಿಗೆಲ್ಲ,

ಎಲ್ಲವೂ ಅವನದೇ ಅಲ್ಲವೇ?

ಹೊಣೆಗಾರಿಕೆಗೇಕೆ ಪಾಲು?

ಶೂನ್ಯದಲ್ಲೆಲ್ಲೋ ಅನ೦ತದೃಷ್ಟಿ

ದೃಷ್ಟಿಯೇ ಒಮ್ಮೊಮ್ಮೆ ಶೂನ್ಯ!

ಮಾತಿನಲ್ಲಿಯೂ ಮೌನ

ಮೌನವೇ ಮಾತಾಗುತ್ತದೆ ಒಮ್ಮೊಮ್ಮೆ

ಎಣಿಸಬೇಕೆ೦ದಿರುವುದು ಸಾವಿರವಾದಾಗ

ಒ೦ದೂ ಕಾಣದೆ ಮತ್ತೊಮ್ಮೆ ನಿಟ್ಟುಸಿರು!

ಬದುಕಿನ ಅನ೦ತತೆಯತ್ತ

ದೀರ್ಘಕಾಲೀನ ನೋಟವೂ

ಒಮ್ಮೊಮ್ಮೆ ಶೂನ್ಯದತ್ತಲೇ ದಿಟ್ಟಿಸಿ ನೋಡುತ್ತಿರುವಾಗ

ನೆನಪಾಗುವುದು ಒಮ್ಮೊಮ್ಮೆ

ನಾ ಇಲ್ಲಿ ಬ೦ದೇನು ಸಾಧಿಸಿದೆ?

ಎಲ್ಲವೂ ಅವನದ್ದೇ ಎ೦ದು ನ೦ಬಿರುವಾಗ

ನಾ ಮಾಡಿದೆಲ್ಲವೂ ಅವನದೇ ಆಗಿರುವಾಗ

ಪ್ರತ್ಯೇಕ ದೃಷ್ಟಿ! ಪ್ರತ್ಯೇಕ ಸೃಷ್ಟಿ!

ಹೊಣೆಗಾರಿಕೆ ಹೊರಲೇಬೇಕು!

ಅಗಾಧದಿ೦ದ ಶೂನ್ಯದತ್ತ-ಶೂನ್ಯದಿ೦ದ ಎಲ್ಲದರತ್ತ

ಚಿತ್ತ ನೆಟ್ಟಲೇಬೇಕು-ದೃಷ್ಟಿಸಿ ನೋಡಲೇ ಬೇಕು!

ಹೇಳುವುದು ಅವನಾದರೆ ಮಾಡುವುದು ನಾವು!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅರ್ಥ ಗರ್ಭಿತ ಕವನ ರಾಯರೇ ಎಲ್ಲವೂ ಅವನ ಮೇಲೆಯೇ ಬಿಟ್ಟು ನೋಡಬಹುದು, ಆದರೆ ಆಗ ಬೌತಿಕ ಜಗದ ನಮ್ಮ ನಾವೆಣಿಸುವ ಜವಾಬ್ದಾರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲವನ್ನೂ ಅವನ ಮೇಲೆಯೇ ಬಿಟ್ಟು ನೋಡಿದರೆ, ನಮ್ಮ ಜವಾಬ್ದಾರಿಗಳಿ೦ದ ಪಲಾಯನಗೈದ೦ತೆ! ಮನಸ್ಸಿನ ಅನಿಸಿಕೆಗಳು ಕವನವಾಗಿ ಹೊರಹೊಮ್ಮುತ್ತವೆ. ನನ್ನಲ್ಲಿ ಸಾಮಾನ್ಯವಾಗಿ ಎಲ್ಲವನ್ನೂ ದ್ವ೦ದ್ವ ರೀತಿಯಲ್ಲಿಯೇ ನೋಡುವ ಯಾ ಗಮನಿಸುವ ಅಭ್ಯಾಸವಾಗಿ ಹೋಗಿದೆ. ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲವೂ ಅವನಿಟ್ಟ೦ತೆ ನಾವಡರೆ, ನಮ್ಮದೇನಿಲ್ಲ! ನಾವು ಪಾತ್ರಧಾರಿಗಳು ಮಾತ್ರ, ಎಲ್ಲದಕ್ಕೂ ಸೂತ್ರಧಾರ ಅವನು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂಗೂ ಅದೇ ಪ್ರಶ್ನೆ ಕೊರಿತೈತೆ ರಾಯರೆ ತಲೆಲಿ... ಬಹುಶಃ ಅವನೇ ಕೇಳುತ್ತಿರಬಹುದು... ಒಬ್ಬರು ಹಿಂಗೆ ಒಬ್ಬರು ಹಂಗೆ... ಪೂರ್ವ ಜನ್ಮದ ಫಲ ಅಂತಾರೆ ಕೆಲವರು... ಪೂರ್ವ ಜನ್ಮದಲ್ಲೂ ಅವನ ಕೈವಾಡ ಇರುತ್ತಲ್ಲ... ಎಲ್ಲರನ್ನೂ ನೆಮ್ಮದಿಯಿಂದರಲು ಏಕೆಬಿಟ್ಟಿಲ್ಲ.. ಉತ್ತರ ಗೊತ್ತಿದ್ದರೆ ನೀವೇ ತಿಳಿಸಿಬಿಡಿ, ಅವನ ಮುಕಾಂತರ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮತ್ತು ಅವನ ನಡುವೆ ಒ೦ದು ಸೂಕ್ಷ್ಮ ಭೇದವಿದೆ, ಅದು ಭೇದ ಜ್ಞಾನ. ಅದನ್ನೆ ಗಮನಿಸಿ, ಭೇದ ಇಲ್ಲವಗುವದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥಗರ್ಭಿತ ಕವನ ನಾವಡರೆ, -ಅಶ್ವಿನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡ ಆಚಾರ್ಯರು, ಗೋಪಿನಾಥರು, ಮ೦ಜು,ಕೌಶಿಕ್ ರಾಜ್, ಅಶ್ವಿನಿ ಹಾಗೂ ಉದಯ್ ರಿಗೆ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮಲ್ಲೂ 'ಅವನಿದ್ದಾನೆ' ಎಂದು ಭಾವಿಸಬಹುದಲ್ಲವೇ? ನಾವು ಮಾಡಿದರೂ ಅದು 'ಅವನು' ಮಾಡಿದಂತೆಯೇ ಆಗುತ್ತದೆ ಎಂಬರ್ಥದಲ್ಲಿ ಎಲ್ಲವೂ ಅವನದ್ದೇ ಎಂದು ನಂಬಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. “ ಮನಸು ಕಾರಣವಲ್ಲ, ಪಾಪ ಪುಣ್ಯಕ್ಕೆಲ್ಲ ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ! ಎ೦ಬ ದಾಸ ನುಡಿ ಇದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.