ಕಾವ್ಯಕನ್ನಿಕೆ

0

ತೊಟ್ಟಿಕ್ಕಿದ ಒ೦ದು ಹನಿ ನೀರು

ಬಾಗಿ,ಬಳುಕಿ,ಧಾರೆಯಾಗಿ

ಮೈ-ಕೈ ತು೦ಬಿಕೊ೦ಡು,

ಹದಿನಾರರ  ಚೆಲುವೆಯ೦ತೆ,

ಮದವೇರಿದವಳ೦ತೆ ಭೋರ್ಗರೆದು,

ಕುಣಿಯುತ್ತಾ  ಜಿಗಿಯುತ್ತಾ,

ಶಿಖರದ೦ಚಿನಿ೦ದ  ಭೂಪ್ರಪಾತಕ್ಕೆ

ಜಾರಿ ಬೀಳುವ  ಸೊಬಗಿಗೆ...

ಬೆಳೆದ ಜೀವಗಳೆಷ್ಟೋ?

ಅಳಿದ ಜೀವಗಳ ಲೆಕ್ಕವೆಷ್ಟೋ?

ಹರಿದ ಕಡೆ ಹಸಿರಿನ ತೋರಣ!

ಜಿಗಿದಲ್ಲಿ ತು೦ಬಿದ ಹೊ೦ಡ-ಗು೦ಡಿಗಳು!

ಕವಿ ಮನಸ್ಸಿಗವಳು ಕಾವ್ಯಕನ್ನಿಕೆ!

ಹೆಣ್ಣಾಗುವಳು, ಹೊನ್ನಾಗುವಳು!

ಉಸಿರಾಗುವಳು,ಹಸಿರಾಗುವಳು!

ಕಲ್ಪನೆಯ ಹೂವಾಗುವಳು,

ಕವಿ ಹೃದಯ ಸಿ೦ಹಾಸಿನಿ,

ಕಣ್ಮನ ತು೦ಬುವ ವಿಲಾಸಿನಿ!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೂಪರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ಆಗಿದೆ ನಾವಡರೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋಡಿ ರಾಯರೇ ಶುರುವಾಯ್ತಲ್ಲ..? ತುಂಬಾನೇ ಚೆನ್ನಿದೆ ನಿಮ್ಮ ಕಾವ್ಯ ಕನ್ನಿಕೆ ಇನ್ನಂತೂ ವಾರ ಪೂರ್ತಿ ಇವಳದ್ದೇ ಕಾರುಬಾರ, ಮನೆ ಮನದಲ್ಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೊಗಸಾಗಿದೆ ಹಾಡು, ನಾವಡರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ಕಲ್ಪನೆ ನಾವಡರೆ, ಓದುತ್ತಾ ಹೋದ೦ತೆ "ಕನ್ನಡ ನಾಡಿನ ಜೀವನದಿ, ಕಾವೇರೀ.............." ಹಾಡು ನೆನಪಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾವ್ಯಕನ್ನಿಕೆ! ಸುಂದರವಾದ ಕವನಕ್ಕೆ ಸುಂದರವಾದ ಹೆಸರು .. ಆ ಕನ್ನಿಕೆಯು ನಮ್ಮ ಮನಸೆಳೆಯುತ್ತ, ಅವಳು ಹರಿಯುವ ಹಾಗೇ ಓದಿಸಿಕೊಂಡು ಹೋದಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ, ಗೋಪಿನಾಥ್, ಭಾಗ್ವತರು, ದೀಪಕ್, ಮ೦ಜು, ಶ್ರೀಕಾ೦ತರು ಹಾಗೂ ಚಿಕ್ಕು ಎಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರ ಕಾವ್ಯ ಧುಮ್ಮಿಕ್ಕಿ ಹರಿದಿದೆ, ಓದುಗರ ಕಣ್ಮನವ ತುಂಬಿ ತಣಿಸಲಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕವಿನಾಗರಾಜರೇ. ನಮಸ್ಕಾರಗಳೊ೦ದಿಗೆ ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.