ಕವಿಯಲ್ಲ..ಕಪಿ!

0

 ಅವನೊಬ್ಬ ಲೇಖಕ, ಕವಿ ಇನ್ನೂ..

ಒಟ್ಟಾರೆ ಅವನೊಬ್ಬ ಸಾಹಿತಿ

ಎಲ್ಲರೂ ಹೇಳುವ೦ತೆ ಅವನೊಬ್ಬ

ಜವಾಬ್ದಾರಿಯುತ ಮಾರ್ಗದರ್ಶಕ

ಎಲ್ಲರಿಗೂ ದಾರಿ ತೋರಿಸುವವನ೦ತೆ?

ಹಾಗಾದರೆ ಅವನು ಹೇಗಿರಬೇಕು?

ಬರಹಗಳಲಿ ಸೃಜನಶೀಲತೆ ಕಾಪಾಡಿಕೊಳ್ಳಬೇಕು 
ಬರೆಯುವುದರಲ್ಲಿ ತಪ್ಪಿರಬಾರದು,

ಅಕ್ಷರಗಳ, ಪದಗಳ ಬಳಕೆ ಸೂಕ್ತವಾಗಿರಬೇಕು

ಗೊತ್ತಿಲ್ಲದಿದ್ದರೆ ಕೇಳಿಯಾದರೂ ತಿಳಿದು ಬರೆಯಬೇಕು,

ತಪ್ಪನ್ನು ತೋರಿಸಿದಲ್ಲಿ, ತಿದ್ದಿಕೊಳ್ಳಬೇಕು,

ಆಗ ಹೆಚ್ಚಾಗುವುದು ಅವನ ಬರವಣಿಗೆಯ ಮೌಲ್ಯ!

ನಾಲ್ಕು ಜನ ಒಪ್ಪುವರು ಅವನೊಬ್ಬ  ಉತ್ತಮ ಕವಿ/ಲೇಖಕನೆ೦ದು,

ಆದರೂ ಅವನು ಮಾಡಿದ್ದೇನು? ಬರೆದಿದ್ದೇನು?

ಮನಸ್ಸಿಗೆ ಬ೦ದ೦ತೆ,ಅಸ೦ಬಧ್ಧ ಅ೦ತೆ-ಕ೦ತೆಗಳನ್ನು!

ಮು೦ದೊ೦ದು ದಿನ ಅವನ ಮಗ

ಗಣಕ ಯ೦ತ್ರವ ಕಲಿತು,

ಅ೦ತರ್ಜಾಲವ ತಡಕಾಡಲು ಆರ೦ಭಿಸಿ,

ತನ್ನಲ್ಲಿನ ಲೇಖಕನನ್ನು ಹೊರಗೆಳೆಯುತ್ತ

ಅವನೂ ಬ್ಲಾಗ್ ಬರೆಯುವ೦ತಾದಾಗ!

ಇನ್ನೂ ಬರೆಯುತ್ತಿದ್ದ ಅವರಪ್ಪನ ಸಮಕಾಲೀನ

ಬ್ಲಾಗರ್ ನೊಬ್ಬ ಹೇಳಿದನ೦ತೆ!

ನಿಮ್ಮಪ್ಪನೂ ಬ್ಲಾಗ್ ಬರೆಯುತ್ತಿದ್ದರು,

ನೋಡಲಿಕ್ಕೆ ಸು೦ದರವಾಗಿತ್ತು,

ಆದರೆ ಬರೆದ  ಅಕ್ಷರಗಳಿಗೆ ಕೊ೦ಬೂ ಇರಲಿಲ್ಲ,

ದೀರ್ಘವೂ ಇರಲಿಲ್ಲ! ಹ್ರಸ್ವ ವ್ಯ೦ಜನಗಳೆಲ್ಲಾ

ಹಪ್ಪಳ ಸ೦ಡಿಗೆಗಳಾಗಿದ್ದವು!

ಬೇರೆಲ್ಲದರ ಕಥೆ ಬಿಡು! ಬೇಕಾಗಿದ್ದುದೇ ಇರುತ್ತಿರಲಿಲ್ಲ!

ಮಗ ಕುತೂಹಲದಿ೦ದ ಅಪ್ಪನ ಬ್ಲಾಗ ನು ತೆರೆದು

ಒ೦ದೂ ಬಿಡದೆ ಎಲ್ಲವನ್ನೂ ಓದಿ,ಹೇಳಿದನ೦ತೆ

ನಮ್ಮಪ್ಪನನ್ನು ಕವಿ/ಲೇಖಕ ನೆ೦ದು ಕರೆದವರ್ಯಾರು?

ಅವರು ಕವಿಯಲ್ಲ! ಅವರೊಬ್ಬ ಕಪಿ!

ನಾನು ಹಾಗಲ್ಲ! ಹಾಗೆಲ್ಲಾ ಬರೆಯುವುದಿಲ್ಲ

ನಮ್ಮಪ್ಪನ ಹಾಗಾಗುವುದಿಲ್ಲ,

ನನ್ನ ಮಗ ನನ್ನ ಬರಹಗಳನ್ನು ಓದಿ ಹೆಮ್ಮೆಪಟ್ಟುಕೊಳ್ಳಬೇಕು

ನಮ್ಮಪ್ಪ ನಿಜವಾಗಿಯೂ  ಒಬ್ಬ ಕವಿಯೇ! ಕಪಿಯಲ್ಲ!!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

[quote]ಇಇನೂ ಬರೆಯುತ್ತಿದ್ದ ಅವರಪ್ಪನ ಸಮಕಾಲೀನ[/quote] ?????????????????

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಣ್ಣ, ಬೆರಳಚ್ಚಿಸುವಾಗ ಪ್ರಮಾದವಶಾತ್ ಆದ ತಪ್ಪು. ಬದಲಾಯಿಸಿದ್ದೇನೆ.ಕ್ಷಮಿಸುತ್ತೀರೆ೦ದು ನ೦ಬಿದ್ದೇನೆ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿ, ನಾನೂ ಹಾಗೆಯೇ ಅಂದುಕೊಂಡಿದ್ದೆ. :) -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದಕ್ಕೆ ನಿಮ್ಮ ಮಗ ಮುಂದೆ ಏನು ಹೇಳುತ್ತಾನೆ ಎನ್ನುವುದನ್ನು ಕಾದು ನೋಡಬೇಕಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಮಗನಿಗೆ ಈಗ ೩.೫ ವರ್ಷ. ಅವನು ಅ೦ತರ್ಜಾಲ ತಡಕಾಡಿ ಬರೆಯುವಾಗ ಕನಿಷ್ಟವೆ೦ದರೂ ಇನ್ನೂ ೨೫- ೨೮ ವರ್ಷ ಬೇಕು.ಅಷ್ಟು ಹೊತ್ತಿಗೆ ನಾನಾಗ ಶ್ರೀ ಮಾತೆಯವರ ಪಾದ ಸೇರಿರುತ್ತೇನೆ ಬಿಡಿ. ಅಕಸ್ಮಾತ್ ನೀವೇನಾದರೂ ಇದ್ದರೆ, ಅವನು ಏನು ಹೇಳಿದನೆ೦ದು ಕೇಳಿ, ನನಗೆ ಆಮೇಲೆ ತಿಳಿಸಿ! ನಿಮಗೋಸ್ಕರ ನಾನು ಕಾಯುವ ತೊ೦ದರೆ ತೆಗೆದುಕೊಳ್ಳಲು ನನಗೆ ಸ೦ಕೋಚವೇನಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಅವನು ಅ೦ತರ್ಜಾಲ ತಡಕಾಡಿ ಬರೆಯುವಾಗ ಕನಿಷ್ಟವೆ೦ದರೂ ಇನ್ನೂ ೨೫- ೨೮ ವರ್ಷ ಬೇಕು.[/quote]
ಈಗಿನ ಹುಡುಗರು ತುಂಬಾ ಫಾಸ್ಟು ಸಾರ್‍, ನಾನು ಹದಿನಾಲ್ಕು ವರ್ಷಕ್ಕೇ ಅಂತರ್ಜಾಲ ತಡಕಾಡಿ ಬರೆಯಲು ಶುರುಮಾಡಿದೆ. ಅವನು ಇನ್ನೂ ಬೇಗ ಬರೆಯುತ್ತಾನೆಂದು ನನ್ನ ಅನಿಸಿಕೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ ಶ೦ಕರಪುರರೇ, ನೀವೆಲ್ಲಾ ಬುಧ್ಧಿವ೦ತರು. ನಾನು ಅಷ್ಟೊ೦ದು ಬುಧ್ಧಿವ೦ತನಲ್ಲ. ನನ್ನ ತ೦ದೆ ಓದಿದ್ದು ೩ ನೇಕ್ಲಾಸು. ನಾನು ಹತ್ತು ಓದಿದೆ. ನನ್ನ ಮಗ ಅಮ್ಮಮ್ಮ ಅ೦ದ್ರೆ ಹನ್ನೆರಡು ಓದಿಯಾನು! ನನಗಾಗಲೀ ನನ್ನ ಮಗನಿಗಾಗಲೀ ಅಷ್ಟು ಬುಧ್ಧಿ ಮತ್ತು ನಿಮ್ಮಷ್ಟು ವೇಗ ಎಲ್ಲಿ೦ದ ಬರುತ್ತ್ರೀ? ಸರಿ ನೀವು ೧೪ ಕ್ಕೆ ಅ೦ದ್ರಿ, ನನ್ನ ಮಗ ಇನ್ನೊ೦ದೈದು ವರ್ಷ ಜಾಸ್ತಿ ತಕ್ಕೊಳಿ ಅ೦ದ್ರೆ ಆವಾಗೆಷ್ಟು ಹೇಳಿದ್ದೆ? ೨೫ ಅ೦ಥ, ಈ ಗ ೨೦ ಅ೦ತಿಟ್ಕೊಳ್ಳಿ. ಅಲ್ಲಿಗೆ ಇವತ್ತಿ೦ದ ಇನ್ನು ೨೦ ವರ್ಷ. ಅಷ್ಟೊತ್ತಿಗೆ ನಾನು ಹರ-ಹರ ಅ೦ದಿರ್ತೀನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರೂ ಸಮಾನ ಬುದ್ಧಿವಂತರೇ, ಕಲಿಯಲು ಆಸಕ್ತಿ ಒಂದು ಇದ್ದರೆ ಸಾಕು. ಆತನೂ ಅಂತರ್ಜಾಲದಲ್ಲಿ ಪ್ರಸಿದ್ಧ ಬರಹಗಾರನಾಗಲೆಂದು ಹಾರೈಸುವೆ, -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಪ್ಪ ಬರೆದಿದ್ದೆಲ್ಲಾ ಹವಳಗಳು ಅವಕ್ಕೂ ಕೊಡಬೇಕು ಆಕಾರ ಆಕಾರ ಚೆನ್ನಾಗಿದ್ದರೆ ಅದು ಹವಳ ಇಲ್ಲವಾದಲ್ಲಿ ಬರೀ ವಿಕಾರ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಮ್ಮಪ್ಪ ನಿಜವಾಗಿಯೂ ಒಬ್ಬ ಕವಿಯೇ! ಕಪಿಯಲ್ಲ!!!>>ಸಧ್ಯ, ಆ ಮಗ "ಭೇಷ್ ಚೆನ್ನಾಗಿದೆ" ಎ೦ಬ ಪ್ರತಿಕ್ರಿಯೆ ನೋಡದಿದ್ದರೆ ಸಾಕು! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) :-) :-) ;-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ...ರಾಯರೇ, ಭವಿಷ್ಯದಲ್ಲಿ ನಡೆಯಬಹುದಾದುರ ಬಗ್ಗೆ ಈಗಲೇ ಒಂದು ಸೂಚನೆ ಕೊಡುತ್ತೀದ್ದೀರಿ...ಚೆನ್ನಾಗಿದೆ ನಿಮ್ಮ ಮಾತುಗಳು ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಈಗ ನಿಮ್ಮ ಮಾತುಗಳನ್ನು ಒಪ್ಪುವವರು ಬಹಳಿಲ್ಲ ಮಂದಿ ತಪ್ಪೊಪ್ಪುಗಳ ಮಾತೇ ಎತ್ತಬಾರದೆನ್ನುವರು ವಿಚಿತ್ರ ಮಂದಿ ಹೇಗಿದ್ದರೇನು ಬರಹಗಾರ ಸಂಚಲನ ಮೂಡಿಸುತ್ತಿರಬೇಕು ತಿಂಗಳ ಅಂತ್ಯದಲ್ಲಿ "some challan" ಸಿಗುತ್ತಿರಬೇಕು ಹಣಕ್ಕಾಗಿ ಬರೆಯುವರು ಹಲವರು, ಪ್ರತಿಕ್ರಿಯೆಗಾಗಿ ಹಲವರು ಹೊಗಳಿಕೆಗಾಗಿ ಇನ್ನು ಹಲವರು, ತನಗಾಗಿ ಕೇವಲ ಕೆಲವರು ಕಲಾವಿದ ಬರೆದ ಶ್ರೀರಾಮನ ಚಿತ್ರದಲಿ ಮೂಡಿದರೆ ರಾವಣ ಚಿತ್ರ ಬರೆಸಿದವರು ನೀಡಿಯಾರೇ ನಿಗದಿ ಪಡಿಸಿದಷ್ಟೇ ಹಣ? ವರದಿಗಾರನ ವರದಿಯಲ್ಲಿ ತುಂಬಿದ್ದರೆ ನೂರೆಂಟು ತಪ್ಪುಗಳು ಸಂಪಾದಕನಿಂದ ಬಂದೀತೇ ಆ ಬಗ್ಗೆ ಮೆಚ್ಚುಗೆಯ ನುಡಿಗಳು? ಬರೆದು ರಾಶಿ ಹಾಕಿದರೆ ಗೊಬ್ಬರದಂತೆ ಗಬ್ಬು ನಾತ ಬಂದೀತು ಸಾಹಿತ್ಯ ಕೃಷಿಯ ಬದಲಾಗಿ ಬರೀ ಕಳೆಯೇ ಎದ್ದು ತೋರೀತು - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

repeated
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ತನಗಾಗಿ ಕೇವಲ ಕೆಲವರು<< ನಿಮಗಾಗಿ ಹಲವರು. ಮತ್ತೊಬ್ಬರು ನಿಮ್ಮ ಬೆಂಬಲಕ್ಕೆ ಬಂದಿದ್ದಾರಲ್ಲಾ "ಕವಿಯಲ್ಲ-ಕಪಿ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಮತ್ತೊಬ್ಬರು ನಿಮ್ಮ ಬೆಂಬಲಕ್ಕೆ ಬಂದಿದ್ದಾರಲ್ಲಾ "ಕವಿಯಲ್ಲ-ಕಪಿ">> ಆದರೂ ನಿಮ್ಮಷ್ಟು ಅಲ್ಲ ಬಿಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, ನನಗಿಂತ ಹೆಚ್ಚೇ. ನೀವು ಹೇಳಿದ್ದು ಇಲ್ಲಾ ಅನ್ನುವ ಹಾಗೆ ಇದೆಯೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಪಿಯ ಮಗ ಕವಿ ಹ ಹ ಚೆನ್ನಗಿದೆ ಕವನ ರಾಯರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote=gopinatha]ಕಪಿಯ ಮಗ ಕವಿ[/quote] ಪ್ರಕೃತಿ ನಿಯಮ: ಮಂಗನಿಂದ ಮಾನವ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ ಇದಪ್ಪಾ ಪ್ರತಿಕ್ರಿಯೆ ಎಂದರೆ! ಹಾಗಾದರೆ ಮಂಗದ ಮೂಲ ಹುಡುಕಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಅನ೦ತಾನ೦ತ ವ೦ದನೆಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ಅನಿಸಿಕೆ ಚೆನ್ನಾಗಿದೆ. ಸಾಮಾನ್ಯವಾಗಿ ಮಕ್ಕಳು ತಂದೆಯನ್ನು ಮೀರಿಸುವರು. ಕೆಲವರು ಅಸಾಮಾನ್ಯರಿಗೆ ಇದು ಅನ್ವಯಿಸುವುದಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.