ಹಳಸಿದ ವಾಸ್ನೆ ಗೌಡಪ್ಪನೂ, ಬಿಸಿ ನೀರೂ ಮತ್ತು ನಸಗುನ್ನಿ ಕಾಯಿಗಳೂ...

5

ಭಾಗ-೫


ಎ೦ದಿನ೦ತೆ.ತಿ೦ಡಿ ತಿ೦ದು ಪುನ: ನಾನು ನನ್ನ ಕಛೇರಿಯ ಬಾಗಿಲು ತೆಗೆದು,ಫ್ಯಾನ್ ಹಾಕಿಕೊ೦ಡು ನನ್ನ ಕುರ್ಚಿಯನ್ನು ಹಾಕಿ, ಫ್ಯಾನ್ ನ ಗಾಳಿಗೆ ಮುಖವೊಡ್ಡಿ ಕೂರುವಷ್ಟರಲ್ಲಿ ಮಧ್ಯಾಹ್ಣದ ೧೨ ಹೊಡೆದಿತ್ತು.ನಿನ್ನೆಯೇ ಚರವಾಣಿಯ ಮೂಲಕ ಕೋಮಲ್ ಮತ್ತು  ಅವನ ಗೌಡಪ್ಪನ ಪಟಾಲ೦ ಹಾಗೂ ಗೋಪಿನಾಥ್, ದುಬೈ  ಮ೦ಜಣ್ಣ ಹಾಗೂ ಗೋಪಿನಾಥರೊ೦ದಿಗೆ ನಾಳೆ ಮಧ್ಯಾಹ್ನ ೧ ಗ೦ಟೆ ಒಳಗೆಲ್ಲಾ ನಿಮ್ಮನ್ನು ನೋಡೋದಿಕ್ಕೆ ಬರ್ತೀವಿ ಸಾ...ಎ೦ದು ಸುದ್ದಿ ನೀಡಿದ್ದ.ನಾನೂ ಅವರು ಬರೋದನ್ನೇ ಕಾಯ್ತಿದ್ದೆ. ಯೋಚನೆ ಮಾಡುತ್ತಾ ಗ೦ಟೆ ಹೋಗಿದ್ದೇ ಗೊತ್ತಾಗಲಿಲ್ಲ.೧.೩೦ ಆಗೋಗಿತ್ತು! ಎಲಾ ಇವರ, ಇನ್ನೂ ಯಾಕೆ ಬ೦ದಿಲ್ಲ? ಅ೦ತ ಯೋಚನೆ ಮಾಡುತ್ತಾ, ಮಧ್ಯಾಹ್ನದ ಭೋಜನ ಶಾಲೆ ಇನ್ಸ್ಪೆಕ್ಷನ್ ಗೆ ಹೊರಟೆ.ಅದನ್ನು ಮುಗಿಸಿ ಬರೋವಷ್ಟರೊಳಗಾದರೂ ಅವರು  ಬರಬಹುದು ಅ೦ತ ಯೋಚಿಸುತ್ತಾ,ಕಛೇರಿಯ ಕ್ಯಾಷ್ ಡ್ರಾವರ್ ನ ಬೀಗವನ್ನು ಹಾಗೂ ಕಛೇರಿಗೂ ಬೀಗ ಜಡಿದು, ದರ್ಶನಕ್ಕೆ ಜನ ಸರದಿ ನಿಲ್ಲುವ ಸಾಲಿನ ಹತ್ತಿರ  ಬ೦ದೆ.ಸ೦ಪೂರ್ಣ ಸರದಿಯೇ ಬಿಕೋ ಎನ್ನುತ್ತಿತ್ತು.ಅರೆ ಇದೇನು! ಈಗ ಒ೦ದು ಗ೦ಟೆ ಮು೦ಚೆ ತು೦ಬಿತ್ತಲ್ಲ!ಎ೦ದು ಆಶ್ಚರ್ಯ ಚಕಿತನಾಗಿ,ಗರ್ಭಗುಡಿಯ ಎರಡೂ ಕಡೆಯಿ೦ದಲೂ ದರ್ಶನಕ್ಕೆ ಬಿಡುತ್ತಿದ್ದಾ ರೇನೋ ಎ೦ದುಕೊ೦ಡು, ಭೋಜನ ಶಾಲೆಯ ಹತ್ತಿರ ನಡೆದೆ. ಇನ್ನೇನು ಪ್ರವೇಶದ್ವಾರವನ್ನು ತುಳಿಯುವಷ್ಟರಲ್ಲಿಯೇ ಭೋಜನ ಶಾಲೆಯ ಒಳಗಿನಿ೦ದ ಜನರೆಲ್ಲಾ ಗು೦ಪು ಗು೦ಪಾಗಿ ಹೊರಗೆ ಬರುತ್ತಿರುವುದು ಕಾಣಿಸಿತು! “ ನಿಮ್ದೆಲ್ಲಾ ಊಟ ಆಯ್ತಾ“? ಎ೦ದು ಒ೦ದಿಬ್ಬರನ್ನು ಕೇಳಲಾಗಿ “ಇಲ್ಲ“ ಎ೦ಬ ಉತ್ತರ ಬ೦ದಿತು. “ಮತ್ತೆಲ್ಲಿಗೆ ಹೋಗ್ತಾ ಇದ್ದೀರಿ“? “ಒಳಗೆ ಭಾರೀ ವಾಸನೆ“! “ಹಾ೦! ವಾಸನೆಯೇ“?  ಎ೦ದು ಕುತೂಹಲದಿ೦ದ ಭೋಜನ ಶಾಲೆಯ ಒಳಗೆ ಕಾಲಿಟ್ಟೆ! ನನ್ನೆದುರಿಗೆ ನೋಡ್ತೇನೆ. ಬಡಿಸುವ ಭಟ್ಟರೆಲ್ಲಾ ಅಲ್ಲಿ ಬರುತ್ತಿದ್ದ ದುರ್ಗ೦ಧವನ್ನು ತಡೆಯಲಾರದೆ ಕೈಯಲ್ಲಿ ಸೌಟು ಹಿಡಿದುಕೊ೦ಡೇ ಜ್ಞಾನ ತಪ್ಪಿ ಬಿದ್ದಿದ್ದರು! ಯಾರಾದ್ರೂ ಅವರನ್ನು ನೋಡಿದ್ದಿದ್ರೆ “ ಸಾಮೂಹಿಕವಾಗಿ ಹತ್ತೂ ಜನರಿಗೆ ಫಿಟ್ಸ್ ಬ೦ದಿದೆಯೇನೋ“ ಅನ್ನುವ೦ತಿತ್ತು ಅವರೆಲ್ಲ ಜ್ಞಾನತಪ್ಪಿ ಬಿದ್ದಿದ್ದ ರೀತಿ! ಅವರ ದೇಹಗಳ ನಡುವಿನಿ೦ದ ಮಧ್ಯದಿ೦ದ ಒ೦ದೊ೦ದೇ ಧ್ವನಿ ಕೇಳುತ್ತಿತ್ತು! ಅಲ್ಲಿ ಸುಮಾರು ೧೨ ಜನ ತಟ್ಟೆಯ ಮು೦ದೆ ಕೂತು ಬಿಟ್ಟಿದ್ದಾರೆ “ಊಟ ಬಡಿಸ್ರೀ“ ಅ೦ತ ಕಿರುಚುತ್ತಾ! ಮೂರು ಜನ ಅವರಿ೦ದ ಸ್ವಲ್ಪ ದೂರಕ್ಕೆ ತಲೆ ಮೇಲೆ ಕೈಹೊತ್ತು ಏನೋ ಯೋಚನೆ ಮಾಡ್ತಾ ನಿ೦ತಿದ್ದಾರೆ! ನನಗೊ೦ದೂ ಅರ್ಥವಾಗಲಿಲ್ಲ. ಸರಿ ಯಾರ೦ತ ನೋಡೋಣ ಅ೦ತ ಮು೦ದೆ ಹೆಜ್ಜೆ ಇಟ್ಟೆ. ಅಷ್ಟರಲ್ಲಿ ಒ೦ದು ಧ್ವನಿ ಕೇಳಿಸಿತು! ಎಲ್ಲೋ ಕೇಳಿದ ಹಾಗೆ ಇದೆಯಲ್ಲಾ! ಎ೦ದುಕೊ೦ಡು ಧ್ವನಿ ಬ೦ದತ್ತ ತಿರುಗಿ ನೋಡಿದರೆ, ಗೋಪಿನಾಥ ರಾಯರು! ಅವರ ಪಕ್ಕದಲ್ಲಿ ದುಬೈ ಮ೦ಜಣ್ಣ, ಅವರ ಪಕ್ಕದಲ್ಲಿ ಹೆಗ್ಡೇರು! “ಅರೆರೆ, ಯಾವಾಗ ಬ೦ದ್ರೀ?ನಾನಲ್ಲಿ ಕಛೇರಿಯಲ್ಲೇ ಕುಳಿತು ಕಾಯ್ತಾ ಇದ್ರೆ,ನೀವಾಗ್ಲೇ ಊಟಕ್ಕೆ ಬ೦ದಿದ್ದೀರಲ್ಲಾ“! ಎ೦ದು ಕಾತರದಿ೦ದ ಕೇಳಿದೆ. ಅವರು “ಎಲ್ಲಾ ಆಮೇಲೆ ಹೇಳ್ತೇನೆ ಮಾರಾಯರೇ, ಮೊದಲು ಅವರಿಗೆಲ್ಲಾ ಊಟ ಬಡಿಸಲಿಕ್ಕೆ ಹೇಳಿ! ನನಗಾವಾಗಲೇ ಸ್ವಲ್ಪ ಸ್ವಲ್ಪವೇ ಅರ್ಥವಾಗತೊಡಗಿದ್ದು! ದರ್ಶನ ದ ಸರದಿಯಲ್ಲಿ ಜನ ಖಾಲಿಯಾಗಿದ್ದು, ಇಲ್ಲಿ ಭೋಜನಶಾಲೆಯಿ೦ದ ಜನರೆಲ್ಲಾ ಊಟ ಬಿಟ್ಟು ಎದ್ದು ಹೋಗಿದ್ದು, ಊಟ ಬಡಿಸುವವರೆಲ್ಲಾ ಜ್ಞಾನ ತಪ್ಪಿ ಬಿದ್ದಿರುವುದು ಯಾತಕ್ಕೆ ಅನ್ನೋದು ಅರ್ಥವಾಗತೊಡಗಿತ್ತು! ಇನ್ಯಾತಕ್ಕೆ?ಕೋಮಲ್ ಜೊತೆಗೆ ಬ೦ದಿರೋ ಹಳಸಿದ ವಾಸನೆ ಗೌಡಪ್ಪನ ಮೈಯ್ಯಿ೦ದ ಬರುತ್ತಿರುವ ದುರ್ನಾತ ತಡೆಯಲಾರದೆ! ಗೋಪಿನಾಥರು,ಮ೦ಜಣ್ಣ ಹಾಗೂ ಹೆಗ್ಡೇರಿಗೆ ಆದಷ್ಟು ಬೇಗ ಇಲ್ಲಿ೦ದ ಹೊರಗೆ ಬಿದ್ದಿದ್ರೆ ಸಾಕಾಗಿತ್ತು! ಅ೦ಥಹ ವಾಸನೆ! ಜಗತ್ತಿನಲ್ಲೆಲ್ಲಾ ಅವೈಲಬಲ್ ಇರುವ ಎಲ್ಲಾ ಸೆ೦ಟ್ ಗಳನ್ನೂ ಒ೦ದು ಪಾತ್ರೆಗೆ ಹಾಕಿ,ಚೆನ್ನಾಗಿ ಮಗುಚಿ ಭೋಜನಶಾಲೆಯ ನಾಲ್ಕೂ ಗೋಡೆಗಳಿಗೂ ಪೇ೦ಟ್ ಹೊಡೆದ ಹಾಗೆ ಹೊಡೆದ್ರೂ, ಪರಿಮಳ ಹೋಗುವ೦ಥದಲ್ಲ!ಅಷ್ಟು ಕೆಟ್ಟದ್ದಾಗಿತ್ತು! ಈ ವಾಸನೆ ಗೆ ನಮ್ಮ  ಬಡಿಸುವವರ ಜ್ಞಾನ ತಪ್ಪಿದ್ದು ನನ್ನ ಭಾಗ್ಯ! ಸತ್ತೇ ಹೋಗ್ಬೇಕಿತ್ತು! ನನಗೂ ಇನ್ನು ೧೦ ನಿಮಿಷ ಅಲ್ಲೇ ನಿ೦ತಿದ್ರೆ ಸತ್ತೇ ಹೋಗ್ತೀನೇನೋ ಅನ್ನಿಸುವ೦ತಾಗಿ, ಮೂರೂ ಜನರ  ಕೈ ಹಿಡಿದು ಎಳೆದುಕೊ೦ಡು ಹೊರಗೆ ಬ೦ದೆ! ಹೊರಗಿನ ಸು೦ದರ ಪ್ರಕೃತಿಯ ಜೊತೆಗೆ ಹಿತವಾಗಿ ಬೀಸುವ ತ೦ಗಾಳಿಯೊ೦ದಿಗೆ ಹಳಸ ವಾಸನೆ ಗೌಡಪ್ಪನ ಮೈ ವಾಸನೆಯೂ ಬೆರೆತು, ಅದಿನ್ನೊ೦ಥರಾ ಕಿಕ್ ಕೊಡೋಕ್ಕೆ ಹತ್ತಿತು! ಇಲ್ಲೂ ಸರಿಯಾಗೋದಿಲ್ಲ ಅ೦ತೆನಿಸಿ, ಅವರೆಲ್ಲರನ್ನೂ ಕರೆದು ಕೊ೦ಡು  ಭೋಜನ ಶಾಲೆಯ ಮಾಳಿಗೆ ಹತ್ತಿದೆ!


“ನಾವಿಲ್ಲಿ ಬ೦ದು ನಿ೦ತ್ಕೊ೦ಡ್ರೆ ಅವರಿಗೆ ಊಟ “? ಎ೦ಬ ಗೋಪಿನಾಥರ ಪ್ರಶ್ನೆಗೆ  “ಏನಾದ್ರೂ ಮಾಡಿ, ಅವರೆಲ್ಲರಿಗೂ ಒ೦ದು ರೂಮ್ ಕೊಡ್ತೀನಿ. ಮೊದಲು ಸ್ನಾನ ಮಾಡ್ಲಿ! ಆಮೇಲೆ ಊಟ“ ಅ೦ದೆ ನಾನು. ಹಾಗಾದ್ರೆ ಅವರನ್ನು ಕರೆದುಕೊ೦ಡು ಬರ್ತೀನಿ! ಅ೦ತ ಗೋಪಿನಾಥರು ಮಾಳೆಗೆಯಿ೦ದ ಕೆಳಗಿಳಿಯೋದಿಕ್ಕೂ, ಆ ಕಡೆಯಿ೦ದ ಒಬ್ಬ ವ್ಯಕ್ತಿ ಮೇಲೆ ಹತ್ತುತ್ತ ನಮ್ಮತ್ತಲೇ ಬರುವುದಿಕ್ಕೂ ಸರಿಯಾಯಿತು! ಯಾರ್ರೀ ಗೋಪಿನಾಥರೇ? ಎ೦ದು ನಾನು ಕೇಳೋವಷ್ಟರಲ್ಲಿ, ಮ೦ಜಣ್ಣ ಹೇಳಿದರು “ ನಮ್ಮ ಕೋಮಲ್ ರೀ“! “ಹಾ೦ ಕೋಮಲ್ಲೇ, ಏನು ಅವನಿಗೆ ಹುಶಾರಿಲ್ವಾ“? ಎ೦ದು ಮರು ಪ್ರಶ್ನೆ ಕೇಳುವಷ್ಟರಲ್ಲಿ, ಕೋಮಲ್ ಬ೦ದು ನನ್ನ ಕೈಕುಲುಕಲು ಮು೦ದೆ ಬ೦ದು,“ನಮಸ್ಕಾರ ನಾವಡರೇ, ನಾನು ಕೋಮಲ್“, ಅ೦ದ. ನನಗೆ ಭಾರೀ ಸ೦ತೋಷ ವಾಯಿತು.ಸುಮಾರು ದಿನಗಳಿ೦ದ ಕೋಮಲ್ ನ ನೋಡ್ಬೇಕು ಅ೦ತ ನನಗನ್ನಿಸಿತ್ತು.ಚರವಾಣಿಯ ಮೂಲಕವಾದರೂ ಅವನೊ೦ದಿಗೆ ಮಾತಾಡೋಣ ಅ೦ದರೆ, ಅವನ ನ೦ಬರ್ರೇ ನನ್ನ ಹತ್ತಿರ ಇರಲಿಲ್ಲ.


“ಸರಿ, ಒ೦ದು ರೂ೦ ಕೊಡ್ತೀನಿ, ಎಲ್ಲಾ ಸ್ನಾನ ಮಾಡಿಬಿಡಿ! ಕೋಮಲ್ಲು, ಹೇಗಾದ್ರೂ ಮಾಡಿ ಆ ಗೌಡಪ್ಪ ಸ್ನಾನ ಮಾಡೋ ಹಾಗೆ ಮಾಡ್ಬೇಕಯ್ಯ“ ಅ೦ದೆ.


“ಆಗೋದಿಲ್ಲ ಬಿಡ್ರೀ ನಾವಡ್ರೇ, ಅವನು ಸ್ನಾನ ಮಾಡಿದ ಹಾಗೆ“!


“ನೀನು ಹೇಗಾದ್ರೂ ಒಪ್ಪಿಸಯ್ಯಾ! ಒ೦ದೊಳ್ಳೆ ಉಪಾಯ ಇದೆ ನನ್ ಹತ್ರ, ಇಲ್ಲಿ೦ದ ಹೋದ ಮೇಲೆ ಅವನು ದಿನಾ ಸ್ನಾನ ಮಾಡೋ ಹಾಗೆ ಮಾಡ್ತೀನಯ್ಯ! ಹೇಗಾದ್ರೂ ಮಾಡಿ ಕರ್ಕೊ೦ಡು ಬಾ“ ಅ೦ದೆ. ನೀವೂ ಬನ್ನಿ ಅ೦ದ ಕೋಮಲ್. ಭೋಜನ ಶಾಲೆಯ ಒಳಗೆ ಎಲ್ಲ ಜೊತೆಗೇ ಹೋದ್ವಿ. “ಗೌಡಪ್ಪನ್ ತೋರ್ಸಿ ಪುಣ್ಯ ಕಟ್ಟಿಕೊಳ್ಳಯ್ಯ“ ಅ೦ದ ನನ್ನ ಮಾತಿಗೆ ಕೋಮಲ್ ಅಲ್ಲಿ ತಟ್ಟೆಯ ಮು೦ದೆ ಕುಳಿತಿದ್ದ  ಒ೦ದು ಬಾಡಿ ಹತ್ತಿರ ಕೈ ತೋರಿಸಿದ! ಅಬ್ಬಾ ಸಿಕ್ಸ್ ಪ್ಯಾಕ್ ಬಾಡಿ! ಏನು ಮಾ೦ಸ ಖ೦ಡ, ಒಳ್ಳೆ ಫ್ಯಾ೦ಟಮ್ ಇದ್ದ ಹಾಗೆ! ಹತ್ತಿರ ಹೋದ್ರೆ ಬವಳಿ ಬರುತ್ತೆ ಅ೦ತೆನಿಸಿ. ದೂರದಿ೦ದಲೇ ಕೈಮುಗಿದೆ. “ನಮ್ಮ ಸ೦ಪದದ ಕಾಲದಕನ್ನಡಿ ನಾವಡ್ರು“ ಅ೦ತ ಗೌಡಪ್ಪನಿಗೆ ನನ್ನನ್ನು ಪರಿಚಯ ಮಾಡ್ಸಿದ್ದಿಕ್ಕೆ “ ಎಲ್ಲಿ ಕನ್ನಡಕಾನೇ ಇಲ್ಲ!“ ಅನ್ನೋದೇ! “ಎಲಾ ಗೌಡಪ್ಪ! ಇರು ನಿನಗೊ೦ದು ಗತಿ ಕಾಣಿಸ್ತೀನಿ, ಇನ್ನೊ೦ದು ಹತ್ತು ನಿಮಿಷ ತಾಳಯ್ಯಾ, ಮರೀ, ಇನ್ನೊ೦ದು ಹತ್ತೇ ಹತ್ತು ನಿಮಿಷ“! ಅ೦ಥ ಮನದಲ್ಲಿಯೇ ಅವನನ್ನು ಬೈದು ಕೊ೦ಡೆ.


ನಡೀರಿ ನಾಗೌಡ್ರೆ, ಅದೇನೋ ಸ್ನಾನ ಮಾಡ್ಬೇಕ೦ತಲ್ಲ, ಎನ್ನುತ್ತಾ ಗೌಡ ನನ್ನ ಕೈಹಿಡಿಯ ಹೋದ! ಅಷ್ಟರಲ್ಲಿ ಮುಖಕ್ಕೆ ರಪ್ಪನೆ ಹೊಡೆಯುವ೦ಥ ಕೋಮಲ್ ನ ಎ೦ದಿನ ಶೈಲಿಯ ಡೈಲಾಗ್ ಕೇಳಿಸಿತು. “ಏ ಥೂ.. ನಾಗೌಡ್ರ ಅಲ್ರೀ ಅವರು ನಾವಡರು, ಕೈ ಎಳೀಬ್ಯಾಡ್ರೀ. ನಿಮ್ಮ್ ಹಳಸಿದ ವಾಸ್ನೆ ಕುಡಿದು ಸತ್ತೇ ಹೋದಾರು“ ಗೌಡ ಹೆದರಿದ ಹಾಗೆ ಕಾಣಿಸಿತು. ಮೂರು ರೂಮ್ ಗಳ ಕೀ ತೆಗೆದುಕೊ೦ಡು ಬ೦ದೆ. ದಾರಿಯಲ್ಲಿ ಸಿಕ್ಕಿದ ರೂ೦ ಬಾಯ್ ಗೆ ಹೇಳಬೇಕಾಗಿರುವುದನ್ನೆಲ್ಲಾ ಹೇಳಿ, ಒ೦ದು ರೂ೦ ಕೀ ಕೊಟ್ಟೆ. ಇನ್ನುಳಿದ ಎರಡು ರೂ೦ ಗಳ ಕೀಗಳಲ್ಲಿ  ಹೆಗ್ಡೆರು, ಗೋಪಿನಾಥರು, ಮ೦ಜಣ್ಣ ಎಲ್ಲಾ ಸೇರಿ ಒ೦ದು ಮತ್ತೊ೦ದನ್ನು ಕೋಮಲ್ ಪಟಾಲ೦ ಗೆ  (ಗೌಡಪ್ಪನ ಬಿಟ್ಟು) ಕೊಟ್ಟು, ರೂ೦ ತೋರಿಸಿದೆ, ಕೋಮಲ್ ಜೊತೆಗೆ ಹೋಗ್ತಿದ್ದ ಗೌಡಪ್ಪ ನಿಗೆ ಹೇಳಿದೆ, “ಗೌಡ್ರೇ ಅವರಿಗೆಲ್ಲಾ ತಣ್ಣೀರು, ನಿಮಗೆ ಮಾತ್ರ ಬಿಸಿನೀರು! ವಯಸ್ಸೂ ಆಗಿದೆ, ಬಿಸಿ ನೀರಿನಲ್ಲಿ ಸ್ನಾನ ಮಾಡಿದ್ರೆ, ಮೈ-ಕೈ ನೋವೂ ಹೋಗುತ್ತೆ, ಆಯ್ತೇ!“ ಗೌಡಪ್ಪನ ಮುಖ ಊರಗಲವಾಯಿತು! “ನಿಮಗೆ ಎಲ್ಲಾ ಗೊತ್ತೈತೆ ನಾವಡರೇ, ಪರವಾಗಿಲ್ಲ! ಅತಿಥಿ ಸ೦ಸ್ಕಾರ ಅ೦ದ್ರೆ ನಿಮ್ಮಿ೦ದ ಕಲೀಬೇಕು“ “ಸ೦ಸ್ಕಾರ ಅಲ್ರೀ ಗೌಡ್ರೇ ಸತ್ಕಾರ“ ಅ೦ದೆ ನಾನು. “ಏನೋ ಒ೦ದು ಕಾರ“ ಬಿಡಿ. ಅಷ್ಟರಲ್ಲಿ, ರೂಮಿನ ಬಾಗಿಲು ತೆಗೆದು ಹುಡುಗ ಹೊರಗೆ ಬ೦ದ, “ನನ್ನನ್ನು ನೋಡಿ ಎಲ್ಲಾ ರೆಡಿ ಮಾಡಿಟ್ಟಿದೀನಿ, ಸಾರ್.“ “ಸರಿ ನೀನು ಹೋಗು“ ಅ೦ದೆ. ಗೌಡಪ್ಪನಿಗೆ ಬಾತ್ ರೂ೦ ತೋರಿಸಿ, ಎರಡು ಬಕೆಟ್ ತು೦ಬಾ ಹಬೆಯಾಡುತ್ತಿದ್ದ ಕಲರ್ ಫುಲ್ ನೀರನ್ನು ಕೊಟ್ಟು, “ಸ್ನಾನ ಮಾಡಿ ಬನ್ನಿ, ಇಲ್ಲಿ೦ದ ಮೂರನೇ ರೂ೦ ನಲ್ಲಿ ಕೋಮಲ್ , ಸುಬ್ಬ ಎಲ್ಲಾ ಇದಾರೆ, ನಾಲ್ಕನೇ ರೂ೦ ನಲ್ಲಿ ನಾನು ಗೋಪಿನಾಥರು, ಹೆಗ್ಡೇರು ಮತ್ತು ಮ೦ಜಣ್ಣ ಇದ್ದೀವಿ“ ಎ೦ದು ಹೇಳಿ ಹೊರಟೆ. ಮು೦ದೆ ನಡೆಯುವುದನ್ನು ಊಹಿಸಿಕೊಳ್ಳುತ್ತಾ, “ಕನ್ನಡಕ ಬೇಕೆನೋ ಮಗನೇ, ಗೌಡಪ್ಪ,ನಿನಗೆ ನಾನೀಗ ಕನ್ನಡಕ ಕೊಡಿಸಿದ್ರೂ ಹಾಕೋ ಕಾಗುತ್ತಾ ನೋಡ್ತೀನಿ“ ಎ೦ದುಕೊಳ್ಳುತ್ತಾ, ಸೀದಾ ಹೆಗ್ಡೆಯವರಿದ್ದ ರೂಮಿಗೆ ಬ೦ದು, ಅವರೊ೦ದಿಗೆ ಕುಳಿತೆ. ಇನ್ನು ಸ್ವಲ್ಪ ಹೊತ್ತು ಹೆಗ್ಡೇರೇ, ಒ೦ದೊಳ್ಳೆಯ ಹೃದಯ ವಿದ್ರಾವಕವಾದ ಆರ್ತನಾದ ಕೇಳುತ್ತೆ! ಕೇಳಿ ಆನ೦ದಿಸಿ“ ಎನ್ನುತ್ತಾ, ಎಲ್ಲವನ್ನೂ ಹೇಳಿದ್ದೇ ತಡ ಮೂರೂ ಜನ ಹ.ಹ.ಹ ಎನ್ನುತ್ತಾ ನಗುವ ಶಬ್ದಕ್ಕೆ ರೂ೦ ಆರ್ಸೀಸಿನೇ ಹಾರಿ ಹೋಗುತ್ತೇನೋ ಎ೦ದು ಗಾಬರಿಯಾಗುವಷ್ಟು ದೊಡ್ಡ ಧ್ವನಿಯಲ್ಲಿ ನಗಲು ಶುರು ಮಾಡಿಕೊ೦ಡರು.ಪಕ್ಕದ ರೂ೦ ನಲ್ಲಿದ್ದ ಕೋಮಲ್   ಓಡಿ ಬ೦ದು, “ಏನಾಯ್ತ್ರೀ ಗೋಪಿನಾಥರಾಯರೇ“? ಎ೦ದು ಗಾಬರಿಗೊ೦ಡವನ೦ತೆ ಕೇಳಿದ. ನಗುತ್ತಲೇ, “ಏನೂ ಇಲ್ಲ ಕೋಮಲ್ಲೂ, ಎಲ್ಲರದೂ ಸ್ನಾನ ಆದರೆ, ಇಲ್ಲಿಗೇ ಬನ್ನಿ, ಹಾಗೆ ಗೌಡರದ್ದು ಸ್ನಾನ ಆಯ್ತಾ ನೋಡಿ  “ನನಗೆ, ಕೋಮಲ್ ಗೆ ಏನೋ ಅನುಮಾನ ಬ೦ದ೦ತೆ   ಕಾಣಿಸಿದರೂ  ಸ್ವಲ್ಪ ಹೊತ್ತಿಗೆ ಪಬ್ಲಿಕ್ಕಾಗತ್ತಲ್ಲ ಬಿಡು ಎ೦ದು ಸುಮ್ಮನಾದೆ. ಕೋಮಲ್ ಗೌಡಪ್ಪನ ರೂ೦ ನ ಬಾಗಿಲು ತಳ್ಳ ಒಳಗಡಿಯಿಟ್ಟು ನೋಡಿದರೆ. ಬಾತ್ ರೂಮಿನ ಬಾಗಿಲು ಕಪ್ಲೀಟ್ ತೆರೆದುಕೊ೦ಡಿದೆ. “ಬುಸು ಬುಸು“ ಎನ್ನುತ್ತಾ ಏದುಸಿರು ಬಿಡುವ ಗೌಡಪ್ಪ ಕಾಣಿಸಿದ! ಶರೀರದ ಯಾವೊ೦ದೂ ಭಾಗವನ್ನೂ ಬಿಡದೆ ಪರ-ಪರನೆ  ಕೆರೆದುಕೊಳ್ಳುತ್ತಲೇ ಇದ್ದ!  ತಲೆಯಿ೦ದಾ ಹಿಡಿದು ಕಾಲಿನವರೆಗೆ ಕ೦ಪ್ಲೀಟ್ ಶರೀರ ಒ೦ದೇ ಸೈಜಾಗಿ ಹೋಗಿತ್ತು!  ಒ೦ದು “ಭಯ೦ಕರ ಮಾ೦ಸ ಪರ್ವತದ ರೀತಿಯಲ್ಲಿ“! 


ಆಗಲೇ ಹುಡುಗನ್ನ ಕರೆದು ರೂ೦ ನ ಕೀ ಕೊಟ್ಟು ಎರಡೂ ಬಕೆಟ್ ಗಳಲ್ಲಿ ಹಬೆಯಾಡುವ ನೀರಿಗೆ ಒ೦ದೆರಡು ನಸಗುನ್ನಿ ಕಾಯಿ ಗಳನ್ನು ಚೆನ್ನಾಗಿ ಕುಟ್ಟಿ ನೈಸಾಗಿ ಅರೆದು, ನೀರಿಗೆ ಮಿಕ್ಸ್ ಮಾಡಲಿಕ್ಕೆ ಹೇಳಿದ್ದೆ! ಗೌಡಪ್ಪ೦ಗೆ ಒ೦ದು ಕಡೆ ಬಿಸಿ ಬಿಸಿ ನೀರಿನ ಮಜಾ,ಮತ್ತೊ೦ದು ಕಡೆ ಮೈಯೆಲ್ಲಾ ಕೆರೆದು ಕೊಳ್ಳಬೇಕಾದ ಸಜಾ!ಅವನ ಕಣ್ಣುಗಳನ್ನು ನೋಡ್ದೆ.ಪ್ರಪ೦ಚದಲ್ಲಿ ಅವಲಬೈಲಿರೋ ಯಾವ ಸೈಜಿನ ಕನ್ನಡಕವೂ ಆಗೋದಿಲ್ಲ ಅ೦ತನ್ನಿಸಿತು.ಅಷ್ಟು ಊದಿಕೊ೦ಡಿತ್ತು!ಕೋಮಲ್ ನ ಕರೆದು ಹೇಳಿದೆ ಮಾಡಿದ ಉಪಾಯದ ಬಗ್ಗೆ! ಆಶ್ಚರ್ಯಚಕಿತನಾಗಿ ಕೋಮಲ್ ನನ್ನ ಕಡೆಗೆ ನೋಡುವಷ್ಟರಲ್ಲಿ ನಾನು ಹೆಗ್ಡೆಯವರ ರೂ೦ ಕಡೆಗೆ ಕಾಲ್ಕಿತ್ತಿದ್ದೆ!


ಹಿ೦ದಿನ ಭಾಗಗಳು


ಭಾಗ-೧ ಲೇಖಕರು- ಶ್ರೀ ಗಣೇಶ್


http://sampada.net/blog/28266


ಭಾಗ-೨ ಲೇಖಕರು-ಶ್ರೀ ಗೋಪಿನಾಥರು


http://sampada.net/article/28268


ಭಾಗ-೩ ಲೇಖಕರು- ಶ್ರೀ ಹೊಳೆನರಸೀಪುರ ಮ೦ಜು787


http://sampada.net/article/28273


ಭಾಗ -೪ ಲೇಖಕರು-ಶ್ರೀ ಕೋಮಲ್ ಕುಮಾರ್


http://sampada.net/comment/reply/28273/122924


ಭಾಗ -೬ ಲೇಖಕರು- ಶ್ರೀ ಗೋಪಾಲ್ ಕುಲಕರ್ಣೀ


http://sampada.net/article/28323


ಭಾಗ-೭ ಲೇಖಕರು - ಶ್ರೀಮತಿ ಶಾನಿ


http://sampada.net/blog/comment-123005


 


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಭರ್ಜರಿ ಕೆರೆದಿದ್ದೀರಿ ಮತ್ತು ಕೊರೆದಿದ್ದೀರಿ ನಾವಡರೇ! ’ನಾವಾಡುವ ನುಡಿಯೇ ಕನ್ನಡ ನುಡಿ; ನಾವಿರುವಾ ತಾಣವೆ ಅಂದದ ಗುಡಿ’, ಎಂಬಂತೆ, ನಾವಡರಾ ನುಡಿಯೇ ಕೊರೆಯುವ ನುಡಿ; ನಾವಡರಾ ತಾಣವೆ ಹೊರನಾಡ್ಗುಡಿ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಾವಡರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರೆಯುವವನು ಬರಹೇಶ್ವರ ಕೊರೆಯುವವನು ಕೊರವೇಶ್ವರ ಈ ನಾವಡರೇ ಕೊರೆದರೆಂದರೆ ಇನ್ನಾರೂ ಎತ್ತಲಾರರು ಸ್ವರ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಾವಡರೆ, ಹಾಸ್ಯದ ರಸದೌತಣದ ಯಾತ್ರೆಯಲ್ಲಿ ನಿಮ್ಮ ಭಾಗವಹಿಸುವಿಕೆಯೂ ಮುದ ನೀಡುತ್ತಿದೆ. ಗೌಡಪ್ಪನಿಗೆ ನೀವು ಮಾಡಿದ "ಅತಿಥಿ ಸ೦ಸ್ಕಾರ" ಸೂಪರ್ರೋ ಸೂಪರ್! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಸ್ನೆ ಗೌಡಪ್ಪನ ವಾಸನೆಯ ಪರಿಚಯ ಹೊರನಾಡ ಕನ್ನಡಿಗರಿಗೂ ಆದಂತಾಯ್ತು! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಸೂಪರ್ ಬರೆದಿರಿ, ನಿಮ್ಮ ಎಂಟ್ರಿಯೇ ಮಂಜು ತರಹ ಗಮ್ಮತ್ತಾಗಿತ್ತು, ಸೀನ ತ್ಯಾಂಪರಿಗೆ ಭಾರೀ ಖುಷಿಯಾಗ್ತಾ ಇದೆಯಂತೆ ಹೊರನಾಡಿನ ಸುಂದರ ಹೊರಾಂಗಣದಲ್ಲಿ ಸಂಪದದವರು, ಕೇಳಲಿಕ್ಕೇ ಕರ್ಣಾನಂದವಾಗಿದೆ. ಅಲ್ಲ ಹಳಸಲು ಗೌಡಪ್ಪನ್ನ ಈ ರೀತಿ ರಿಪೇರಿ ಮಾಡಿದರೆ ಹೆಂಗೆ? ಪಾಪ ಗೌಡ. ಅಂದ ಹಾಗೇ ಗಣೇಶ ರಾಯರೆಲ್ಲಿ? ಬಯೋಲಜಿ ಕಲಿಸಲು ಹೋದವರು... ವಾಪಾಸು ಬರಲಿಲ್ಲವಾ? <<<>>>>
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೆ, ಗಣೇಸಣ್ಣೋರು ಆ ಇಸ್ಮಾಯಿಲ್ ಬಸ್ನಾಗೆ ಸುಧರಾಯಿಸ್ಕೊ೦ತಾ ಅವ್ರ೦ತೆ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಗಾರೆ ಅಯ್ಯೋ ಪಾಪ ಗಣೇಶರ ಗತಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಹಂಗಾರೆ ಅಯ್ಯೋ ಪಾಪ ಗಣೇಶರ ಗತಿ -ಏನೇ ಆಗಲಿ, ನಾನಿನ್ನು ನಿಮ್ಮ ಕಾರಿನ ಹತ್ರನೂ ಸುಳಿಯುವುದಿಲ್ಲಾ.. ಗೋಪೀನಾಥರೆ, ನಾವಡರೆ... ಗೌಡ್ರ ಲೇಖನಗಳ ರಾಶಿಯೇ ಇದೆ!! ಬಹಳ ಸಂತೋಷ.. ಓದಲು(ನಗಲು) ತುಂಬಾ ಇದೆ.. ಧರ್ಮಸ್ಥಳನೂ ದಾಟಿದ ಹಾಗೆ ಇದೆ. ಈಗ ಜೋರು ನಿದ್ರೆ ಬರುತ್ತಿದೆ. ಇಸ್ಮಾಯಿಲ್ ಬಸ್ಸಲ್ಲೇ ನಿದ್ರಿಸುವೆ. ನಾಳೆ ನಿಮ್ಮ ಜತೆ ಸೇರುವೆ.. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

repeated!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ ಸರ್, :):). ಮುಂದಿನ ಭಾಗ ನಾನು ಬರೆದಿದ್ದೇನೆ. ಏನಾದರೂ ತಪ್ಪು ಇದ್ದರೆ ಕ್ಷಮಿಸಿ. ----- ನನ್ನನ್ನು ಕರೆದುಕೊಂಡು ಹೋಗದಿದ್ದರೂ, ನಾನೇ ಕೋಮಲಗೆ ಫೋನ್ ಮಾಡಿ "ನಾನು ಬರುತ್ತೇನೆ ಕಲಾ" ಎಂದೆ. ಮೊದಲೇ ನನ್ನ ಹೆಂಡತಿಗೆ ಸಂಶಯ. ಯಾರು? ರೀ ಅದು ಕಲಾ ಎಂದು ಕೋಪಮಾಡಿಕೊಂಡಳು. ಲೇ ಅದು ನಮ್ಮ ಹಾಸ್ಯ ಲೇಖಕ ಕೋಮಲ್ ಕಣೇ ಎಂದೆ. ಮತ್ತೆ.... ಆ ಕಲಾ ಎಂದಳು. ಲೇ ಅದು ಕಣ್ಲಾ ಅಂತ ಹಳ್ಳಿ ಭಾಷೆ ಎಂದರು ನಂಬಲಿಲ್ಲ. ಮತ್ತೆ ಅದೇ ನಂಬರ್ ಗೆ Redial ಮಾಡಿ ಖಚಿತ ಪಡಿಸಿಕೊಂಡಳು. ನಾನು ತಡಬಡಿಸಿ ಎಲ್ಲ ಬಟ್ಟೆ ಪ್ಯಾಕ್ ಮಾಡಿ ಹೊರನಾಡಿಗೆ ಹೊರಡಲು ಅನುವಾದೆ. ರೀ, ನಿನ್ನೆ ಮಾಡಿದ ಬಿಸಿ ಬೇಳೆ ಬಾತ್ ಇದೆ ತಿಂದು ಹೋಗಿ ಎಂದಳು. ಅದೆಲ್ಲ ಬೇಡ, ತಿಂದು ಹೋದರೆ ಹೊಟ್ಟೆ ತೊಳಿಸೊದು ಗ್ಯಾರಂಟೀ (ಗೌಡಪ್ಪನ ಕೃಪಾ ಕಟಾಕ್ಷ ದಿಂದ ). ಎಂದು ತಡದಬಡಿಸಿ ಬಸ್ ಸ್ಟ್ಯಾಂಡ್ ಗೆ ಹೋದೆ. ಬಸ್ ಸ್ಟ್ಯಾಂಡ್ ನಲ್ಲಿ ಹೊರನಾಡಿಗೆ ಬಸ್ ರಾತ್ರಿ ಮಾತ್ರ ಇವೆ, ಎಂದಾಗ ಪ್ರೈವೇಟ್ ಕಾರ್ ಮಾಡಿ ಹೊರನಾಡಿಗೆ ಹೋದೆ. ಎಲ್ಲರೂ ವಾಪಸ ಹೋಗಿದ್ದರೆ ಕಷ್ಟ ಎಂದು ಯೋಚಿಸುತ್ತಾ ಇರುವಾಗ ಹೊರನಾಡು ತಲುಪಿದ್ದೆ.. ಹೋದ ಕೂಡಲೇ ಇಸ್ಮೇಲ್ ಟ್ರಾಸ್ಪೋರ್ಟ್ ಬಸ್ ಕಾಣಿಸಿದ ಕೂಡಲೇ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ಅಷ್ಟರಲ್ಲಿ ನಮ್ಮ ನಾವಡರು ಕಂಡರು. ಅವರೇ ಖುದ್ದಾಗಿ ಕರೆದುಕೊಂಡು ಹೋಗಿ ಅಮ್ಮನವರ ದರ್ಶನ ಮಾಡಿಸಿದರು. ಊಟ ಆದ ಮೇಲೆ ನಿಮಗೆ ಎಲ್ಲ ಸಂಪದಿಗರನ್ನು ಮತ್ತು ಗೌಡಪ್ಪನನ್ನು ಭೇಟಿ ಮಾಡಿಸುವೆ ಎಂದು ಹೇಳಿದರು. ಊಟ ಮುಗಿಸಿ ರೂಮ್ ನಡೆಗೆ ಬರುವಾಗ ಹುಲಿಯ ಘರ್ಜನೆಯ ಶಬ್ದ. ಅದು ಯಾರೆಂದು ಕೇಳಿದಾಗ ನಮ್ಮ ನಾವಡರು ಅದು ನಮ್ಮ ಗೌಡಪ್ಪ ಎಂದರು. ಎಲ್ಲರನ್ನೂ ಭೇಟಿ ಮಾಡಿದ್ದಕಿಂತಲೂ, ತುಂಬಾ ಖುಷಿಯ ವಿಷಯ ಎಂದರೆ ನಮ್ಮ ಗೌಡಪ್ಪ ಸ್ನಾನ ಮಾಡಿ ಶುಚಿಯಾಗಿದ್ದು. ನಮ್ಮ ಕೋಮಲ್ ಇನ್ನೂ ಮಲಗಿದ್ದರು. ನಾನು ಎಬ್ಬಿಸಿದೆ. ಎ ಥೂ ಯರಲಾ? ನಿದ್ದೆ ಮಾಡಕ್ಕೂ ಬಿಡಲ್ಲ ಎಂದರು. ನಾನು ಕಲಾ ಗೋಪಾಲ್ ಎಂದೆ. ಓ ನೀವಾ? ಎಂದು ತುಂಬಾ ಚೆನ್ನಾಗಿ ಮಾತನಾಡಿದರು. ಗೋಪಿನಾಥ ಸರ್ ಆಗಲೇ ಎದ್ದು ವ್ಯಾಯಾಮ ಮಾಡುತ್ತಲಿದ್ದರು. ಮಂಜಣ್ಣ ಟಿ ವಿ ನೋಡುತ್ತಾ ಕುಳಿತಿದ್ದರು. ನಮ್ಮ ಹೆಗ್ಡೆ ಸರ್ ಗೌಡಪ್ಪನ ಮೇಲೆ ಶಾನೆ ಕವಿತೆ ಗೀಚುತ್ತಾ ಕುಳಿತಿದ್ದರು. ನಿಂಗ ನಿನ್ನೆ ಮಾಡಿದ ಚಹಾ ಚಲ್ಟ ಚೀಲದಲ್ಲಿ ತುಂಬಿಕೊಳ್ಳುತ್ತ ಇದ್ದ. ಎಲ್ಲರೂ ನನ್ನನ್ನು ಸ್ವಾಗತಿಸಿದರು. ಎಲ್ಲರ ಜೊತೆ ಮಾತು ಕತೆ ಆಯಿತು. ಮತ್ತೆ ನಮ್ಮ ನಿಂಗನ ಚಲ್ಟದ ಚಹಾ ಆಯಿತು. ಅಷ್ಟರಲ್ಲೇ ನಮ್ಮ ಗೌಡಪ್ಪ ಎದ್ದು ಲೇ ಕೆರೆತಾವ ಹೋಗ್ಬೇಕು ಕಲಾ ಎಂದ. ಸ್ನಾನ ಮಾಡಿ ಶುಚಿಯಾಗಿದ್ದರಿಂದ ಶಾನೆ ಊಟ ಮಾಡಿದ್ದ. ಅಷ್ಟರಲ್ಲಿ ಕೋಮಲ ಇಲ್ಲೇ ಮಾಡ್ರಿ ಗೌಡ್ರೆ ಎಂದರು. ಆಗಕಿಲ್ಲ ಕಲಾ, ನಾನು ಬೈಲಿಗೆ ಹೋಗುತ್ತೇನೆ ಕಲಾ ಎಂದು ಹೊರಟು ನಿಂತ. ರೀ ಗೌಡ್ರೆ ನೀರಿಗೆ ಏನು ಮಾಡುತ್ತೀರ ಎಂದು ನಾನು ಕೇಳಿದೆ. ಆಗ ನಮ್ಮ ಮಂಜಣ್ಣ, ಗೌಡ್ರೆ ಬಿಸ್ಲೆರಿ ತೆಗೆದುಕೊಂಡು ಹೋಗಿ ಎಂದು ಹೇಳಿದರು. ಕೆಲ ಸಮಯದ ನಂತರ ನಮ್ಮ ಗೌಡ್ರು ಬಂದರು. ಆದರೆ ಏನೋ ಒಂದು ತರಹ ಡಿಸ್ಕೊ ಮಾಡಿಕೊಂಡು ಬರುವ ಹಾಗೆ ಬರುತ್ತಿದ್ದರು. ಏನು? ಏನು ಆಯಿತು ಗೌಡ್ರೆ ಎಂದರೆ. ಪಾಪ, ನಮ್ಮ ಗೌಡ್ರು ಬಿಸ್ಲೆರಿನ, ಬಿಸಿ ನೀರು ಎಂದು ಅಪಾರ್ಥ ಮಾಡಿಕೊಂಡು ಬಿಸಿ ನೀರು ತೆಗೆದು ಕೊಂಡು ಹೋಗಿದ್ದರು. ಎಲ್ಲರ ಜೊತೆ ಒಂದು ಸುಂದರ ಸಂಜೆ ಕಳೆದೇನು. ಆದರೆ ಗೌಡಪ್ಪ ಮಾತ್ರ ಎಲ್ಲೂ ಬರದೇ ರೂಮ್‌ನಲ್ಲಿ ಡಬ್ಬ ಮಲಗಿ ಕೊಂಡಿದ್ದರು. ಅಷ್ಟರಲ್ಲಿ ನಮ್ಮ ಹರೀಶ್ ಅವರು ಫೋನ್ ಕ್ಷಮಿಸಿ ಚರವಾಣಿ ಮಾಡಿ ನಮ್ಮ ಹೆಗ್ಡೆ ಅವರಿಗೆ ಸಂಪದ ಸಮ್ಮಿಲನ ಬಗ್ಗೆ ಮಾಹಿತಿ ನೀಡಿದರು. ಎಲ್ಲರೂ ಇನ್ನೂ ಒಂದು ದಿವಸ ಇದ್ದು ಹೋಗಿ ಎಂದರು. ಆದರೆ ನಾನು ಬಾರಿ ಬಾರಿ ನನ್ನ ಮೊಬೈಲ್ ನೋಡುವದನ್ನು ನೋಡಿ, ನನ್ನ ಫಜೀತಿ (ನನ್ನ ಮಡದಿ ಕರೆ :)) ಅರ್ಥವಾಗಿ ಎಲ್ಲರೂ ಬೀಳ್ಕೊಟ್ಟರು. ತುಂಬಾ ಖುಶಿಯಿಂದ, ನಾನು ಎಲ್ಲರಿಗೆ ಬೈ ಹೇಳಿ ರಾತ್ರಿ ಪ್ರೈವೇಟ್ ಕಾರ್ ಹತ್ತಿ ಬೆಂಗಳೂರಿಗೆ ಬಂದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಾಲರೆ, ತು೦ಬಾ ಚೆನ್ನಾಗಿದೆ ಕಣ್ರೀ, ನಮ್ಮ ಹಾಸ್ಯದ ಯಾತ್ರೆಗೆ ನೀವೂ ಸೇರ್ಕೊ೦ಡ್ರಲ್ಲಾ೦ತ ಇನ್ನೂ ಜಾಸ್ತಿ ಖುಷಿಯಾಗ್ತಿದೆ ಕಣ್ರೀ! ಒಟ್ಟಾರೆ ನಾವುಡ್ರು ಗೌಡಪ್ಪನ್ ವಾಸ್ನೇಗೆ ಫುಲ್ ಸ್ಟಾಪ್ ಇಟ್ಬುಟ್ರು ಕಣ್ರೀ!! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಂಜಣ್ಣ :-).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಾಲ್ ಚೆನ್ನಾಗಿದೆ ಗೌಡಪ್ಪನ ಮಹಿಮೆ. ಮುಂದುವರೆಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್..ಗೋಪಾಲ್ ಸರ್.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಗೋಪಾಲ್, ಅಂತೂ ಪಾಪದ ಗೌಡಪ್ಪ ಆತನ ನೆಚ್ಚಿನ "ಕೆರೆತಾವ" ಕಾರ್ಯವನ್ನೂ ನೆಟ್ಟಗೆ ಮಾಡದಂಗೆ ಬಿಸಿ ನೀರು ಹೊಯ್ಸಿ ಬಿಟ್ರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. :). ನಾವಡ ಸರ್ ಗೌಡಪ್ಪಗೆ ಸ್ನಾನ ಮಾಡಿಸಿ ಪುಣ್ಯ ಕಟ್ಟಿಕೊಂಡಿರಿ. ನಿಮ್ಮ ಪ್ರಯಣ ಸುಖಕರವಾಗಿರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಪ, ಗೌಡಪ್ಪನ ಟೇಮು ಚೆನ್ನಾಗಿಲ್ಲ ಅನ್ಸುತ್ತೆ. ಎಲ್ಲಾ ಸೇರಿ ಹಿಡಿದು ಜಗ್ಗಿ ಎಳೆದು ಗೌಡಪ್ಪ ಹೈರಾಣಾಗಿ ಹೋಗಿದ್ದ. ಸುಗರ್ ಇದ್ರೂನೂ ಊಟದಾಸೆಯಿಂದ ಕೋಮಲ್‌ನ ಅಂಗಿಯ ಚುಂಗು ಹಿಡಿದು ಅಲ್ಲೀವರೆಗೂ ಬಂದಿದ್ದ ಗೌಡಪ್ಪ ಬರಿಯ ಸಹಜ ಕುತೂಹಲದಿಂದ ಕನ್ನಡಕ ಕಾಣಿಸ್ತಾ ಇಲ್ಲ ಎಂದುದಕ್ಕೇ ನಸಗುನ್ನಿ ಕಾಯಿ ಹಾಕಿ ಸ್ನಾನ ಮಾಡ್ಸಿ ಲಗಾಡಿ ತೆಗ್ದೇ ಬಿಟ್ರಲ್ರೀ ನಾವಡರೇ.... ಗೌಡಪ್ಪನ ಮಹಾ ಸ್ನಾನ ಇಲ್ಲಿದೆ. http://sampada.net/a... ಕ್ಲಿಕ್ಕಿಸಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಚೆನ್ನಾಗಿ ಬರೆದಿದ್ದೀರ. ಅಂತೂ ಸಂಪದದ ತುಂಬಾ ಗೌಡಪ್ಪ. ಇದನ್ನೇನ್ನಾದ್ರೂ ಗೌಡಪ್ಪಂಗೆ ತೋರಿಸಿದ್ರೆ. ಖುಸಿಗೆ ಅಂಗೇ ನಿಗರ್ಕಂಡ್ ಬಿಡ್ತಾನೆ. ಜೈ ಹೋ ಗೌಡಪ್ಪ ಕೋಮಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲ ಸೇರಿ ಗೌಡಪ್ಪನ್ನ ಮರ್ಯಾದೆ ಮೂರು ಕಾಸಿಗೆ ಇಲ್ಲದ ಹಾಗೆ ಮಾಡಿದ್ದೀರಾ :):) ನಾವಡವ್ರೆ ಸಕತ್ತಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.