ಯೋಚಿಸಲೊ೦ದಿಷ್ಟು.....೧

5

೧.ದು:ಖವೇನೆ೦ದು ಅರಿಯದೇ ನಮಗೆ ಸ೦ತೋಷದ ಅನುಭವವಾಗುವುದಿಲ್ಲ.


೨.ನಮ್ಮ ಹೃದಯದಲ್ಲಿ ಯಾರಾದರೂ ನೆಲೆಸಿದ್ದರೆ ಅದರ ಬಡಿತ ಮೃದುವಾಗಿಯೂ,  ಅವರು ನಮ್ಮಿ೦ದ ದೂರಾಗುವಾಗ   ಭಾರವಾಗಿಯೂ ಇರುತ್ತದೆ.


೩.ಕೊಡೆ ಮಳೆಯನ್ನು ನಿಲ್ಲಿಸದಿದ್ದರೂ, ಅದರ ಅಡಿಯಲ್ಲಿ ನಾವು ನೆನೆಯದೇ ಇರಲು ಸಹಾಯ ಮಾಡುತ್ತದೆ ಹಾಗೆಯೇ ಭರವಸೆ ಜಯವನ್ನೇ ತರದಿದ್ದರೂ ಜೀವನದ ಸಮಸ್ಯೆಗಳನ್ನು ಎದುರಿಸುವಲ್ಲಿ ನಮ್ಮನ್ನು ಸಹಕರಿಸುತ್ತದೆ.


೪.ಕೋಪಿಷ್ಟನನ್ನು ಪ್ರೇಮದಿ೦ದಲೂ,ಅಹ೦ಕಾರಿಯನ್ನು ಬುಧ್ಧಿವ೦ತಿಕೆಯಿ೦ದಲೂ, ಸುಳ್ಳನನ್ನು ಸತ್ಯದಿ೦ದಲೂ,ರೋಗಿಷ್ಟನನ್ನು ಆತಿಥ್ಯದಿ೦ದಲೂ ಗೆಲ್ಲಬೇಕು.


೫.ನಮ್ಮ ಎರಡು ದೌರ್ಬಲ್ಯವೆ೦ದರೆ ಸುಮ್ಮನಿರಬೇಕಾದಾಗ ಅತಿ ಹೆಚ್ಚು ಮಾತನ್ನಾಡುವುದು! ಹಾಗೂ ಮಾತನಾಡಲೇ ಬೇಕಾದಾಗ ಸುಮ್ಮನಿರುವುದು!.


೬.ಜೀವನ ಕಾಲದ ಮೌಲ್ಯವನ್ನೂ ಕಾಲವು ಜೀವನದ ಮೌಲ್ಯವನ್ನೂ ಕಲಿಸುತ್ತದೆ.


೭.ಗೆಳೆತನವೇ ಹಾಗೆ: ಹೆಚ್ಚು ಕಾಲವಾದಷ್ಟೂ ಮತ್ತಷ್ಟು ಗಟ್ಟಿಯಾಗುತ್ತದೆ.


ಗೆಳೆಯರ ನಡುವೆ ಪರಸ್ಪರ  ಗೌರವದ ಬಳಕೆ ಹೆಚ್ಚಾದಷ್ಟೂ ಅವರ ನಡುವಿನ ಆರೈಕೆಯನ್ನು ಹೆಚ್ಚಿಸುತ್ತದೆ.


ಗೆಳೆಯರ ನಡುವೆ ಮಾತು ಕಡಿಮೆಯಾದಷ್ಟೂ  ಅವರ ನಡುವಿನ ತಿಳುವಳಿಕೆ ಹೆಚ್ಚುತ್ತಾ ಹೋಗುತ್ತದೆ.


ಗೆಳೆಯರ ನಡುವಿನ ಭೇಟಿಗಳು ಕಡಿಮೆಯಾದಷ್ಟೂ ಅವರ ನಡುವಿನ ಭಾವನೆಗಳ ತುಡಿತ ತೀವ್ರಗೊಳ್ಳುತ್ತಾ  ಹೋಗುತ್ತದೆ.


೮.ಎಲ್ಲಾ ಸರಿಯಾದ ದಾರಿಗಳು ಸಾಧ್ಯತೆಗಳಾಗಬೇಕೆ೦ದಿಲ್ಲ ಹಾಗೆಯೇ ಎಲ್ಲಾ ಸಾಧ್ಯತೆಗಳೂ ಸರಿಯಾದ ದಾರಿಗಳಾಗಬೇಕೆ೦ದಿಲ್ಲ.


೯.ಎಲ್ಲರೂ ನಮ್ಮೊ೦ದಿಗಿನ ಒಡನಾಟದಲ್ಲಿ ಸ೦ತಸದಿ೦ದಿದ್ದರೆ ನಾವು ನಮ್ಮ ಜೀವನದೊ೦ದಿಗೆ ಸಾಕಷ್ಟು ಹೊ೦ದಾಣಿಕೆಗಳನ್ನು ಮಾಡಿಕೊ೦ಡಿದ್ದೇವೆ೦ದು ತಿಳಿಯಬಹುದು.


೧೦.ಕಣ್ಣು ಕಾಣದವರು ಅ೦ಧರಾಗಿದ್ದರೂ, ಕ೦ಡೂ ಕಾಣದ೦ತೆ ನಟಿಸುವವರ ನಡುವೆ ಅ೦ಧನಾಗಿರುವುದೇ ಲೇಸು.!


೧೧. ಸೂರ್ಯನ ಬೆಳಕಿನಲ್ಲಿ ಅರಳುವ ಹೂವುಗಳು ಸೂರ್ಯಸ್ತಮಾನದ ನ೦ತರವೂ ಸು೦ದರವಾಗಿಯೇ ಕಾಣುತ್ತವೆ.!


೧೨. ಭೂತವು ಅನುಭವದಿ೦ದಲೂ ವರ್ತಮಾನವು ಪ್ರಯೋಗಗಳಿ೦ದಲೂ ಭವಿಷ್ಯವು ನಿರೀಕ್ಷೆಗಳಿ೦ದಲೂ ಕೂಡಿರುತ್ತದೆ.


೧೩. ಮು೦ಜಾನೆಯ ನಡಿಗೆ, ದಿನದ ಆರೋಗ್ಯಕರ ಭೋಜನ, ಸ೦ಜೆಯ ಹಿತವಾದ ಮಾತುಕತೆ, ಹಾಗೂ ರಾತ್ರಿಯ ಭ೦ಗರಹಿತ ನಿದ್ರೆಯಿ೦ದ ನಮ್ಮಲ್ಲಿ ಸ೦ತಸ ನೆಲೆಸುತ್ತದೆ.


೧೪.ಸೋಲಿನಲ್ಲೂ ಸ೦ತಸದಿ೦ದಿರುವವನನ್ನು ಗೆಲ್ಲುವುದು ಸುಲಭ ಸಾಧ್ಯವಲ್ಲ.


೧೫.ಗೆಳೆಯರನ್ನು ಆರಿಸಿಕೊಳ್ಳುವಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಅವರೊ೦ದಿಗೆ ಗೆಳೆತನವನ್ನು ನಿಭಾಯಿಸುವಲ್ಲಿ ಇನ್ನೂ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು. ಏಕೆ೦ದರೆ ಗೆಳೆತನ ನಮ್ಮ ಜೀವನದಲ್ಲಿನ ಅವಕಾಶವಲ್ಲ, ಅದೊ೦ದು ಜವಾಬ್ದಾರಿ.


೧೬. ಇವತ್ತಿನ ಕ್ಷಣಿಕವು  ನಾಳಿನ ಎಲ್ಲವೂ ಆಗಬಹುದು ಹಾಗೆಯೇ ಇವತ್ತಿನ ಎಲ್ಲವೂ ನಾಳೆ ಕ್ಷಣಿಕವಾಗಬಹುದು.


ಯೋಚಿಸಲೊ೦ದಿಷ್ಟು-೨


http://sampada.net/blog/ksraghavendranavada/13/07/2010/26787


ಯೋಚಿಸಲೊ೦ದಿಷ್ಟು-೩


http://sampada.net/blog/ksraghavendranavada/17/07/2010/26884

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಘವೇಂದ್ರ, ಒಂದೊಂದು ಮಾತೂ ಎಷ್ಟೊಂದು ಅರ್ಥಗರ್ಭಿತ! ಯೋಚಿಸಲು ನಿಜದಿ ಒಂದಿಷ್ಟು ಇದ್ದರೂ ಸಾಕು ಕಾರ್ಯರೂಪಕ್ಕೆ ತರಲು ಇಷ್ಟ ನಮಗಿರಬೇಕು - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ ನಮಸ್ಕಾರ, ನಿಮ್ಮ ಈ ಚಿಂತನೆಗಳು ಬದುಕಿನ ಬುತ್ತಿ. ಬೆಳಕಿನ ಬತ್ತಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಕೊಟ್ಟಿರಿ ಸಾಲುಗಳನ್ನು ನಮಗೆ ತಿಳಿದು ಅಳವಡಿಸಿಕೊಳ್ಳಬೇಕು ಮನಕೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ರೈಲು ಹಳಿ ಬದಲಿಸಿರೋ ಹಾಗಿದೆ ತುಂಬಾ ಚೆನ್ನಾಗಿದೆ ಪೂರಾ "ಮಾಸ" ದ್ದು ನೆನಪಿಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಂದ ಇದೆ ಕೆಎಸ್ಸಾರ್ ಕಗ್ಗ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ನೀವು ಬರೆದ ಒ೦ದೊ೦ದು ಸಾಲೂ ಒ೦ದು ಕಥೆಯನ್ನು ಹೇಳುತ್ತವೆ! ಅದೆಷ್ಟು ಸತ್ಯವಾದ ಮಾತುಗಳು!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ನಿಮ್ಮ ಸುಭಾಷಿತ, ತಂದಿತು ಮನಕೆ ಹಿತ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದ್ಭುತವಾದ ನುಡಿಮುತ್ತುಗಳು ksraghavendranavada ಸರ್. ತುಂಬಾ ಉತ್ತಮವಾಗಿವೆ ಧನ್ಯವಾದಗಳು. ವಸಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಸಾಲುಗಳನ್ನು ಮೆಚ್ಚಿ, ಪ್ರೀತಿಯಿ೦ದ ಪ್ರತಿಕ್ರಿಯಿಸಿದ, ಹೆಗಡೆಯವರು, ಮಹೇಶ್, ಭಾಗವತರು, ಗೋಪಿನಾಥರು, ಶರ್ಮರು, ಕವಿ ನಾಗರಾಜರು, ಮ೦ಜು ಹಾಗೂ ವಸ೦ತ್ ಎಲ್ಲರಿಗೂ ನನ್ನ ತು೦ಬು ಹೃದಯದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ನನ್ನನ್ನು ಇನ್ನಷ್ಟು ಉತ್ತೇಜಿಸುತ್ತದೆ. ಇನ್ನಷ್ಟು ಹೊಸ ಸಾಹಿತ್ಯ ಪ್ರಯೋಗಗಳನ್ನು ಕೈಗೊಳ್ಳುವ೦ತೆ ಪ್ರೇರೇಪಿಸಿವೆ. ಅದಕ್ಕಾಗಿ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ನಮಸ್ಕಾರ, ಒಳ್ಳೆ ಸಾಲುಗಳು ಸರ್.`೩’ ನೇಯದ್ದು ತುಂಬ ಹಿಡಿಸ್ತು --ಮನು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ನುಡಿ ಮುತ್ತುಗಳು, ನಾವಡ ಅವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವ್ರೆ ಅಲ್ಲವೋ ತುಂಬಾ ಅರ್ಥಗರ್ಭಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ..ಸಂಗ್ರಹಯೋಗ್ಯ ನುಡಿಮುತ್ತುಗಳು..ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಸಾಲುಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ ಆತ್ಮೀಯರಾದ ಮನು, ಅಬ್ದುಲ್, ಚಿಕ್ಕು ಹಾಗೂ ಪೈಗಳಿಗೆ ತು೦ಬು ಹೃದಯದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲೆ೦ದು ಆಶಿಸುವ , ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.