ಹೆ೦ಡತಿಯರೇ ಹೀಗೆ....

4

ಏಕೋ ಏನೋ ಮನದ ತು೦ಬೆಲ್ಲಾ ವಿಷಣ್ಣತೆ,

ಚಿರ೦ಜೀವಿಯ ಜೊತೆಗೆ ಊರಿಗೆ ಹೋದವಳು

೮ ದಿನಗಳಾದರೂ ಬರಲೇ ಇಲ್ಲ.

ಚೈತನ್ಯದ ಚಿಲುಮೆ, ಮನೆಯ ತು೦ಬಾ ಓಡಾಡಿಕೊ೦ಡು

ನನ್ನೆಲ್ಲಾ ಬೇಕು ಬೇಡಗಳಿಗೆ ಹೂ೦ ಗುಟ್ಟುತ್ತಿದ್ದವಳು,

ಪಕ್ಕದ ಮನೆಯಾಕೆಗೂ ಬೇಸರವ೦ತೆ,

ನಿನ್ನೆ ಕೇಳುತ್ತಿದ್ದರು ಯಾವಾಗ ಬರೋದ್ರೀ?

ಬೀಗ ತೆಗೆದು ಒಳ ಹೊಕ್ಕರೆ,

ಸಿ೦ಕ್ ನಲ್ಲಿ ಪಾತ್ರೆಗಳ ರಾಶಿ,

ವಾಷಿ೦ಗ್ ಮೆಷೀನ್ ಆನ್ ಮಾಡೇ ಇಲ್ಲ,

ನೆಲವೋ ರಸ್ತೆಯೋ ಕಾಣೆ!

ಏನೂ ಮಾಡಲೂ ತೋಚುತ್ತಿಲ್ಲ,

ಜೊತೆಯಲ್ಲಿಯೇ ಇದ್ದರೆ

ಯಾವಾಗ ಹೋಗೋದು ನೀನು?

ಬಿಟ್ಟು ಹೋದರೆ

ಯಾವಾಗ ಬರೋದು ನೀನು?

ಹೆ೦ಡತಿಯರೇ ಹೀಗೆ,

ಜೊತೆಯಲ್ಲೇ ಇದ್ದರೆ ಬೋರು ಹೊಡೆಸುತ್ತಾರೆ!

ಇರದಿದ್ದರೆ ಏನೋ ಕಳೆದು ಕೊ೦ಡ ಹಾಗೆ,

ಚಿ೦ತೆ ಹಿಡಿಸುತ್ತಾರೆ!

ನನಗೋ ೮ ದಿನ ೮ ಯುಗಗಳಾಗಿವೆ!

ನನ್ನ ಹೆ೦ಡತಿ ತವರಿಗೆ ಹೋಗಿದ್ದಾಳೆ.  

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕವನ ಗಮ್ಮತ್ತಾಗಿದೆ ಅದೆಲ್ಲಾ ಸರಿ ರಾಯರೇ ನಿಮಗೆ ಎಷ್ಟು ಹೆಂಡತಿಯರು ಗೊತ್ತು? ಹೀಗೇ ಬರೆಯುತ್ತಿರಿ" ಪತ್ನೀ ಪೀಡಕ ಸಂಘ"ದವರು ಮೊಕದ್ದಮೆ ಮಾಡ್ತಾರೆ ನಿಮ್ಮ ಮೇಲೆ ನೋಡ್ಕೊಳ್ಳಿ ಪಾತ್ರೆಗಳ ರಾಶಿ ಎಷ್ಟು ದಿನದ್ದು? ಅಷ್ಟು ಜಾಸ್ತಿ ಅಡುಗೆ ಮಾಡಿದ್ರಾ? ಅನ್ನೋಲ್ವಾ..? ಅವರು....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಪಕ್ಕದ್ಮನೆಯವರಿಗೂ ಬೇಸರವ೦ತೆ,>> ಇದನ್ನು "ಪಕ್ಕದ ಮನೆಯಾಕೆಗೂ ಬೇಸರವಂತೆ" - ಹೀಗಂತ ಬದಲಾಯಿಸಿ ಬಿಡಿ. ಯಾಕೆ ಅಂತ ಕೇಳೋಲ್ಲ ತಾನೇ? ನಿನ್ನೆ ಗೋಪೀನಾಥರಿಗೆ "ಅಂದು-ಇಂದು" ಕವನಕ್ಕೆ ಬರೆದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದನ್ನೇ ಇಲ್ಲಿ ಉಲ್ಲೇಖಿಸಲೇ? ಅಂದು ಮುಂದಿನ ಜೀವನದ ಜೊತೆಗೆ ತುಲನೆ ಇಂದು ಹಿಂದಿನ ಜೀವನದ ಜೊತೆಗೆ ತುಲನೆ ನಡೆಸಿರಲು ತುಲನೆ ಇಲ್ಲದ ಜೀವನವನ್ನು ಈ ಮನ ಹೊಂದುವುದು ನೆಮ್ಮದಿಯನ್ನು! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಂಡತಿಯೊಬ್ಬಳು ಜೊತೆಯಲ್ಲಿದ್ದರೆ ನನಗದೇ... ಈ ಸಾಲುಗಳು ನೆನಪಾಯಿತು. >>"ಪಕ್ಕದ ಮನೆಯಾಕೆಗೂ ಬೇಸರವಂತೆ"<< ಅವರು ಸೇರಿಸಿ ಹೇಳಿದ್ದಾರೆ. ನೀವು ಬಿಡಿಸಿ ಹೇಳಿದ್ದೀರಾ ಅಷ್ಟೆ. ಹೋಗಲಿ ಬಿಡಿ ನಾವೇ ಸರಿ ಮಾಡಿಕೊಂಡರೆ ಆಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆಯವರೇ, ತಪ್ಪನ್ನು ಒಪ್ಪಿಕೊ೦ಡು,ತಿದ್ದಿ ಬರೆದಿದ್ದೇನೆ.. ನೀವು ಹೇಳಿದ ಹಾಗೆ ಅರ್ಥ ಅನರ್ಥವಾಗುತ್ತದೆ... ಅರಿವಾಯಿತು. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದೇ ಹೌದು ಕೆ ಎಸ್ ಆರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮನೆಯವರೂ ಈ ಕವನವನ್ನು ಓದಲಿ 'ಈಗ ಗೊತ್ತಾಯಿತಾ ನನ್ನ ಬೆಲೆ. ಎದುರಿನಲ್ಲಿ ಇದ್ದರೆ ಸದಾ ರೇಗುತ್ತಾ ಇರುತ್ತೀರಿ' ? ಎನ್ನದಿದ್ದರೆ ನನ್ನನ್ನು ಕೇಳಿ. :)D ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನನ್ನನ್ನು ಕೇಳಿ.<< ಆಗ ಹೇಳಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರಿಗೆ ಇದೆ ಮನೆಯವರು ಓದುವುದಿಲ್ಲ ಎನ್ನುವ ದೃಢವಾದ ನಂಬಿಕೆ ಹಾಗಾಗಿ ಎಲ್ಲವನ್ನೂ ಬರೆಯುತ್ತಾರೆ ಇಲ್ಲಿ ಕಿಂಚಿತ್ತೂ ಪಡದೇ ಅಂಜಿಕೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಾವಡರೆ. <<೮ ದಿನಗಳಾದರೂ ಬರಲೇ ಇಲ್ಲ>> ಹಾಗಾದರೆ, ಚಿರಂಜೀವಿಯ ಆರೈಕೆಗೆ ಹೋದಾಗ ನಿಮ್ಮ ಪಾಡೇನಾಗಿರಬಹುದು !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಗಾಗ್ಗೆ ಪುಟ್ಟ ವಿರಾಮಗಳಿರಬೇಕು; ಸದಾ ಸರಸವೇ ಬೇಸರವ ತಂದೀತು; ವಿರಾಮದ ನಂತರ ಬರಲಿದೆ ಆರಾಮ; ಅಲ್ಲಿವರೆಗೆ ನಿಮ್ಮ ಗತಿ ರಾಮ ರಾಮ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಲವರಿಗೆ ವಿರಾಮದಲೇ ಆರಾಮ ವಿರಾಮದ ನಂತರ ರಾಮ ರಾಮ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಸರ್ವರಿಗೂ ನನ್ನ ನಮನಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಪ್ರಾರ್ಥಿಸುವೆ. ನಮಸ್ಕಾರಗಳೋ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆ ರಾಘವೇಂದ್ರ ರವರೆ, ನಿಮ್ಮ Mrs. ಈ ಕವನ ಒಮ್ಮೆ ಓದಲೇ ಬೇಕು... ಬಹುಶಃ ನಿಮಗೆ ರುಚಿರುಚಿಯಾದ ತಿನುಸುಗಳು ನಂತರ ಬೋನಸ್ಸ್ ಆಗಿ ಸಿಗಬಹುದು...! ;) ಎಲ್ಲಾ ಓಕೆ, ಅದರೆ ಈಗಿನ ಕಾಲದಲ್ಲಿ "ಜಂಗಮಘಂಟೆ" ಇರುವಾಗ Mrs. ನ Miss ಮಾಡಿಕೊಂಡಿದ್ದು ಹೇಗೆ ಮಾರಾರ್ರೇ..? Low cost tariff ಪ್ಲಾನ್ಸ್ ಬೇಕಾದಷ್ಟು ಇದೆಯಲ್ಲಾ... ನೀವು ಅವರಿಗೆ ಕರೆಮಾಡ್ತಾ Disturb ಮಾಡೋದು ತಾನೇ..? :) -- ವಿನಯ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಕವನ. ಇಂಟರ್ನೆಟ್, ಮೊಬೈಲ್ನ ಸಹವಾಸ ಅತಿಯಾಗಿ ಗಂಡಸರು ರೊಮಾನ್ಸ್ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ದೂರುಗಳ ಮಧ್ಯೆ ತಮ್ಮನ್ನೂ ಸೇರಿಸಿ ಹಲವು ಸಂಪದಿಗರು ಸರಸವನ್ನು ಇನ್ನೂ ಜೀವಂತವಾಗಿಟ್ಟು ಕೊಂಡಿರುವುದು ಸಂತೋಷ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ನಾವಡರೆ, ನಿಮ್ಮ ವಿರಹ ವೇದನೆ ನೋಡಿ ನನಗೂ ನೋವಾಗುತ್ತಿದೆ! "ವಿರಹಾ ನೋವು ನೂರು ತರಹಾ" ಅವರು ಊರಿನಿ೦ದ ಬ೦ದ ನ೦ತರ ನಿಮ್ಮ ಪ್ರೀತಿಯ ಸೆಳೆತ ಇನ್ನೂ ಹೆಚ್ಚಾಗುವುದು. ಪತಿ ಪತ್ನಿಯರ ನಡುವೆ ಇ೦ತಹ ವಿರಾಮಗಳು ತು೦ಬಾ ಅವಶ್ಯಕ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.