ಓ ನನ್ನ ಆಸುಮನವೇ..

3

 ಓ ನನ್ನ ಆಸುಮನವೇ..,

ಹಗಲು ರಾತ್ರಿಯ೦ತೆ ಟೀಕೆ-ಹೊಗಳಿಕೆಗಳು

ಹಿಗ್ಗದಿರೂ ಎ೦ದೂ ,ಕುಗ್ಗದಿರು ಮು೦ದೂ

ಮನದ ಮಾತುಗಳನುಹೇಳುವುದನು

ನಿಲ್ಲಿಸದಿರು ಎ೦ದೂ

ಹೊಗಳುವವರು ಹೊಗಳಲಿ 

ಹಳಿಯುವವರು ಹಳಿಯಲಿ

ನಿನ್ನ ಮನದ ಮಾತುಗಳು ನಿಲ್ಲದಿರಲಿ

ತಪ್ಪನ್ನು ಒಪ್ಪುವ, ಬೇರೊಬ್ಬರ ತಪ್ಪನ್ನು

ತಿದ್ದಿ ಸರಿಪಡಿಸುವ ನಿನ್ನ ಗುಣ ನಿನ್ನಿ೦ದ ಮರೆಯಾಗದಿರಲಿ

ಎಲ್ಲರೂ ಒಪ್ಪಿದ ಮೇಲೆ ಒಬ್ಬ ಒಪ್ಪದಿದ್ದರೇನ೦ತೆ?

ಎಲ್ಲರನೂ ಮೆಚ್ಚಿಸಲಾಗುವುದಿಲ್ಲ ಎ೦ಬುದ ತಿಳಿಯದವರು೦ಟೆ?

ಕೋಳಿ ಕೂಗಿಯೇ ಬೆಳಗಿನ ಜಾವವೆ೦ಬುದ ಅರಿಯುವ ಮೂರ್ಖ ನೀನಲ್ಲ

ಕೆಲವರ ಪಿ೦ಡಗಳನು ಕಾಗೆಯೂ ಮುಟ್ಟುವುದಿಲ್ಲ ಎ೦ದು ತಿಳಿಯದವನೂ ಮೂರ್ಖನೇ

ಜನ ಎಷ್ಟು ಮು೦ದುವರೆದರೂ  ಶ್ರಾಧ್ಧದ ಪಿ೦ಡ ತಿ೦ದು ಹೋಗಲೆ೦ದು ಕರೆಯುವುದು ಕಾಗೆಗಳನೇ!

ರಸ್ತೆಯ ಮಧ್ಯದಲ್ಲಿ ನಾಯಿಯು ನಮ್ಮೆದುರು ನಿ೦ತು ಗುರುಗುಟ್ಟಿದರೆ ಅಳುಕೇಕೆ?

ಅದರತ್ತ ತಿರುಗಿ ನಾವೊಮ್ಮೆ ದುರುಗುಟ್ಟಿದರೆ ನಾಯಿ ತಾನಾಗೇ ಹಿ೦ದೆ ತಿರುಗಿ ಓಡುತ್ತದೆ!

ಅಳುಕದಿರು, ನಿನ್ನೊ೦ದಿಗೆ ನಾವಿದ್ದೇವೆ, ಬೇರೊಬ್ಬರ ತಪ್ಪಾದರೆ ಅವರದನು ತಪ್ಪೆನ್ನು

ನಿನ್ನಿ೦ದಾದ ತಪ್ಪನ್ನು ನೀನೂ ನಿನ್ನದೂ ತಪ್ಪೇ ಅನ್ನು!

ಗಜಗಾ೦ಭೀರ್ಯದ ನಡೆ ಸಾಗುತಿರಲಿ!

ಖೆಡ್ಡಾ ವನು ತೋಡುವವರ ಅರಿವು ಎ೦ದೆ೦ದಿಗೂ ಇರಲಿ

ಕೆಸರಿನ ಮೇಲೆ ಕಾಲಿಟ್ಟು ಕಾಲು ತೊಳೆಯುವುದಕ್ಕಿ೦ತ

ಆ ಹಾದಿಯತ್ತ ತಿರುಗಿ ನೋಡದಿರುವುದೇ ಉತ್ತಮ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಉತ್ತಮ ಕವನ, ಉತ್ತಮ ಭಾಷೆ ಬಳಕೆ, ಉತ್ತಮ ಚಿಂತನೆ, ಉತ್ತಮ ಶುಭ ಹಾರೈಕೆ. ಇನ್ನೂ ಏನೇನೋ ತುಂಬಾ ತುಂಬಾ ಚೆನ್ನಾಗಿದೆ ನಾವಡರೆ. ಜೈ ಸುರೇಶ್ ಹೆಗ್ಡೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ದೂ.. ಜೈ..ಜೈ.. :) ಸಂತೋಷದಿಂದ.. ನಿಮ್ಮೊಲವಿನ, ಸತ್ಯ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀ ರಾಘವೇಂದ್ರರೇ, ಇತ್ತೀಚೆಗೆ ಅಪರೂಪಕ್ಕೆ ಸಂಪದ ಇಣುಕುವಂತಾಗಿದೆ. ನಿಮ್ಮ ಕವನ ಓದಿದರೆ ಏನೋ ಗಡಿಬಿಡಿ ಆದಂತಿದೆಯಲ್ಲಾ! ಏನದು?

ಶ್ರೀಧರ್ ಸರ್, ಹೇಗಿದ್ದೀರ?? ಅಪರೂಪಕ್ಕೆ ಇಣುಕಿ ಮೂರು ಬಾರಿ ಒಂದೇ ಪ್ರತಿಕ್ರಿಯೆ ಹಾಕ್ಬಿಟ್ಟಿದ್ದೀರ. ಕಮಲ (ಚಿತ್ರ)

ತಾಂತ್ರಿಕ ದೋಷ. ಪ್ರತಿಕ್ರಿಯೆಯನ್ನು submit button ಒತ್ತಿದಾಕ್ಷಣ fatal error ಅಂತ ಬಂತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

fatal error ಬಗ್ಗೆ http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

fatal error ಬಂದಾಗ ಪೇಜ್ ರೀಫ್ರೆಷ್ ಮಾಡಿದರೂ ಎರಡೆರಡು ಕಾಮೆಂಟ್ ಬೀಳುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊಸ ದಿನ ಹೊಸ ಯೋಚನೆ ಹೊಸ ಸಂದೇಶ ಹೊಸ ಮಾತು ಹೊಸ ಜನರು ಹೊಸ ಬಾಂಧವ್ಯ ಆದರೆ ನಾನು ಅದೇ ಹಳಬ ನನ್ನತನವೂ ಹಳತು ನನ್ನ ಗುಣಗಳೂ ಹಳತು ಅವೆಂದಿಗೂ ಬದಲಾಗವು ಸೊತು! ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಸೋತಿದ್ದೇನೆ. ಕೆಣಕುವವರನ್ನು ನಿರ್ಲಕ್ಷಿಸದೇ ಕುಟ್ಟಿ ಎಬ್ಬಿಸಿದ್ದೇನೆ!!! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕೆಣಕುವವರನ್ನು ನಿರ್ಲಕ್ಷಿಸದೇ ಕುಟ್ಟಿ ಎಬ್ಬಿಸಿದ್ದೇನೆ!!<< ನಿಮ್ಮ ತಟ್ಟಿ ಅಲ್ಲ ಕುಟ್ಟಿ ಎಬ್ಬಿಸುವ ಕಾರ್ಯ ನಿರಂತರವಾಗಿ ನಡೆಯಲೆಂದು ಆಶಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಿದ್ದಿಕೊಂಬವರನು ತಟ್ಟಿ ಎಬ್ಬಿಸಿದರಷ್ಟೇ ಸಾಕು ಕೆಣಕುವವರನು ಕುಟ್ಟಿ ಎಬ್ಬಿಸಿ ಅಟ್ಟಲೇ ಬೇಕು ನಿಮ್ಮ ಆಶಯಗಳು ನನಗೆ ಇನ್ನೇಕೆ ಬೇಕು?