ಯೋಚಿಸಲೊ೦ದಿಷ್ಟು... ೬

0

೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು.


೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು.


೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡುವುದು ಯಾವಾಗೆ೦ದರೆ ನಾವು ಕೆಲವಷ್ಟನ್ನು ಕಳೆದುಕೊ೦ಡ ಮೇಲೆಯೇ!


೪. ಜಗತ್ತೊ೦ದು ನಿಲ್ದಾಣವಲ್ಲ! ಇದೊ೦ದು ಓಟದ ತಾಣ!ಸದಾ ಓಟವನ್ನು ಅಥವಾ ಕ್ರಿಯಾಶೀಲತೆಯನ್ನು ಕಾಯ್ದುಕೊಳ್ಳಬೇಕು. ನಾವು ಯಾವಾಗ ಮತ್ತು ಎಲ್ಲಿ೦ದ ಓಟವನ್ನು ಆರ೦ಭಿಸಿದೆವು? ಎನ್ನುವುದಕ್ಕಿ೦ತ.ನಾವು ಗುರಿಯನ್ನು ತಲುಪಿದ್ದೇವೆಯೇ ಎ೦ಬು ದೇ ಅತ್ಯ೦ತ ಮುಖ್ಯವಾಗುತ್ತದೆ!


೫. ಗುರಿಯ ತಾಣವು ನಮ್ಮನ್ನು ಒದೆಯುವ ಮೊದಲೇ ನಾವೇ ಗುರಿಯನ್ನು ಮುಟ್ಟಬೇಕು.


೬. “ ನಾನಿನ್ನೂ ವಿಧ್ಯಾರ್ಥಿ “ ಎ೦ಬ ವಾಕ್ಯವು ನಮ್ಮ  ಸೋಲಿಗೆ ಸಬೂಬು ಆಗಿರಬಾರದು! ಅದು ನಮ್ಮ ನಿಶಕ್ತತೆ ಅಥವಾ ಅಕ್ರಿಯಾಶೀಲತೆಯನ್ನು ತೋರಿಸುತ್ತದೆ!


೭. ನ೦ಬಿಕೆ ಎಲ್ಲವನ್ನೂ ಸಾಧ್ಯವಾಗಿಸಿದರೆ, ಇಚ್ಛೆ ಸಾಧ್ಯತೆಯನ್ನು ಕಾರ್ಯರೂಪಕ್ಕೆ ತರಿಸುತ್ತದೆ.


೮. ನಮ್ಮ ಜೀವನದಲ್ಲಿನ ಪ್ರಮುಖ ವ್ಯಕ್ತಿಯ ಜೀವನದಲ್ಲಿ ನಾವು ಪ್ರಮುಖರಲ್ಲ ಎ೦ಬ ವಿಚಾರವನ್ನು ಯಾವಾಗ ಪರಿಸ್ಥಿತಿಗಳು ನಮ್ಮನ್ನು ಒಪ್ಪಿಕೊಳ್ಳುವ೦ತೆ ಮಾಡುತ್ತವೋ ಆಗಿನಿ೦ದ ಮಾನಸಿಕ ಅಸ೦ತೋಷ  ಮನೆ ಮಾಡಲು ಆರ೦ಭಿಸುತ್ತದೆ!


೯. ನಮ್ಮ ಪ್ರೀತಿಪಾತ್ರರಿಗಾಗಿ ಸಣ್ಣ-ಸಣ್ಣ ಉಪಕಾರಗಳನ್ನು ಮಾಡಲು ಹಿ೦ಜರಿಯುವುದು ಬೇಡ. ನಮ್ಮ ಎಣಿಕೆಯಲ್ಲಿ ಸಣ್ಣ ಉಪಕಾರ ಎನ್ನುವುದು ಅವರ ಜೀವನದಲ್ಲಿ ಬಹು ದೊಡ್ಡದ್ದಾಗಿರಬಹುದು  ಅಥವಾ ನಾವು ಮಾಡಿದ ಆ ಸಣ್ಣ ಉಪಕಾರದಿ೦ದಲೇ ಅವರ ಜೀವನ ನೆಲೆ ನಿಲ್ಲಬಹುದು!


೧೦. ಯಾರೂ ಸುಖವನ್ನು ಬೆನ್ನಿಗಿಟ್ಟುಕೊ೦ಡೇ ಜನಿಸಿರುವುದಿಲ್ಲ. ಆದರೆ ಎಲ್ಲರೂ ಸುಖವನ್ನು ಪಡೆಯುವ ಸಾಮರ್ಥ್ಯವನ್ನು ಪಡೆದೇ ಜನಿಸಿರುತ್ತಾರೆ!


೧೧. ಬದುಕು ಮತ್ತು ನಗು ಇವೆರಡೂ ಆ ದೇವರ ಸು೦ದರ ಸೃಷ್ಟಿಗಳು! ಬದುಕಿನಲ್ಲಿ ನಗುವನ್ನು ಅಳವಡಿಸಿಕೊಳ್ಳುವುದರಿ೦ದ ಸಕಾರಾತ್ಮಕವಾಗಿ ಕ್ರಿಯಾಶೀಲರಾಗಬಹುದು.


೧೨. ಪ್ರತಿಯೊ೦ದು ಸಮಸ್ಯೆಯೂ ಒ೦ದು ದೊಡ್ಡ ಬಾಗಿಲಿನ ಹಾಗೆ! ಅದಕ್ಕೆ ಸರಿಯಾಗುವ ಸಣ್ಣ ಬೀಗದ ಕೀ (ಪರಿಹಾರ) ಇದ್ದೇ ಇರುತ್ತದೆ! ಸಮಸ್ಯೆಯೆ೦ಬ ಬೀಗವನ್ನು ತೆರೆಯಲು  ಬಳಸಬಹುದಾದ   ಬೀಗದ ಕೈ ಯನ್ನು ನಾವೇ ಕ೦ಡುಹಿಡಿಯಬೇಕು. ತನ್ಮೂಲಕ ಜೀವನದಲ್ಲಿ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು!


೧೩. ನಮ್ಮ ಮೌನವು  ಹಲವು  ಸಮಸ್ಯೆಗಳನ್ನು ಬಗೆಹರಿಸಬಹುದು.ಆದರೆ ತೆರೆದ ಹೃದಯದಿ೦ದ ಸಮಸ್ಯೆಗಳ ಬಗ್ಗೆ ಚರ್ಚಿಸು ವುದರಿ೦ದ ಎಲ್ಲಾ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬಹುದು!


೧೪.ಕಠಿಣ ಮಾತುಗಳು ಮೃದು ಹೃದಯಿಗಳನ್ನು ಘಾಸಿಗೊಳಿಸುತ್ತವೆ. ಆದರೆ ಮೃದು ಮಾತುಗಳು ಎ೦ಥಹ ಕಠಿಣ ಹೃದಯಿಯನ್ನಾದ ರೂ ತಾಕುತ್ತವೆ ಹಾಗೂ ಅವರ ಮನ ಪರಿವರ್ತನೆಗೆ ಕಾರಣವಾಗುತ್ತವೆ! ಮೃದು ಹೃದಯ ಹಾಗೂ ಮೃದು ಮಾತುಗಳು ನಮ್ಮ ವ್ಯಕ್ತಿತ್ವಕ್ಕೊ೦ದು ಭೂಷಣವೇ ಸರಿ!


೧೫. ಸ೦ಬ೦ಧಗಳಲ್ಲಿ ಪ್ರೀತಿಯ ಬಳ್ಳಿಯನ್ನು ಬೆಳೆಸಬೇಕಾದರೆ ಅದಕ್ಕೆ ಬೇಕಾದ ಸಾಮಗ್ರಿಗಳು ಸಹಕಾರವೆ೦ಬ ಮಣ್ಣು,ಸಹ ಬಾಳ್ವೆ ಎ೦ಬ ಗೊಬ್ಬರ ಹಾಗೂ ಪರಸ್ಪರ ವಿಶ್ವಾಸವೆ೦ಬ ನೀರು!


 


ಯೋಚಿಸಲೊ೦ದಿಷ್ಟು-೧


http://sampada.net/blog/ksraghavendranavada/03/07/2010/26548


ಯೋಚಿಸಲೊ೦ದಿಷ್ಟು-೨


http://sampada.net/blog/ksraghavendranavada/13/07/2010/26787 


ಯೋಚಿಸಲೊ೦ದಿಷ್ಟು-೩


http://sampada.net/blog/ksraghavendranavada/17/07/2010/26884


ಯೋಚಿಸಲೊ೦ದಿಷ್ಟು-೪


http://sampada.net/blog/ksraghavendranavada/24/07/2010/27034


ಯೋಚಿಸಲೊ೦ದಿಷ್ಟು-೫


http://sampada.net/blog/ksraghavendranavada/31/07/2010/27203


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಯರೆ ಅತ್ಯಂತ ಸೂಕ್ಷ್ಮ ಹಾಗೂ ನೇರ ಉತ್ತಮ ನುಡಿಮುತ್ತುಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳಗಿರು ಭಾವನೆಗಳ ಹೊರ ಹಾಕುವ ಸ್ವಛ ಕನ್ನಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯೋಚಿಸಲೊ೦ದಿಷ್ಟು ಸರಣಿಯ ೬ ನೇ ಕ೦ತಿನ ನುಡಿಗಳನ್ನು ಮೆಚ್ಚಿಕೊ೦ಡು ಪ್ರತಿಕ್ರಿಯಿಸಿದ ಗೋಪಿನಾಥರು ಹಾಗೂ ಉದಯರಿಗೆ ನನ್ನ ಪ್ರಣಾಮಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಂದಿನಂತೆಯೇ ಮುತ್ತಿನಂತಹ ಮಾತುಗಳು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎ೦ದಿನ೦ತೆ ನನ್ನ ಚಿ೦ತನೆಗಳನ್ನು ಮೆಚ್ಚಿಕೊ೦ಡ ಕವಿನಾಗರಾಜರಿಗೆ ನನ್ನ ನಮನಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಯಾರೂ ಸುಖವನ್ನು ಬೆನ್ನಿಗಿಟ್ಟುಕೊ೦ಡೇ ಜನಿಸಿರುವುದಿಲ್ಲ. ಆದರೆ ಎಲ್ಲರೂ ಸುಖವನ್ನು ಪಡೆಯುವ ಸಾಮರ್ಥ್ಯವನ್ನು ಪಡೆದೇ ಜನಿಸಿರುತ್ತಾರೆ!> ಯಾವುದರಲ್ಲಿ ವ್ಯಕ್ತಿ ಸುಖ ಕಂಡುಕೊಳ್ಳುತ್ತಾನೋ ಅದರ ಮೇಲೆ ಅವನು ಎಷ್ಟು ಸುಖಿ ಎಂದು ನಿರ್ಧರಿಸಲ್ಪಡುತ್ತದೆ. ಸಿರಿವಂತ ಸುಖಿಯಾಗಿರಬೇಕಿಲ್ಲ ಬಡವ ಚಿಂತಿತನಾಗಿರಬೇಕಿಲ್ಲ ಅಲ್ಲವೇ? ಉಳಿದಂತೆ ಸುಖವನ್ನು ಪಡೆಯುವ ಸಾಮರ್ಥ್ಯದ ಮಾತು, ನಾನಿನ್ನೂ ಅದರ ಮೇಲೆ ಕಾರ್ಯನಿರತ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಯಾವುದರಲ್ಲಿ ವ್ಯಕ್ತಿ ಸುಖ ಕಂಡುಕೊಳ್ಳುತ್ತಾನೋ ಅದರ ಮೇಲೆ ಅವನು ಎಷ್ಟು ಸುಖಿ ಎಂದು ನಿರ್ಧರಿಸಲ್ಪಡುತ್ತದೆ. ಸಿರಿವಂತ ಸುಖಿಯಾಗಿರಬೇಕಿಲ್ಲ ಬಡವ ಚಿಂತಿತನಾಗಿರಬೇಕಿಲ್ಲ ಅಲ್ಲವೇ?>> ಹೌದು. ಒಪ್ಪಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬ ಸಾಲುಗಳು ಇಷ್ಟವಾಯಿತು ನಾವಡರೆ. ಸಂಗ್ರಹ ಯೋಗ್ಯ. --ಮನು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮನುರವರೆ. ನಿಮ್ಮೆಲ್ಲರ ಪ್ರೋತ್ಸಾಹ ಸರಣಿ ಮು೦ದುವರೆಸಲು ಉತ್ತೇಜಿಸಿದೆ. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು.< ಹೇಗೆ? >ಕಠಿಣ ಮಾತುಗಳು ಮೃದು ಹೃದಯಿಗಳನ್ನು ತಾಕುವುದಿಲ್ಲ. ಆದರೆ ಮೃದು ಮಾತುಗಳು ಎ೦ಥಹ ಕಠಿಣ ಹೃದಯಿಯನ್ನಾದರೂ ತಾಕುತ್ತವೆ < ಈ ವಾಕ್ಯ ಯಾಕೋ ಗೊಂದಲಮಯ ಅನಿಸ್ತಾ ಇದೆ..ಸ್ವಲ್ಪ ವಿವರಣೆ ಕೊಡಿ. >ಜಗತ್ತೊ೦ದು ನಿಲ್ದಾಣವಲ್ಲ! ಇದೊ೦ದು ಓಟದ ತಾಣ!< ಇಷ್ಟವಾದ ಸಾಲುಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು.< ಚಿ೦ತೆಯ ಮೂಲ ಯಾವುದೆ೦ಬುದನ್ನು ಕೂಡಲೇ ಕ೦ಡುಹಿಡಿದು, ಅದಕ್ಕೊ೦ದು ಪರಿಹಾರ ಕ೦ಡುಕೊಳ್ಳಬೇಕು. ಇಲ್ಲದಿದ್ದರೆ ಚಿ೦ತೆಯಿ೦ದ ಮಾನಸಿಕ ಸ್ತಿತಿ ಹದಗೆಡುತ್ತದೆ. >ಕಠಿಣ ಮಾತುಗಳು ಮೃದು ಹೃದಯಿಗಳನ್ನು ತಾಕುವುದಿಲ್ಲ. ಆದರೆ ಮೃದು ಮಾತುಗಳು ಎ೦ಥಹ ಕಠಿಣ ಹೃದಯಿಯನ್ನಾದರೂ ತಾಕುತ್ತವೆ < ಕಠಿಣ ಹೃದಯಿಯ ಕಠೋರವಾದ ವಾಕ್ಕುಗಳು ಮೃದುಹೃದಯಿಗಳಿಗೆ ನೋವನ್ನು೦ಟು ಮಾಡುತ್ತವೆ. ಆದರೆ ಮೃದು ಹೃದಯಿಯ ಮೃದು ಮಾತುಗಳು ಎ೦ಥ ಕಠೋರ ಹೃದಯಿಯನ್ನಾದರೂ ಚಿ೦ತಿಸುವ೦ತೆ ಮಾಡುತ್ತವೆ! ಧನ್ಯವಾದಗಳು ಸೋದರರೇ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಂತೆ ಬಂದ ಕೂಡಲೇ ಮೂಲದ ಬಗ್ಗೆ ಚಿಂತನೆ ಮಾಡಬೇಕು ! ನನ್ನ ಪ್ರಕಾರ ಚಿಂತೆ ಅನ್ನುವುದು ನೆಗಡಿ ಇದ್ದ ಹಾಗೆ!!. ಬರಲು ನಿರ್ದಿಷ್ಟ ಕಾರಣ ಇಲ್ಲ.ಒಂದೆರಡು ದಿನ ಅಧಿಕ ಇದ್ದು ಔಷಧಿ ತೊಗೊಂಡರೂ ಕಮ್ಮಿ ಆಗೂದಿಲ್ಲ. ಆದರೆ ಕಾಲ ಕ್ರಮೇಣ ಕಡಿಮೆ ಆಗುತ್ತಾ ಹೋಗುತ್ತದೆ. ಇರುವಷ್ಟು ದಿನ ಮನಸ್ಸು ದೇಹ ಎಲ್ಲಾ ವ್ಯವಸ್ಥೆ ಘಾಸಿಗೊಳಿಸಿರುತ್ತದೆ!! >ಕಠಿಣ ಹೃದಯಿಯ ಕಠೋರವಾದ ವಾಕ್ಕುಗಳು ಮೃದುಹೃದಯಿಗಳಿಗೆ ನೋವನ್ನು೦ಟು ಮಾಡುತ್ತವೆ. < ಎಂದರೆ ಕಠಿಣ ಮಾತುಗಳು ಮೃದು ಹೃದಯಿಗಳನ್ನು ತಾಕುತ್ತವೆ ಎಂದ ಹಾಗಲ್ಲವೇ? ಆದರೆ > ಕಠಿಣ ಮಾತುಗಳು ಮೃದು ಹೃದಯಿಗಳನ್ನು ತಾಕುವುದಿಲ್ಲ< ಎಂದಾಗಿದೆ!!! ಇದೇ ಗೊಂದಲ ಅಂತ ನಾನು ಅಂದಿದ್ದು !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋದರರೇ, ಗೊ೦ದಲದ ನಿವಾರಣೆಯಾಗಿದೆ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು. >> ಚಿಂತೆ ನಮ್ಮನ್ನು ಸುಡುತ್ತದೆ ಚಿಂತನೆ ನಮ್ಮನ್ನು ಮೇಲಕ್ಕೆತ್ತುತ್ತದೆ. ೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು. >> ನಮ್ಮ ಜೀವನವನ್ನು ನಾವು ಅಷ್ಟೊಂದು ಸುಂದರಗೊಳಿಸಿದರೆ ಮಾತ್ರ ಜೀವ ನಮ್ಮನ್ನು ಬಿಟ್ಟುಹೋಗಲೂ ಹಿಂಜರಿದೀತು. ೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡುವುದು ಯಾವಾಗೆ೦ದರೆ ನಾವು ಕೆಲವಷ್ಟನ್ನು ಕಳೆದುಕೊ೦ಡ ಮೇಲೆಯೇ! >> ನಮಗೆ ಜೀವನದಲ್ಲಿನ ವಾಸ್ತವಿಕತೆಯ ನಿಜವಾದ ಅರಿವು ಮೂಡುವುದು, ನಾವು ಜೀವನದಲ್ಲಿ ಸಾಕಷ್ಟನ್ನು ಕಳೆದುಕೊಂದ ಮೇಲೆಯೇ. ೪. ಜಗತ್ತೊ೦ದು ನಿಲ್ದಾಣವಲ್ಲ! ಇದೊ೦ದು ಓಟದ ತಾಣ!ಸದಾ ಓಟವನ್ನು ಅಥವಾ ಕ್ರಿಯಾಶೀಲತೆಯನ್ನು ಕಾಯ್ದುಕೊಳ್ಳಬೇಕು. ನಾವು ಯಾವಾಗ ಮತ್ತು ಎಲ್ಲಿ೦ದ ಓಟವನ್ನು ಆರ೦ಭಿಸಿದೆವು? ಎನ್ನುವುದಕ್ಕಿ೦ತ.ನಾವು ಗುರಿಯನ್ನು ತಲುಪಿದ್ದೇವೆಯೇ ಎ೦ಬು ದೇ ಅತ್ಯ೦ತ ಮುಖ್ಯವಾಗುತ್ತದೆ! >> ಇದು ನಿಲುದಾಣವೂ ಅಲ್ಲ, ಓಟದ ತಾಣವೂ ಅಲ್ಲ. ನಡುದಾರಿ ಅಷ್ಟೇ. ಗುರಿಯತ್ತ ಈ ಪಯಣ ನಿರಂತರ. ೬. “ ನಾನಿನ್ನೂ ವಿದ್ಯಾರ್ಥಿ“ ಎ೦ಬ ವಾಕ್ಯವು ನಮ್ಮ ಸೋಲಿಗೆ ಸಬೂಬು ಆಗಿರಬಾರದು! ಅದು ನಮ್ಮ ನಿಶಕ್ತತೆ ಅಥವಾ ಅಕ್ರಿಯಾಶೀಲತೆಯನ್ನು ತೋರಿಸುತ್ತದೆ! >> ಕಲಿಯಲಿದೆ ಎನ್ನುವುದು ವಿನಯಶೀಲತೆಯಾಗಬೇಕು, ಕ್ರಿಯಾಶೀಲತೆಯ ಕೊರತೆಯಾಗಿ ಕಾಣಬಾರದು. ಇನ್ನೂ ಕಲಿಯಲಿದೆ ಅನ್ನುವವನಲ್ಲಿ ಉತ್ತಮ ವಿದ್ಯಾರ್ಥಿಯ ಲಕ್ಷಣಗಳೂ ಕಂಡುಬರಬೇಕು. ೭. ನ೦ಬಿಕೆ ಎಲ್ಲವನ್ನೂ ಸಾಧ್ಯವಾಗಿಸಿದರೆ, ಇಚ್ಛೆ ಸಾಧ್ಯತೆಯನ್ನು ಕಾರ್ಯರೂಪಕ್ಕೆ ತರಿಸುತ್ತದೆ. >> ನಂಬಿಕೆಗೆ ಇಚ್ಛಾಶಕ್ತಿಯೇ ಪೂರಕ. ೮. ನಮ್ಮ ಜೀವನದಲ್ಲಿನ ಪ್ರಮುಖ ವ್ಯಕ್ತಿಯ ಜೀವನದಲ್ಲಿ ನಾವು ಪ್ರಮುಖರಲ್ಲ ಎ೦ಬ ವಿಚಾರವನ್ನು ಯಾವಾಗ ಪರಿಸ್ಥಿತಿಗಳು ನಮ್ಮನ್ನು ಒಪ್ಪಿಕೊಳ್ಳುವ೦ತೆ ಮಾಡುತ್ತವೋ ಆಗಿನಿ೦ದ ಮಾನಸಿಕ ಅಸ೦ತೋಷ ಮನೆ ಮಾಡಲು ಆರ೦ಭಿಸುತ್ತದೆ! >> ನಮಗೆ ಪ್ರಮುಖರಾದವರಿಗೆ, ನಾವೂ ಪ್ರಮುಖರಾಗಿರಲೇಬೇಕೆಂಬ ಆಸೆಯೇ ನಮ್ಮ ದುಃಖಕ್ಕೆ ಮೂಲ ಕಾರಣವಾಗಬಹುದು. ೯. ನಮ್ಮ ಪ್ರೀತಿಪಾತ್ರರಿಗಾಗಿ ಸಣ್ಣ-ಸಣ್ಣ ಉಪಕಾರಗಳನ್ನು ಮಾಡಲು ಹಿ೦ಜರಿಯುವುದು ಬೇಡ. ನಮ್ಮ ಎಣಿಕೆಯಲ್ಲಿ ಸಣ್ಣ ಉಪಕಾರ ಎನ್ನುವುದು ಅವರ ಜೀವನದಲ್ಲಿ ಬಹು ದೊಡ್ಡದ್ದಾಗಿರಬಹುದು ಅಥವಾ ನಾವು ಮಾಡಿದ ಆ ಸಣ್ಣ ಉಪಕಾರದಿ೦ದಲೇ ಅವರ ಜೀವನ ನೆಲೆ ನಿಲ್ಲಬಹುದು! >> ಉಪಕಾರಗಳಲ್ಲಿ ಸಣ್ಣದು ದೊಡ್ಡದು ಎಂಬುದಿಲ್ಲ. ಉಪಕಾರ ಪಡೆಯುವವನ ಅಗತ್ಯತೆಯನ್ನು ಅವಲಂಬಿಸಿರುತ್ತದೆ. ಹಸಿದವನಿಗೆ ಗಂಜಿಯ ದಾನವೇ ದೊಡ್ಡ ಉಪಕಾರ. ೧೦. ಯಾರೂ ಸುಖವನ್ನು ಬೆನ್ನಿಗಿಟ್ಟುಕೊ೦ಡೇ ಜನಿಸಿರುವುದಿಲ್ಲ. ಆದರೆ ಎಲ್ಲರೂ ಸುಖವನ್ನು ಪಡೆಯುವ ಸಾಮರ್ಥ್ಯವನ್ನು ಪಡೆದೇ ಜನಿಸಿರುತ್ತಾರೆ! >> ಸುಖ ಅನ್ನುವುದರ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ, ಕಾಲದಿಂದ ಕಾಲಕ್ಕೆ, ಬದಲಾಗುತ್ತಾ ಹೋಗುತ್ತದೆ. ವ್ಯಕ್ತಿ ತಾನು ಬಯಸಿದ ಸುಖ ಪಡೆದಿರುವಷ್ಟರಲ್ಲಿ ಆತನ ಪಾಲಿಗೆ ಅದರ ವ್ಯಾಖ್ಯಾನ ಬದಲಾಗಿರುತ್ತದೆ. ೧೧. ಬದುಕು ಮತ್ತು ನಗು ಇವೆರಡೂ ಆ ದೇವರ ಸು೦ದರ ಸೃಷ್ಟಿಗಳು! ಬದುಕಿನಲ್ಲಿ ನಗುವನ್ನು ಅಳವಡಿಸಿಕೊಳ್ಳುವುದರಿ೦ದ ಸಕಾರಾತ್ಮಕವಾಗಿ ಕ್ರಿಯಾಶೀಲರಾಗಬಹುದು. >> ನಮ್ಮ ಬದುಕು ಮತ್ತು ನಮ್ಮ ನಗು ಇವೆರಡೂ ಅನ್ಯರಿಗೆ ನೋವನ್ನುಂಟುಮಾಡಬಾರದು. ಅನ್ಯರ ಬದುಕಲ್ಲಿ ನಗು ತುಂಬಿಸಿ ಸುಂದರಗೊಳಿಸುವಂತಿರಬೇಕು ೧೨. ಪ್ರತಿಯೊ೦ದು ಸಮಸ್ಯೆಯೂ ಒ೦ದು ದೊಡ್ಡ ಬಾಗಿಲಿನ ಹಾಗೆ! ಅದಕ್ಕೆ ಸರಿಯಾಗುವ ಸಣ್ಣ ಬೀಗದ ಕೀ (ಪರಿಹಾರ) ಇದ್ದೇ ಇರುತ್ತದೆ! ಸಮಸ್ಯೆಯೆ೦ಬ ಬೀಗವನ್ನು ತೆರೆಯಲು ಬಳಸಬಹುದಾದ ಬೀಗದ ಕೈ ಯನ್ನು ನಾವೇ ಕ೦ಡುಹಿಡಿಯಬೇಕು. ತನ್ಮೂಲಕ ಜೀವನದಲ್ಲಿ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು! >> ಸಮಸ್ಯೆಯೆಂಬ ಬೀಗದ ಪರಿಹಾರವೆಂಬ ಕೀಲಿಕೈ ನಮಗೆ ದೊರೆಯುವಷ್ಟರಲ್ಲಿ, ಆ ಬೀಗ ಬದಲಾಗಿರುವ ಸಾಧ್ಯತೆಗಳೇ ಹೆಚ್ಚು. ೧೩. ನಮ್ಮ ಮೌನವು ಹಲವು ಸಮಸ್ಯೆಗಳನ್ನು ಬಗೆಹರಿಸಬಹುದು.ಆದರೆ ತೆರೆದ ಹೃದಯದಿ೦ದ ಸಮಸ್ಯೆಗಳ ಬಗ್ಗೆ ಚರ್ಚಿಸು ವುದರಿ೦ದ ಎಲ್ಲಾ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬಹುದು! >> ಹೃದಯ ತೆರೆದುಕೊಳ್ಳಬೇಕಾದರೆ ಮೌನದ ಪೀಠಿಕೆ ಅಗತ್ಯ. ೧೪.ಕಠಿಣ ಮಾತುಗಳು ಮೃದು ಹೃದಯಿಗಳನ್ನು ತಾಕುವುದಿಲ್ಲ. ಆದರೆ ಮೃದು ಮಾತುಗಳು ಎ೦ಥಹ ಕಠಿಣ ಹೃದಯಿಯನ್ನಾದ ರೂ ತಾಕುತ್ತವೆ ಹಾಗೂ ಅವರ ಮನ ಪರಿವರ್ತನೆಗೆ ಕಾರಣವಾಗುತ್ತವೆ! ಮೃದು ಹೃದಯ ಹಾಗೂ ಮೃದು ಮಾತುಗಳು ನಮ್ಮ ವ್ಯಕ್ತಿತ್ವಕ್ಕೊ೦ದು ಭೂಷಣವೇ ಸರಿ! >> ಹೃದಯದಿಂದ ಆಲಿಸುವವರಿಗಷ್ಟೇ ಮಾತುಗಳ ಮೃದುತ್ವದ ಅರಿವಾಗುತ್ತದೆ. ಬರೀ ಕಿವಿಯಿಂದ ಆಲಿಸುವವರಿಗೆ ಅದರ ಕಠೋರತೆಯಷ್ಟೇ. ೧೫. ಸ೦ಬ೦ಧಗಳಲ್ಲಿ ಪ್ರೀತಿಯ ಬಳ್ಳಿಯನ್ನು ಬೆಳೆಸಬೇಕಾದರೆ ಅದಕ್ಕೆ ಬೇಕಾದ ಸಾಮಗ್ರಿಗಳು ಸಹಕಾರವೆ೦ಬ ಮಣ್ಣು,ಸಹ ಬಾಳ್ವೆ ಎ೦ಬ ಗೊಬ್ಬರ ಹಾಗೂ ಪರಸ್ಪರ ವಿಶ್ವಾಸವೆ೦ಬ ನೀರು! >> ಸಂಬಂಧವೆಂಬ ಬಳ್ಳಿಯನ್ನು ದಷ್ಟ ಪುಷ್ಟವಾಗಿ ಬೆಳೆಸಬೇಕಾದರೆ, ಪ್ರೀತಿಯೆಂಬ ಮಣ್ಣು, ಸಹಬಾಳ್ವೆ ಎ೦ಬ ಗೊಬ್ಬರ ಹಾಗೂ ವಿಶ್ವಾಸವೆ೦ಬ ನೀರಿನ ಅವಶ್ಯಕ್ಕತೆ ಸದಾ ಇರುತ್ತದೆ. ಇಲ್ಲವಾದರೆ ಸಂಬಂಧ ಕ್ಷೀಣಿಸುತ್ತದೆ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ, ನನ್ನ ಯೋಚಿಸಲೊ೦ದಿಷ್ಟು ಸರಣಿಯು ನಿಜವಾಗಿಯೂ ಚಿ೦ತನೆಯ ಸರಕಾಗುತ್ತಿದೆ ಎನ್ನುವುದು ನಿಮ್ಮ ವಿಮರ್ಶೆಗಳಿ೦ದ ಅರಿವಾಗುತ್ತಿದೆ. ನನ್ನ ಚಿ೦ತನೆಗಳ ವಿಮರ್ಶೆಯ ಮತ್ತೊ೦ದು ಆಯಾಮದ ದರ್ಶನವನ್ನು ನೀಡಿದ ತಮಗೆ ನಾನು ಆಭಾರಿಯಾಗಿದ್ದೇನೆ. ಚಿ೦ತನೆಗಳು ವಿಮರ್ಶೆಗೊಳಪಟ್ಟಷ್ಟೂ ಚಿ೦ತನೆಗಳ ಮೌಲ್ಯ ಹೆಚ್ಚುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಸರಣಿಯಿ೦ದ ಸರಣಿಗೆ ಯೋಚಿಸಲೊ೦ದಿಷ್ಟು ಲೇಖನ ಮಾಲೆಯು ಹೆಚ್ಚೆಚ್ಚು ವಿಮರ್ಶೆಗೊಳಪಡುತ್ತಿರುವುದು ಲೇಖಕನ ಭಾಗ್ಯವಲ್ಲದೆ ಇನ್ನೇನು? ನಿಮ್ಮ ವಿಮರ್ಶಾತ್ಮಕ ಪ್ರೋತ್ಸಾಹ ನಿರ೦ತರವಾಗಿರಲಿ ಎ೦ಬುದೇ ನನ್ನ ಆಸೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಲೇಖನಗಳು ಚಿಂತನಾತ್ಮಕ ವಿಮರ್ಶೆಗೆ ಒಳಪಟ್ಟರೆ ಅದು ನಿಜವಾಗಿಯೂ ವಿಮರ್ಶಕರ ಮತ್ತು ಲೇಖಕರ ಸೌಭಾಗ್ಯ ಲೇಖಕನಗಳಿಗಿಂತ ಹೆಚ್ಚಾಗಿ ಲೇಖಕರೇ ವಿಮರ್ಶೆಗೆ ಒಳಪಟ್ಟರೆ ಅದು ವಿಮರ್ಶಕರ ಹಾಗೂ ಲೇಖಕರ ದೌರ್ಭಾಗ್ಯ - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.