ನಾನೊಬ್ಬನೇ ಹೊರಡಲೇ..

5

ಅ೦ತೂ ಇ೦ತೂ ಹುಡುಕಿದೆ
ಕೊನೆಗೂ ಈ ಬಸ್ ನಿಲ್ದಾಣವನ್ನು
ಬಸ್ಸು ಬರಬೇಕಷ್ಟೇ!
ಜನರೆಲ್ಲಾ ಹೇಳಿದ್ದರು, ಈ ನಿಲ್ದಾಣದಲಿ
ಬಸ್ಸು ಸಿಕ್ಕೇ ಸಿಗುತ್ತೆ  ಅ೦ತ
ಆದ್ರೆ ಇಷ್ಟೋತ್ತಾದ್ರೂ ಬ೦ದೇ ಇಲ್ಲವಲ್ಲಾ?
ಈ ಮೊದಲೇ ಬ೦ದು ಹೋಗಾಯ್ತೇ?
ಅಥವಾ ಬರೋದೇ ಇಲ್ವೇ?
ಆದರೆ, ನನಗೆ ನ೦ಬಿಕೆಯಿದೆ
ಬ೦ದೇ ಬರುತ್ತೆ ಬಸ್ಸು ಅ೦ತ
ಎದುರಿಗೆ ಸಿಕ್ಕಿದವರೆಲ್ಲಾ ಹೇಳಿದ್ದರು,
ನಾವೂ ಬರ್ತೀವಿ ಕೆಲಸ ಮುಗಿಸಿ ನಿನ್ನ ಜೊತೆ ಅಂತ!
ಯಾರೂ ಕಾಣ್ತಿಲ್ಲ, ಎಲ್ಲಿ ಹೋದರು ಎಲ್ಲಾ?
ಎಲ್ಲರಿಗೂ ಇವತ್ತೇ ಕೆಲಸವೇ?
ಯಾರೂ ಬರೋಲ್ಲ ಅನ್ನಿಸುತ್ತೆ,
ಅವಳಾದ್ರೂ ಬರ್ಬೇಕಿತ್ತು!
ಅವಳಿಗೂ ಬೇರೆಲ್ಲಿಗೋ ಹೋಗಬೇಕ೦ತೆ
ಮಕ್ಕಳೆಲ್ಲ ಎಲ್ಲಿ ಹೋದರು?
ಇನ್ನೊಮ್ಮೆ ಕೇಳಬೇಕಿತ್ತು
ಬರ್ತೀರಾ ನನ್ನ ಜೊತೆ ಅಂತ;
ಈಗಲೇ ಬಸ್ಸು ಬ೦ದರೆ?
ನಾನೊಬ್ಬನೇನಾ ಇಡೀ ಬಸ್ಸಿಗೆ?
ಯಾರಾದ್ರೂ ಇದ್ರೆ ಚೆನ್ನಾಗಿರ್ತಿತ್ತು,
ಇನ್ನೂ ಸ್ವಲ್ಪ ಹೊತ್ತು ಕಾಯುತ್ತೇನೆ,
ಬೇರೆ ಯಾರಾದರೂ ಬರಬಹುದು;
ಅಯ್ಯೋ, ಬಸ್ಸು ಬ೦ದೇ ಬಿಡ್ತಲ್ಲಾ!
ನಾನೊಬ್ಬನೇ ಇಡೀ ಬಸ್ಸಿಗೆ! 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಮ್ಮೊಮ್ಮೆ ಹೀಗೆಯೇ ಜೊತೆಗಾರೂ ಇರದೇ ಪಯಣಿಸಬೇಕು ನಾವು ಹಿಂದಿದ್ದವರು ಎಲ್ಲಿರುವರೆಂದು ಪರಿಗಣಿಸದೆ ಪಯಣದ ಮಧ್ಯೆ ಬಂದರೂ ಬರಬಹುದು ಅವರು ಏಕೆಂದರೆ ಇರದೇ ಭೂಮಿ ದುಂಡಗೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಯಸಿಯೋ ಬಯಸದೆಯೋ ಹೊರಡಬೇಕು ಒಬ್ಬೊಬ್ಬರೇ ನಾವು ಯಾರೂ ಬರುವುದಿಲ್ಲ ಎಷ್ಟೇ ಗೋಳಾಡಿದರೂ ಬಂದಾಗ ಸಾವು ಜೀವನದ ಈ ಸತ್ಯವನು ಆದಷ್ಟು ಬೇಗ ಅರಿತು ಬಾಳಿದರೆ ಕ್ಷೇಮ ಕ್ಷಣ ಪ್ರತಿಕ್ಷಣ ನಮ್ಮ ಎಲ್ಲಾ ಕರ್ತವ್ಯಗಳಲಿ ಇರಲಿ ದೇವರ ನಾಮ - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಸ್ ಹಿಂದಿನ ಬಸ್ ಸ್ಟಾಪಲ್ಲೇ ಪಂಚರ್ ಆಗಿದೆಯಂತೆ ನಾವಡವ್ರೆ. ಬೇರೆ ಏನಾದ್ರೂ ಹುಡ್ಕೊಳ್ಳಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಒಂದ್ನಿಮಿಷ ಬಂದ್ ಬಿಟ್ಟೆ, ಬರ್ತೀನಿ ಕಣೆ, ಪ್ಯಾಂಟ್ ಜೋಬಲ್ಲಿ ಕರ್ಚೀಫ್ ಇಟ್ಟಿದೀನ್ರಿ. ಸರಿ ನಾವಡರೆ ಹೋಗೋಣ. ಅಯ್ಯಯ್ಯೋ ಬಸ್ ಬಂದೇ ಇಲ್ವಲ್ರಿ. ಟೇಂ ಬೋರ್ಡ್ ಇರೋದು ಆ ಸಮಯಕ್ಕೆ ಬಸ್ ಬರಲ್ಲಾ ಅಂತಾ. ಚೆನ್ನಾಗಿದೆ ಸರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂಬುಗೆ ಮುಖ್ಯ, ರಾಯರೇ ಮುಂದಿನ ತಿರುವಿನಲ್ಲಾದರೂ ಯಾರಾದರೂ ಜತೆಯಾದಾರು ಬಿಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಾನ್ಸ್ ಅಲ್ರೀ, ಬಸ್ ನಿಮ್ದೇ, ಆರಾಮಾಗೆ ಮಲಗಿಕೊಂಡು ಹೋಗಿ. ಯಾಕೆ ಪರರ ಚಿಂತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಚಂದದ ಕವನ. ವಂದನೆಗಳು ತಮಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

- ಪ್ರತಿಕ್ರಿಯೆ ಪುನರಾವರ್ತಿತವಾಗಿದೆ. ಕ್ಷಮೆಯಿರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಾವಡರೆ, ನೀವೊಬ್ಬರೇ, ಬರುವಾಗಲೂ, ಹೋಗುವಾಗಲೂ, ಬಸ್ಸು ಬ೦ದಾಗಲೂ! ಇದೇ ಸತ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಆಚಾರ್ಯರು, ಹೆಗಡೆಯವರು, ಚಿಕ್ಕು, ಗೋಪಿನಾಥರು, ಕೋಮಲ್,ಮ೦ಜಣ್ಣ, ಭಾಗ್ವತರು ಹಾಗೂ ನಾಡಿಗರಿಗೆ ನನ್ನ ಹೃದಯ ತು೦ಬಿದ ನಮನಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ದು ಆಶಿಸುವ ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವೊಮ್ಮೆ ಬಸ್ಸೇ ಹಿಡಿಸಲಾರದಷ್ಟು ಮಂದಿ ಜೊತೆಗೆ ಬರುವರು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.