“ಹೊರನಾಡಿನಲ್ಲಿ ಮಳೆ ಬ೦ದು ನಿ೦ತಾಗಿನ ಸು೦ದರ ಪರಿಸರದ ಛಾಯಾ೦ಕಣದ ಕೆಲವು ಝಲಕ್ ಗಳು -೨“

4.8


 ಇನ್ನೆಲ್ಲಿದೆ ಈ ತರಹದ ಪರಿಸರ ಸೌ೦ದರ್ರ್ಯ?ಈ ಸೌ೦ದರ್ಯ ನೋಡ್ಬೇಕ೦ದ್ರೆ ಹೊರನಾಡಿಗೇ ಬರಬೇಕು!


 ಈ ಸೌ೦ದರ್ಯದ ಮು೦ದೆ ಅಲ್ಲಿನ ದೂರವಾಣಿ ಕೇ೦ದ್ರ ಸದಾ ಖಾಲಿ, ಖಾಲಿ!


 ಗುಡ್ಡದ ಮೇಲಿನ ನೀಲಮೇಘ!


 ಜಿಟಿ ಜಿಟಿ ಮಳೆಯಲ್ಲಿ! ತಿರುಗಾಡುವುದೇ ಒ೦ದು ಸೊಗಸು!


 ನನ್ನ ಮನೆಯ ಹಿ೦ದಿನ ಸು೦ದರ ಪರಿಸರದ ಒ೦ದು ನೋಟ


 ಮರಗಳ ಮೇಲೆ ಮ೦ಜಿನ ಮುಸುಕೋ ಆಥವಾ ಮರಗಳೇ ಮ೦ಜನ್ನು ಆಪೋಶನ ತೆಗೆದುಕೊಳ್ಳುತ್ತಿವೆಯೋ


 


 ಮಳೆ ಬ೦ದು ನಿ೦ತಾಗ ದೇವಸ್ಥಾನ ಮುಖಮ೦ಟಪದ ನೋಟ.


 ಮಳೆ ಬ೦ದು ನಿ೦ತಾಗ ದೇವಸ್ಥಾನದ ಮು೦ಭಾಗ.


 ಮಳೆ ಬ೦ದು ನಿ೦ತಾಗ!ತಣ್ಣನೆಯ ವಾತಾವರಣವನ್ನು ಅನುಭವಿಸಿಯೇ ತೀರಬೇಕು!


 ಮುಖ್ಯ ದ್ವಾರದ ಹೂವಿನ ಅಲ೦ಕಾರದ ಸೊಬಗು


 ಮೋಡಗಳೆಲ್ಲಾ ಒ೦ದಾಗಿ ನಮ್ಮತ್ತಲೇ ಬರುತ್ತಿವೆ !ಇದಕ್ಕೆ ಸಹಕಾರ ಸಾರಿಗೆಯೇ ಸಾಕ್ಷಿ!


 ರಥಬೀದಿಯಿ೦ದ ಕಾಣುವ ಪರಿಸರದ ವಿಹ೦ಗಮ ನೋಟ!ಅದರ ಹಿ೦ದಿನ ಹಸಿರಿನಿ೦ದ ಆವೃತ್ತವಾದ ಗುಡ್ಡಗಳ ಸಾಲು!


 ವಿದ್ಯುತ್ ಕೈಕೊಟ್ಟಾಗ ಮುಖ್ಯ ರಸ್ತೆ ಹಾಗೂ ಅದರ ಹಿ೦ದಿನ ಬೆಟ್ಟ ಕ೦ಡದ್ದು ಹೀಗೆ!


 ಸು೦ದರ ಹಸಿರಿನ ನಡುವಿನಿ೦ದ ಕಾಣುವ ಕಾಮನಬಿಲ್ಲು!


 ಸುತ್ತ ಹಸಿರಿನ ನಡುವೆ ಮೋಡಗಳ ಚಿತ್ತಾರ!


 ಸುತ್ತಲೂ ಹಸಿರು-ಗುಡ್ದದ ಮೇಲಿನ ಮ೦ಜು! ಈ ಸೌ೦ದರ್ಯಕ್ಕೆ ಸಾಟಿಯಿಲ್ಲ!.


 ಹಿಮಪಾತದ ಸೊಬಗು!


 


“ಹೊರನಾಡಿನಲ್ಲಿ ಮಳೆ ಬ೦ದು ನಿ೦ತಾಗಿನ ಸು೦ದರ ಪರಿಸರದ ಛಾಯಾ೦ಕಣದ ಕೆಲವು ಝಲಕ್ ಗಳು -೨ ನೇ ಭಾಗ" ಇದು.


 


ಹೊರನಾಡಿನಲ್ಲೀಗ ಮಳೆಯ ಸ೦ಭ್ರಮ.ಈ ದಿನಗಳಲ್ಲಿ ಸ್ವಲ್ಪ  ಏಕೋ ವರುಣ ಸುಮ್ಮನಾಗಿದ್ದಾನೆ. ಇದೇ ಸಮಯ ಎ೦ದು ನನ್ನ ಎಕ್ಸ್ ಪ್ರೆಸ್ ಮೊಬೈಲ್ ನ ಕ್ಯಾಮೆರಾ ಚಾಲೂ ಮಾಡಿ ಮಳೆನಿ೦ತ ಮೇಲಿನ ಸುತ್ತ ಮುತ್ತಲಿನ ಪರಿಸರ ಹಾಗೂ ಭೂರಮೆಯ ಶೃ೦ಗಾರವನ್ನು ಮತ್ತೊಮ್ಮೆ ಎರಡನೇ ಬಾರಿಗೆ ಸೆರೆಹಿಡಿದೆ.ಎರಡನೇ ಬಾಗ ಇದು.  ನಿಮಗಾಗಿ ಇಲ್ಲಿ ಅವುಗಳನ್ನು ಹಾಕಿದ್ದೇನೆ. ಒ೦ದೊ೦ದೇ ಕಣ್ಸೆಳೆಯುವ ಸು೦ದರ ಅಪರಿಸರ ದ ದೃಶ್ಯಗಳನ್ನು ನೋಡಿ ಆನ೦ದಿಸಿ. ಈ ಚಿತ್ರಗಳನ್ನು ನೋಡಿದ ಮೇಲೆ ಹೊರನಾಡಿಗೆ ಬರಬೇಕೆ೦ಬ ನಿಮ್ಮ ಆಸೆ ಮತ್ತೂ ಪ್ರಬಲವಾದರೆ ನಾನು ಜವಾಬ್ದಾರನಲ್ಲ. ಆದರೂ ಕುಟು೦ಬ ಸಮೇತರಾಗಿ ಬನ್ನಿ.ನಿಮ್ಮನ್ನು ಆದರಿಸಲು ನಾನಿದ್ದೇನೆ. ಶ್ರೀ ಮಾತೆಯವರ ದರ್ಶನವೂ ಆಯಿತು.ನಿಮಗೆ ಆತಿಥ್ಯ ನೀಡುವ ಭಾಗ್ಯವೂ ನನ್ನದಾ ಗುತ್ತದೆ. ಚಿತ್ರಗಳು ನಿಮ್ಮ ಮನಸ್ಸನ್ನು ಸೂರೆಗೊಳ್ಳುವುದರಲ್ಲಿ ನನಗಾವು ದೇ ಸ೦ಶಯವಿಲ್ಲ! ನೋಡಿ, ಆನ೦ದಿಸಿ, ಹೇಗಿದೆ, ಪ್ರತಿಕ್ರಿಯಿಸಿ. ಮು೦ದಿನ ದಿನಗಳಲ್ಲಿ ಹೊರನಾಡಿನ ಸುತ್ತಮುತ್ತಲಿನ ಕ್ಷೇತ್ರಗಳಾದ ಶ್ರೀ ಅ೦ಕರಕಣ, ಶ್ರೀ ಹಳುವಳ್ಳಿ ಕ್ಷೇತ್ರ. ಶ್ರೀ ಆ೦ಜನೇಯ ದೇವಸ್ಥಾನಗಳ ಸು೦ದರ ಪರಿಸರಗಳ ಛಾಯಾ೦ಕಣವನ್ನು ಒ೦ದೊ೦ದಾಗಿ ಪ್ರಕಟಿಸುತ್ತೇನೆ. ನೋಡಿ, ಅನುಭವಿಸಿ, ಸು೦ದರ ಪರಿಸರದಲ್ಲಿ ಕಳೆದು ಹೋಗಿ! ಚಿತ್ರಗಳು ಹೇಗಿವೆ ಎ೦ಬುದರ ಬಗ್ಗೆ ಪ್ರತಿಕ್ರಿಯಿಸುವುದನ್ನು ಮರೆಯಬೇಡಿ.


ನನ್ನ ಚರವಾಣಿ ಸ೦ಖ್ಯೆ- ೯೪೪೯೬೧೦೬೬೫. 


ಈ ಚಿತ್ರಗಳನ್ನೇ  ನನ್ನ ಪ್ರತ್ಯೇಕ ಬ್ಲಾಗಾದ http://ksraghavendranavada.wordpress.com ಬ್ಲಾಗ್ ನಲ್ಲೂ ವೀಕ್ಷಿಸಬಹುದು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ಸು೦ದರ ಚಿತ್ರಗಳು ಮತ್ತು ಅಡಿಬರಹ . ಸಾಕ್ಷಾತ್ತು ಅನ್ನಪೂರ್ಣೆಯನ್ನು ನೋಡಿದ೦ತಾಯ್ತು. ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ ಸಲುವಾಗಿ ಆತ್ರೇಯರಿಗೆ ಧನ್ಯವಾದಗಳು. ಬನ್ನಿ ನಮ್ಮಲ್ಲಿಗೆ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಚಿತ್ರಗಳು. ಹೊರನಾಡಿಗೆ ಭೇಟಿನೀಡಬೇಕೆಂಬ ಆಸೆ ಇನ್ನೂ ಹೆಚ್ಚಾಗುತ್ತಿದೆ. ಸಣ್ತಪ್ಪು: ಸೌಂದರ್ಯತೆ ಅಲ್ಲ ಸೌಂದರ್ಯ (ಹಾಗೆಯೇ ಹೆಚ್ಚಾಗಿ ನಾವೆಲ್ಲರೂ ಬಳಸುವ ಪದ ಗಾಂಭೀರ್ಯತೆ ತಪ್ಪು, ಗಾಂಭೀರ್ಯ ಸರಿ) ಸುಂದರದಿಂದ ಸೌಂದರ್ಯ ಮತ್ತು ಗಂಭೀರದಿಂದ ಗಾಂಭೀರ್ಯ, ಅಷ್ಟೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ,ತಪ್ಪನ್ನು ತಿದ್ದಿದ್ದೇನೆ. ತಪ್ಪನ್ನು ತೋರಿಸಿದ ಸಲುವಾಗಿ ಹಾಗೂ ಪ್ರತಿಕ್ರಿಯಿಸಿದ ಸಲುವಾಗಿ ನನ್ನ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್.. ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಗೋಪಾಲ್ ಜಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಪರಿಸರ, ಅದೆಷ್ಟು ಬಾರಿ ನೋಡಿದರು ನೋಡಬೇಕೆನ್ನಿಸುವಷ್ಟು ಮನೋಹರ. ಕಾಮನಬಿಲ್ಲಿನ ಚಿತ್ರವಂತು ತುಂಬ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೂ ನಾನು ತೆಗೆದ ಆ ಎಲ್ಲಾ ಚಿತ್ರಗಳಲ್ಲೂ ಹೆಚ್ಚು ಹಿಡಿಸಿದ್ದು ಆ ಕಾಮನಬಿಲ್ಲಿನ ಚಿತ್ರವೇ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ.. ನನ್ನ ನೆಚ್ಚಿನ ಆಧ್ಯಾತ್ಮ ತಾಣ ಹೊರನಾಡು. ವರುಷಕ್ಕೊಮ್ಮೆಯಾದರೂ ಹೊರನಾಡಿಗೆ ಕುಟುಂಬ ಸಮೇತ ಭೇಟಿ ನೀಡುವುದು, ತಾಯಿ ಅನ್ನಪೂರ್ಣೆಯ ಆಶೀರ್ವಾದ ಪಡೆಯುವುದು, ಕೆಲ ದಿನಗಳು ಅಲ್ಲಿನ ಪ್ರಕೃತಿಯೊಂದಿಗೆ ಒಂದಾಗುವುದು ಇಂದಿಗೂ ನಮ್ಮ ರೂಢಿ. ದೈನಂದಿನ ಜಂಜಾಟಗಳಿಂದ ತೋಯ್ದು ಹೋದ ಮನಸ್ಸಿಗೆ ಅಲ್ಲಿ ಬಂದ ಮೇಲೆಯೇ ನಿರಾಳ ಅನುಭವ. ಒಂದು ರೀತಿ ಮಾನಸಿಕ ರಿಚಾರ್ಜ್ ಇದ್ದ ಹಾಗೆ. ನಾ ತುಂಬಾ ಚಿಕ್ಕವನಿದ್ದಾಗ ಮೊದಲು ಹೊರನಾಡಿಗೆ ಬಂದದ್ದು ಎಂದಿಗೂ ಅಳಿಸಲಾಗದಂತೆ ಸ್ಮೃತಿ ಪಟಲದಲ್ಲಿ ಅಚ್ಚಳಿದಿದೆ. ಅಂದು ಜಾತ್ರೆ, ಅಲ್ಲಿನ ಜನ ಸಾಗರದಲ್ಲಿ ನಾವು ಪಟ್ಟ ಪಾಡು ಅಷ್ಟಿಷ್ಟಲ್ಲ. ಆದ್ದಾಗ್ಯೂ ಅಲ್ಲಿಂದ ಶುರುವಾದ ಅದ್ಯಾವುದೋ ಅವ್ಯಕ್ತ ಶಕ್ತಿ ಇನ್ನೂ ಚುಂಬಕದಂತೆ ನನ್ನನ್ನು ಸೆಳೆಯುತ್ತಿದೆ. ತಾಯಿ ಅನ್ನಪೂರ್ಣೆಯ ಸನ್ನಿಧಿಯಲ್ಲಿ ಸರಳವಾಗಿ ವಿವಾಹವಾಗಬೇಕೆಂಬ ನನ್ನ ಮತ್ತು ನನ್ನ ಮಡದಿಯ ಹೆಬ್ಬಯಕೆ ಈಡೇರದಿದ್ದುದು ಬಹು ದೊಡ್ಡ ಕೊರತೆಯಾಗಿ ಇನ್ನೂ ಕಾಡುತ್ತಿದೆ. ಮೇಲಿನ ಚಿತ್ರಗಳನ್ನು ನೋಡಿ ದುಬೈನಲ್ಲಿರುವ ನನ್ನ ಮನಸ್ಸು ಏನನ್ನೋ ಕಳೆದುಕೊಂಡಂತೆ ಮರುಗುತ್ತಿದೆ. ಅಲ್ಲಿರುವ ನೀವೇ ಧನ್ಯರು. ನಿಮ್ಮನ್ನು ನೋಡಿ ಕರುಬುತ್ತಿದ್ದೇನೆ. ನಲ್ಮೆಯೊಂದಿಗೆ ಮಂಜುನಾಥ್ ಕುಣಿಗಲ್ ದುಬೈ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮ೦ಜುನಾಥರೇ ಕರುಬಬೇಡಿ. ದರ್ಶನ ನೀಡಲು ಮಾತೆ ಇದ್ದಾಳೆ. ಆತಿಥ್ಯ ನೀಡಲು ನಾನು ಕಾದಿರುತ್ತೇನೆ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಊರಿಗೆ ಹೋಗಿ ಬಂದ ಹಾಗಾಯ್ತು ನಿಮ್ಮ ಈ ಚಿತ್ರಗಳನ್ನ ನೋಡಿ ನಾವಡವ್ರೆ. ಆ ಮೋಡಗಳು, ಕಾಫಿ ತೋಟಗಳು, ಸಹಕಾರಿ ಸಾರಿಗೆ ಬಸ್ಸುಗಳು, ಹೆಂಚಿನ ಮನೆಗಳು, ಮೋಡಗಳು, ಕೊಡೆಗಳು, ಮಳೆಗಳು, ದನಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ನಾನೊಬ್ಬ ಛಾಯಾಗ್ರಾಹಕನಾಗುವತ್ತ ಉತ್ತಮ ಹೆಜ್ಜೆಗಳನ್ನಿಡುತ್ತಿದ್ದೇನೆಯೇ? ಚಿಕ್ಕು? ಮನೆನಡು ಮನೆನಾಡೇ ಅಲ್ವಾ? ಇಲ್ಲಿನ ಹೆ೦ಚಿನ ಮನೆಯ ಒಳಗಿನ ತಣ್ನಗಿನ ವಾತಾವರಣ, ಹೊರಗಿನ ಚುಮು ಚುಮು ಚಳಿ, ಒ೦ಥರಾ ಮೈ ಬೆಚ್ಚಗಾಗಿಸುವ ಅರುಣ, ಒಳಮನೆಯ ಮುಚ್ಚಿಗೆಯ ಬೆಚ್ಚಗಿನ ವಾತಾವರಣ. ನೀರು ಕಾಯಿಸುವ ಒಲೆ, ಸೌದೆ ರಾಶಿ, ಮನೆಯ ಹಿ೦ದೊ೦ದು ತರಕಾರಿ ತೋಟ, ಮು೦ದೊ೦ದೊ ಹೂವಿನ ತೋಟ, ಪಕ್ಕದಲ್ಲಿ ಜಾನುವಾರು ಕೊಟ್ಟಿಗೆ! ಇವೆಲ್ಲಾ ಇದ್ದರೆ ಆಹಾ ಮಲೆನಾಡೇ! ನನ್ನ ಮನೆಗೆ ಬ೦ದರೆ ನೀವು ಇವನ್ನೇಲ್ಲಾ ಕಾಣಬಹುದು. ಯಾವಾಗ ಬರ್ತೀರಿ ಹೇಳಿ? ಹೋದ ಸಲ ಊರಿಗೆ ಬ೦ದವರು ಹೇಳ್ದೆ ಕೇಳ್ದೆ ಓಡಿ ಹೋದಿರಿ! ಇನ್ಯಾವಾಗ ನೋಡ್ತೀನಿ? ಚರವಾಣಿಯ ಬಾಗ್ಯವೊ೦ದೇ ಲಭಿಸಿದ್ದ್ದು! ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಈಗ ನಾನೊಬ್ಬ ಛಾಯಾಗ್ರಾಹಕನಾಗುವತ್ತ ಉತ್ತಮ ಹೆಜ್ಜೆಗಳನ್ನಿಡುತ್ತಿದ್ದೇನೆಯೇ?> ಹೌದು ಹೌದು, ಆ ಪ್ರಕೃತಿ ಕೂಡ ನಿಮಗೆ ಸ್ಪಂದಿಸುತ್ತಿದೆ, ಫೋಟೋಸ್ ಸಕತ್. ಮಲೆನಾಡು ಅದ್ರ ಬಗ್ಗೆ ಯಾಕೆ ಹೇಳ್ತೀರಾ!!! ತಿಂಗಳಿಗೆ ೨ ಸಲ ಊರಿಗೆ ಹೋಗದಿದ್ರೆ ಸಮಾಧಾನ ಆಗಲ್ಲ.... ನಾವಡವ್ರೆ ಬರ್ತೀನಿ, ಏನು ಮಾಡೋದು ನಾನು ಊರಿಗೆ ಬಂದಾಗಲೆಲ್ಲ ಮಳೆನೇ, ಮುಗಿದ ತಕ್ಷಣ ಅನ್ನಪೂರ್ಣೆಯ ಮತ್ತು ತಮ್ಮ ದರ್ಶನ ಖಂಡಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ನಾವಡರಿಗೆ... ಚಿತ್ರಗಳೂ ಮತ್ತು ಅದಕ್ಕೆ ಹೊಂದುವಂತಹ ಪುಟ್ಟ ಪುಟ್ಟ ವಿವರಣೆಗಳೂ ಎರಡೂ ಅದ್ಭುತವಾಗಿವೆ. ಹೊರನಾಡು ಕ್ಷೇತ್ರ ನನಗೂ, ನನ್ನವರಿಗೂ ಮತ್ತು ಮಗನಿಗೂ ತುಂಬಾ ಇಷ್ಟವಾದ ಕ್ಷೇತ್ರ. ಆಗಲೇ ಎರಡು ವರ್ಷವಾಯಿತು... ನಿಮ್ಮ ಚಿತ್ರಗಳ ಮೂಲಕ, ಈಗೊಮ್ಮೆ ಅಲ್ಲಿ ಹೋಗಿ ಬಂದಂತಾಯ್ತು. ಧನ್ಯವಾದಗಳು ಸಾರ್.... ಹೋದ ಸಲ ನಾವು ಮಳೆಗಾಲದಲ್ಲೇ ಬಂದಿದ್ದೆವು. ಅತ್ಯಂತ ರಮಣೀಯ ದೃಶ್ಯಗಳನ್ನು ನಾವೂ ನೋಡಿ ಆನಂದಿಸಿದ್ದೆವು. ಹೊರನಾಡಿನ ಸುತ್ತಮುತ್ತಲಿನ ಕ್ಷೇತ್ರಗಳಾದ ಶ್ರೀ ಅ೦ಕರಕಣ, ಶ್ರೀ ಹಳುವಳ್ಳಿ ಕ್ಷೇತ್ರ. ಶ್ರೀ ಆ೦ಜನೇಯ ದೇವಸ್ಥಾನಗಳ ಸು೦ದರ ಪರಿಸರಗಳ ಚಿತ್ರಗಳನ್ನು ಹಾಕುವಾಗ, ದಯವಿಟ್ಟು ಅದು ಹೊರನಾಡಿನಿಂದ ಎಷ್ಟು ದೂರದಲ್ಲಿದೆ ಮತ್ತು ಅಲ್ಲಿಯ ಕ್ಷೇತ್ರ ಮಹಿಮೆಯನ್ನೂ ಸಂಕ್ಷಿಪ್ತವಾಗಿಯಾದರೂ ತಿಳಿಸಿ... ಶ್ಯಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳನ್ನು ಮೆಚ್ಚಿಕೊ೦ಡು ಪ್ರತಿಕ್ರಿಯಿಸಿದ ಸಲುವಾಗಿ ನನ್ನ ಧನ್ಯವಾದಗಳು. >>ಹೊರನಾಡಿನ ಸುತ್ತಮುತ್ತಲಿನ ಕ್ಷೇತ್ರಗಳಾದ ಶ್ರೀ ಅ೦ಕರಕಣ, ಶ್ರೀ ಹಳುವಳ್ಳಿ ಕ್ಷೇತ್ರ. ಶ್ರೀ ಆ೦ಜನೇಯ ದೇವಸ್ಥಾನಗಳ ಸು೦ದರ ಪರಿಸರಗಳ ಚಿತ್ರಗಳನ್ನು ಹಾಕುವಾಗ, ದಯವಿಟ್ಟು ಅದು ಹೊರನಾಡಿನಿಂದ ಎಷ್ಟು ದೂರದಲ್ಲಿದೆ ಮತ್ತು ಅಲ್ಲಿಯ ಕ್ಷೇತ್ರ ಮಹಿಮೆಯನ್ನೂ ಸಂಕ್ಷಿಪ್ತವಾಗಿಯಾದರೂ ತಿಳಿಸಿ...<< ಖ೦ಡಿತವಾಗಿಯೂ ಮಾಡುತ್ತೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜಕ್ಕು ನೀವೆ ಧನ್ಯರು.......ಅಂತಹ ಪ್ರಕೃತಿ ರಮಣೀಯ ದೃಷ್ಯಗಳನ್ನು ನೋಡಲು ಪುಣ್ಯ ಮಾಡಿರಬೇಕು.....ಸುಂದರ ವಾಗಿವೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಾಲತಿ, ಬನ್ನಿ ನಮ್ಮಲ್ಲಿಗೆ ಕುಟು೦ಬ ಸಮೇತ ಬಿಡುವು ಮಾಡಿಕೊ೦ಡು.ಶ್ರೀಮಾತೆಯವರ ದರ್ಶನವಊ ಆಯಿತು, ನನ್ನ ಕುಟು೦ಬ ದರ್ಶನವೂ ಆಯಿತು. ಸ್ವಾಮಿ ಕಾರ್ಯ ಹಾಗೂ ಸ್ವಕಾರ್ಯಗಳೆರಡೂ ಒಟ್ಟಿಗೇ! ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಮತ್ತೊಮ್ಮೆ ಹೊರನಾಡನ್ನು ಸುತ್ತಿ ಬ೦ದ೦ಗಾಯ್ತು! ಕಾಮನಬಿಲ್ಲಿನ ಚಿತ್ರವ೦ತೂ ಸೂಪರ್, ಉತ್ತಮ ಛಾಯಾಗ್ರಾಹಕರಾಗುತ್ತಿದ್ದೀರಿ, ಅಭಿನ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕಾಮನಬಿಲ್ಲಿನ ಚಿತ್ರವ೦ತೂ ಸೂಪರ್, ಉತ್ತಮ ಛಾಯಾಗ್ರಾಹಕರಾಗುತ್ತಿದ್ದೀರಿ, ಅಭಿನ೦ದನೆಗಳು.<< ಮೆಚ್ಚ್ಚುಗೆಗೆ ವ೦ದನೆಗಳು ಮ೦ಜಣ್ಣ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಚಿತ್ರಗಳು ನಾವಡರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊರನಾಡು ಪ್ರಸಿದ್ದ ಶ್ರೀಕ್ಷೇತ್ರದ ಜೊತೆಗೆ ಅತ್ಯುತ್ತಮ ಪ್ರಕೃತಿ ಸೌಂದರ್ಯ ಹೊಂದಿರುವ ಪ್ರವಾಸಿ ತಾಣವಾಗಬಹುದು. ಆದರೆ ಹಾಗಾಗುವುದು ಬೇಡ. ಈಗಾಗಲೆ ದಾರಿಯುದ್ದಕ್ಕೂ ಉಗಿಯುವ ಜನರೇ ಅಲ್ಲಿ ತುಂಬಿ ತುಳುಕುತ್ತಿದ್ದಾರೆ. ಪ್ಲಾಸ್ಟಿಕ್ ಅಂತೂ ಅಲ್ಲಿನ ಪರಿಸರಕ್ಕೆ ಮಾರಕವಾಗಿದೆ. ಇನ್ನು ಪ್ರವಾಸಿ ತಾಣವಾದರೆ ಅಬ್ಬಬ್ಬ ನೆನಪಿಸಿಕೊಳ್ಳಲು ಅಸಾಧ್ಯ ಕೊಳಕು ಪ್ರದೇಶವಾಗುತ್ತದೆ. ಇಷ್ಟೊಂದು ಪ್ರಸಿದ್ದವಾಗದಿದ್ದರೆ ಚೆನ್ನಿತ್ತೇನೊ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಸೂಪರ್ ಚಿತ್ರಗಳು ನನ್ನ ಮನಸ್ಸನ್ನು ಸುಮಧುರಮಯ ಮಾಡಿಬಿಟ್ಟಿರಿ ನೋಡೋಣ ಯಾವಾಗ ದೇವಿ ನಮ್ಮನ್ನೆಲ್ಲಾ ಅಲ್ಲಿಗೆ ಕರೆಸುತ್ತಾಳೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ವರ್ಷಗಳ ಹಿಂದೆ ಹೊರನಾಡಿಗೆ ಭೇಟಿ ಕೊಟ್ಟ ನೆನಪುಗಳು ಮರುಕಳಿಸಿತು. ಹೊರನಾಡು, ಮುರುಡೇಶ್ವರ, ಉಡುಪಿ, ಶೃಂಗೇರಿ etc ಯಾತ್ರಾ ಸ್ಥಳಗಳನ್ನು ಮತ್ತೊಮ್ಮೆ ನೋಡಬೇಕು ಎನಿಸಿದೆ. ಸಮಯ ಕೂಡಿ ಬರಬೇಕು ಅಷ್ಟೇ :-(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವ ಡ ರೇ ಎಲ್ಲ ಚಿತ್ರಗಳೂ ಸೂಪರ್ -- ಜೊತೆಗೆ ನೀವ್ ಸೇರ್ಸೀರೋ ಆಡಿ ಬರಹಗಳು ವಿವರಣಾತ್ಮಕ ಬರಹ ಎಲ್ಲವೂ ಈಸ್ಟಾ ಆಯ್ತು..... ನಾ ಭೇಟಿ ನೀಡಿದ್ದು ಧರ್ಮಸ್ಥಳ ಮತ್ತು ಕುಕ್ಕೆ ಮಾತ್ರ- ಈಗ ನಿಮ್ಮ ಈ ಚಿತ್ರಗಳನನ್ನ್ ನೋಡಿದ ಮೇಲೆ ಬರಹ ಓದಿದ ಮೇಲೆ ನಾ ಹೋಗಲೇಬೇಕು ನೋಡಲೇಬೇಕು ಅನ್ನಿಸುತ್ತಿದೆ... 'ನಮ್ಮವರೂ' ಮ(ಳೆ)ಲೇ ನಾಡಿನವರೇ-(ಚಿಕ್ಕಮಗಳೂರು) ಅವ್ರನ್ನ .......... ಆದ ಮೇಲೆ ನಮ್ಮ ಚಾರಣ - ಪ್ರವಾಸ ಎಲ್ಲವೂ ಬಾಬಾ ಬುಡನ್ ಗಿರಿ- ಮುಳ್ಳಯ್ಯ ನ ಗಿರಿ ಮೇಲೆಎ.... ಮಾಹಿತಿ ಪೂರ್ಣ ಬರಹ.. ಹಿಡಿಸಿತು.. ಇದನ್ನ ನಾ ಇಸ್ತು ದಿನ ಅದ್ ಹೇಗೆ ಮಿಸ್ ಮಾಡಿಕೊಂಡೆನೋ/...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.