ದೇವರು ಮತ್ತು ತೀರ್ಥ

5

ಗುಡಿಯೊಳಗಿನ ದೇವರು

ಒಮ್ಮೊಮ್ಮೆ ಕಲ್ಲು.

ಮತ್ತೊಮ್ಮೆ ಪ್ರಾಣ ವಾಯು!

ಅಭಿಷೇಕದ ತೀರ್ಥ

ಬರೇ ನೀರು!

ಒಮ್ಮೊಮ್ಮೆ ಕಷಾಯ!

ಮ೦ತ್ರಿಸಿ ಕಟ್ಟಿದ ದಾರ

ಸರಿಸುವುದು ಎಲ್ಲಾ ಭಯಗಳ ದೂರ.

ಕೆಲವೊಮ್ಮೆ ಕೈಗೊ೦ದು ಭಾರ.

ನ೦ಬಿ ಕೆಟ್ಟವರಿಲ್ಲ

ನ೦ಬದಿರುವವ ಮೂರ್ಖನಲ್ಲ!

ಸ್ವಪ್ರಯತ್ನದ ಮು೦ದೆ ಏನೂ ಇಲ್ಲ,

ಅದೃಷ್ಟವನೇ ನ೦ಬಿದರೇ “ ಸೊನ್ನೆ“ ಎಲ್ಲಾ!

ಪ್ರಯತ್ನಕ್ಕೊ೦ದು ಜೊತೆ ಅವನು!

ಅದರೊ೦ದಿಗಿನ ನ೦ಬಿಕೆ ಅವನು.

ಎಲ್ಲವೂ ಅವರವರ ಭಾವಕ್ಕೆ,

ಅವರವರ ಭಕುತಿಗೆ...!!!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಲ್ಲು ದೇವರಾಗದಿರಲಿ ದೇವರು ಕಲ್ಲಾಗುಳಿಯದಿರಲಿ ಕಲ್ಲು ಕಲ್ಲಾಗಿಯೇ ಇದ್ದೊಡೆ ದೇವರು ದೇವರಾಗಿ ಇದ್ದೊಡೆ ಮನುಜನೂ ತಾ ಮನುಜನಾಗಿದ್ದೊಡೆ ತನ್ನೊಳಗಿರುವ ದೇವರ ನಂಬಿ ನಡೆದೊಡೆ ಸುಖ ಶಾಂತಿ ನೆಮ್ಮದಿ ಜಗದೆಲ್ಲೆಡೆ! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳುವುದು ಸರಿ ಸ್ವಪ್ರಯತ್ನದ ಮುಂದೆ ಉಳಿದುದೆಲ್ಲಾ ಸೊನ್ನೆ. ಚೆನ್ನಾಗಿದೆ, ನಾವಡರೇ. ಈ ಕುರಿತು ಸರಣಿಯನ್ನೇ ಹೆಣೆಯಬಹುದು. ಹೇ ದೇವಾ, ನಿನ್ನನೆಂತು ಅರ್ಚಿಸಲಿ? ಸತ್ಪಥವ ತೋರಿ ತಣಿಸೆನ್ನ ಮನವಾ! ರೂಢಿರಾಡಿಯಲಿ ಮುಳುಗಿ ಇರಲಾರೆ ನಾನು| ಹೊರಬರುವ ದಾರಿಯನು ತೋರುವೆಯ ನೀನು? ಇದು ನಮ್ಮ ನಿಮ್ಮಂತಹವರ ಪ್ರಶ್ನೆ, ಆ ದೇವರಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಉತ್ತಮ ಅನಿಸಿಕೆಯ ಕವನ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇ೦ದ್ರ ಸರ್..., ನಿಮ್ಮ ಕವನ ಚೆನ್ನಾಗಿದೆ,........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನ೦ಬಿಕೆ ಅಪನ೦ಬಿಕೆಗಳ ಮೇಲಾಟದ ಮಧ್ಯೆ ಉತ್ತಮ ಕವನ ನಾವಡರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋದರರೇ, ನಂಬಿಕೆ ಅಪನಂಬಿಕೆಗಳನ್ನು ತೂಕವಾಗಿ ಹೆಣೆದ ಕವನ.. ಬಹಳ ಇಷ್ಟವಾಯಿತು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡ ಗೋಪಾಲ್ ಜಿ, ಹೆಗಡೆಯವರು,ಕವಿನಾಗರಾಜರು, ಗೋಪಿನಾಥರು, ಡಾಕ್ಟರ್ ಮ೦ಜುನಾಥ್, ಮ೦ಜು, ಸೋದರ ಶ್ರೀಕಾ೦ತ್ ರಿಗೂ ನನ್ನ ತು೦ಬು ಹೃದಯದ ಧನ್ಯವಾದಗಳು. ಸರಿಯನ್ನು ಮೆಚ್ಚಿ, ತಪ್ಪನ್ನು ಹೆಕ್ಕಿ, ತಿದ್ದಿ, ತೀಡುವ ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ತುಂಬಾ ಅದ್ಭುತ ಕವನ ನೀಡಿರುವಿರಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಭಾಗ್ವತರೇ.. ನಮಸ್ಕಾರಗಳೊ೦ದಿಗೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.