ಸರಸ-ಸಲ್ಲಾಪ-3

3.5

ನಲ್ಲೆ, ಮರಗಳ ಕಡಿದರೆ,

ಟನ್ನಿಗೆ ಮುನ್ನೂರು, ಮಾರಲು ಉರುವಲು

ಕುಟು೦ಬ ಸಾಕಲು ಧನ ಸ೦ಗ್ರಹ

ಮಕ್ಕಳ ಮದುವೆಗದು ಸಾಕಲ್ಲವೇ?

ನಲ್ಲ, ಮರಗಳ ಕಡಿದರೆ

ಎ೦ತು ಉಸಿರಾಡುವುದು?

ಉಸಿರಿದ್ದರಲ್ಲವೇ ಮಕ್ಕಳ ಮದುವೆ!

ಬಿಸಿಲು,ಮಳೆ, ಗಾಳಿ, ಭೀಕರತೆ

ಎಲ್ಲ ಇದ್ದರೂ ಚೆನ್ನ!

ಕಡಿದಲ್ಲೇ ಮತ್ತೊ೦ದ ನೆಟ್ಟರೆ

ಮು೦ದಿನ ಕಾಲಕೂ ಧನಸ೦ಗ್ರಹ!

ಸುತ್ತ-ಮುತ್ತ ಇರಲು ಹಸಿರು

ಮನೆಮ೦ದಿಗೆಲ್ಲಾ ಉಸಿರು!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೇ ನಮಸ್ಕಾರ ಸರಸ ಸಲ್ಲಾಪದ ಮೂಲಕ ಪರಿಸರ ಕಾಳಜಿ ಮೂಡಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರಿ ಪರಿಸರ(ಸ)ಲ್ಲಾಪ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ ನಿಮ್ಮ ಸರಸ ಸಲ್ಲಾಪದ ಪರಿಸರ ಪ್ರೇಮ ಚೆನ್ನಾಗಿ ಮೂಡಿ ಬ೦ದಿದೆ..........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯವಾದ ಮಾತನ್ನು ಹೇಳಿದಿರಿ ತಾವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಸಲ್ಲಾಪ ಚೆನ್ನಾಗಿದೆ ಕಡಿದಲ್ಲೇ ಅನ್ನೋ ಬದಲು ಕಡಿಯದೇ ಅಂತ ಮಾಡಿದರೆ..?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೇ, ಮರ ಬೆಳೆಯುವುದು ಕೆಲವರ ಜೀವನೋಪಾಯ. ನಮ್ಮಲ್ಲಿ ಮರಗಳನ್ನು ಬೆಳೆಸಿ ಮಾರುತ್ತೇವೆ ಕೂಡಾ- ಸಾಗುವಾನಿ, ಸಿಲ್ವರ್ ಮು೦ತಾದ ಮರಗಳನ್ನು ಬೆಳೆಯುತ್ತಾರೆ. ಮರಗಳನ್ನು ಕಡಿಯದೇ ಎ೦ದಾದರೆ, ಅವನ ಜೀವನೋಪಾಯಕ್ಕೇನು ಮಾಡುತ್ತಾನೆ. ಸಣ್ಣ ಹಿಡುವಳಿದಾರನ ಜೀವನದ ಹಿ೦ಬದಿಯಿ೦ದ ನೋಡಿದಾಗ, ಮರಗಳನ್ನು ಕಡಿದರೆ ಆ ದಿನದ ಖರ್ಚು- ಮು೦ದೆ ಏನು ಮಾಡುವುದು? ಆ ನೆಲೆಯಲ್ಲಿ ಜೀವನ ಮತ್ತು ಪರಿಸರ ಎರಡನ್ನೂ ಸೇರಿಸಿ, ಹೆಣೆದ ಸಾಲುಗಳು. ಜೀವನವೂ ಸಾಗಬೇಕು- ಪರಿಸರವೂ ಬೇಕು ಎ೦ದಾಗ ಮರಗಳ ಕಡಿದಲ್ಲೇ ಮತ್ತೊ೦ದು ನೆಟ್ಟರೆ ಎನ್ನುವುದು ಸರಿಯಲ್ಲವೇ? ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವಂದುದು ನಿಜ ರಾಯರೇ ಬರೆದು ಪ್ರತಿಕ್ರಿಯೆ ಸೇರಿಸುವಾಗ ಹೊಳೆಯಿತು, ಸೇರಿಸಿಯಾಗಿತ್ತಲ್ಲ ಎಂದು ಹಾಗೇ ಬಿಟ್ಟೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಕಳಕಳಿಯ ಬರಹ. ಆದರೆ ಸೂಕ್ತ ಶೀರ್ಷಿಕೆ ಬೇಕೆನಿಸುತ್ತದೆ. ಸರಸ ಸಲ್ಲಾಪಗಳಲ್ಲಿ ಇಂತಹ ವಿಚಾರ ಬರುವುದು ಕಷ್ಟ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, ಕವಿನಾಗರಾಜರೇ... ನಾನೂ ಸಹ ಅದೇ ಗೊ೦ದಲದಲ್ಲಿದ್ದೇನೆ. ಆದರೆ ನನ್ನ ಈ ಪ್ರಯೋಗ ವಿನೂತನವೇ. ನಲ್ಲ-ನಲ್ಲೆಯರ ನಡುವಿನ ಸ೦ಭಾಷಣೆಗಳ ಮೂಲಕ ಸಾಮಾಜಿಕ ಕಳಕಳಿಯನ್ನು , ರಾಜಕೀಯ ಚಿ೦ತನೆಯನ್ನು ವ್ಯಕ್ತಪಡಿಸುವ ಎ೦ದೇ ಈ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದೇನೆ. ಇಲ್ಲದಿದ್ದಲ್ಲಿ ಪ್ರತಿಯೊ೦ದಕ್ಕೂ ಸೂಕ್ತ ಶೀರ್ಷಿಕೆಯನ್ನು ನೀಡುತ್ತಾ, ವರ್ಗವನ್ನು ಸರಸ-ಸಲ್ಲಾಪ ವೆ೦ದು ಹೆಸರಿಸುವ ಎ೦ದು ಕೊ೦ಡಿದ್ದೇನೆ. ಹೇಗಾದೀತು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಸ-ಸಲ್ಲಾಪವನ್ನು ಮೆಚ್ಚಿ ಪ್ರತಿಕ್ರಿಯಿಸಿದ, ಭಾಗವತರು, ಶರ್ಮರು, ಮಧು, ಗೋಪಿನಾಥರು, ಆಚಾರ್ಯರು, ಕವಿನಾಗರಾಜರು ಹಾಗೂ ಪವಿತ್ರಾಜಿ, ಎಲ್ಲರಿಗೂ ನನ್ನ ಹೃದಯ ಪೂರ್ವಕ ಕೃತಜ್ಞತೆಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೆಯೇ ಇರಲೆ೦ದು ಆಶಿಸುವ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.