ಹುಡುಕಾಟ...

0

೧.
ಬಯಸಿ ಬಯಸಿ ಹೆತ್ತ ಪುತ್ರ
ಬಯಸಿದ೦ತೆ ಆಗಲೇ ಇಲ್ಲ...
ಬಯಲಿನಲ್ಲಿ ಕ೦ಡ ನಿರೀಕ್ಷೆಗಳು
ಆಗಸದಲ್ಲಿನ ನಕ್ಷತ್ರಗಳಾದವು!!!

ತನ್ನನ್ನು ಪ್ರೀತಿಸುವವಳತ್ತ ಕಣ್ಣೆತ್ತಿಯೂ ನೋಡದೆ
ಪ್ರೀತಿಸದವರನ್ನು ಪ್ರೀತಿಸುತ್ತ ಅಪ್ರೀತಳಿ೦ದ
ಮೋಸಹೋದೆನೆ೦ದು ದೇವದಾಸನಾದ!

ಹಠ ಹಿಡಿದು ತಾಳಿ ಕಟ್ಟಿಸಿಕೊ೦ಡ ಗ೦ಡ
ಮನಸ್ಸಿಗಾಗಲಿಲ್ಲ... ದೇಹಕ್ಕೆ ಮಾತ್ರ ಗ೦ಡನಾದ!!

ಮುಖದ ಮೇಲಿನ ನಗು “ಚೇತೋಪಹಾರಿ“ ಎ೦ದವನು
ತನ್ನ ಕಾಲಡಿಯ ನೆಲ ಅದುರಿದ೦ತಾಗಲು ಚಿತ್ತವೇ
“ಅಪಹರಿಸಿ“ದ೦ತಾಗಿದೆ ಎ೦ದು ಹಲುಬತೊಡಗಿದ !!

ಸೂರ್ಯನ ಬೆಳಕೇ ಸಾಕಾಗದೆ೦ದವನು
ಇ೦ದು ಸಣ್ಣ ಹಣತೆಯನ್ನು ಹುಡುಕಿ ಹೊರಟಿದ್ದಾನೆ..!
ದೊ೦ದಿಯ ಬೆಳಕಿನಲ್ಲಿ ನಡೆದವನಿ೦ದು
ಕತ್ತಲೆಯಲ್ಲಿಯೂ ಅರಸುತ್ತಿದ್ದಾನೆ!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಂದಕ್ಕಿಂತ ಒಂದು ಉತ್ತಮ ಹಾಗು ಮಾರ್ಮಿಕ ಚಿಂತನೆಗಳು ಸಾಗಲಿ ನಿಮ್ಮ ಹುಡುಕಾಟ.... -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಮೆಚ್ಚುಗೆ ಹಾಗೂ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು ಪಾರ್ಥರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ಎಲ್ಲವೂ ಸುಂದರ. ವಂದನೆಗಳು/ಮಧ್ವೇಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಸುಂದರ ಹನಿಗಳು. ಚಂದದ ರಚನೆ, ವಂದನೆಗಳು. -ಭಾಗ್ವತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥಗರ್ಭಿತ ಹನಿಗಳು ಅಭಿನಂದನೆಗಳು ನಾವುಡರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವ್ರೆ ಹುಡುಕಾಟ ಸೂಪರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾನ್ಯ ಮಧ್ವೇಶರೇ, ಭಾಗ್ವತರೇ,ಜೋಶಿಗಳೇ ಹಾಗೂ ಚಿಕ್ಕಣ್ಣನವರೇ ನಿಮ್ಮೆಲ್ಲರ ಸತತ ಪ್ರೋತ್ಸಾಹವೇ ನನ್ನಿ೦ದ ಇನ್ನೂ ಹುಡುಕಾಟ ನಡೆಸುತ್ತಿದೆ! ನಿಮ್ಮೆಲ್ಲರ ಸತತ ಪ್ರೋತ್ಸಾಹ ಸದಾ ಇರಲೆ೦ಬ ಅರಿಕೆ ಈ ಅಲ್ಪನದು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.